ಸಗಟು ವ್ಯಾಪಾರ ದೈತ್ಯರಿಗೆ ಕಂಟವಾಗಲಿರುವ ಫ್ಲಿಪ್ ಕಾರ್ಟ್ – ಅಮೆಜಾನ್..!

ಟೀಮ್​ ವೈ.ಎಸ್​. ಕನ್ನಡ

ಸಗಟು ವ್ಯಾಪಾರ ದೈತ್ಯರಿಗೆ ಕಂಟವಾಗಲಿರುವ ಫ್ಲಿಪ್ ಕಾರ್ಟ್ – ಅಮೆಜಾನ್..!

Monday January 25, 2016,

4 min Read

ಉಡುಪು ತಯಾರಿಸುವ ಉದ್ದಿಮೆದಾರ ಸಂಜೀವ್ ಮುಖಿಜಾ ಅವರಿಗೆ ಬಹುದೊಡ್ಡ ಕನಸೊಂದಿತ್ತು. ತಮ್ಮದೇ ಒಂದು ಬ್ರಾಂಡ್ ಸೃಷ್ಠಿಸಿ ಅದನ್ನ ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಅನ್ನೋದು ಅವರ ಪರಮ ಗುರಿಯಾಗಿತ್ತು. ಹಾಗೇ 2012ರಲ್ಲಿ ಅವರು ತಮ್ಮ ಸ್ವಂತ ಬ್ರಾಂಡ್ ಒಂದನ್ನ ಹುಟ್ಟುಹಾಕಿಯೇ ಬಿಟ್ರು. ಆದ್ರೆ ತಾವು ಉತ್ಪಾದಿಸುವ ಉಡುಪುಗಳ ಸಗಟು ಮಾರಾಟಕ್ಕೆ ಒಂದು ಉತ್ತಮ ವೇದಿಕೆ ಅವಶ್ಯಕವಾಗಿತ್ತು. ಸಂಜೀವ್ ಅವರಿಗೆ ಈ ಕಾರ್ಮಸ್ ಗಳ ಮೇಲೆ ಅಷ್ಟಾಗಿ ನಂಬಿಕೆ ಇಲ್ಲದಿದ್ರೂ, ಒಂದು ರಿಸ್ಕ್ ತೆಗೆದುಕೊಳ್ಳ ಬಯಸಿದ್ರು. ಅದ್ರಂತೆ ಮಿಂತ್ರಾದಲ್ಲಿ ತಮ್ಮ ಬ್ರಾಂಡ್ ‘ಬ್ರೇಕ್ ಬೌನ್ಸ್ ’ ಉಡುಪುಗಳನ್ನ ಪರಿಚಯಿಸಿದ್ರು. ಇದು ಅವರನ್ನ ಗುರುತಿಸುವಂತೆ ಮಾಡಿತ್ತಲ್ಲದೆ ನಿರೀಕ್ಷೆಗೂ ಮೀರಿ ದೊಡ್ಡ ಮಾರ್ಕೆಟ್ ಕಲ್ಪಿಸಿತು. ಇದ್ರಿಂದಾಗಿ ಅವರು ಇ-ಕಾಮರ್ಸ್ ಹೊರತಾಗಿ ಹೊಸ ಅಂಗಡಿಯನ್ನೂ ಸ್ಥಾಪಿಸುವಂತಾಯ್ತು.

image


“ ಒಬ್ಬ ಉದ್ದಿಮೆದಾರನಾಗಿ ನನಗೆ ಇ- ಟೇಲಿಂಗ್ ದೊಡ್ಡ ಬಲ ನೀಡಿತು. ಆದ್ರೆ ನನಗೆ ಇ – ಟೇಲಿಂಗ್ ಹಾಗೂ ರಿಟೇಲ್ ಎರಡರ ಮೇಲೂ ನಂಬಿಕೆ ಇತ್ತು. ಅಲ್ಲದೆ ಇವೆರಡೂ ನನಗೆ ಏಕಕಾಲದಲ್ಲಿ ಉದ್ಯಮದಲ್ಲಿ ಬೆಳೆಯಲು ಸಹಕಾರ ನೀಡಿದ್ವು ” ಅಂತ ಸಂಜೀವ್ ಮುಖಿಜಾ ಹೇಳುತ್ತಾರೆ. ಅಲ್ಲದೆ ಇ-ಕಾಮರ್ಸ್ ಹೊರಜಗತ್ತಿಗೆ ಬ್ರಾಂಡ್ ನ ಪರಿಚಯ ಹಾಗೂ ಮಾರುಕಟ್ಟೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು ಅನ್ನೋದು ಸಂಜೀವ್ ಅವರ ಅಭಿಪ್ರಾಯ. ಅಲ್ಲದೆ ಈ ವರ್ಷ ರಿಟೇಲ್ ಜಗತ್ತನ್ನ ಇ-ಟೈಲರ್ಸ್ ಗಳು ಆಳಲಿದ್ದಾರೆ ಅನ್ನೋದು ಇವರ ಭವಿಷ್ಯದ ನುಡಿಗಳು.

ಒಂದು ವ್ಯವಸ್ಥಿತ ರಿಟೇಲಿಂಗ್ ವ್ಯವಸ್ಥೆ ಭಾರತದ ಮಾರುಕಟ್ಟೆಯಲ್ಲಿ ಬಲವಾಗಿ ಬೇರೂರುವುದು ಅಷ್ಟು ಸುಲಭವಾಗಿಲ್ಲ. ಜೊತೆಗೆ ಸಂಘಟಿತ ರಿಟೇಲಿಂಗ್ ಮಾರುಕಟ್ಟೆಯನ್ನು ಸಮಾನವಾಗಿ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಆದ್ರೆ ಈ ಸಂದರ್ಭವನ್ನ ಸಮರ್ಥವಾಗಿ ಬಳಸಿಕೊಳ್ಳುತ್ತಿರೋದು ಇ-ಕಾಮರ್ಸ್ ಗಳು. ವರದಿಗಳ ಪ್ರಕಾರ ಇ-ಕಾಮರ್ಸ್ ದುನಿಯಾ ಸದ್ಯದಲ್ಲೇ ರಿಟೇಲಿಂಗ್ ಮಾರುಕಟ್ಟೆಯಲ್ಲಿ ಪ್ರಬಲವಾಗಲಿದೆ. ಇ-ಕಾಮರ್ಸ್ ಈಗಾಗಲೇ ಒಟ್ಟಾರೆ ಮಾರುಕಟ್ಟೆಯ ಶೇಕಡಾ 10ರಷ್ಟನ್ನ ಆವರಿಸಿ ಬಿಟ್ಟಿದೆ. ಇಂತಹ ವೇದಿಕೆಯನ್ನ ಬಳಸಿಕೊಂಡು ಆಲ್ ಲೈನ್ ದೈತ್ಯ ಫ್ಲಿಪ್ ಕಾರ್ಟ್ ಈಗಾಗಲೇ 10 ಸಾವಿರ ಕೋಟಿ ಆದಾಯಗಳಿಸಿದೆ. ಮತ್ತೊಂದು ದೈತ್ಯ ಸಂಸ್ಥೆ ಅಮೆಜಾನ್ ಕೂಡ ಸರಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವಹಿವಾಟು ಮಾಡಿದೆ. ಇನ್ನು ಬಿಗ್ ಬ್ಯಾಂಗ್ ಸೇಲ್ ಹೆಸರಿನಲ್ಲಿ ಉಡುಪು, ಚಪ್ಪಲಿ, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಭರ್ಜರಿಯಾಗಿ ಮಾರಾಟವಾಗ್ತಿವೆ. ಈ ವಹಿವಾಟಿನ ಬೆಳವಣಿಗೆ ಶೇಕಡಾ 250 ರಷ್ಟು ಬೆಳೆದಿದೆ ಅನ್ನುತ್ತವೆ ಅಂಕಿ ಅಂಶಗಳು.

ವಾಜೀರ್ ಅಡ್ವಟೈಸರ್ ನ ಸಹ ಸಂಸ್ಥಾಪಕ ಹರ್ಮಿಂದರ್ ಸಹ್ನಿ ಪ್ರಕಾರ ಆಲ್ ಲೈನ್ ಕ್ರಾಂತಿಯು ರಿಟೈಲರ್ಸ್ ಹಾಗೂ ಗ್ರಾಹಕರ ನಡುವಿನ ಇಟ್ಟಿಗೆ ಹಾಗೂ ಗಾರೆ ನಡುವಿನ ಸಂಬಂಧವನ್ನೇ ದಿಕ್ಕು ತಪ್ಪಿಸಿದ ರೀತಿ ಬೆಳೆಯುತ್ತಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಆನ್ ಲೈನ್ ಸಂಸ್ಥೆಗಳು ಭಾರತದ ರಿಟೇಲ್ ಮಾರುಕಟ್ಟೆಯ ಒಟ್ಟಾರೆ ಭಾಗದಲ್ಲಿ ಶೇಕಡಾ 20ರಷ್ಟನ್ನ ಆಕ್ರಮಿಸಲಿವೆ. ಹಿರಿಯ ಆರ್ಥಿಕ ತಜ್ಞರ ಪ್ರಕಾರ 2020ರ ವೇಳೆಗೆ ಇದು 1 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟು ವಹಿವಾಟು ನಡೆಸಲಿವೆ. ಕೆಲವು ಕಂಪನಿಗಳಂತೂ ಇ-ಕಾಮರ್ಸ್ ಗಳ ಜೊತೆಗೆ ಟೈ ಅಪ್ ಆಗಲು ತಾ ಮುಂದು ನಾ ಮುಂದು ಅಂತ ಸ್ಪರ್ಧೆಗೆ ಬಿದ್ದಿರುವುದರಿಂದ ರಿಟೇಲ್ ಮಾರುಕಟ್ಟೆಯ ದೈತ್ಯ ಕಂಪನಿಗಳೂ ನೆಲಕಚ್ಚುವಂತಾಗಿದೆ. ಟೆಕ್ನೋ ಪಾರ್ಕ್ ನ ಚೇರ್ ಮನ್ ಅರವಿಂದ್ ಸಿಂಘಾಲ್ ಪ್ರಕಾರ ಸಗಟು ವ್ಯಾಪಾರದ ಅಂಗಡಿ-ಕೇಂದ್ರಗಳ ಮೇಲೂ ಇ-ಕಾಮರ್ಸ್ ಅಧಿಪತ್ಯ ಹೊಂದಲಿವೆಯಂತೆ. ಇದಕ್ಕೆ ಉದಾಹರಣೆ ರಿಲಾಯನ್ಸ್ ಹಾದೂ ಆದಿತ್ಯ ಬಿರ್ಲಾ ಗ್ರೂಪ್ ಗೆ ಫ್ಲಿಕ್ ಕಾರ್ಟ್ ಹಾಗೂ ಸ್ನ್ಯಾಪ್ ಡೀಲ್ ಸಡ್ಡು ಹೊಡೆದಿರೋದು. ಇದ್ರಲ್ಲಿ ಒಟ್ಟು ವ್ಯಾಪಾರದ ಮೌಲ್ಯವನ್ನ ಸ್ಲ್ಯಾಪ್ ಡೀಲ್ 3 ರಿಂದ 4 ಬಿಲಿಯನ್ ಅಮೆರಿಕನ್ ಡಾಲರ್ ಅಂತ ಘೋಷಿಸಿದ್ರೆ , ಫ್ಲಿಪ್ ಕಾರ್ಟ್ 5 ರಿಂದ 6 ಬಿಲಿಯನ್ ಅಮೆರಿಕನ್ ಡಾಲರ್ ಅಂತ ತಿಳಿಸಿದೆ. ಇನ್ನು ವರ್ಷ ಇ-ಕಾಮರ್ಸ್ ಕಂಪನಿಗಳು ದೊಡ್ಡ ಸಗಟು ಮಾರಾಟ ಸಂಸ್ಥೆಗಳಿಗೆ ಹೇಗೆ ಪೈಪೋಟಿ ನೀಡುತ್ತವೆ ಅನ್ನೋದೂ ಕುತೂಹಲಕಾರಿ.

image


ಸರಬರಾಜು ಸರಪಳಿ ಮತ್ತು ಸ್ಟೋರಿಂಗ್ ಸಾಮರ್ಥ್ಯ

ದೊಡ್ಡ ಮಟ್ಟದ ಸಗಟು ವ್ಯಾಪಾರಿ ಸಂಸ್ಥೆಗಳು ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಬ್ಯುಸಿನೆಸ್ ನಲ್ಲಿ ಪೂರೈಕೆಯ ಸರಪಳಿ ವ್ಯವಸ್ಥೆ ತೀರಾ ಭಿನ್ನವಾಗಿರುತ್ತವೆ. ಸಗಟು ವ್ಯಾಪಾರ ಸಂಸ್ಥೆಗಳು ಶಾಪ್ ಹಾಗೂ ಗ್ರಾಹಕರ ನಡುವಿನ ಕೊಂಡಿಯಾಗಿರುತ್ತದೆ. ಇನ್ನು ರಿಟೇಲರ್ ಗಳು ಈಗಾಗಲೇ ಭಾರತದಾದ್ಯಂತ 50 ಮಿಲಿಯನ್ ಸ್ಕ್ವೇರ್ ಫೀಟ್ ನಷ್ಟು ವೇರ್ ಹೌಸ್ ಗಳನ್ನ ಹೊಂದಿವೆ. ರಿಯಲ್ ಎಸ್ಟೇಟ್ ಉದ್ಯಮಗಳ ಪ್ರಕಾರ 2019ರ ವೇಳೆಗೆ ಇದು 1.4 ಬಿಲಿಯನ್ ಸ್ಕ್ವೇರ್ ಫೀಟ್ ಗೆ ಇದು ಏರಲಿದೆ. ಆದ್ರೆ ಇ-ಟೇಲರ್ ಗಳು ಪೂರೈಕೆಯ ಕೊಂಡಿಯನ್ನ ಬಲಪಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಾರೆ. ಅಲ್ಲದೆ ಈಗಾಗಲೇ ದೇಶದ ಒಟ್ಟಾರೆ ವೇರ್ ಹೌಸ್ ಗಳ ಪೈಕಿ ಇ ಕಾಮರ್ಸ್ ಗಳು ಶೇಕಡಾ 25ರಷ್ಟು ಭಾಗವನ್ನ ಆಕ್ರಮಿಸಿಕೊಂಡಿವೆ. ಇದು ಗ್ರಾಹಕರು ಇ-ಕಾಮರ್ಸ್ ಟೆಕ್ನಾಲಜಿ ಹಾಗೂ ಕಂಪನಿಗಳ ಮೇಲೆ ಇಟ್ಟಿರುವ ನಂಬಿಕೆ ಸಾಕ್ಷಿಯಾಗಿದೆ.

ಹಣ ಸಂಗ್ರಹಣೆ

ಸಗಟು ವ್ಯಾಪಾರ ಕಂಪನಿಗಳು ಹಣ ಸುಲಭವಾಗಿ ಹರಿಯುವ ದಾರಿಯತ್ತ ಸದಾ ಗಮನಕೊಟ್ಟಿರುತ್ತಾರೆ. ಆದ್ರೆ ದುರಾದೃಷ್ಟ ಎನ್ನುವ ಹಾಗೆ ಎಡಿಐ ನಿಯಮಗಳು ವಿದೇಶೀ ಹೂಡಿಕೆಗಳಿಗೆ ಕಂಟಕವಾಗಿವೆ. ಸದ್ಯ ಎಫ್ ಡಿ ಐ ಶೇಕಡಾ 51ರಷ್ಟು ಹಣವನ್ನು ಹೂಡಿಕೆ ಮಾಡಲಷ್ಟೇ ಅನುವು ಮಾಡಿಕೊಡುತ್ತದೆ. ಆದ್ರೆ ಇ ಕಾಮರ್ಸ್ ಕಂಪನಿಗಳಿಗೆ ಇದು ಕೊಂಚ ಸಹಕಾರಿಯಾಗಿವೆ. ಇದ್ರಲ್ಲೂ ಸ್ಪರ್ಧೆಗೆ ಬಿದ್ದಿರುವ ಫ್ಲಿಪ್ ಕಾರ್ಟ್ ಈಗಾಗಲೇ 3.2 ಬಿಲಿಯನ್ ಡಾಲರ್ ನಷ್ಟು ವಿದೇಶಿ ಹಣವನ್ನು ಬಳಸಿಕೊಂಡಿದ್ರೆ, ಅಮೆಜಾನ್ ಇಂಡಿಯಾ 2 ಬಿಲಿಯನ್ ಡಾಲರ್ ನಷ್ಟು ಹಣವನ್ನ ಹರಿಸಿದೆ. ಇನ್ನು ಸ್ನ್ಯಾಪ್ ಡೀಲ್ ಸಂಗ್ರಹಿಸಿರೋ ಹಣದ ಮೌಲ್ಯ 1.6 ಬಿಲಿಯನ್ ಡಾಲರ್ .

ಡಿಸ್ಕೌಂಟ್ ಮಾರಾಟದ ಸಮರ

ಆನ್ ಲೈನ್ ನಲ್ಲಿ ಖರೀದಿಗಿಳಿಯುವ ಗ್ರಾಹಕ ಮೊದಲು ಯೋಚಿಸುವುದೇ ಎಲ್ಲಿ ಯಾವುದಕ್ಕೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬುದನ್ನ. ಹೀಗಾಗಿ ಇ ಕಾಮರ್ಸ್ ಗಳ ಮೇಲೆ ಹದ್ದಿನಗಣ್ಣಿಡುವ ಗ್ರಾಹಕ ಆಕರ್ಷಕ ಆಫರ್ ಗಳಿಗೆ ಸುಲಭವಾಗಿ ಮಾರುಹೋಗುತ್ತಾನೆ. ಇಂತಹ ಸಂದರ್ಭಗಳನ್ನೇ ಬಳಸಿಕೊಳ್ಳಲು ಕಾದಿರುವ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಎಂಡ್ ಆಫ್ ಸೀಸನ್ ಲೆಕ್ಕಾಚಾರಗಳನ್ನ ಗ್ರಾಹಕರ ಮುಂದಿಟ್ಟು ಅವರನ್ನ ಸುಲಭವಾಗಿ ಬಲೆಗ ಬೀಳಿಸುತ್ತವೆ. ಗ್ರಾಹಕರು ಆಫರ್ ಗಳ ಆಳ ಅರ್ಥಗಳನ್ನ ಅಳೆಯದಿದ್ದರೂ ಕಂಪನಿಗಳು ನೀಡುವ ಆಫರ್ ಗಳಿಗೆ ಸುಲಭವಾಗಿ ಮಾರುಹೋಗುತ್ತಾರೆ. ಆದ್ರೆ ಸಗಟು ಮಾರಾಟಗಾರರಿಗೆ ಅಷ್ಟಾಗಿ ಈ ಅವಕಾಶಗಳು ಇರೋದಿಲ್ಲ. ಹೀಗೆ ಭಾರತೀಯ ಮಾರುಕಟ್ಟೆಯಲ್ಲಿ ಇ ಕಾಮರ್ಸ್ ಗಳ ವ್ಯಾಪ್ತಿ ಹೆಚ್ಚುತ್ತಲೇ ಇದೆ. ಗ್ರಾಹಕರೂ ಇವುಗಳ ಗುಣಮಟ್ಟ ಹಾಗೂ ಸರ್ವೀಸ್ ಗೆ ಮಾರುಹೋಗಿದ್ದಾರೆ. ಹೀಗಾಗಿ ಸದ್ಯದಲ್ಲೇ ರಿಟೇಲರ್ಸ್ ಮಾರುಕಟ್ಟೆಯನ್ನ ಇ-ಟೇಲರ್ಸ್ ಗಳು ಆಳಲಿವೆ.

ಲೇಖಕರು – ರಾಧಿಕ ಪಿ ನಾಯರ್

ಅನುವಾದ – ಬಿ ಆರ್ ಪಿ, ಉಜಿರೆ