ಫೈಂಡ್ ಮೈ ಸ್ಟೇ.ಕಾಮ್ ಮೂಲಕ ನೀವಿಚ್ಛಿಸುವ ದರದಲ್ಲಿ ಹೋಟೆಲ್ ಬುಕ್ ಮಾಡಿ..!

ಟೀಮ್​ ವೈ.ಎಸ್​.

ಫೈಂಡ್ ಮೈ ಸ್ಟೇ.ಕಾಮ್ ಮೂಲಕ ನೀವಿಚ್ಛಿಸುವ ದರದಲ್ಲಿ ಹೋಟೆಲ್ ಬುಕ್ ಮಾಡಿ..!

Tuesday October 13, 2015,

3 min Read

ಭಾರತದಾದ್ಯಂತ ಹೋಟೆಲ್ ಉದ್ಯಮ ಏರುಗತಿಯಲ್ಲಿ ಸಾಗುತ್ತಿದೆ. ವಸತಿಯನ್ನೊದಗಿಸುವ ಲಾಡ್ಜಿಂಗ್ ಹೋಟೆಲ್‌ಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಗ್ರಾಹಕರು ಇಚ್ಛಿಸುವ ದರದಲ್ಲಿ ವಸತಿ ಒದಗಿಸುವ ಹೋಟೆಲ್‌ಗಳ ಸಂಖ್ಯೆ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಆದರೆ ಗ್ರಾಹಕರ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ. ಗ್ರಾಹಕರಿಗೆ ಅನುಕೂಲವಾಗುವ ದರದಲ್ಲಿ ಹೋಟೆಲ್‌ ರೂಂಗಳನ್ನು ಕಾಯ್ದಿರಿಸುವ ಸೌಲಭ್ಯ ಒದಗಿಸಿಕೊಟ್ಟಿದೆ ದೆಹಲಿ ಮೂಲದ ಫೈಂಡ್ ಮೈ ಸ್ಟೇ.ಕಾಮ್. ಗ್ರಾಹಕರು ಮತ್ತು ಹೋಟೆಲ್ ನವರಿಗೆ ಸಂಪರ್ಕ ಏರ್ಪಡಿಸುತ್ತದೆ. ಇದರಿಂದ ಗ್ರಾಹಕರಿಗೆ ಯಾವುದೇ ಅನುಮಾನಗಳೂ ಉಳಿಯುವುದಿಲ್ಲ. ಇದು ಫೈಂಡ್ ಮೈ ಸ್ಟೇ.ಕಾಮ್ ಒದಗಿಸುವ ಸೇವೆಯ ಪ್ರಮುಖ ಭಾಗ.

image


ಯೋಜನೆ ರೂಪುಗೊಂಡಿದ್ದು ಹೇಗೆ?

ತಮ್ಮ ಯೋಜನೆಯನ್ನು ಅಭಿವೃದ್ಧಿ ಪಡಿಸಿಕೊಂಡು ಹೋಟೆಲ್‌ಗಳ ಜೊತೆ ಉತ್ತಮ ಸಂಬಂಧ ಸೃಷ್ಟಿಸಿಕೊಳ್ಳಲು 18 ತಿಂಗಳ ಕಾಲ ಕಾರ್ಯನಿರ್ವಹಿಸಿ ನಂತರ ಅಕ್ಟೋಬರ್‌ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು ಫೈಂಡ್‌ ಮೈ ಸ್ಟೇ.ಕಾಮ್. ಪ್ರವಾಸದ ಕುರಿತು ಆಸಕ್ತಿ ಹೊಂದಿರುವವರಿಂದ ಪ್ರೇರೇಪಣೆ ಪಡೆದು ಫೈಂಡ್ ಮೈ ಸ್ಟೇ.ಕಾಮ್ ಉದ್ಯಮ ಆರಂಭಿಸಲಾಯಿತು. ಅಲ್ಲದೇ ಭಾರತದ ಹೋಟೆಲ್ ಬುಕಿಂಗ್ ವ್ಯವಸ್ಥೆಯಲ್ಲಿ ಹೋಟೆಲ್ ಮಾಲೀಕರು ತಮ್ಮ ಸೇವೆಗಳು, ಹೋಟೆಲ್ ವಿಸ್ತರಿಸುವ ರೀತಿಯನ್ನುನುಸರಿಸಿ ಗ್ರಾಹಕರಿಗೆ ನಿಜವಾದ ಬೆಲೆಯಲ್ಲಿ ರೂಮ್‌ಗಳನ್ನು ನೀಡುತ್ತಿಲ್ಲ. ಇದಕ್ಕೊಂದು ಪರಿಹಾರ ಕಂಡುಹಿಡಿದುಕೊಳ್ಳುವ ನಿಟ್ಟಿನಲ್ಲಿ ಆರಂಭವಾಗಿದ್ದೇ ಫೈಂಡ್‌ ಮೈ ಸ್ಟೇ.ಕಾಮ್ ಎನ್ನುತ್ತಾರೆ ಸಂಸ್ಥೆಯ ಸಹ ಸಂಸ್ಥಾಪಕ ಸಿಮ್ರನ್ ಸೈಲ್. ಸಿಮ್ರನ್ ಸೈಲ್, ರೋಹಿತ್ ಕೇತ್ರಪಾಲ್‌ ಆರಂಭಿಸಿದ ಈ ಸಂಸ್ಥೆ ಅತೀ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಹಣವನ್ನು ಉಳಿಸಿದೆ.

ರೋಹಿತ್ ಕೇತ್ರಪಾಲ್

ದಶಕಗಳ ಹಿಂದೆ, ಇಬ್ಬರಿಗೂ ಸ್ನೇಹಿತರಾಗಿದ್ದ ಒಬ್ಬರಿಂದ ರೋಹಿತ್ ಮತ್ತು ಸಿಮ್ರನ್ ಸೈಲ್ ಪರಿಚಿತರಾದರು. ಫೈಂಡ್ ಮೈ ಸ್ಟೇ ಮೂಲತಃ ಸಿಮ್ರನ್ ಅವರ ಯೋಜನೆಯಾಗಿದ್ದು, ಸಿಮ್ರನ್ ಈ ಯೋಜನೆಯನ್ನು ಆರಂಭಿಸಿದ ಬಳಿಕ ಮಾರ್ಕೆಟಿಂಗ್ ಮಾಡುವುದರ ಕುರಿತು ರೋಹಿತ್ ಅವರ ಜೊತೆ ಚರ್ಚಿಸಿದರು. ಹೀಗೆ ನಾವಿಬ್ಬರೂ ಜೊತೆಗೂಡಿ ಕಾರ್ಯನಿರ್ವಹಿಸಲು ಆರಂಭಿಸಿದೆವು ಎಂದು ನೆನಪಿಸಿಕೊಳ್ಳುತ್ತಾರೆ ರೋಹಿತ್. ಈ ಯೋಜನೆಯ ಕುರಿತಾಗಿ ತಾವುಗಳು ಸುಮಾರು 1 ವರ್ಷ ಚರ್ಚಿಸಿದ್ದಾಗಿ ರೋಹಿತ್ ಹೇಳುತ್ತಾರೆ.

ಫೈಂಡ್ ಮೈ ಸ್ಟೇ ಯಶಸ್ಸಿಗೆ ಕಾರಣವಾಗಿರುವ ತಂಡ

ಮ್ಯಾನೇಜ್‌ಮೆಂಟ್ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಸಮಯ ಸಿಕ್ಕಾಗಲೆಲ್ಲಾ ಪ್ರವಾಸವನ್ನು ಮಾಡುವ ಆಸಕ್ತಿ ಇರುವವರು. ಸಿಮ್ರನ್ ಒಬ್ಬ ಸರಣಿ ಉದ್ಯಮಿಯಾಗಿದ್ದು, ಪ್ರವಾಸ ಪ್ರೇಮಿಯೂ ಹೌದು. ಅಲ್ಲದೇ, ಉದ್ಯಮ ಕ್ಷೇತ್ರದಲ್ಲಾಗುವ ಅಭಿವೃದ್ಧಿಯನ್ನು ಸದಾ ಗಮನಿಸುತ್ತಿರುವ ಸಿಮ್ರನ್, ಹಲವು ವರ್ಷಗಳ ಕಾಲ ಹೋಟೆಲ್ ಮಾಲೀಕರಾಗಿದ್ದ ಅನುಭವವನ್ನು ಇಟ್ಟುಕೊಂಡು ಫೈಂಡ್ ಮೈ ಸ್ಟೇ ಎಂಬ ಉದ್ಯಮ ಆರಂಭಿಸುವ ಮನಸ್ಸು ಮಾಡಿದರು. ಹೋಟೆಲ್ ಉದ್ಯಮದಲ್ಲಿ ಅಗಾಧ ಜ್ಞಾನ ಪಡೆದಿರುವ ಸಿಮ್ರನ್, ಆಯ್ದ ಹೋಟೆಲ್‌ಗಳು ಮತ್ತು ಕಾರ್ಪೋರೇಟ್ ವಲಯವನ್ನು ಒಂದೆಡೆ ಸೇರಿಸಿ ಅವರನ್ನು ತಮ್ಮ ಗ್ರಾಹಕರನ್ನಾಗಿಸಿಕೊಂಡಿದ್ದಾರೆ ಎನ್ನುತ್ತಾರೆ ರೋಹಿತ್.

ಸಂಸ್ಥೆಯ ಘೋಷವಾಕ್ಯ

ಫೈಂಡ್ ಮೈ ಸ್ಟೇ ಎಟ್ ಮೈ ಪ್ರೈಸ್(ನನಗೆ ಅನುಕೂಲಕರವಾದ ದರದಲ್ಲಿ ನನ್ನ ವಸತಿಯನ್ನು ಹುಡುಕಾಟ) ಎಂಬುದು ಸಂಸ್ಥೆಯ ಘೋಷವಾಕ್ಯ. ಇದರಲ್ಲಿ ಹೋಟೆಲ್ ಹುಡುಕುವ ಗ್ರಾಹಕ ಕಡಿಮೆ ದರ ಮತ್ತು ತಾವು ಪಾವತಿಸಲು ಸಾಧ್ಯವಿರುವ ಮೊತ್ತವನ್ನು, ತಾವು ಇಚ್ಛಿಸಿದ ವಿಭಾಗದ, ಆಯ್ದ ಸ್ಥಳದಲ್ಲಿರುವ ಹೋಟೆಲ್ ಅನ್ನು ನಮೂದಿಸಬಹುದು. ಗ್ರಾಹಕರನ್ನು ಸ್ವೀಕರಿಸುವುದು, ಬಿಡುವುದು ಹೋಟೆಲ್‌ನವರ ಇಚ್ಛೆಯಾಗಿರುತ್ತದೆ. ಯಾವ ಹೋಟೆಲ್ ಗ್ರಾಹಕರನ್ನು ಸ್ವೀಕರಿಸಲು ಒಪ್ಪಿಕೊಳ್ಳುತ್ತದೆಯೋ ಆ ಹೋಟೆಲ್‌ನ ಕುರಿತಾಗಿ ಗ್ರಾಹಕರಿಗೆ ಮಾಹಿತಿ ನೀಡುವುದು ಹಾಗೂ ಆ ಹೋಟೆಲ್‌ ಬುಕ್ ಮಾಡುವುದು ಫೈಂಡ್ ಮೈ ಸ್ಟೇ ಕೆಲಸವಾಗಿರುತ್ತದೆ. ತನ್ನ ಗ್ರಾಹಕರಿಗೆ ಫೈಂಡ್ ಮೈ ಸ್ಟೇ ನಿಗದಿತ ಸಮಯದಲ್ಲಿ ಶೇ.20ರಿಂದ ಶೇ.30ರಷ್ಟು ರಿಯಾಯಿತಿ ನೀಡುತ್ತದೆ ಎನ್ನುತ್ತಾರೆ ಸಿಮ್ರನ್.

ಸಂಸ್ಥೆಯ ಮುಂದಿರುವ ಸವಾಲುಗಳು

ಹೋಟೆಲ್ ರೂಮ್‌ಗಳ ಪುನರ್ ಹರಾಜಿನ ಕುರಿತು ಸಂಸ್ಥೆಯ ಪಾಲುದಾರರು ಮತ್ತು ಗ್ರಾಹಕರಿಗೆ ವಿವರಿಸುವುದೇ ಅತ್ಯಂತ ಕಷ್ಟಕರವಾದ ವಿಚಾರ. ಫೈಂಡ್ ಮೈ ಸ್ಟೇ.ಕಾಮ್ ಎಟ್ ಮೈ ಪ್ರೈಸ್ ಎಂಬ ಆನ್‌ಲೈನ್ ಮಾರುಕಟ್ಟೆಯ ಮುಖಾಂತರ ಎಷ್ಟು ಹಣ ಉಳಿಸಬಹುದು ಮತ್ತು ತಮ್ಮ ಪ್ರತಿಸ್ಪರ್ಧಿಗಳಿಗಿಂತ ನಾವು ಹೇಗೆ ಉತ್ತಮ ಎಂಬುದನ್ನು ತಿಳಿಸುವುದೂ ಸಹ ಅತೀ ಕ್ಲಿಷ್ಟಕರವಾದ ಸಮಸ್ಯೆಗಳಲ್ಲೊಂದು ಎನ್ನುತ್ತಾರೆ ಸಿಮ್ರನ್. ಇದಲ್ಲದೇ ತಮ್ಮ ಉದ್ಯಮಕ್ಕೆ ಅಗತ್ಯವಿರುವ ಪ್ರತಿಭಾವಂತರನ್ನು ಹುಡುಕುವುದು, ನಮ್ಮ ಕಡೆಗೆ ಅವರನ್ನು ಆಕರ್ಷಿಸುವುದೂ ಸಹ ಕಷ್ಟ ಎನ್ನುವ ರೋಹಿತ್ ಹಾಗೂ ಸಿಮ್ರನ್ ಒಮ್ಮೆ ಫೈಂಡ್ ಮೈ ಸ್ಟೇ ಗೆ ಭೇಟಿ ನೀಡಿದವರು ಅದರ ಶಾಶ್ವತ ಗ್ರಾಹಕರಾಗಿ ಉಳಿಯುವರು ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

ಮುಂದಿನ ಯೋಜನೆ

ತಮ್ಮದೇ ಆದ ರೀತಿ ಫೈಂಡ್ ಮೈ ಸ್ಟೇ ಸಂಸ್ಥೆಯನ್ನು ವಿಸ್ತರಿಸಿದ್ದಾರೆ ಈ ಜೋಡಿ. ಈ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹವ್ಯಾಸಿ ಮತ್ತು ಬಿಸಿನೆಸ್ ಗಾಗಿ ಪ್ರಯಾಣ ಕೈಗೊಳ್ಳುವವರನ್ನು ತಮ್ಮ ಟಾರ್ಗೆಟ್ ಗ್ರಾಹಕರನ್ನಾಗಿಸಿಕೊಳ್ಳುವ ಗುರಿ ಇವರ ಮುಂದಿದೆ. ಸದ್ಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯವಾದ ನೋಡಿ ಮತ್ತು ಕಾಯ್ದಿರಿಸುವ ಅವಕಾಶ ಒದಗಿಸುವ ಯೋಜನೆ ಮತ್ತು ಮೊಬೈಲ್ ಆ್ಯಪ್ ಮೂಲಕ ಬುಕಿಂಗ್ ವ್ಯವಸ್ಥೆ ಸೇರಿದಂತೆ ಅಭಿವೃದ್ಧಿ ಹಂತದಲ್ಲಿರುವ ಅನೇಕ ಯೋಜನೆಗಳನ್ನು ಜಾರಿಗೆ ತರುವುದು ನಮ್ಮ ಮುಂದಿನ ಗುರಿ ಎನ್ನುತ್ತಾರೆ ರೋಹಿತ್. ಪ್ರತಿಯೊಬ್ಬ ಗ್ರಾಹಕನಿಗೂ ಬಿಸಿನೆಸ್ ಟು ಬಿಸಿನೆಸ್ ಎಂಬ ಮಾದರಿಯ ಉದ್ಯಮವನ್ನು ಆರಂಭಿಸಿದೆ ಈ ಜೋಡಿ.