'ಖಾಂದಾನಿ ರಾಜಧಾನಿ'ಯಲ್ಲಿ ಟೇಸ್ಟ್​ ಮಾಡಿ ನೋಡಿ ಸ್ಪೆಷಲ್ ಅಡುಗೆ..!​​

ಟೀಮ್​ ವೈ.ಎಸ್​. ಕನ್ನಡ

'ಖಾಂದಾನಿ ರಾಜಧಾನಿ'ಯಲ್ಲಿ ಟೇಸ್ಟ್​ ಮಾಡಿ ನೋಡಿ ಸ್ಪೆಷಲ್ ಅಡುಗೆ..!​​

Sunday June 12, 2016,

3 min Read

ರಾಜಧಾನಿಯ ಖಾಂದಾನಿ ಸೂಪರ್​ ಸ್ಪೆಷಲ್​. ರಾಜಸ್ಥಾನಿ ಮತ್ತು ಗುಜರಾತಿ ಶೈಲಿಯ ಸ್ಪೆಷಲ್​ ಮೆನುವಿಗೆ ರಾಜಧಾನಿ ಹೊಟೇಲ್​ ಸುಪ್ರಸಿದ್ಧ. ಉಳಿದ ರೆಸ್ಟೋರೆಂಟ್​ಗಳಿಗಿಂತ ರಾಜಧಾನಿಯಲ್ಲಿ ರೇಟ್​ ಕೊಂಚ ಹೆಚ್ಚು. ಆದ್ರೂ ಆಹಾರ ಪ್ರಿಯರಿಗೆ ರಾಜಧಾನಿ ಅಂದ್ರೆ ಸಮ್​ಥಿಂಗ್​ ಸ್ಪೆಷಲ್​. ತನ್ನ ಗ್ರಾಹಕರಿಗೆ ವಿಶೇಷ ಆಫರ್​ಗಳನ್ನು ಕೂಡ ನೀಡುವ ರಾಜಧಾನಿ ಬೆಂಗಳೂರಿಗರ ಹೃದಯದಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರಿನ 'ಖಾಂದಾನಿ ರಾಜಧಾನಿ' ಥಾಲಿ ರೆಸ್ಟೊರೆಂಟ್ ಮಾವಿನ ಋತುವಿಗಾಗಿ ವಿಶೇಷ ಆಹಾರ ಮೇಳವನ್ನು ಆಯೋಜಿಸಿದೆ. ಜೂನ್ 15ರವರೆಗೆ ನಗರದಲ್ಲಿರುವ 'ಖಾಂದಾನಿ ರಾಜಧಾನಿ' ರೆಸ್ಟೊರೆಂಟ್​ನ 7 ಶಾಖೆಗಳಲ್ಲಿ ಮಾವಿನ ಬಗೆಬಗೆಯ ಖಾದ್ಯಗಳು ಸಿಗಲಿವೆ. ಒಮ್ಮೆ ತಿಂದರೆ ಸಾಕೂ ಬಾಯಿ ಚಪ್ಪರಿಸಿ ತಿನ್ನುವಂತಹ ಮಾವಿನ ಬಗೆಬಗೆಯ ಖಾದ್ಯಗಳು ಇಲ್ಲಿದ್ದು ಮಾವು ಪ್ರೀಯರಿಗೆ ಇದು ನೆಚ್ಚಿನ ತಾಣವಾಗಿದೆ.

ಇದನ್ನು ಓದಿ: ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

'ಖಾಂದಾನಿ ರಾಜಧಾನಿ' ರೆಸ್ಟೊರೆಂಟ್ ಹೋದ ಕೂಡಲೆ ಆಕರ್ಷಕ ಒಳಾಂಗಣ ವಿನ್ಯಾಸ, ಪಾಶ್ಚಾತ್ಯ ಸಂಗೀತ ಮನಸ್ಸಿಗೆ ಮುದ ನೀಡುತ್ತವೆ. ನೀವು ಬೇಟಿ ಮಾಡಿ, ಆರ್ಡರ್ ನೀಡಿದ ಎರಡು ನಿಮಿಷಗಳಲ್ಲಿ ಅಗಲವಾದ ಮೊಟ್ಟೆಯಾಕಾರದ ತಟ್ಟೆಯನ್ನು ತಂದಿಟ್ಟು ಸ್ಟಾರ್ಟರ್ಸ್ ಬಡಿಸಲು ಆರಂಭಿಸಿ ಬಿಡ್ತಾರೆ. ಮಾವಿನಕಾಯಿಯ ಉಪ್ಪಿನಕಾಯಿ, ಮಾವು ಕೆಂಪು ಚಟ್ನಿ, ಮಾವು ಹಸಿ ಚಟ್ನಿ ಹೀಗೆ ರಾಜಸ್ತಾನಿ ಶೈಲಿಯ ಮೂರು- ನಾಲ್ಕು ಬಗೆಯ ಚಟ್ನಿಗಳ ಆರಂಭದಲ್ಲಿ ಬಡಿಸುತ್ತಾರೆ. ಅವುಗಳ ರುಚಿ ಮಾತ್ರ ಒಂದಕ್ಕಿಂತ ಒಂದು ವಿಭಿನ್ನ.

ರಾಜಧಾನಿಯಲ್ಲಿ ಏನೇನು ಸಿಗುತ್ತದೆ..?

ಮುಖ್ಯ ಮೆನುವಿನಲ್ಲಿ ರಾಜಸ್ತಾನದ ಪ್ರಸಿದ್ಧ ಖಾದ್ಯ ಜೈಪುರಿ ಘಟ್ಟ, ಜೊತೆ ಜೋಳದ ಪರೋಟ, ಪೂರಿ ಕಾಂಬಿನೇಷನ್ ಸಿಗುತ್ತೆ. ಪುಲ್ಕ, ಪೂರಿ ಜೊತೆಗೆ ಬಟರ್ ಪನೀರ್ ಮಸಾಲಾ, ಮಾವಿನ ಹಣ್ಣು ಮಸಾಲಾ, ಸಿಹಿ ಮಾವು ಖಾದ್ಯಗಳ ರುಚಿ ಆಹಾರ ಪ್ರೀಯರಿಗೆ ಇಷ್ಟವಾಗುತ್ತವೆ. ಹಸಿರು ಮಾವಿನ ಚಟ್ನಿ, ಕಾಶ್ಮೀರ ಕೆಂಪು ಮೆಣಸು ಮಿಶ್ರಣ ಹಾಕಿ ಮಾಡಿದ ಬೋಂಡಾ, ಮಾವು ಸಾಸ್ ಹಾಗೂ ಮಾವಿನ ಕಾಯಿ ಸಮೋಸವನ್ನು ಕೆಂಪು ಚಟ್ನಿ ಹಾಗೂ ಹಸಿ ಚಟ್ನಿ ಭರ್ಜರಿ ಊಟ ಎಂದರೆ ಇದೆ ಎನ್ನವಂತಹ ಸ್ವಾದಿಷ್ಟ ಮೆನು ಇದಾಗಿದೆ. ರುಚಿ ಕೂಡ ಅದ್ಬುತವಾಗಿರುತ್ತದೆ. ಕೊನೆಗೆ ಸಿಗುವ ಮಾವಿನ ರಸಾಯನ ಹಾಗೂ ಮಾವಿನ ಸಾಸ್ ಮಿಶ್ರಣದ ಮಾವು ಫಿಜ್ಜಾ ಡೋಕ್ಲಾ ಎಲ್ಲವೂ ನಿಮ್ಮಗೆ ಸಂತೃಪ್ತಿ ನೀಡುತ್ತವೆ.

ಡ್ರಿಂಕ್ಸ್​​ನಲ್ಲಿ ಮಾವು ಲಸ್ಸಿ, ಮಾವಿನ ಕಾಯಿಯನ್ನು ಬೇಯಿಸಿ ಅದರ ತಿರುಳಿನಿಂದ ಹಿಚುಕಿ ಪುದೀನಾ, ಮಸಾಲಾ ಹಾಕಿದ 'ಕೇರಿ ಪನ್ನಾ'ವನ್ನು ಮತ್ತೆ ಮತ್ತೆ ಕುಡಿಯಬೇಕೆನಿಸಿಸುತ್ತದೆ. ಮಾವು ಅಡುಗೆ ಮೇಳದಲ್ಲಿ ಮಾವಿನ ಸೀಕರಣೆ, ಶ್ರೀಕಂಡ, ಪನೀರ್ ಕುರುಕುರೆ, ಕೇರಿ ಚನ್ನಾ ದಾಲ್ ಡೋಕ್ಲಾ, ಮ್ಯಾಂಗೊ ಜಿಲೇಬಿ, ಮಾವಿನ ಕಾಯಿ ಹಲ್ವಾ ಬಾಯಿ ರುಚಿಯನ್ನು ಹೆಚ್ಚು ಮಾಡುತ್ತದೆ. ರಾಜಸ್ತಾನದ ವಿಶೇಷಗಳಾದ ಮಾವಿನ ಸಹಿ ತುಕಡ್ಡ, ಆಮ್​ರಸ, ಬಾದಾಮ್ ಹಲ್ವಾ, ಕೇರಿ ಸಮೋಸ ಸಬ್ಜಿ, ಮ್ಯಾಂಗೊ ಕೊಪ್ತ ಪಲಾವ್, ಮಲಬಾರಿ ಮ್ಯಾಂಗೊ ಕಢಿ, ಮಾವು ಪಚಡಿ, ಮಾವು ರೈತ, ಅಮ್ರಖಂಡಗಳ ಹೊಸ-ಹೊಸ ರುಚಿಗಳನ್ನು ಸವಿಯಬಹುದು.

ಹ್ಯಾಂಡ್​ ಸಿಗ್ನಲ್​ಗಳಲ್ಲೇ ಎಲ್ಲಾ ನಡೆಯೋದು..!

ರಾಜಧಾನಿ ಹೋಟೆಲ್​ನ ವಿಶೇಷತೆಯೆಂದರೆ ಗ್ರಾಹಕರ ಏಕಾಂತಕ್ಕೆ ಭಂಗ ಬರಬಾರದೆಂದು ಮ್ಯಾನೇಜರ್, ಬಡಿಸುವವರು ಪರಸ್ಪರ ಕೈ ಸನ್ನೆ ಮೂಲಕ ಸಂಜ್ಞೆ ಮಾಡಿಕೊಂಡು ಆರ್ಡರ್ ನೀಡುತ್ತಾರೆ. ಕೈ ಬೆರಳುಗಳ ತೋರಿಸಿ ಥಾಲಿ, ಡ್ರಿಂಕ್ಸ್, ಸ್ವೀಟ್ ಎಂದು ಗುರುತಿಸಿಕೊಂಡು ಆಯಾ ಟೇಬಲ್ ಮುಂದೆ ಹಾಜರಾಗುತ್ತಾರೆ. ಹೋಟೆಲ್​ನ ಮ್ಯಾನೇಜರ್ ಪ್ರತಿ ಟೇಬಲ್ ಗ್ರಾಹಕರ ಬಳಿ ಹೋಗಿ ಭಕ್ಷ್ಯಗಳ ವಿಶೇಷತೆಯನ್ನು ವಿವರಿಸುವ ಮೂಲಕ ಅದರ ಬಗ್ಗೆ ಮತ್ತಷ್ಟೂ ಆಸಕ್ತೊ ಹೆಚ್ಚಿಸುತ್ತಾರೆ.

ಪ್ರತಿ ಮಂಗಳವಾರ ಹ್ಯಾಪಿನೆಸ್ ಥಾಲಿಯನ್ನು ಖಾಂದಾನಿ ಪರಿಚಯಿಸಿದ್ದು. ಇದಕ್ಕೆ ಒಬ್ಬರಿಗೆ ₹ 250 ಚಾರ್ಜ್​ ಇದೆ. ಈ ಥಾಲಿಯು ಪ್ರತಿದಿನದ ಥಾಲಿಯಂತೆ ಇರುತ್ತದೆ. ಆದರೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಲೆ ಕಡಿಮೆ ಮಾಡಲಾಗಿದೆ.

ರಾಜಧಾನಿ ಖಾಂದನಿಯ ಮಾವು ಅಡುಗೆ ಮೇಳ ಜೂನ್ 15ರ ತನಕ ಬೆಂಗಳೂರಿನ ಎಲ್ಲಾ ರಾಜಧಾನಿ ಖಾಂದಾನಿ ಶಾಖೆಗಳಲ್ಲಿ ನಡೆಯಲಿದೆ. ಪ್ರತಿದಿನ ಮೆನು ಬದಲಾವಣೆ ಮಾಡುವುದು ಮಾವು ಅಡುಗೆ ಮೇಳದ ವಿಶೇಷತೆ. ಬೆಂಗಳೂರಿನ ವಿವಿಧ ಹೊಟೇಲ್​ಗಳಲ್ಲಿ ತಿಂದು ಬೋರ್​ ಆದವರಿಗೆ ರಾಜಧಾನಿಯ ಖಾಂದನಿ ಸ್ಪೆಷಲ್​ ಟೇಸ್ಟ್​ ನೀಡಲಿದೆ.

ಇದನ್ನು ಓದಿ:

1. ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!

2. ಸಮಯ ಸಾಧಕನಿಗೆ ಈಗ ಲಕ್ಷ ಲಕ್ಷ ರೂಪಾಯಿ..!

3. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!