2016ರ ಮೊದಲ ಹತ್ತು ದಿನದಲ್ಲೇ 38 ಅಮೆರಿಕನ್ ಮಿಲಿಯನ್ ಡಾಲರ್​ಗೂ ಹೆಚ್ಚು ಹೂಡಿಕೆ..!

ಟೀಮ್​ ವೈ.ಎಸ್​. ಕನ್ನಡ

0

ಹೊಸವರ್ಷ ಹೊಸ ಕನಸುಗಳಿಗೆ ದಾರಿಯಾಗಿದೆ ನಿಜ. ಹಾಗೇ ಹೂಡಿಕೆದಾರರ ಪಾಲಿಗೂ 2016ರ ಆರಂಭದ ದಿನಗಳು ಸುಗ್ಗಿ ತಂದಿದೆ. ಕಳೆದ ವರ್ಷದ ಅಂತ್ಯದಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಹೊಸ ಹೊಸ ಉದ್ದಿಮೆಗಳಿಗೆ ವರ್ಷದ ಮೊದಲ ಹತ್ತು ದಿನಗಳಲ್ಲೇ ದೊಡ್ಡ ಮಟ್ಟದ ಬಂಡವಾಳ ಹರಿದುಬಂದಿದೆ. ಜನವರಿಯ ಮೊದಲ ಹತ್ತುದಿನಗಳಲ್ಲಿ ಹೂಡಿಕೆಯಾಗಿರುವ ಒಟ್ಟು ಮೊತ್ತ 38 ಅಮೆರಿಕನ್ ಮಿಲಿಯನ್ ಡಾಲರ್​​ಗೂ ಹೆಚ್ಚು. ಇದ್ರಲ್ಲಿ $ 180 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಕಂಡಿರುವ ಮೇಕ್ ಮೈ ಟ್ರಿಪ್​​ನ್ನ ಹೊರತು ಪಡಿಸಿ ಈ ಅಂಕಿ ಅಂಶಗಳು ಅನ್ನೋದು ವಿಶೇಷ.

ಒಟ್ಟು ಹೂಡಿಕೆಗಳಲ್ಲಿ ಒಂದು ಸಿರೀಸ್ ಬಿ ಇದ್ರೆ, ಮೂರು ಸಿರೀಸ್ ಎ ಡೀಲ್ ಗಳನ್ನ ಹೊಂದಿವೆ ಅನ್ನೋದು ವಿಶೇಷ. ಉಳಿದವು ಪ್ರೀ ಎ ಸಿರೀಸ್ ಗಳಲ್ಲಿ ಗುರುತಿಸ್ಪಲ್ಪಟ್ಟಿವೆ. ಇದರಲ್ಲಿ ಫ್ರೆಶ್ ಮೆನು ಹೂಡಿಕೆ ಮೊತ್ತ $16.5 ಮಿಲಿಯನ್ ನಷ್ಟಿದ್ದು ಝೋಡಿಸ್ ಕ್ಯಾಪಿಟಲ್ ಮತ್ತು ಲೈಟ್ ಸ್ಪೀಡ್ ವೆಂಚರ್ಸ್ ಇದ್ರ ಹೂಡಿಕೆದಾರರಾಗಿದ್ದಾರೆ. ಇನ್ನು ಬಿಯರ್ ಕಂಪನಿ ಬಿ9 ಸಿರೀಸ್ ಎನಲ್ಲಿ 6 ಬಿಲಿಯನ್ ಡಾಲರ್ ಗಳನ್ನ ಇನ್ವೆಸ್ಟ್ ಮಾಡಿದೆ. ಇದ್ರಲ್ಲಿ ಸ್ನ್ಯಾಪ್ ಡೀಲ್ ಸಂಸ್ಥಾಪಕರಾದ ರೋಹಿತ್ ಬನ್ಸಾಲ್ ಹಾಗೂ ಕುನಾಲ್ ಬಾಲ್ ಕೂಡ ಪಾಲು ಹೊಂದಿದ್ದಾರೆ . ವಿಶೇಷ ಅಂದ್ರೆ 2015ರ ಜನವರಿಯಲ್ಲಿ ಆಗಿರುವ ಒಟ್ಟು ಡೀಲ್ ಗಳ ಸಂಖ್ಯೆ 47. ಆದ್ರೆ ಈ ವರ್ಷದ ಮೊದಲ ದಿನದಲ್ಲೇ ಶೇಕಡಾ 61 ರಷ್ಟು ಹೆಚ್ಚು ಪಟ್ಟು ವ್ಯವಹಾರಗಳು ನಡೆದಿರುವುದು ಅಚ್ಚರಿ.

ಇಷ್ಟೆಲ್ಲಾ ಹೂಡಿಕೆಗಳಲ್ಲಿ ಪ್ರಗತಿ ಇದ್ರೂ ಮಾರುಕಟ್ಟೆಯಲ್ಲಿ ಕಾಡುತ್ತಿರುವ ಆತಂಕ ಚೀನಾದ ಆರ್ಥಿಕ ಅಸ್ಥಿರತೆ. ಚೀನಾದ ಕರೆನ್ಸಿ ಯನ್ ಕಳೆದ ಐದು ತಿಂಗಳಿನಿಂದ ಬೆಲೆ ಕಳೆದುಕೊಳ್ಳುತ್ತಲೇ ಇದೆ. ಇದು ನೇರವಾಗಿ ಅಮೆರಿಕಾದ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ. ಆದ್ರೆ ಇದು 2010ರಲ್ಲಿ ಸ್ಥಾಪಿತವಾಗಿರುವ ಮೇಕ್ ಮೈ ಟ್ರಿಪ್ ಮೇಲೆ ಯಾವುದೇ ಪ್ರಭಾವ ಉಂಟು ಮಾಡದೆ ಚೀನಾ ಮೂಲದ ಸಿಟ್ರಿಪ್ ಗೆ ಪೈಪೋಟಿ ನೀಡಿದೆ. ಇನ್ನು ಆನ್ ಲೈನ್ ಹೊಟೆಲ್ ಬುಕ್ಕಿಂಗ್ ಕೂಡ ಚೇತರಿಕೆ ಕಂಡಿದ್ದು ಮುಂದಿನ ಮೂರು ವರ್ಷಗಳಲ್ಲಿ ಇದು ಶೇಕಡಾ 25ರಿಂದ 50ಕ್ಕೇರುವ ನಿರೀಕ್ಷೆ ಇದೆ. ಇದ್ರ ಜೊತೆಗೆ ಚೀನಾದಲ್ಲಿ ಕಂಡಿರುವ ಅಸ್ಥಿರತೆಗಳಿಂದಾಗಿ ಕೆಲವು ಉದ್ದಿಮೆಗಳು ಭಾರತದ ಸ್ಟಾರ್ಟ್ ಅಪ್ ಗಳ ಮೇಲೆ ಅವಲಂಬಿತವಾಗಿವೆ.

ಈ ಮಧ್ಯೆ ಭಾರತದ ಅತೀ ದೊಡ್ಡ ಬ್ಯುಸಿನೆಸ್ ಮ್ಯಾಗ್ನೆಟ್ ಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ, ಜನವರಿಯ ಮೊದಲ ವಾರದಲ್ಲಿ ಡಾಗ್ ಸ್ಪಾಟ್ ಹಾಗೂ ಟ್ರ್ಯಾಕ್ಸನ್ ಮೇಲೆ ಹೂಡಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ 20ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇನ್ನು ಜನವರಿಯ ಮೊದಲ ಹತ್ತು ದಿನಗಳಲ್ಲಿ 6 ಸ್ಟಾರ್ಟ್ ಅಪ್ ಗಳು ಹುಟ್ಟಿಕೊಂಡಿರೋದು ವಿಶೇಷ.

ಟಾಪ್ ಡೀಲ್ ಗಳು

ಹೆಸರು – ಫ್ರೆಶ್ ಮೆನು

ಹೂಡಿಕೆ ಮೊತ್ತ - $16,500,000

ಹೂಡಿಕೆದಾರರು – ಝೋಡಿಸ್ ಕ್ಯಾಪಿಟಲ್ ಮತ್ತು ಲೈಟ್ ಸ್ಪೀಡ್ ವೆಂಚರ್ಸ್

ರೌಂಡ್ – ಸಿರೀಸ್ ಬಿ

ಎಲ್ಲಿ – ಬೆಂಗಳೂರು

*********

ಹೆಸರು – ಬಿ9 ಬಿವೆರೆಜಸ್

ಹೂಡಿಕೆ ಮೊತ್ತ - $ 6,000,000

ಹೂಡಿಕೆದಾರರು – ಸಿಕ್ವಿಯೋ ಕ್ಯಾಪಿಟಲ್, ಕುನಾಲ್ ಬಾಲ್, ರೋಹಿತ್ ಬನ್ಸಾಲ್ ಮತ್ತಿತರರು

ರೌಂಡ್ – ಸಿರೀಸ್ ಎ

ಎಲ್ಲಿ – ಮುಂಬೈ

*********

ಹೆಸರು – ಅಲಿಫ್ ಮೊಬಿಟೆಕ್

ಹೂಡಿಕೆ ಮೊತ್ತ - $ 5,000,000

ಹೂಡಿಕೆದಾರರು – ಟಾಟಾ ಕ್ಯಾಪಿಟಲ್ ಇನ್ನೋವೇಶನ್ ಫೌಂಡ್

ರೌಂಡ್ – ಪ್ರೀ ಸಿರೀಸ್ ಎ

ಎಲ್ಲಿ – ಮುಂಬೈ

*********

ಹೆಸರು – ಮೆಲೋರಾ

ಹೂಡಿಕೆ ಮೊತ್ತ - $5,000,000

ಹೂಡಿಕೆದಾರರು – ಲೈಟ್ ಬಾಕ್ಸ್ ವೆಂಚರ್ಸ್

ರೌಂಡ್ – ಪ್ರೀ ಸಿರೀಸ್ ಎ

ಎಲ್ಲಿ – ಬೆಂಗಳೂರು

*********

ಹೆಸರು – ಮೈ ಸಿಟಿ4 ಕಿಡ್ಸ್

ಹೂಡಿಕೆ ಮೊತ್ತ - $ 3,000,000

ಹೂಡಿಕೆದಾರರು – ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ಅಂಡ್ ಯುವರ್ ನೆಸ್ಟ್ ಏಂಜಲ್ ಫಂಡ್

ರೌಂಡ್ –ಸಿರೀಸ್ ಎ

ಎಲ್ಲಿ – ಎನ್ ಸಿಆರ್ – ದೆಹಲಿ

*********

ಹೆಸರು – ಝಿಬ್ ಪೇ

ಹೂಡಿಕೆ ಮೊತ್ತ - $ 1,000,000

ಹೂಡಿಕೆದಾರರು – ಅರ್ಜುನ್ ಹಂಡಾ, ಅಮಿತ್ ಜಿಂದಾಲ್ ಮತ್ತು ನಾಗೇಂದ್ರ ಚೌಧರಿ

ರೌಂಡ್ – ಸಿರೀಸ್ ಎ

ಎಲ್ಲಿ – ಅಹಮದಾಬಾದ್

*********

ಹೆಸರು – ಸೆನ್ಸಾರಾ

ಹೂಡಿಕೆಮೊತ್ತ - $ 750,000

ಹೂಡಿಕೆದಾರರು – ಲಲಿತೇಶ್ ಕಟ್ರಗಡ್ಡ ಅಂಡ್ ಗಣಯಾಂತ್ರಿಕಾ ಸಿಸ್ಟಮ್

ರೌಂಡ್ – ಪ್ರೀ ಸಿರೀಸ್ ಎ

ಎಲ್ಲಿ – ಬೆಂಗಳೂರು

*********

ಈ ಅಂಕಿ ಅಂಶಗಳನ್ನ ನೋಡಿದ್ರೆ ಹೂಡಿಕೆಯ ಭಾಗಶಃ ಕೇಂದ್ರಗಳಾಗಿರುವುದು ಬೆಂಗಳೂರು, ದೆಹಲಿ, ಗುರುಗಾಂವ್ ಹಾಗೂ ಮುಂಬೈ. ಅದರಲ್ಲೂ ದೆಹಲಿ ಗರಿಷ್ಠ ಪ್ರಮಾಣದ ಡೀಲ್ ಗಳಿಗೆ ವೇದಿಕೆ ಕಲ್ಪಿಸಿದೆ.

ಹೂಡಿಕೆ ಮಾಡಿರುವ ಹೂಡಿಕೆದಾರರು

ಹೈದ್ರಾಬಾದ್ ಮೂಲದ ವಿಸಿ ಫರ್ಮ್ ನ ಇನ್ಡಿಯಾ ಪಾರ್ಟರ್ಸ್ ಹೂಡಿಕೆ ಮಾಡಿರುವವರ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಕಳೆದ ಮೂರು ವರ್ಷಗಳಲ್ಲಿ ಒಟ್ಟು 25 ಕಂಪನಿಗಳಿಗೆ $15 ಮಿಲಿಯನ್ ಹೂಡಿಕೆ ಮಾಡಿ ಗಮನ ಸೆಳೆದಿದ್ದಾರೆ. ಇನ್ನು ಯೂನಿಕಾರ್ನ್ ಇಂಡಿಯಾ ವೆಂಚರ್ಸ್ ಒಟ್ಟು 30 ಕಂಪನಿಗಳ ಮೇಲೆ $6 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ.

ಇದನ್ನ ಹೊರತು ಪಡಿಸಿದ್ರೆ ಸ್ಪಾರ್ಕ್ ನೆಕ್ಸ್ಟ್ ಇದೇ ವರ್ಷದಲ್ಲಿ 30ರಿಂದ 40 ಸ್ಟಾರ್ಟ್ ಅಪ್ ಗಳನ್ನ ಹುಟ್ಟು ಹಾಕೋ ಲೆಕ್ಕಾಚಾರದಲ್ಲಿದೆ. ಜೊತೆಗೆ ಉಬರ್ ಕೂಡ ಭಾರೀ ಲೆಕ್ಕಾಚಾರದಲ್ಲಿದೆ. ಹೀಗೆ 2016 ಆರಂಭದಲ್ಲೇ ಹೂಡಿಕೆದಾರರಿಗೆ ದೊಡ್ಡ ವೇದಿಕೆ ಕಲ್ಪಿಸಿದ್ದು ವರ್ಷದ ಮುಂದಿನ ದಿನಗಳಲ್ಲಿ ಸ್ಟಾರ್ಟ್ ಅಪ್ ಮಾರುಕಟ್ಟೆಯ ಬೆಳವಣಿಗೆಗಳನ್ನ ನಿರೀಕ್ಷಿಸಲಾಗಿದೆ.

ಲೇಖಕರು - ಇಮಾನುಲ್ ಅಂಬಾರ್ಬರ್
ಅನುವಾದ – ಬಿ ಆರ್ ಪಿ, ಉಜಿರೆ

Related Stories

Stories by YourStory Kannada