ದೇಶದೆಲ್ಲೆಡೆ ನೋಟಿಗಾಗಿ ಪರದಾಟ-ಗುಜರಾತ್​ನ ಈ ಡಿಜಿಟಲ್ ಗ್ರಾಮದಲ್ಲಿ ಇಲ್ವೇ ಇಲ್ಲ ಕ್ಯಾಶ್ ಜಂಜಾಟ..!

ಟೀಮ್​ ವೈ.ಎಸ್​. ಕನ್ನಡ

1

ಪ್ರಧಾನಿ ನರೇಂದ್ರ ಮೋದಿ ಕಳೆದ ಮಂಗಳವಾರ ರಾತ್ರಿ 500 ಮತ್ತು 1000 ರೂಪಾಯಿಗಳ ನೋಟುಗಳ ಚಲಾವಣೆ ರದ್ದು ಪಡಿಸಿ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಪ್ರಧಾನಿಯವರ ನಿರ್ಧಾರ ಜನರನ್ನು ಎಟಿಎಂ, ಬ್ಯಾಂಕ್​ಗಳ ಮುಂದೆ ಕ್ಯೂನಲ್ಲಿ ನಿಲ್ಲುವಂತೆ ಮಾಡಿದೆ. ನೋಟು ನಿಷೇಧಗೊಂಡು ಒಂದುವಾರ ಕಳೆದಿದದ್ದರೂ ಇನ್ನೂ ಎಟಿಂ ಮತ್ತು ಬ್ಯಾಂಕ್​ಗಳ ಮುಂದೆ ಕ್ಯೂ ಕಡಿಮೆ ಆಗಿಲ್ಲ. ವ್ಯವಹಾರಗಳು ಹೆಚ್ಚು ಕಡಿಮೆ ಆಗಿವೆ. ಆದ್ರೆ ಗುಜರಾತ್ ರಾಜ್ಯದ ಪುಟ್ಟ ಗ್ರಾಮವೊಂದರಲ್ಲಿ ಯಾವುದೇ ಉದ್ಯಮ, ವ್ಯವಹಾರಕ್ಕೂ ನೋಟು ರದ್ಧತಿ ಪರಿಣಾಮ ಬೀರಿಲ್ಲ. ಈ ಗ್ರಾಮದಲ್ಲಿ ಸಹಜ ಸ್ಥಿತಿಯೇ ಇದ್ದು, ಇಲ್ಲಿ ಎಟಿಎಂ ಮತ್ತು ಬ್ಯಾಂಕ್​ಗಳ ಮುಂದೆ ಜನ ಕ್ಯೂ ನಿಲ್ಲುವ ಪ್ರಮೇಯವೇ ಬಂದಿಲ್ಲ.

ಗುಜರಾತ್​ನ ಸಬರಕಾಂತ್ ಜಿಲ್ಲೆಯಲ್ಲಿರುವ ಅಕೋಡರಾ ಗ್ರಾಮಕ್ಕೆ ಭಾರತದ ಮೊತ್ತ ಮೊದಲ ಡಿಜಿಟಲ್ ವಿಲೇಜ್ ಅನ್ನೋ ಖ್ಯಾತಿ ಇದೆ. ಗುಜರಾತ್ ರಾಜಧಾನಿ ಅಹ್ಮದಾಬಾದ್​ನಿಂದ ಈ ಗ್ರಾಮ ಕೇವಲ 90 ಕಿಲೋಮೀಟರ್ ದೂರದಲ್ಲಿದೆ. ನೋಟು ಚಲಾವಣೆ ರದ್ಧಾದ ಮೇಲೆ ಇಡೀ ದೇಶದಲ್ಲೇ ದುಡ್ಡಿಗಾಗಿ ಪರದಾಟ ನಡೆಯುತ್ತಿದ್ದರೂ, ಅಕೋಡರಾ ಗ್ರಾಮದಲ್ಲಿ ಮಾತ್ರ ಯಾವುದಕ್ಕೂ ತೊಂದರೆ ಆಗಿಲ್ಲ. ಇದಕ್ಕೆ ಕಾರಣವೇ ಡಿಜಿಟಲ್ ವ್ಯವಸ್ಥೆಯ ಬಳಕೆ.

ಇದನ್ನು ಓದಿ: ಕಾಳಧನಿಕರ ಮೇಲೆ ಮೋದಿ 'ಸರ್ಜಿಕಲ್ ಸ್ಟ್ರೈಕ್' : 500-1000 ರೂ. ನೋಟುಗಳ ಮುದ್ರಣ, ಚಲಾವಣೆ ಬಂದ್

ಅಂದಹಾಗೇ ಅಕೋಡಾರ ಗ್ರಾಮದಲ್ಲಿ ಯಾರೂ ಕೂಡ ಹಾರ್ಡ್ ಕ್ಯಾಶ್​ನಲ್ಲಿ ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಇಲ್ಲ. ಇಲ್ಲಿನ ನಿವಾಸಿಗಳು ಬ್ಯಾಂಕಿಂಗ್ ಪ್ರಯೋಜನವನ್ನು ಉಪಯೋಗಿಸಿಕೊಂಡಿದ್ದಾರೆ. ಹಾಲು ಖರೀದಿಯಿಂದ ಹಿಡಿದು, ಬಿಲ್ ಪಾವತಿ ಮಾಡುವ ತನಕ, ಸ್ಯಾಲರಿ ತೆಗೆಯುವಲ್ಲಿಂದ ಹಿಡಿದು, ಮೊಬೈಲ್ ಫೋನ್ ಬಿಲ್ ಪೇಮೆಂಟ್ ತನಕ ಎಲ್ಲವೂ ಡಿಜಿಟಲ್ ಮಾರ್ಗದಲ್ಲೇ ನಡೆಯುತ್ತಿದೆ. ಹೀಗಾಗಿ ಇಲ್ಲಿ ನೋಟ್ ಬ್ಯಾನ್ ಆಗಿದ್ರೂ ಜನ ಚಿಂತೆ ಮಾಡುತಿಲ್ಲ.

“ಇ- ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ನಾವು ಯಾವುದನ್ನೂ ಕೂಡ ಕ್ಯಾಶ್ ಮೂಲಕ ಡೀಲ್ ಮಾಡುವುದಿಲ್ಲ. ಹೀಗಾಗಿ ನಮಗೆ ನೋಟು ರದ್ದಾದ ಬಗ್ಗೆ ಚಿಂತೆ ಇಲ್ಲ ”
- ಪಂಕಿಲ್ ಪಟೇಲ್, ಅಕೋಡರಾ ನಿವಾಸಿ

ಅಂದಹಾಗೇ ಅಕೋಡರಾ ಗ್ರಾಮದಲ್ಲಿ ಸುಮಾರು 1200 ಜನರು ವಾಸ ಮಾಡುತ್ತಿದ್ದಾರೆ. ಈ ಗ್ರಾಮವನ್ನು ಐಸಿಐಸಿಐ ಬ್ಯಾಂಕ್ ದತ್ತು ಪಡೆದುಕೊಂಡು ಡಿಜಿಟಲೀಕರಣ ಮಾಡಿದೆ. ಗ್ರಾಮದ ಜನರ ಸಹಾಯದಿಂದ ಬ್ಯಾಂಕ್ ಗ್ರಾಮಸ್ಥರಿಗೆ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಪಯೋಗ ಮಾಡುವಂತೆ ಮಾಡಲು ನೆರವಾಗಿದೆ.

ಇದನ್ನು ಓದಿ:

1. ಜೋಧ್​ಪುರದ ಉದ್ಯಮಕ್ಕೆ ಫೇಸ್​ಬುಕ್​ ಟಚ್​- ಸಣ್ಣ ಉದ್ಯಮದಲ್ಲಿ ಸಾಮಾಜಿಕ ತಾಣದ ಮ್ಯಾಜಿಕ್​

2. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

3. ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..!