"ಆಧಾರ್"ಎಲ್ಲದಕ್ಕೂ ಆಧಾರ

ಟೀಮ್​ ವೈ.ಎಸ್​. ಕನ್ನಡ

"ಆಧಾರ್"ಎಲ್ಲದಕ್ಕೂ ಆಧಾರ

Friday March 24, 2017,

2 min Read

ಪಾನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್ ಅದೆಷ್ಟು ಪ್ರೂಫ್​ಗಳನ್ನು ಕೊಟ್ರು ಇನ್ನೇನು ಐಡಿ ಪ್ರೂಫ್ ಇಲ್ವಾ ಅಂತ ಕೇಳುವವರೇ ಹೆಚ್ಚು. ಆದ್ರೆ ಇನ್ನುಮುಂದೆ ಎಲ್ಲಾ ಕಾರ್ಡ್​ಗಳಿಗೂ ಗುಡ್ ಬೈ ಹೇಳುವ ದಿನ ದೂರವಿಲ್ಲ. ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ಎಲ್ಲದಕ್ಕೂ ಜೋಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಬದಲಿಗೆ ಕೇವಲ ಆಧಾರ್ ಕಾರ್ಡ್ ಮಾತ್ರ ಭವಿಷ್ಯದಲ್ಲಿ ಇರಲಿದೆ.

image


ಇತ್ತೀಚೆಗೆ ಲೋಕಸಭೆಯಲ್ಲಿ ನಡೆದ ಚರ್ಚೆವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವಿಷಯ ತಿಳಿಸಿದ್ದರು. ಮುಂದಿನ ಜುಲೈನಿಂದ ಇನ್​ಕಂ ಟ್ಯಾಕ್ಸ್ ಫೈಲ್ ಮಾಡೋದಿಕ್ಕೂ ಆಧಾರ್ ಕಡ್ಡಾಯ ಮಾಡಲಾಗುತ್ತದೆ. ಅಷ್ಟೇ ಅಲ್ಲ ಹೊಸದಾಗಿ ಪಾನ್ ಕಾರ್ಡ್​ಗೆ ಅರ್ಜಿಸಲ್ಲಿಸುವವರು ಆಧಾರ್ ನಂಬರ್ ಮೂಲಕವೇ ಸಲ್ಲಿಸಬೇಕಾಗುತ್ತದೆ. ಈ ಮೂಲಕ ಭವಿಷ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಏಕೈಕ ಐಡೆಂಟಿಟಿ ಕಾರ್ಡ್ ಆಗಿ ಬಳಸಲಾಗುತ್ತದೆ.

ಇದನ್ನು ಓದಿ: ಅಂದು ಸೋಲಿನ ಸರದಾರ...ಇಂದು ಶತಕೋಟಿ ವೀರ

ಈಗಾಗಲೇ ವಿಶ್ವದ ಹಲವು ದೇಶಗಳಲ್ಲಿ ವಿವಿಧ ರೀತಿಯಲ್ಲಿ ಸಿಂಗಲ್ ಐಡೆಂಟಿಟಿ ಕಾರ್ಡ್ ಚಾಲ್ತಿಯಲ್ಲಿದೆ. ಅಮೆರಿಕದಲ್ಲಿ ಸೋಷಿಯಲ್ ಸೆಕ್ಯುರಿಟಿ ನಂಬರ್ ಅನ್ನುವ ವಿಶೇಷ ಕಾರ್ಡ್ ಇದೆ. ಭಾರತದಲ್ಲಿ ಆಧಾರ್ ಕಾರ್ಯನಿರ್ವಹಿಸಲಿದೆ. ಇನ್​ಕಂ ಟ್ಯಾಕ್ಸ್ ರಿಟರ್ನ್ಸ್​ ವೇಳೆಯಲ್ಲಿ ಆಧಾರ್ ನಂಬರ್ ಕಡ್ಡಾಯ ಮಾಡಿರುವುರಿಂದ ತೆರಿಗೆಗಳ್ಳರನ್ನು ಹಿಡಿಯಲು ಸುಲಭವಾಗುತ್ತದೆ ಅನ್ನುವ ವಿಶ್ವಾಸ ಕೇಂದ್ರ ಸರಕಾರದ್ದು.

ಭಾರತದಲ್ಲಿ 108 ಕೋಟಿ ಜನರ ಪೈಕಿ ಈಗಾಗಲೇ ಶೇಕಡಾ 98ರಷ್ಟು ಜನ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಇಲ್ಲದೇ ಇರುವವರು ಇನ್ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್ ವೇಳೆ ಆಧಾರ್​ಗೆ ಸಲ್ಲಿಸಿದ ಅರ್ಜಿಯ ಅಕ್ನಾಲೆಡ್ಜ್​ಮೆಂಟ್ ಮೂಲಕ ಫೈಲಿಂಗ್ ಮಾಡಬಹುದು. ಆದ್ರೆ ತೆರಿಗೆ ಕಳ್ಳರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ. ತೆರಿಗೆ ಕಟ್ಟುವವರ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ಈ ಬಾರಿಯ ಬಜೆಟ್​​ನಲ್ಲಿ ಟ್ಯಾಕ್ಸ್ ಸ್ಲಾಬ್ ಅನ್ನು ಕೂಡ ಹೆಚ್ಚಿಗೆ ಮಾಡಿತ್ತು.

ಒಟ್ಟಿನಲ್ಲಿ ಇನ್ನುಮುಂದೆ ಆಧಾರ್ ಇಲ್ಲದೆ ಯಾವ ಆಟವೂ ನಡೆಯುವುದಿಲ್ಲ. ಭಾರತದ ಪ್ರಜೆ ಅನ್ನುವುದನ್ನು ಗುರುತಿಸಿಕೊಳ್ಳಬೇಕಾದರೆ ಆಧಾರ್ ಕಾರ್ಡ್ ಇರಲೇಬೇಕು.

ಇದನ್ನು ಓದಿ:

1. ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!

2. ಡಿಜಿಟಲ್​ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್​ಕ್ಯಾಶ್​..!

3. ಮುಳ್ಳಿನ ಗಿಡದಲ್ಲಿ ಗುಲಾಬಿ ಅರಳಿತು..!