ಟೀಮ್ ವೈ.ಎಸ್. ಕನ್ನಡ
ಜುಗ್ನೋ, ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಹೈಪರ್ಲೋಕಲ್ ವಲಯ. ಚಂಡೀಘಡ ಮೂಲದ ಜುಗ್ನೊ ತನ್ನ ಉದ್ಯಮವನ್ನ ಆಟೋ ರಿಕ್ಷಾದ ಮೂಲಕ ಆರಂಭಿಸಿತು. ಗ್ರಾಹಕರ ಬೇಡಿಕೆಗಳ ಅನುಸಾರವಾಗಿ ಆಹಾರ ವಸ್ತುಗಳ ಪೂರೈಕೆ ಹಾಗೂ ಸಾರಿಗೆ ಸೇವೆಯನ್ನ ಆಟೋ ನೆಟ್ವರ್ಕ್ ಮೂಲಕ ತಲುಪಿಸುತ್ತಿದೆ.
2014 ರಲ್ಲಿ ಆರಂಭಗೊಂಡ ಜುಗ್ನೋ ಆಟೋ ಸರ್ವಿಸ್ , ಚಂಢೀಘಢದ ಮೂಲಕ ದೆಹಲಿ, ಗುರಗಾಂವ್, ಇಂಧೋರ್, ಮತ್ತು ಮುಂಬೈನಲ್ಲಿ ತನ್ನ ಕೆಲಸ ನಿರ್ವಹಿಸುತ್ತಿದೆ. ಟ್ಯಾಕ್ಸಿ ಸರ್ವೀಸ್ಗಳಾದ ಊಬರ್, ಓಲಾ ರೀತಿಯಲ್ಲಿಯೇ ಆ್ಯಪ್ ಮೂಲಕ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆಯನ್ನ ಒದಗಿಸುತ್ತದೆ. ಜುಗ್ನೋ ಸಹಸಂಸ್ಥಾಪಕ ಮತ್ತು ಸಿಇಓ ಸಮರ್ ಸಿಂಗ್ಲಾ ಹೇಳುವಂತೆ ‘‘ ಗ್ರಾಹಕರ ಇತರೆ ಬೇಡಿಕೆಗಳನ್ನ ನಾವು ಆಟೋ ಸರ್ವೀಸ್ನಿಂದ ಪೂರೈಸುವ ಪ್ರಯತ್ನ ಮಾಡುತ್ತಿದ್ದೇವೆ. ಜುಗ್ನೋ ಫಟಾಫಟ್ ಕಂಪನಿಯು ಹೈಪರ್ಲೋಕಲ್ ಉತ್ಪನ್ನಗಳ ವೇದಿಕೆಯಾಗಿದ್ದು, ಗ್ರಾಹಕರು ಹತ್ತಿರದ ಅಂಗಡಿಗಳಿಂದ ಆರ್ಡರ್ ಮಾಡಿದ ಉತ್ಪನ್ನಗಳನ್ನ ಆಟೋ ಮೂಲಕ ವಿತರಿಸಲಾಗುತ್ತೆ. ಇಷ್ಟಲ್ಲದೆ ಜುಗ್ನೋ ಮೀಲ್ಸ್ ಆ್ಯಪ್ ಮೂಲಕ ಗ್ರಾಹಕರು ತಾಜಾ ಆಹಾರವನ್ನ ಪಡೆಯಬಹುದು.’’ ಹೀಗೆ ಪ್ರತಿನಿತ್ಯ 8000 ಆರ್ಡರ್ಗಳು ಕಂಪನಿಗೆ ಬರುತ್ತಿದೆ. ಹೀಗಾಗಿ ಬಂಡವಾಳ ಹೂಡಿಕೆದಾರರಾದ ಸ್ನೋ ಲೆಪಾರ್ಡ್ ವೆಂಚರ್ ಮತ್ತು ಪೇಮೆಂಟ್ ಗೇಟ್ವೇ ಪೇಟಿಎಂನಿಂದ ಜುಗ್ನೋಗೆ 5 ಮಿಲಿಯನ್ ಡಾಲರ್ ಹಣವು ಹರಿದುಬಂದಿದೆ. ಇದಾದ ಒಂದು ತಿಂಗಳ ಬಳಿಕ ದೆಹಲಿ ಮೂಲಕ ಮುಂಬೈ, ಕೊಲ್ಕತ್ತಾ ಮತ್ತು ಹೈದ್ರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟ್ಯಾಕ್ಸಿ ಸಂಗ್ರಾಹಕ ಬುಕ್ ಮೈ ಕ್ಯಾಬ್ನ್ನು ತನ್ನದಾಗಿಸಿಕೊಂಡಿದೆ.
ಜುಗ್ನೋ ಕಂಪನಿಯ ಮಾದರಿ, ಬೇರೆ ಎಲ್ಲಾ ಹೈಪರ್ಲೋಕಲ್ ಕಂಪನಿಗಳಿಗಿಂತ ಬಹಳ ಭಿನ್ನವಾಗಿದೆ. ಆದಾಗ್ಯೂ, ಪ್ರತಿಸ್ಪರ್ಧಿಯಾಗಿರುವ ಓಲಾ ಸ್ವಯಂ ರಿಕ್ಷಾ ಸೇವೆ ಪ್ರಾರಂಭಿಸಿದ್ದು, ಗ್ರಾಹಕರಿಗೆ ದಿನಸಿ ತಲುಪಿಸುವ ಸೇವೆಯನ್ನ ಪ್ರಾರಂಭಿಸಿದೆ. ಹೀಗಾಗಿ ಜುಗ್ನೋ ಓಲಾ ಸ್ಪರ್ಧೆಗೆ ಪ್ರತಿಸ್ಪರ್ಧೆ ಒಡ್ಡುವುದು ಹಾಗೂ ವಿಸ್ತರಣೆಯ ಗುರಿ ಹೊಂದಿದೆ.
ಇನ್ನು ಹೈಪರ್ಲೋಕಲ್ ಈ ವರ್ಷದ ಅತ್ಯಂತ ಹಾಟೆಸ್ಟ್ ಯುವ ಉದ್ಯಮವಾಗಲಿದೆ. ಸುಮಾರು 250 ಮಿಲಿಯನ್ ಡಾಲರ್ನಷ್ಟು ಹಣದ ಹೂಡಿಕೆಯನ್ನ ಕಂಡಿದೆ .ಗ್ರಾಹಕರ ಮನಸ್ಥಿತಿಗೆ ಅನುಗುಣವಾಗಿ, ತಾಂತ್ರಿಕವಾಗಿ ಅಭಿವೃದ್ದಿ ಹೊಂದಿದ ನಗರಗಳೇ ಈ ಸೇವೆಯ ವೇದಿಕೆಯಾಗಿದೆ. ಇದಕ್ಕೆ ಕಾರಣ ತಂತ್ರಜ್ಞಾನದ ಅಭಿವೃದ್ದಿ ಹಾಗೂ ಮೊಬೈಲ್ನಲ್ಲಿನ ಕ್ರಾಂತಿಕಾರಕ ಬೆಳವಣಿಗೆ. ಈ ಮೂಲಕ ಗ್ರಾಹಕರು ಉತ್ತಮವಾದ ಸೇವೆಯನ್ನ ಆಯ್ದುಕೊಳ್ಳಲು ಸಾಧ್ಯವಾಗಿದೆ. ಕಂಪನಿಗಳ ನಡುವೆ ಸ್ಪರ್ಧೆ ಜೋರಾಗಿದ್ದು, ಹೊಸ ಕಂಪನಿಗಳು ಗ್ರಾಹಕರಿಗೆ ತ್ವರಿತ ಸೇವೆಗಳನ್ನ ನೀಡಲು ಕಾರಣವಾಗುತ್ತಿದೆ. ಹೀಗಾಗಿಯೇ ಜುಗ್ನೋ ಗ್ರಾಹಕರ ಮನಗೆದ್ದಿದ್ದು, ವರ್ಷಾಂತ್ಯದಲ್ಲಿ ಅನೇಕ ನಗರಗಳಲ್ಲಿ ತನ್ನ ಫಟಾಫಟ್ ಸರ್ವೀ ಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ.
Related Stories
March 14, 2017
March 14, 2017
Stories by YourStory Kannada