ಉಪ್ಪಿನ ಲ್ಯಾಂಪ್​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

ಕೃತಿಕಾ

0

ಉಪ್ಪಿನಿಂದ ಏನೆಲ್ಲಾ ಮಾಡಬಹುದು...? ಅಡುಗೆಗೆ ಬಿಟ್ಟು ಬೇರೇನು ಉಪಯೋಗ ಇದೆ...? ಇಷ್ಟು ಬಿಟ್ರೆ ಬೇರೆ ಯಾವ ಉಪಯೋಗನೂ ನಮಗೆ ತಿಳಿದಿಲ್ಲ. ಆದ್ರೆ ನಾವ್ ಹೇಳೋ ಉಪ್ಪಿನ ವಿಶೇಷ ಅಂದ್ರೆ ಉಪ್ಪಿನಿಂದ ಲ್ಯಾಂಪ್ ಮಾಡ್ತಾರೆ. ಅಷ್ಟೇ ಅಲ್ಲಾ ಅದಕ್ಕೆ ಸಿಲಿಕಾನ್ ಸಿಟಿಯಲ್ಲಿ ಎಲ್ಲಿಲ್ಲದ ಬೇಡಿಕೆ.

ನಾವ್ ನಿಮ್ಗೆ ಹೇಳ್ತಾ ಇರೋದು ಅಂತಿಂಥಾ ಸಾಲ್ಟ್ ಅಲ್ಲ ಇದು ಹಿಮಾಲಯನ್ ಸಾಲ್ಟ್. ಹಿಮಾಲಯನ್ ಅನ್ನೋದು ಸಾಲ್ಟ್ ಒಂದು ಬಗೆಯ ಕಲ್ಲುಪ್ಪು. ಹಿಮಾಲಯ ಬೆಟ್ಟದಿಂದ 300ಕಿಲೋ ಮೀಟರ್ ದೂರದಲ್ಲಿರೋ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಿಗೋ ಕಲ್ಲುಪ್ಪು ಇದು. ಆದ್ರೆ ಈ ಉಪ್ಪು ಬಹುಪಯೋಗಿ. ರುಚಿಯಲ್ಲಿ ಉಪ್ಪಿನಂತೆ ಇರೋ ಇದು ನೋಡೋದಿಕ್ಕೆ ಕೆಂಪು ಬಿಳಿ ಮಿಶ್ರಣದಂತೆ ಅಥವಾ ಗುಲಾಬಿ ಬಣ್ಣದಲ್ಲಿ ಲಭ್ಯ. ಇನ್ನು ಈ ಉಪ್ಪಿನ ವಿಶೇಷತೆ ಅಂದ್ರೆ ಇದ್ರಲ್ಲಿ ಲ್ಯಾಂಪ್ ತಯಾರಿಸಲಾಗುತ್ತದೆ. ಈ ಲ್ಯಾಂಪ್ ಬರೀ ಶೋ ಪೀಸ್ ಅಷ್ಟೇ ಅಲ್ಲಾ ಮನೆಯಲ್ಲಿ ಪಾಸಿಟಿವ್ ಅನರ್ಜಿ ಹೆಚ್ಚಿಸುತ್ತದೆ ಅನ್ನೋ ನಂಬಿಕೆ ಕೂಡಾ ಇದೆ.

ಈ ಜಿಯೋ ಲ್ಯಾಂಪ್ ಗಳು ದಕ್ಷಿಣ ಭಾರತದಲ್ಲೇ ಮೊತ್ತ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಲಭ್ಯವಾಗುತ್ತಿರೋದು ವಿಶೇಷ. ನಗರದ ಪ್ರಕಾಶ್ ನಗರದಲ್ಲಿರೋ ಅಂಗಡಿಯಲ್ಲಿ ದೊರೆಯುತ್ತದೆ. ಪಿರಮಿಡ್, ಗೋಲಾಕೃತಿ ಹಾಗೂ ಸ್ವಾಭಾವಿಕವಾದ ಆಕೃತಿಗಳಲ್ಲಿ ಈ ಲ್ಯಾಂಪ್ ಗಳು ಲಭ್ಯ. ಈ ಲ್ಯಾಂಪ್ ಅಂದ್ರೆ ಉಪ್ಪಿನ ಒಳಗಡೆ 50ವೋಲ್ಟೇಜ್ ನ ಬಲ್ಬ್ ನ ಅಳವಡಿಸಲಾಗುತ್ತದೆ. ಇದರ ಹೊಳಪಿಂದ ಹೊರ ಬರೋದು ಗುಲಾಬಿ ಅಥವಾ ಆರೆಂಜ್ ಕಲರ್ ಬೆಳಕು ನಮ್ಮ ಸುತ್ತಲಿರೋ ಕಲ್ಮಶಗಳನ್ನು ಹೋಗಲಾಡಿಸುತ್ತದೆ ಅನ್ನೋದು ನಂಬಿಕೆ.

ಇನ್ನು ಸಾಮಾನ್ಯ ಉಪ್ಪಿನಂತೆಯೂ ಲಭ್ಯವಿರೋ ಈ ಉಪ್ಪು ಅಡುಗೆಗೆ ಅಥವಾ ಸ್ನಾನಕ್ಕೆ ಬಳಸಿದ್ರೆ ಚರ್ಮ ರೋಗ ನಿವಾರಣೆ ಆಗತ್ತದೆ. ಜೊತೆಗೆ ಈ ಲ್ಯಾಂಪ್ ಮನೆಯಲ್ಲಿಟ್ರೆ ಪಾಸಿಟೀವ್ ಎನರ್ಜಿ ಜನರೇಟ್ ಆಗುತ್ತೆ ಅನ್ನೋ ನಂಬಿಕೆ ಕೂಡ ಜನರಲ್ಲಿದೆ. ಈ ರೀತಿಯ ಲ್ಯಾಂಪ್ ಗಳು ಬೇರೆಲ್ಲೂ ಸಿಗದೇ ಇರೋದ್ರಿಂದಾಗಿ ಬೇಡಿಕೆಯೂ ಹೆಚ್ಚಾಗಿಯೇ ಇದೆ. ನಾವು ಈ ಲ್ಯಾಂಪ್ ಗಳನ್ನು ಪಂಜಾಬ್ ನಿಂದ ಬೆಂಗಳೂರಿಗೆ ತರಿಸಿ ಮಾರಾಟ ಮಾಡುತ್ತೇವೆ ಅಂತಾರೆ ಹಿಮಾಲಯನ್ ಸಾಲ್ಟ್ ಲ್ಯಾಂಪ್ ಅಂಗಡಿ ಮಾಲೀಕ ರಮೇಶ್..

ಈ ಲ್ಯಾಂಪ್ ಗಳು ತೀರಾ ದುಬಾರಿ ಅಲ್ಲಾ ಅಂದ್ರೂ 2000 ರೂಪಾಯಿಯಿಂದ ಇದರ ಬೆಲೆ ಪ್ರಾರಂಭವಾಗೋದ್ರಿಂದ ಸಾಮಾನ್ಯ ಜನರಿಗೆ ಕೊಂಚ ಕಾಸ್ಟ್ಲೀನೆ. ಆದ್ರೂ ಮನೆಯಲ್ಲಿರೋ ನೆಗೆಟಿವ್ ಅನರ್ಜಿ ಹೋಗಲಾಡಿಸುವ ಈ ಹಿಮಾಲಯನ್ ಸಾಲ್ಟ್ ಲ್ಯಾಂಪ್ ಗೆ ಡಿಮ್ಯಾಂಡ್ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ.

Related Stories