ಕನ್ನಡದಲ್ಲೊಂದು ಅಂತರಾಷ್ಟ್ರೀಯ ಮಟ್ಟದ Ramp ಆಲ್ಬಂ

ಟೀಮ್​ ವೈ.ಎಸ್​. ಕನ್ನಡ

1

ಸಂಗೀತ ಜಗತ್ತಿನಲ್ಲಿ ರ್ಯಾಂಪ್ ಮ್ಯೂಸಿಕ್ ಒಂದು ದೊಡ್ಡ ಹವಾವನ್ನೇ ಸೃಷ್ಟಿ ಮಾಡಿದೆ. ವಿದೇಶಗಳಲ್ಲಿ ಹೆಚ್ಚಾಗಿದ್ದ ಈ ರ್ಯಾಂಪ್ ಸಂಸ್ಕೃತಿ ಕೆಲ ವರ್ಷಗಳ ಹಿಂದೆ ಕನ್ನಡ ಭಾಷೆಗೂ ಬಂದಿತ್ತು. ಕನ್ನಡದ ಕೆಲ ಸಂಗೀತ ತಜ್ಞರು ಈ ರ್ಯಾಂಪ್ ಹಾಡನ್ನು ಕನ್ನಡ ಭಾಷೆಯಲ್ಲೂ ಹಾಡಿ ಖ್ಯಾತಿ ಗಳಿಸಿದ್ದರು. ಈಗ ಕನ್ನಡ ಭಾಷೆಯನ್ನು ಇಡೀ ಕರ್ನಾಟಕದಲ್ಲಿ ಕಡ್ಡಾಯ ಮಾಡಬೇಕು ಎಂದು ಯುವಕರ ತಂಡವೊಂದು ರ್ಯಾಂಪ್ ಆಲ್ಬಂ ಮಾಡುತ್ತಿದೆ.

ಯಾವುದೇ ಪಬ್ ಅಥವಾ ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮಗಳಿಗೆ ಹೋದರೆ ಅಲ್ಲಿ ಇಂಗ್ಲೀ ಷ್ ಇಲ್ಲವೇ ಹಿಂದಿ ಹಾಡುಗಳು ಕೇಳಿ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸ್ಥಳೀಯ ಭಾಷೆ ತಮಿಳು ಹಾಡು ಕೂ ಕೆಲ ಪಬ್​ಗಳಲ್ಲಿ ಹಾಡುತ್ತಿರುತ್ತಾರೆ. ಆದರೆ ಕನ್ನಡ ಹಾಡುಗಳನ್ನು ಯಾವ ಪಬ್​ಗಳಲ್ಲೂ ಹಾಡುವುದಿಲ್ಲ. ಆದರೆ ಇದನ್ನು ಬದಲಾಯಿಸಬೇಕು ಎಂದು ಎನ್ನುವ ಉದ್ದೇಶದಿಂದ ಕನ್ನಡದ ರ್ಯಾಂಪ್ ಹಾಡುಗಾರರಲ್ಲಿ ಒಬ್ಬರಾದ ಅಲೋಕ್ ಮತ್ತವರ ಗೆಳೆಯರು ಒಂದು ಮ್ಯೂಸಿಕ್ ಆಲ್ಬಂ ತಯಾರಿಸುತ್ತಿದ್ದಾರೆ.

"ಕರ್ನಾಟಕದ ಎಲ್ಲ ಪಬ್ ಮತ್ತು ಮ್ಯೂಸಿಕ್ ಕಾನ್ಸರ್ಟ್​ಗಳಲ್ಲಿ ಕನ್ನಡದ ಹಾಡುಗಳನ್ನು ಜನ ಬಳಸುವಂತಾಗಬೇಕು. ಗಂಗ್ನಂ ಶೈಲಿಯಲ್ಲಿ ಹಿಟ್ ಆಗಬೇಕು. ಅದು ಈ ಆಲ್ಬಂನಿಂದ ಆಗುತ್ತದೆ ಎನ್ನುವ ನಂಬಿಕೆ ನನಗಿದೆ. ಇದಕ್ಕೆ ನಮ್ಮ ಸ್ನೇಹಿತರೆಲ್ಲಾ ಕೈಜೋಡಿಸಿದ್ದಾರೆ."
- ಅಲೋಕ್​​, ನಟ

ಈ ರ್ಯಾಂಪ್ ಕಲಾವಿದ ಅಲೋಕ್ ನಟ ಕೂಡಾ ಹೌದು, ಕನ್ನಡದ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಬೇಕು ಎನ್ನವುದು ಸಹ ಈ ಆಲ್ಬಂನ ಉದ್ದೇಶವಾಗಿದೆ. ಇದಕ್ಕಾಗಿ ಅಲೋಕ್ ಕರ್ನಾಟಕದಲ್ಲಿರುವ ಇಂಡಿಪೆಂಡೆಂಟ್ ಆರ್ಟಿಸ್ಟ್​ಗಳನ್ನು ಒಟ್ಟಿಗೆ ಸೇರಿಸಿ ಕೆಎ 01 ಎಂಬ ಅಚ್ಚ ಕನ್ನಡದ ಒಂದು ರ್ಯಾಂಪ್ ಆಲ್ಬಂನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ತಮ್ಮಲ್ಲಿರುವ ಸಂಗೀತ ಪ್ರತಿಭೆಯನ್ನು ಯೂಟ್ಯೂಬ್ ಮೂಲಕ ಮತ್ತಿತರ ಕಡೆ ಪ್ರದರ್ಶಿಸುತ್ತಿರುವ ಸುಮಾರು ಕನ್ನಡದ 16 ಜನ ರ್ಯಾಂಪ್ ಕಲಾವಿದರು ಈ ಕೆಎ 01ನಲ್ಲಿ ಅಲೋಕ್ ಜತೆ ಕೈಜೋಡಿಸಿದ್ದಾರೆ.

ರಾಹುಲ್ ಡಿಟ್ಟೋ,ಎಮ್ ಸಿ ಬಿಜು, ಹರೀಶ್, ಅಜಯ್, ಮಾರ್ಟೀನ್, ಡಾನ್ ಬಾಸ್ಟೀನ್ ಸೇರಿದಂತೆ 16 ಜನ ಈ ಆಲ್ಬಂಗೆ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಮಾತನಾಡುವುದು ಕಡ್ಡಾಯವಾಗಬೇಕು ಎಂಬುದು ಈ ಆಲ್ಬಂನ ಮುಖ್ಯ ಉದ್ದೇಶವಾಗಿದೆ. ಸಂಗೀತಕ್ಕೆ ಭಾಷೆ ಇಲ್ಲ ಆದರೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಇಂಗ್ಲೀಷ್ ರ್ಯಾಂಪ್ ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾರೋ, ಯಾವ ಪಬ್​ಗಳಲ್ಲಿ ಇಂಗ್ಲೀಷ್ ಹಿಂದಿ ಹಾಡುಗಳನ್ನು ಪ್ಲೇ ಮಾಡುತ್ತಾರೋ ಅಲ್ಲೆಲ್ಲ ಈ ಕೆ ಎ 01 ಆಲ್ಬಂನ ಹಾಡುಗಳು ಕೇಳುವಂತೆ ಮಾಡುವುದು ಈ ಕೆ ಎ 01 ನ ಧ್ಯೇಯವಾಗಿದೆ.ಅಷ್ಟೇ ಅಲ್ಲದೆ ಅಲೋಕ್ ಈ ಆಲ್ಬಂ ಮೂಲಕ ಕನ್ನಡದ ಎಲ್ಲ ಇಂಡಿಪೆಂಡೆಂಟ್ ಆರ್ಟಿಸ್ಟ್​ಗಳಿಗೆ ಒಂದೊಳ್ಳೆ ವೇದಿಕೆ ಕಲ್ಪಿಸಿದ್ದಾರೆ ಎಂದೇ ಹೇಳಬಹುದು.

ಇದನ್ನು ಓದಿ: ದೇಗುಲಗಳ ಕದ ತಟ್ಟಿದ ಸಾಮಾಜಿಕ ಕಾರ್ಯಕರ್ತೆಯರು... ಮಹಿಳೆಯರ ಪ್ರವೇಶಕ್ಕಾಗಿ ತೀವ್ರಗೊಂಡ ಹೋರಾಟ

ಒಂದು ವಿಡಿಯೋ ಹಾಡಿನಲ್ಲಿ ತಿಥಿಯ ಕಲಾವಿದರು

ತಿಥಿ ಸಿನಿಮಾ ಮೂಲಕ ಇಡೀ ಜಗದ್ವಿಖ್ಯಾತಿ ಗಳಿಸಿದ ಗಡ್ಡಪ್ಪ ಮತ್ತು ಸೆಂಚುರಿಗೌಡರನ್ನು ಅಲೋಕ್ ತಮ್ಮ ಒಂದು ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಇವರ ಆಲ್ಬಂನಲ್ಲಿ ಬರುವ ನಾನ್ ಕನ್ನಡಿಗ ಎಂಬ ಹಾಡಿನಲ್ಲಿ ಗಡ್ಡಪ್ಪ ಮತ್ತು ಸೆಂಚುರಿಗೌಡರು ಕಾಣಿಸಿಕೊಂಡಿದ್ದಾರೆ. ಈ ಹಾಡು ಗಡ್ಡಪ್ಪ ಅವರಿಂದ ಪ್ರಾರಂಭವಾಗಿ ಗಡ್ಡಪ್ಪ ಅವರಿಂದಲೇ ಕೊನೆಯಾಗುತ್ತದೆ.

ಯಾವ ತರಹದ ಹಾಡುಗಳಿವೆ..?

ಈ ಆಲ್ಬಂನಲ್ಲಿ ಎಲ್ಲ ಮಾದರಿಯ ಹಾಡುಗಳಿವೆ ಪಾರ್ಟಿ ಟ್ರಾಕ್, ಹಿಪ್ಆಪ್ ಶೈಲಿಯಲ್ಲಿನ ಹಾಡುಗಳು ಹೀಗೆ ರ್ಯಾಂಪ್ ಹಾಡುಗಳಲ್ಲಿ ಇರುವ ಎಲ್ಲ ಮಾದರಿಯ ಹಾಡುಗಳು ಇರುತ್ತವೆ. ಇದೊಂದು ರೀತಿಯಲ್ಲಿ ನ್ಯೂ ಏಜ್ ಮ್ಯೂಸಿಕ್ ಆಲ್ಬಂ ಆಗುವ ಎಲ್ಲ ಲಕ್ಷಣಗಳು ಇವೆ. ಕರ್ನಾಟಕದಲ್ಲಿರುವ ಇಂಡಿಪೆಂಡೆಂಟ್ ಆರ್ಟಿಸ್ಟ್​ಗಳಿಗೆ, ಸಂಗೀತಗಾರರಿಗೆ ಆತ್ಮ ವಿಶ್ವಾಸ ತುಂಬುವ ಒಂದು ಸಣ್ಣ ಪ್ರಯತ್ನವು ಈ ಆಲ್ಬಂ ಮೂಲಕ ಆಗುತ್ತಿದೆ. ಸೆಪ್ಟಂಬರ್ ಕೊನೆಯಲ್ಲಿ ಈ ಆಲ್ಬಂನ್ನು ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ ಅಲೋಕ್ ಮತ್ತವರ ಗೆಳೆಯರು.

ಒಟ್ಟಿನಲ್ಲಿ ಕನ್ನಡದ ಕೂಗು ಕೇಳಿ ಬರುವ ಸಮಯದಲ್ಲಿ ಅಲೋಕ್​ ಮತ್ತು ಗೆಳೆಯರ ಬಳಗ ದೊಡ್ಡ ಹವಾ ಸೃಷ್ಟಿಸಲಿ ಅನ್ನೋದೇ ಎಲ್ಲರ ಆಶಯ.

ಇದನ್ನು ಓದಿ:

1. ಒಂದೇ ರಾತ್ರಿ ಊರಿಗೆ ಊರೇ ಮಾಯ..!

2. "ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!

3. ಹೊಟೇಲ್ ಉದ್ಯಮದ ಹೊಸ ಯಶಸ್ಸು ಈ ಬ್ರೌನಿ ಹೆವನ್Related Stories