`ಐ ಲವ್ ಯೂ'ಎನ್ನಲು ನಾಚಿಕೆ ಏಕೆ..?

ಟೀಮ್​ ವೈ.ಎಸ್​. ಕನ್ನಡ

0

ಒಂದು ರಾಷ್ಟ್ರವಾಗಿ ನಮ್ಮಲ್ಲಿ ಅದ್ಭುತ ಸಂಗತಿಗಳಿವೆ. ಸ್ಪರ್ಧೆಯೇನಾದರೂ ಇದ್ದಿದ್ರೆ ನಾವು ಬಂಗಾರ ಅಥವಾ ಬೆಳ್ಳಿ ಪದಕವನ್ನು ಗೆದ್ದುಬಿಡುತ್ತಿದ್ವಿ. ಯಾರಾದರೂ ಏನಾದ್ರೂ ಸಾಧನೆ ಮಾಡಿದಾಗ ಅದನ್ನು ಮೆಚ್ಚಿಕೊಳ್ಳಲು ಮುಂದಾಗದ ನಮ್ಮ ಮನಸ್ಥಿತಿ ಬಗ್ಗೆ ನಾನು ಮಾತನಾಡ್ತಿದ್ದೇನೆ. ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ರೆ, ನೀವೇ ಯೋಚಿಸಿ, ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ಕೊನೆಯ ಬಾರಿ ನಾನು ಯಾರನ್ನಾದ್ರೂ ಹೊಗಳಿದ್ದು, ಪ್ರಾಮಾಣಿಕವಾಗಿ ಶ್ಲಾಘಿಸಿದ್ದು ಯಾವಾಗ ಅನ್ನೋದನ್ನ.

ಇದನ್ನು ಓದಿ

ಅದ್ಭುತವಾಗಿದೆ ‘ಚೈಲ್ಡ್ ರೆಸ್ಕ್ಯೂರೋಬೋ’

ಸುತ್ತಲಿನ ಜಗತ್ತು ಸ್ಟಾರ್ಟ್‍ಅಪ್ ಪರಿಸರದ ಹತ್ತಿರದ ಮನೆಯಿದ್ದಂತೆ. ಜೀವನದ ಪ್ರತಿ ಕ್ಷೇತ್ರದಲ್ಲೂ, ಮೆಚ್ಚುಗೆ ಅನ್ನೋದು ಸ್ಪರ್ಧೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತದೆ. ಸ್ಟಾರ್ಟ್‍ಅಪ್ ಲೋಕದ ವಿಚಾರವನ್ನೇ ತೆಗೆದುಕೊಂಡ್ರೆ ನಾವೆಲ್ಲ ಇಲ್ಲಿ ತಜ್ಞ ವಿಮರ್ಷಕರಷ್ಟೆ. ತುಂಬಾ ವರ್ಷಗಳಿಂದ ಈ ಮಾದರಿಯನ್ನು ನಾನು ಗಮನಿಸುತ್ತಿದ್ದೇನೆ, ನಾವೇಕೆ ಈ ರೀತಿ ಇದ್ದೇವೆ ಅನ್ನೋದು ನನ್ನನ್ನು ಆಶ್ಚರ್ಯಚಕಿತಗೊಳಿಸುತ್ತೆ. ನಿನ್ನೆಯಷ್ಟೆ ಉದಯೋನ್ಮುಖ ಕಂಪನಿಯೊಂದರ ಯುವ ನೌಕರರ ಜೊತೆ ನಾನು ಚರ್ಚೆ ನಡೆಸ್ತಾ ಇದ್ದೆ. ``ನೀವು ಪರಸ್ಪರರಲ್ಲಿರುವ ಅಸಾಮಾನ್ಯ ಗುಣಗಳನ್ನು ಗುರುತಿಸಿದ್ದೀರಾ? ನೀವೇ ಮುಂದಾಗಿ ಅವರನ್ನು ಅಭಿನಂದಿಸಿದ್ದೀರಾ? ಕನಿಷ್ಟ 10 ಸಹೋದ್ಯೋಗಿಗಳ ಬಳಿಗಾದರೂ ತೆರಳಿ ಅವರು ಮಾಡಿದ ಯಾವುದಾದರೂ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೀರಾ'' ಎಂದು ನಾನವರನ್ನು ಪ್ರಶ್ನಿಸಿದೆ. ಎಲ್ಲರಲ್ಲೂ ಅಚ್ಚರಿ, ಯಾರೊಬ್ಬರೂ ಈ ಕೆಲಸ ಮಾಡಿರಲಿಲ್ಲ.

ಇದಕ್ಕಾಗಿ ನಾನು ಹೆತ್ತವರನ್ನು ದೂಷಿಸುವುದಿಲ್ಲ. ಯಾಕಂದ್ರೆ ಇದು ನೀವು ಮಾಡಬಹುದಾದ ಅತ್ಯಂತ ಸುಲಭ ಕೆಲಸ. ವಿಶಿಷ್ಟ ಶೈಲಿಯಲ್ಲಿ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನನ್ನ ಪೋಷಕರು ಕಲಿಸಿಕೊಟ್ಟಿದ್ದಾರೆ. ನನ್ನ ಕಥೆಯೇನಾದ್ರೂ ನಿಮ್ಮಲ್ಲೂ ಅನುರಣಿಸುತ್ತದೆಯೋ ನೋಡಿ.

ಶಾಲಾ ದಿನಗಳಲ್ಲಿ ನಾನು ಚರ್ಚಾ ಸ್ಪರ್ಧೆಗಳಲ್ಲಿ ಚೆನ್ನಾಗಿ ಮಾತನಾಡುತ್ತಿದ್ದೆ. ಪ್ರತಿ ಬಾರಿ ಬಹುಮಾನ ಗೆದ್ದು ಬಂದಾಗಲೂ ನನ್ನ ಅಮ್ಮ ನಗುನಗುತ್ತ ಸ್ವಾಗತಿಸುತ್ತಿದ್ರು. ಅವರ ನಗುವಿನಲ್ಲಿರುವ ಸಂತೋಷ, ನನ್ನ ಬಗೆಗಿನ ಹೆಮ್ಮೆಯನ್ನು ನಾನು ಗುರುತಿಸಬಲ್ಲೆ. ಇದರ ಜೊತೆಗೆ ಅವರೊಂದು ಮಾತು ಹೇಳ್ತಾ ಇದ್ರು, ``ನೀನು ಚೆನ್ನಾಗಿ ಮಾಡುತ್ತಿದ್ದೀಯಾ, ಆದ್ರೆ ಪಕ್ಕದ ಮನೆಯ ಆಂಟಿಯ ಮಗಳು ತನ್ನ ಮಹಾನ್ ಮಾತಿನ ಕೌಶಲ್ಯದಿಂದ ಬಿಬಿಸಿಯಲ್ಲಿ ಪ್ರಾಜೆಕ್ಟ್ ಗಿಟ್ಟಿಸಿಕೊಂಡಿದ್ದಾಳೆ, ನೀನು ಸಾಗಬೇಕಾದ ಹಾದಿ ಸುದೀರ್ಘವಾಗಿದೆ'' ಎನ್ನುತ್ತಿದ್ರು. ಅಮ್ಮನ ಮೇಲೆ ಕೋಪ ಮಾಡಿಕೊಳ್ಳಬೇಕೆಂದು ನನಗನಿಸಿತ್ತು, ಆದ್ರೆ ವಾಸ್ತವವಾಗಿ ನಾನವರನ್ನು ತುಂಬಾ ಗೌರವಿಸುತ್ತೇನೆ.

ನನ್ನ ತಾಯಿ ನಿರಂತರವಾಗಿ ಈ ಎಲ್ಲಾ ಸಣ್ಣಪುಟ್ಟ ಗೆಲುವುಗಳು ನನ್ನ ತಲೆಗೆ ಹೋಗಲಿ ಎಂದು ಕಳವಳಗೊಳ್ಳುತ್ತಿದ್ದರು. ನನ್ನ ಸಣ್ಣ ಸಣ್ಣ ಗೆಲುವಿನಲ್ಲೂ ಸಂಭ್ರಮ ಆಚರಿಸಬೇಕೆಂದು ಬಯಸಿದ್ದರು. ಏನಾದ್ರೂ ಗಿಫ್ಟ್ ಕೊಟ್ಟು ಖುಷಿಪಡಿಸ್ತಾ ಇದ್ರು, ಐಸ್‍ಕ್ರೀಮ್ ಟ್ರೀಟ್ ಇರ್ತಾ ಇತ್ತು, ಅಥವಾ ಒಂದು ದಿನ ಸ್ಟಡಿಯಿಂದ ಮುಕ್ತಿ ಸಿಗುತ್ತಿತ್ತು. ಏನೇ ಆದ್ರೂ ಆ ದಿನ ನಾನೇ ವಿನ್ನರ್. ಇದೇ ರೀತಿ ಶಾಲಾ ದಿನಗಳುದ್ದಕ್ಕೂ ಮುಂದುವರಿದಿತ್ತು. ನನಗೆ ಸಿಎನ್‍ಬಿಸಿಯಲ್ಲಿ ಆಫರ್ ಲೆಟರ್ ಸಿಕ್ಕಾಗ ನನಮ್ಮನಿಗೆ ಕರೆ ಮಾಡಿದ್ದೆ, ಅವರು ತುಂಬಾ ಸಂತೋಷಗೊಂಡಿದ್ದರು. ಆದ್ರೆ ಅದನ್ನು ವ್ಯಕ್ತಪಡಿಸಿದ್ದು ಮಾತ್ರ ಬೇರೆ ರೀತಿಯಲ್ಲಿ, ``ನಿನ್ನ ಸೋದರ ಸಂಬಂಧಿಯನ್ನೇ ನೋಡು, ಆಕೆ ಅಮೆರಿಕಕ್ಕೆ ಹೋಗಿದ್ದಾಳೆ, ಪ್ರತಿ ತಿಂಗಳು ಹೆತ್ತವರಿಗೆ 1000 ಡಾಲರ್ ಕಳಿಸುತ್ತಾಳೆ'' ಎಂದಿದ್ದರು. ನನ್ನಮ್ಮನ ಈ ಸ್ವಭಾವ ಬದಲಾಗಲೇ ಇಲ್ಲ. ನಮ್ಮಲ್ಲಿ ಆ ಗುಣ ಬಂದೇ ಇಲ್ಲ. ಬೇರೆಯವರನ್ನು ಮೆಚ್ಚಿಕೊಳ್ಳುವುದು, ಹೊಗಳುವ ಅಭ್ಯಾಸವೇ ನಮಗಿಲ್ಲ. ಹೊಗಳುವಿಕೆ ಜೊತೆ ನಮಗೆ ಅಹಿತಕರ ಸಂಬಂಧವಿದೆ, ಹಾಗಾಗಿಯೇ ನಾವದನ್ನು ದೂರವಿಡುತ್ತೇವೆ.

ಇತರರನ್ನು ಹೊಗಳದೇ ಇರುವುದಕ್ಕೆ ಇನ್ನೊಂದು ಕಾರಣ ಅಂದರೆ ನಾವು ಅಮಾಯಕರು ಎಂದೆನಿಸಿಕೊಳ್ಳಲು ಬಯಸುವುದಿಲ್ಲ. ಯಾರು ನಮ್ಮ ಬಗ್ಗೆ ವಿಮರ್ಷೆ ಮಾಡ್ತಾರೋ ಅವರ ಬಗ್ಗೆ ಮನುಷ್ಯರು ಪಕ್ಷಪಾತ ನಿಲುವು ಹೊಂದಿರುತ್ತಾರೆ, ನಕಾರಾತ್ಮಕವಾಗಿ ಮಾತನಾಡುತ್ತಾರೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ನಕಾರಾತ್ಮಕವಾಗಿ ಮಾತನಾಡುವವರನ್ನು ನಾವು ಬುದ್ಧಿವಂತ, ಹೆಚ್ಚು ಸಮರ್ಥ ಮತ್ತು ಸಕಾರಾತ್ಮಕವಾಗಿ ಮಾತನಾಡುವವರಿಗಿಂತ ಹೆಚ್ಚು ಪರಿಣಿತ ಎಂದು ಗ್ರಹಿಸುತ್ತೇವೆ. ಇತರರ ಬಗ್ಗೆ ಹೆಚ್ಹೆಚ್ಚು ವಿಮರ್ಷೆ ಮಾಡಿದ್ರೆ, ಅವರ ಕಾಲೆಳೆದ್ರೆ ನೀವು ಹೆಚ್ಚು ಬುದ್ಧಿವಂತರು ಎಂದಾಯ್ತು.

ಯಾರ ಬಗೆಗಾದ್ರೂ ಕೆಟ್ಟದಾಗಿ ಮಾತನಾಡಿದರೆ, ಅಸಹ್ಯಕರ ವಿಷಯಗಳನ್ನು ಹೇಳಿದ್ರೆ, ಯಾವುದಾದರೂ ಕಂಪನಿ ಅಥವಾ ವ್ಯಕ್ತಿಯ ಬಗ್ಗೆ ಕೀಳಾಗಿ ಮಾತನಾಡಿದರೆ ಅಂಥವರು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಡ್ತಾರೆ. ನಾವು ಇನ್ನಷ್ಟು ಗಾಸಿಪ್ ಕೇಳಲು ಪ್ರೇರಣೆ ನೀಡುತ್ತೇವೆ. ಸಕಾರಾತ್ಮಕವಾಗಿರೋದು ನೀರಸ, ಡಲ್, ಸಕಾರಾತ್ಮಕತೆ ಆತ್ಮೀಯತೆ ಹೊಂದಿಲ್ಲ, ನಿಮ್ಮ ಸ್ಮೋಕ್ ಬ್ರೇಕ್‍ಗಳಲ್ಲಿ ಎಂಜಾಯ್ ಮಾಡ್ತೀರಲ್ಲ, ಅದು ಸಕಾರಾತ್ಮಕತೆಯಲ್ಲ. ಸಕಾರಾತ್ಮಕ ಹೊಗಳಿಕೆ ಯಾವತ್ತೂ ದೊಡ್ಡ ಸುದ್ದಿಯಾಗೋದೇ ಇಲ್ಲ. ಆದ್ರೆ ಸಕಾರಾತ್ಮಕತೆ ಮತ್ತು ಮೆಚ್ಚುಗೆಯಿಂದ ಸದಾ ಜಯಗಳಿಸಬಹುದು ಅನ್ನೋದು ನನ್ನ ನಂಬಿಕೆ. ಸಕಾರಾತ್ಮಕ ವ್ಯಕ್ತಿಗಳನ್ನು ನಾನು ಗೌರವಿಸುತ್ತೇನೆ, ಅವರು ಇತರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು, ಅವರನ್ನು ಶ್ಲಾಘಿಸಲು ಹಿಂದೇಟು ಹಾಕುವುದಿಲ್ಲ. ಅದರಲ್ಲೇ ಅವರು ಬದುಕಿನ ಬಗ್ಗೆ ಭದ್ರತೆ ಮತ್ತು ಪ್ರೀತಿಯನ್ನು ಸಂಪಾದಿಸುತ್ತಾರೆ.

ಜೀವನವನ್ನು, ನಮ್ಮ ಸುತ್ತಮುತ್ತ ಇರುವವರನ್ನು ಪ್ರಶಂಸಿಸಲು ನಮಗೆ ಪ್ರತಿದಿನವೂ ಅವಕಾಶ ಲಭಿಸುತ್ತದೆ. ನಾವು ಶ್ಲಾಘಿಸೋಣ, ಪ್ರೀತಿಸೋಣ, ಜಗತ್ತು ಏನು ಹೇಳುತ್ತೆ ಅನ್ನೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ನೀವು ಏನನ್ನಾದ್ರೂ, ಯಾರನ್ನಾದ್ರೂ ಪ್ರೀತಿಸಿದ್ರೆ ಆ ಪ್ರೀತಿಯನ್ನು ವ್ಯಕ್ತಪಡಿಸಿ. ಈ ಮೂಲಕ ನಾವು ಇತರರಿಗೆ ದೊಡ್ಡ ಉಪಕಾರವನ್ನೇ ಮಾಡಿದಂತಾಗಬಹುದು. ವ್ಯಾಲಂಟೈನ್ಸ್ ಡೇಯನ್ನು ಆಚರಿಸಿದಂತೆ, ಬೇರೆಯವರನ್ನು ಪ್ರೀತಿಸಲು, ಪ್ರಶಂಸಿಸಲು, ಮೆಚ್ಚಿಕೊಳ್ಳಲು ಮುಂದಾಗೋಣ. ಇದಕ್ಕಾಗಿ ಪ್ರಮಾಣ ಮಾಡೋಣ. ಈ ಮೂಲಕ ನಮ್ಮ ಸ್ಟಾರ್ಟ್‍ಅಪ್ ಪಯಣವನ್ನು ಒಂದು ಸುಂದರ ಅನುಭವವಾಗಿ ಬದಲಾಯಿಸೋಣ.

ಲೇಖಕರು: ಶ್ರದ್ಧಾ ಶರ್ಮಾ
ಅನುವಾದಕರು: ಭಾರತಿ ಭಟ್

ಇದನ್ನು ಓದಿ

1. ವಕೀಲರಾಗಿ ಕೆಲ್ಸ ಆರಂಭಿಸಿದ್ರು, ಆದಾಯಕ್ಕೆ ದ್ರಾಕ್ಷಿ ಕೃಷಿ ಕೈಹಿಡಿಯಿತು.

2. ಅಂದದ ಕನಸಿನ ಮನೆಗೊಂದು ಚೆಂದದ ಡಿಸೈನ್ : ಇದು ರಿನೋಮೇನಿಯಾ ಮೇನಿಯಾ..

3. ಒಂದೇ ಕ್ಲಿಕ್‍ನಿಂದ ನಿಮ್ಮ ಮನೆಯ ಬಾಗಿಲಿಗೇ ತಲುಪುತ್ತೆ ತಾಜಾ ತರಕಾರಿ ಮತ್ತು ತಾಜಾ ಹಣ್ಣು

Related Stories