ಭಾರತದಲ್ಲಿ ಮಹಾನ್ ಕ್ರಾಂತಿಗೆ ಮುನ್ನುಡಿ - 2016ರಲ್ಲಿ ಈ ಕಾಮರ್ಸ್ ವ್ಯವಹಾರ ತಲುಪಲಿದೆ 38 ಬಿಲಿಯನ್ ಡಾಲರ್

ಟೀಮ್​​ ವೈ.ಎಸ್​. ಕನ್ನಡ

0

ಭಾರತ ಈ ವ್ಯವಹಾರದಲ್ಲಿ ಮಹಾನ್ ಕ್ರಾಂತಿಯನ್ನೇ ಮಾಡುತ್ತಿದೆ. ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2016ರಲ್ಲಿ ಈ ಕಾರ್ಮಸ್ 38 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇದು 2015ಕ್ಕೆ ಹೋಲಿಸಿದರೆ ಶೇಕಡಾ 67 ರಷ್ಟು ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. 2015ರಲ್ಲಿ ಇದರ ಪ್ರಮಾಣ ಮತ್ತು ಮೌಲ್ಯ 23 ಬಿಲಿಯನ್ ಡಾಲರ್​​ಗೆ ತಲುಪಿತ್ತು. 2014ರಲ್ಲಿ ಇದು 17 ಬಿಲಿಯನ್ ಡಾಲರ್ ಗಳಾಗಿತ್ತು.

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಹಜವಾಗಿಯೇ ಈ ಕಾಮರ್ಸ್ ವ್ಯವಹಾರ ಕೂಡ ದಾಪುಗಾಲಿನತ್ತ ಹೆಜ್ಜೆ ಇಟ್ಟಿದೆ. ಅಸೋಚಾಮ್ ವರದಿ ಈ ಎಲ್ಲ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಮುಖ್ಯವಾಗಿ ಈ – ವ್ಯವಹಾರವನ್ನು ಜನರು ಸ್ವಾಗತಿಸಿರುವುದು ಅದರಲ್ಲೂ ಯುವ ಜನಾಂಗ ಇದರ ಬಗ್ಗೆ ಆಕರ್ಷಿತರಾಗಿರುವುದು ಇದರ ಯಶಸ್ಸಿನ ಪ್ರಮುಖ ಗುಟ್ಟು ಎನ್ನುತ್ತಿದೆ ಅಸೋಚಾಮ್ ವರದಿ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಕಾರ್ಮಸ್ ಆದಾಯದಲ್ಲಿ ಏಳು ಪಟ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಬ್ರಾಂಡೆಡ್ ಬಟ್ಟೆ, ಚಿನ್ನಾಭರಣ, ಉಡುಗೊರೆ, ಪಾದರಕ್ಷೆ ಹೀಗೆ ಎಲ್ಲವೂ ಆನ್​​​ಲೈನ್​​​ನಲ್ಲಿ ಮಾರಾಟವಾಗುತ್ತಿದೆ. ಜನರನ್ನು ಮೋಡಿ ಮಾಡುತ್ತಿದೆ.

ಈ ವರ್ಷ ಆನ್​​ಲೈನ್​ ಮಾರ್ಕೆಟಿಂಗ್​ ಹೇಗಿರುತ್ತದೆ..?

2016ರಲ್ಲಿ ಆನ್ ಲೈನ್ ಮಾರ್ಕೆಟಿಂಗ್ ಭವಿಷ್ಯ ಉಜ್ವಲವಾಗಿದೆ. ಇದಕ್ಕೆ ಪ್ರಮುಖ ಕಾರಣ ಜನರ ಖರೀದಿ ಅಭಿರುಚಿ ಬದಲಾಗಿರುವುದು. ವ್ಯಾಪಕ ಡಿಸ್ಕೌಂಟ್​​​ಗಳು ಜನರನ್ನು ಈ ಕ್ಷೇತ್ರದತ್ತ ಸೆಳೆಯುತ್ತಿವೆ. ಮೊಬೈಲ್ ವ್ಯವಹಾರ ಈ ಕಾಮರ್ಸ್​​ಗೆ ಸರಿ ಸಮಾನವಾಗಿ ಅಭಿವೃದ್ಧಿ ಹೊಂದುತ್ತಿದೆ.

ಸ್ಮಾರ್ಟ್ ಪೋನ್​​​ಗಳನ್ನು ಬಳಸಿ ಶಾಪಿಂಗ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದು ಇಡೀ ಪರಿಸ್ಥಿತಿಯ ಚಿತ್ರಣವನ್ನೇ ಬದಲಾಯಿಸಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಮೂಲಕ ಶಾಪಿಂಗ್ , ಒಟ್ಟು ಆದಾಯದ ಶೇಕಡಾ 70ರ ಕೊಡುಗೆ ನೀಡುವ ನಿರೀಕ್ಷೆಯಿದೆ. ಭಾರತದಲ್ಲಿ ಈ ವ್ಯಾಪಾರದ ಶೇಕಡಾ 60ರಿಂದ 65 ರಷ್ಟು ಮೊಬೈಲ್ ಮೂಲಕವೇ ನಡೆಯುತ್ತಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 50ರಷ್ಟು ಹೆಚ್ಚು.

2015ರಲ್ಲಿ ಅತ್ಯಧಿಕ ಬೆಳವಣಿಗೆ ದಾಖಲಿಸಿದ ಕ್ಷೇತ್ರ ಉಡುಪು ಅಥವಾ ಬಟ್ಟೆ. ಇದರ ಬೆಳವಣಿಗೆ ಯಾರನ್ನಾದರೂ ಕೂಡ ಅಚ್ಚರಿಯಲ್ಲಿ ಮುಳುಗಿಸುತ್ತದೆ. ನಂಬಲೂ ಕೂಡ ಅಸಾಧ್ಯ. ಬರೋಬ್ಬರಿ 69.5 ಶೇಕಡಾ ಹೆಚ್ಚಳ. ಆ ಬಳಿಕದ ಸ್ಥಾನ ಇಲೆಕ್ಟ್ರಾನಿಕ್ಸ್ ವಸ್ತುಗಳು ಪಡೆದಿವೆ. ಅದರ ಪಾಲು ಶೇಕಡಾ 62ರಷ್ಟು.

ಇನ್ನು ನಂತರದ ಸ್ಥಾನ ಮಕ್ಕಳ ವಸ್ತುಗಳಿಗೆ ಸಂಬಂಧಿಸಿದ್ದಾಗಿದೆ. ಅದರ ಪಾಲು ಶೇಕಡಾ 53. ಹೀಗೆ ಪಟ್ಟಿ ಮುಂದುವರಿಯುತ್ತದೆ.

ಇನ್ನು ಪಾವತಿ ಬಗ್ಗೆ ಹೇಳುವುದಾದರೆ ಅದು ಹೊಸ ಚಿತ್ರಣವನ್ನೇ ಅನಾವರಣಗೊಳಿಸುತ್ತದೆ. ವಸ್ತು ಪಡೆಯುವ ಸಂದರ್ಭದಲ್ಲಿ ಶೇಕಡಾ 45ರಷ್ಟು ಮಂದಿ ಹಣ ನೀಡುತ್ತಾರೆ. ಇದರಲ್ಲಿ ಶೇಕಡಾ 16ರಷ್ಟು ಮಂದಿ ಕ್ರೆಡಿಟ್ ಕಾರ್ಡ್ ಮತ್ತು ಶೇಕಡಾ 21ರಷ್ಟು ಗ್ರಾಹಕರು ಡೆಬಿಟ್ ಕಾರ್ಡ್ ಬಳಸುತ್ತಾರೆ. ಶೇಕಡಾ 10ರಷ್ಟು ಮಂದಿ ಇಂಟರ್ ನೆಟ್ ಬ್ಯಾಂಕ್ ಮೊರೆ ಹೋಗುತ್ತಾರೆ. ಉಳಿದ ಪಾಲು ನಗಣ್ಯ. ಇದರಲ್ಲಿ ವಯಸ್ಸು ಕೂಡ ಪ್ರಮುಖ ಪಾತ್ರ. ಆಲ್​ಲೈನ್​​ ಖರೀದಿಸುವವರಲ್ಲಿ 18ರಿಂದ 25 ವರ್ಷದೊಳಗಿನ ಯುವಕ ಯುವತಿಯರ ಸಂಖ್ಯೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಇದು ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಅಸೋಚಾಮ್ ಸಮೀಕ್ಷೆ ವಯೋಮಾನದ ಬಗ್ಗೆಯೂ ಬೆಳಕು ಚೆಲ್ಲಿದೆ. ಶೇಕಡಾ 38ರಷ್ಟು ಮಂದಿಯ ವಯಸ್ಸು 18ರಿಂದ 25 ವರ್ಷವಾಗಿದೆ. ಇವರು ದಿನಂಪ್ರತಿ ಬಳಕೆದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 26ರಿಂದ 35 ವಯೋಮಾನದವರ ಸಂಖ್ಯೆ ಶೇಕಡಾ 52. ಅದೇ ರೀತಿ 36 ರಿಂದ 45ರ ವಯೋಮಾನದ ಬಳಕೆದಾರರ ಸಂಖ್ಯೆ ಕೇವಲ ಶೇಕಡಾ 8 ರಷ್ಟು ಮಾತ್ರ. ಇದು ಅಸೋಚಾಮ್ ಬಹಿರಂಗಪಡಿಸಿದ ಸತ್ಯ. ಆನ್ ಲೈನ್ ಖರೀದಿದಾರರಲ್ಲಿ ಶೇಕಡಾ 65 ರಷ್ಟು ಪುರುಷರಾಗಿದ್ದರೆ, ಶೇಕಡಾ 35ರಷ್ಟು ಮಹಿಳೆಯರಾಗಿದ್ದಾರೆ.

ಅನುವಾದಕರು : ಎಸ್​ಡಿ

Related Stories