ಅನಾಥ ಮಕ್ಕಳಿಗೆ ಆಸರೆಯಾದ್ರು ಪ್ರಧಾನಿ : ಪತ್ರಕ್ಕೆ ಸ್ಪಂದಿಸಿ 50 ಸಾವಿರ ರೂ. ನೆರವು ನೀಡಿದ ಮೋದಿ

ಟೀಮ್ ವೈ.ಎಸ್.ಕನ್ನಡ 

ಅನಾಥ ಮಕ್ಕಳಿಗೆ ಆಸರೆಯಾದ್ರು ಪ್ರಧಾನಿ : ಪತ್ರಕ್ಕೆ ಸ್ಪಂದಿಸಿ 50 ಸಾವಿರ ರೂ. ನೆರವು ನೀಡಿದ ಮೋದಿ

Monday June 19, 2017,

2 min Read

ಸಾವು ಯಾರಿಗೂ ಹೇಳಿ ಕೇಳಿ ಬರೋದಿಲ್ಲ. ತಂದೆ ತೀರಿಕೊಂಡಾಗ ಸೂರಜ್ಗೆ 7 ವರ್ಷ, ಅವನ ತಂಗಿ ಸಲೋನಿ 2 ವರ್ಷದ ಪುಟ್ಟ ಮಗು. ಲಾರಿ ಚಾಲಕನಾಗಿದ್ದ ಇವರ ತಂದೆ 2007ರಲ್ಲಿ ತೀರಿಕೊಂಡಿದ್ರು. ಈ ಮಕ್ಕಳಿಗೆ ಈಗ ತಾಯಿಯೂ ಇಲ್ಲ, ಚಿಕ್ಕಪ್ಪನೇ ಅವಳನ್ನು ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಿದ್ದ. ಬಾಲಕ ಸೂರಜ್ ಕಣ್ಣೆದುರಲ್ಲೇ ಈ ಭಯಾನಕ ಕೃತ್ಯ ನಡೆದು ಹೋಗಿತ್ತು.

image


ಸೂರಜ್ಗೆ ಈಗ 17 ವರ್ಷ, ಸಲೋನಿಗೆ 12 ವರ್ಷ ವಯಸ್ಸು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮೇಲೆ ಇವರು ಕೋಟಾದ ಅನಾಥಾಶ್ರಮವೊಂದರಲ್ಲಿ ಆಸರೆ ಪಡೆದಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಮಾರ್ಚ್ 7ರಂದು ಸೂರಜ್ ಹಾಗೂ ಸಲೋನಿಯನ್ನು ಅವರ ತಾಯಿ ವಾಸವಿದ್ದ ಮನೆಗೆ ಕೆರದುಕೊಂಡು ಹೋಗಿತ್ತು. ಕೋಟಾದಿಂದ 60 ಕಿಮೀ ದೂರದಲ್ಲಿರುವ ಸಹ್ರಾವಾಡಾ ಎಂಬ ಗ್ರಾಮದಲ್ಲಿ ಆ ಮನೆಯಿದೆ.

ಮನೆ ತಲುಪಿದ ಮಕ್ಕಳಿಗೆ ಅಚ್ಚರಿಯೊಂದು ಕಾದಿತ್ತು. ಅವರ ತಾಯಿ ತಲೆದಿಂಬೊಂದರಲ್ಲಿ 96,500 ರೂಪಾಯಿ ಹಣವನ್ನು ಕೂಡಿಟ್ಟಿದ್ಲು. ಆದ್ರೆ ಎಲ್ಲವೂ ಹಳೆ ನೋಟುಗಳು. ಕೇಂದ್ರ ಸರ್ಕಾರ ನಿಷೇಧಿಸಿರುವ 500 ಮತ್ತು 1000 ರೂಪಾಯಿ ನೋಟುಗಳಾಗಿದ್ವು. ಮಕ್ಕಳು ಅದನ್ನು ಬದಲಾಯಿಸಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮನವಿ ಮಾಡಿದ್ರು. ಆದ್ರೆ ಹಣ ಬದಲಾವಣೆಗೆ ನೀಡಿದ್ದ ಗಡುವು ಮುಗಿದು ಹೋಗಿದ್ರಿಂದ ಆರ್ಬಿಐ ಅಸಹಾಯಕತೆ ವ್ಯಕ್ತಪಡಿಸಿದೆ. ಬೇರೆ ದಾರಿ ಕಾಣದೆ ಸಲೋನಿ ಹಾಗೂ ಸೂರಜ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಮೋದಿಜೀ ದಯವಿಟ್ಟು ನಮ್ಮ ಮನ್ ಕಿ ಬಾತ್ ಆಲಿಸಿ. ನಮಗೆ ಹಿಂದೆ ಮುಂದೆ ಯಾರೂ ಇಲ್ಲ. ಚಿಕ್ಕವರಿದ್ದಾಗ್ಲೇ ತಂದೆಯನ್ನು ಕಳೆದುಕೊಂಡ್ವಿ, ನಮ್ಮ ತಾಯಿ ಕೂಡ ಕೊಲೆಯಾಗಿ ಹೋಗಿದ್ದಾಳೆ. ಹಳೆ ನೋಟುಗಳಲ್ಲಿ ಸಿಕ್ಕಿರುವ ಹಣವನ್ನು ಠೇವಣಿ ಇಡಲು ಸಹಾಯ ಮಾಡಿ ಅಂತಾ ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ರು. ತಮ್ಮ ಅಳಲನ್ನು ಪ್ರಧಾನಿ ಅರ್ಥಮಾಡಿಕೊಳ್ತಾರೆ ಅನ್ನೋ ಭರವಸೆಯಿತ್ತು, ಕೊನೆಗೂ ಅವರು ಅದನ್ನು ಆಲಿಸಿದ್ದಾರೆ ಅಂತಾ ಸೂರಜ್ ಹೇಳಿದ್ದಾನೆ.

ಅನಾಥ ಮಕ್ಕಳಿಗೆ ಅಮ್ಮ ಕೂಡಿಟ್ಟಿದ್ದ ಹಣ ಸಿಕ್ಕಿದ್ರೂ, ಕಾನೂನಿನ ಪ್ರಕಾರ ಅದು ಕಸಕ್ಕೆ ಸಮನಾಗಿಬಿಟ್ಟಿತ್ತು. ಹಳೆ ನೋಟುಗಳೆಲ್ಲ ನಿಷೇಧಗೊಂಡಿದ್ರಿಂದ ಅದಕ್ಕೆ ಬೆಲೆಯೇ ಇರಲಿಲ್ಲ. ಆದ್ರೆ ಈ ಮಕ್ಕಳ ಕಷ್ಟವನ್ನು ಅರ್ಥಮಾಡಿಕೊಂಡ ಪ್ರಧಾನಿ ಮೋದಿ ಅದಕ್ಕೆ ಸ್ಪಂದಿಸಿದ್ದಾರೆ. ಈ ಮಕ್ಕಳಿಗೆ ಜೂನ್ 6ರಂದು ಮರಳಿ ಪತ್ರವನ್ನು ಬರೆದಿದ್ದಾರೆ. ಪ್ರಧಾನಿ ನಿಧಿಯಿಂದ 50 ಸಾವಿರ ರೂಪಾಯಿಯನ್ನು ನೀಡಿದ್ದಾರೆ. ಆ ಹಣವನ್ನು ಸೂರಜ್ ಹಾಗೂ ಸಲೋನಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. 

ಮನಸ್ಸಿದ್ದರೆ ಮಾರ್ಗ- ಯೂಟ್ಯೂಬ್​ ಮೂಲಕವೂ ಸಂಪಾದನೆ ಮಾಡಬಹುದು..!

ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!