ಉದ್ಯಮ ಹಾಗೂ ವ್ಯವಹಾರದಲ್ಲಿ ಮೂಲಭೂತ ಅಭಿವೃದ್ಧಿ ಸಾಧಿಸಿ ಯಶಗಳಿಸಬೇಕೆ? ಕಂಪಾಸ್ ನೆರವು ಪಡೆಯಿರಿ

ಟೀಮ್​ ವೈ.ಎಸ್​​.

ಉದ್ಯಮ ಹಾಗೂ ವ್ಯವಹಾರದಲ್ಲಿ ಮೂಲಭೂತ ಅಭಿವೃದ್ಧಿ ಸಾಧಿಸಿ ಯಶಗಳಿಸಬೇಕೆ? ಕಂಪಾಸ್ ನೆರವು ಪಡೆಯಿರಿ

Wednesday October 14, 2015,

5 min Read

ಕಂಪಾಸ್-ಇದೊಂದು ಪರಿಪೂರ್ಣ ಮಾಹಿತಿ ನೀಡುವ ಡೇಟಾ ಸೆಲ್ಯೂಷನ್ ಕೇಂದ್ರ. ಆರಂಭಿಕ ಸಂಸ್ಥೆಗಳಿಗೆ ಕೇವಲ ಸಮರ್ಪಕ ಮಾಹಿತಿ ನೀಡುವುದಷ್ಟೇ ಅಲ್ಲದೆ, ಆರಂಭಿಕ ಹಂತದ ತೊಡಕುಗಳನ್ನು ನಿವಾರಿಸುವ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸೇವೆಯಲ್ಲಿ ನಿರತವಾಗಿದೆ. ಇದರಿಂದ ಕಂಪಾಸ್ ಸುಮಾರು 30ಕ್ಕೂ ಹೆಚ್ಚು ಸಂಸ್ಥೆಗಳ ಸಿಇಓ ಹಾಗೂ ಸಿಎಫ್ಓಗಳ ಸ್ನೇಹಿತನೆನಿಸಿದೆ. ತನ್ನ ಡಾಟಾ ಕೇಂದ್ರಗಳಲ್ಲಿ ವ್ಯಾವಹಾರಿಕವಾಗಿ ಹಾಗೂ ಯಾವುದೇ ಔದ್ಯಮಿಕ ಸಂಸ್ಥೆಯ ಪ್ರಗತಿಗೆ ಅಗತ್ಯವಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹುಡುಕುವ ನಿರಂತರ ಯತ್ನದಲ್ಲಿದೆ ಕಂಪಾಸ್.

ಈ ನಿಟ್ಟಿನಲ್ಲಿ ಸಿಲಿಕಾನ್ ವ್ಯಾಲಿಯ ಹೃದಯಭಾಗದಲ್ಲಿ ತೆರೆದ ಓಪನ್ ಕಚೇರಿಯಲ್ಲಿ ಹಗಲಿರುಳೂ ದುಡಿಯುತ್ತಿದೆ ಬಿಜೋರ್ನ್ ತಂಡ. ಬಿಜೋರ್ನ್ ಮಹತ್ವಾಕಾಂಕ್ಷೆ ಹಾಗೂ ಆಶಯಗಳು ವಿವರಣೆಗೆ ನಿಲುಕದಷ್ಟು ದೊಡ್ಡದಿದೆ.

image


ಆಲ್ಫ್ ಶ್ರೇಣಿಯ ಕೆಳಭಾಗದಲ್ಲಿರುವ ಸಣ್ಣದೊಂದು ಹಳ್ಳಿಯಿಂದ ಬಂದವರು ಬಿಜೋರ್ನ್. ಆದರೆ ಉದ್ಯಮಶೀಲತೆ ಅನ್ನುವ ಅಂಶದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದೇ ಇರುವ ವಯಸ್ಸಿನಲ್ಲಿಯೇ ಅವರೊಬ್ಬರು ಉದ್ಯಮಿಯಾಗಿದ್ದರು. ಜರ್ಮನಿ, ಬಾಂಗ್ಲಾದೇಶ ಹಾಗೂ ಅಮೇರಿಕಾದಲ್ಲಿ ಸುಮಾರು 5 ಸಂಸ್ಥೆಗಳನ್ನು ಸ್ಥಾಪಿಸಿ ಕಟ್ಟಿ ಬೆಳೆಸಿದ ಅನುಭವ ಬಿಜೋನ್​​ರದ್ದು. ಸಾಂಸ್ಥಿಕ ಅಭಿವೃದ್ಧಿ ಅನ್ನುವ ವಿಭಿನ್ನ ಕ್ಷೇತ್ರದ ಮೂಲಕ ಸಂಸ್ಥೆಗಳಿಗೆ ಸಹಾಯ ಮಾಡುವುದು, ಆ ಸಂಸ್ಥೆಗಳ ಅಗತ್ಯತೆಗಳಿಗೆ ಅನುಗುಣವಾಗಿ, ಅದರ ವ್ಯಾವಹರಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಪರಿಹಾರೋಪಾಯಗಳನ್ನು ನೀಡುವುದು ಇವೇ ಮುಂತಾದ ವಿಶಿಷ್ಟ ಕೆಲಸಕ್ಕೆ ಅವರು ಮುಂದಾದರು. ಅವರ ಈ ಕುತೂಹಲ ಅವರನ್ನು ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಯ್ತು. ಅಲ್ಲಿ ಅವರು ಪಾರದರ್ಶಕ ಅಭಿವೃದ್ಧಿ ಅನ್ನುವ ವಿಭಿನ್ನ ಕಾರ್ಯದ ಮೂಲಕ ಸಣ್ಣ ಪುಟ್ಟ ಸಂಸ್ಥೆಗಳಿಗೆ ಉತ್ಪಾದಕತೆಯನ್ನು ಹೆಚ್ಚಿಸುವ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಪಾರದರ್ಶಕವಾಗಿ ವ್ಯವಹಾರದ ನಡೆಯನ್ನು ಉತ್ತಮಪಡಿಸುವ ಸೇವೆ ನೀಡತೊಡಗಿದರು. ರಷ್ಯಾದ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಮಹತ್ತರ ಜವಬ್ದಾರಿಯನ್ನೂ ಬಿಜೋರ್ನ್ ನಿಭಾಯಿಸಿದರು.

ಯುವರ್​​ಸ್ಟೋರಿ ಬಿಜೋರ್ನ್ ಅವರೊಂದಿಗೆ ನಡೆಸಿದ ಸಂದರ್ಶನದ ಕೆಲವು ತುಣುಕುಗಳು ಇಲ್ಲಿವೆ:

ನಿಮ್ಮನ್ನು ಅತಿಯಾಗಿ ಆಕರ್ಷಿಸಿದ್ದೇನು ಹಾಗೂ ನೀವು ಕಂಪಾಸ್ ಸ್ಥಾಪಿಸಿದ್ದು ಹೇಗೆ?

ವ್ಯಕ್ತಗೊಳ್ಳದ ಮಾನವನ ನಿಜವಾದ ಸಾಮರ್ಥ್ಯದ ಬಗ್ಗೆ ನನಗೆ ಅದಮ್ಯ ಕುತೂಹಲವಿತ್ತು. ಜನಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಏನಾದರೂ ನೆರವು ನೀಡಬೇಕು ಹಾಗೂ ಅವರಿಗೆ ತಮ್ಮ ಗುರಿ ಸಾಧಿಸಲು ಅಗತ್ಯವಾದ ಸಹಾಯ ನೀಡಿ ಅವರೊಂದಿಗೆ ಕೆಲಸ ಮಾಡಬೇಕು ಅನ್ನೋದು ನನ್ನ ಬಯಕೆಯೂ ಆಗಿತ್ತು. ಅಂತ ಸಾಮರ್ಥ್ಯ ಹೊಂದಿರುವ ಜನಗಳು ಎಂದಾದರೊಂದು ದಿನ ಅಭಿವೃದ್ಧಿ ಸಾಧಿಸುತ್ತಾರೆ. ಕಂಪಾಸ್ ಹುಟ್ಟಿ ಬೆಳೆದಿದ್ದೇ ಇಂತಹ ಉದ್ದೇಶವನ್ನಿಟ್ಟುಕೊಂಡು. ನೂರಾರು ಆರಂಭಿಕ ಸಂಸ್ಥೆಗಳು ಸರಿಯಾದ ಮಾರ್ಗದರ್ಶನವಿಲ್ಲದೆ ಮುಚ್ಚಿಹೋಗುತ್ತವೆ. ಅವುಗಳ ಸಾಮರ್ಥ್ಯವನ್ನು ಉತ್ತೇಜಿಸಿ ಅವಕ್ಕೆ ಅಗತ್ಯವಿರುವ ಸಲಹೆ ಸೂಚನೆ ನೀಡಬೇಕು. ಪರಿಣಾಮಕಾರಿಯಾದ ಕಾರ್ಯಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸೂಕ್ತವಾದ ದಾರಿ ತೋರಿಸಬೇಕು.

ಹಲವು ಬಾರಿ ಅತ್ಯಂತ ಕಷ್ಟದಿಂದ ಸಂಸ್ಥೆಗಳನ್ನು ಮನವೊಲಿಸಿದ ನಂತರ ನಾವು ಅತ್ಯಂತ ಸರಳ ಮಾರ್ಗವೊಂದನ್ನು ಹುಡುಕಿಕೊಂಡೆವು. ಅದು ನಮ್ಮ ಮೆಟ್ರಿಕ್ಸ್ ಪಾಯಿಂಟ್​ಗಳ ಸುಲಭ ಶಿಫಾರಸು ಗಳಿಸುವುದು. ಮಾರುಕಟ್ಟೆಯಲ್ಲಿ ಅಸ್ಥಿತ್ವದಲ್ಲಿರುವ ಸಂಸ್ಥೆಗಳ ಬಗ್ಗೆ ನಮಗಿರುವ ಮಾಹಿತಿಯ ಮೆಟ್ರಿಕ್ಸ್ ಅಂಕಿ ಅಂಶಗಳ ಆಧಾರದಲ್ಲಿ ನಾವು ಆ್ಯಕ್ಟಿವೇಶನ್ ಅಥವಾ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯದ ಮೂಲಕ ಗ್ರಾಹಕರನ್ನು ಸೆಳೆಯುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಈ ಯೋಜನೆಯ ಮೂಲಕ ಸಂಸ್ಥೆಗಳು ಎಷ್ಟು ಸಮಯವನ್ನು ಸಮಸ್ಯೆಯ ಪರಿಹಾರಕ್ಕೆ ವಿನಿಯೋಗಿಸುತ್ತಿವೆ ಹಾಗೂ ಎಷ್ಟು ಪ್ರಮಾಣದ ಹಣವನ್ನು ಇದೇ ಕೆಲಸಕ್ಕೆ ಹೂಡಿಕೆ ಮಾಡುತ್ತಿವೆ ಅನ್ನುವ ಆಧಾರದ ಮೇಲೆ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಿದೆವು.

ಈ ಮಾಹಿತಿ ಸಂಗ್ರಹಣೆ ಯೋಜನೆ ಅತ್ಯಂತ ಹೊಸ ಪ್ರಯತ್ನವೇನೂ ಆಗಿರಲಿಲ್ಲ. ಆದರೆ ದೊಡ್ಡ ದೊಡ್ಡ ಸಂಸ್ಥೆಗಳ ಮಟ್ಟಕ್ಕೆ ಸಣ್ಣ ಪುಟ್ಟ ಸಂಸ್ಥೆಗಳು ಹಣವನ್ನೂ ಹೂಡಿಕೆರ ಮಾಡಲಾಗುತ್ತಿರಲಿಲ್ಲ ಹಾಗೂ ಇಂತಹ ಮಾಹಿತಿ ಕಲೆ ಹಾಕುವುದು ಅವುಗಳ ಪಾಲಿಗೆ ದುಬಾರಿಯೂ ಆಗಿರುತ್ತಿತ್ತು.

ಮೆಕಿನ್ಸೇ ಅಥವಾ ಗಾರ್ಟನರ್, ಸೈರಸ್ ಡಿಸಿಶನ್ಸ್ ಅಥವಾ ಡನ್ ಮತ್ತು ಬ್ರಾಡ್​ಶೀಟ್ಸ್ ಮುಂತಾದ ಪರಿಣಿತ ಕನ್ಸಲ್ಟೆನ್ಸಿ ಕಂಪೆನಿಗಳು ಇಂತಹ ಸಮರ್ಪಕ ಮಾಹಿತಿಗಳನ್ನು ಸಂಗ್ರಹಿಸಿ, ಅವಲೋಕಿಸಿ, ಎರಡು ಮೂರು ಬಾರಿ ವಿಮರ್ಷಿಸಿ ಒದಗಿಸುತ್ತಿದ್ದವು.

ಮಾಹಿತಿ ಸಂಗ್ರಹಣೆ ವಿಷಯದಲ್ಲಿ ಬಿಸಿನೆಸ್ ವಿಶ್ವದ ಮಹತ್ತರ ವೈಫಲ್ಯಗಳನ್ನು ತಡೆಗಟ್ಟುವಲ್ಲಿ ನಮ್ಮ ಅತಿ ಮುಖ್ಯ ಯೋಜನೆ ರೂಪುಗೊಂಡಿತ್ತು.

ನಿಮ್ಮ ಪ್ರಕಾರ ಪ್ರಾರಂಭಿಕ ಸಂಸ್ಥೆಗಳ ಅತ್ಯಂತ ದೊಡ್ಡ ಸವಾಲುಗಳೇನು?

ಪ್ರತಿಯೊಂದು ಪ್ರಾರಂಭಿಕ ಸಂಸ್ಥೆಗಳ ಅತಿ ಮುಖ್ಯ ಸವಾಲು ಅನಿಶ್ಚಿತತೆ-ಅಂದರೆ ಯಾವ ಉತ್ಪನ್ನಗಳಿಗೆ ಯಾವಾಗ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತದೆ ಅನ್ನುವುದು, ಯಾವ ಗ್ರಾಹಕರನ್ನು ಟಾರ್ಗೆಟ್ ಗ್ರಾಹಕರನ್ನಾಗಿಸಿಕೊಳ್ಳಬೇಕು ಅನ್ನುವುದು, ಸೂಕ್ತವಾದ ಹಾಗೂ ಸರಳವಾದ ದರ ನಿಗದಿ ಮಾಡುವುದು, ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಪರಿಚಯಿಸಿ ಸಮರ್ಪಕವಾದ ಪ್ರಮಾಣದಲ್ಲಿ ದರ ನಿಗದಿಮಾಡುವುದು ಇತ್ಯಾದಿ.

ಸಂಸ್ಥೆಗಳು ಕಾಲಾನುಕ್ರಮದಲ್ಲಿ ತನ್ನ ಅನಿಶ್ಚಿತ ದರಗಳನ್ನು ಪರಿಣಾಮಕಾರಿಯಾಗಿ ನಿಬಾಯಿಸದಿರುವುದನ್ನು ಅಪೂರ್ಣ ಮಾಪನ ಅಥವಾ ಅಪ್ರಬುದ್ಧ ಸ್ಕೇಲಿಂಗ್ ಅನ್ನುತ್ತಾರೆ. ತನ್ನ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಸಂಸ್ಥೆಗೆ ತೆಗೆದುಕೊಳ್ಳುವುದು, ಉತ್ಪನ್ನಗಳಿಗೆ ಬೇಕಿರೋದಕ್ಕಿಂತ ಹೆಚ್ಚಿನ ಪ್ರಮಾಣದ ತಂತ್ರಜ್ಞಾನ ಒದಗಿಸುವುದು, ಗ್ರಾಹಕರನ್ನು ಸೆಳೆಯುವುದಕ್ಕಾಗಿ ಹೆಚ್ಚಿನ ಮೊತ್ತ ಹೂಡುವುದು ಇವೆಲ್ಲವೂ ಅಪ್ರಬುದ್ಧ ಮಾಪನದ ಉದಾಹರಣೆಗಳು.

ಇದಕ್ಕಿರುವ ಅತ್ಯುತ್ತಮ ಉಪಾಯವೆಂದರೆ ಸಾಧ್ಯವಾದಷ್ಟು ಶೀಘ್ರದಲ್ಲಿ ನಿಮ್ಮ ಗ್ರಾಹಕರನ್ನು ಗುರುತಿಸುವುದು ಹಾಗೂ ನಿಮ್ಮ ಉದ್ಯಮದಲ್ಲಿ ನಿಮ್ಮ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಬೇರೆ ಕಂಪೆನಿಗಳ ಮಾಹಿತಿ ಪಡೆದು ನಿಮ್ಮ ಮೆಟ್ರಿಕ್ಸ್ ಸಿದ್ಧಪಡಿಸಿಕೊಳ್ಳುವುದು.

ನಿಮ್ಮ ಮಾಹಿತಿ ಕೇಂದ್ರದಲ್ಲಿ ಕಂಪಾಸ್ ಹಾಗೂ ಇನ್ನುಳಿದ ಗ್ರಾಹಕ ಕಂಪೆನಿಗಳ ವ್ಯಾವಹಾರಿಕ ಮಾನದಂಡ ಗುರುತಿಸಿದಾಗ ನಿಮಗೆ ಕಂಡುಬಂದ ಸಂಗತಿಯೇನು?

ಇದು ನಮ್ಮ ಯೋಜನೆಯ ಮೊದಲ ಭಾಗದಲ್ಲೇ ನಿರ್ಧರಿಸಿದ ಅಂಶ. ನಮ್ಮ ಈ ಪ್ರಯೋಗವನ್ನು ಮೊದಲು ನಮ್ಮ ಸಂಸ್ಥೆಯ ಉತ್ಪನ್ನಗಳ ಮೇಲೆ ಪ್ರಯೋಗಿಸಿದ್ವಿ. ಬಿಸಿನೆಸ್ ಟು ಬಿಸಿನೆಸ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಈ ಮಾಪನ ನೀಡಬಹುದಾ ಎಂದು ಯೋಚಿಸಿದಾಗ ನಮ್ಮ ಸಂಸ್ಥೆಯ ಅದ್ಭುತ ಫಲಿತಾಂಶ ನಮಗೆ ನೆರವಾಯ್ತು. ಆದರೂ ನಮ್ಮ ಧಾರಣೆಯ ಮೊತ್ತ ನಿಗದಿಯಾಗಿರಲಿಲ್ಲ. ಆದರೆ ಈ ಕ್ಷೇತ್ರದಲ್ಲಿ ನಾವು ಮತ್ತಷ್ಟು ಆಳದಲ್ಲಿ ಪ್ರಯೋಗ ಕೈಗೊಂಡೆವು. ನಮ್ಮ ಮೊದಲ ವರ್ಷನ್ ಅನ್ನು ನಮ್ಮ ಗ್ರಾಹಕ ಸಂಸ್ಥೆಗಳು ಕೆಲವು 3 ತಿಂಗಳಿಗೊಮ್ಮೆ ಮತ್ತೂ ಕೆಲವು ವರ್ಷದ ಎಲ್ಲಾ ತಿಂಗಳೂ ಬಳಸುತ್ತಿದ್ದವು. ಒಂದು ವೇಳೆ ಆ ಸಂಸ್ಥೆಗಳು ಬಳಕೆ ನಿಲ್ಲಿಸಿದಾಗ ನಮ್ಮ ಉತ್ಪನ್ನವನ್ನು ಅಪ್ಡೇಟ್ ಮಾಡಿ ಮತ್ತೆ ಲಾಂಚ್ ಮಾಡಲು ಆರಂಭಿಸಿದೆವು. ಇದರಿಂದ ನಮ್ಮ ಸಂಸ್ಥೆಯ ಬೆಳವಣಿಗೆಯೊಂದಿಗೆ ನಮ್ಮ ಗ್ರಾಹಕ ಸಂಸ್ಥೆಗಳ ವಿವಿಧ ರೀತಿಯ ಅಪ್ರೋಚ್ ಸಹ ನಮಗೆ ಲಭ್ಯವಾಯಿತು.

ನೀವು ವಿಶ್ವದಾದ್ಯಂತ ಸಾಕಷ್ಟು ಔದ್ಯಮಿಕ ಸಮುದಾಯಗಳ ಭಾಗವಾಗಿದ್ದೀರಾ? ಸ್ಯಾಂಡ್ಬಾಕ್ಸ್ ಸಮುದಾಯದಂತಹ ಜಾಲ ವ್ಯವಸ್ಥೆ ಉದ್ಯಮಶೀಲ ಪರಿಸರಕ್ಕೆ ಪೂರಕ ಎಂದು ನಿಮಗನ್ನಿಸುತ್ತದಾ?

ಈ ಪರಿಸರದಲ್ಲಿ ಕಾರ್ಯ ನಿರ್ವಹಿಸಲು ಔಪಚಾರಿಕ ಹಾಗೂ ಅನೌಪಚಾರಿಕ ಎರಡೂ ಜಾಲ ವ್ಯವಸ್ಥೆಗಳೂ ಬೇಕು ಅನ್ನುವು ನನ್ನ ನಂಬಿಕೆ. ಇವು ನಂಬಿಕೆ ಅರ್ಹವಾದ ಹಾಗೂ ಗ್ರಾಹಕರನ್ನು ಸೆಳೆಯುವ ವೆಚ್ಚವನ್ನು ಕಡಿಮೆ ಮಾಡುವ ವಿಧಾನಗಳನ್ನು ರೂಪಿಸುತ್ತಿವೆ. ಒಂದು ವೇಳೆ ಪೂರ್ಣವಾಗಿ ಆರ್ಥಿಕ ಆಯಾಮದಲ್ಲಿ ಹೇಳುವುದಾದರೆ ಸ್ಯಾಂಡ್ಬಾಕ್ಸ್ ಅತ್ಯುತ್ತಮ ಜಾಗತಿಕ ಸೇವಾ ಕುಟುಂಬ. ಇದು ಬೇರೆ ಬೇರೆ ಕ್ಷೇತ್ರಗಳ ಸುಮಾರು 1000ಕ್ಕೂ ಅಧಿಕ ಬದಲಾವಣಾ ಉಪಾಯಗಳನ್ನು ಒಳಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ಅವರಿಂದ ನನಗೆ ಅತ್ಯುತ್ತಮ ನೆರವು ದೊರಕಿದೆ.

ನಿಮ್ಮ ಪ್ರಕಾರ ಜಗತ್ತಿನಾದ್ಯಂತ ಇರುವ ಪ್ರಾರಂಭಿಕ ಉದ್ಯಮಗಳಿಗೆ ಯಶಸ್ವೀ ಔದ್ಯಮಿಕ ಪ್ರಗತಿಗೆ ಬೇಕಿರುವ ಅಗತ್ಯ ಅಂಶಗಳು ಯಾವುವು?

ಜಗತ್ತಿನ ಯಾವುದೇ ಭಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮಶೀಲತಾ ಪರಿಸರ ವ್ಯವಸ್ಥೆಯಲ್ಲಿ ಸಂಶೋಧನಾತ್ಮಕ ಹಾಗೂ ಅಭಿವೃದ್ಧಿ ಮಾನದಂಡಗಳು ಅತ್ಯಗತ್ಯ. ಆದರೆ ಈ ಪರಿಸರದಲ್ಲಿ ಔದ್ಯಮಿಕ ಸಂಸ್ಥೆಗಳು ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕ್ರತಿಕ ವ್ಯವಸ್ಥೆಗಳ ಮೇಲೆ ಅವಲಂಭಿತವಾಗಿರುವ ಕಾರಣ ಇಲ್ಲಿ ಸಂಶೋಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೊಂಚ ಕಷ್ಟವೇ ಸರಿ. ಅಭಿವೃದ್ಧಿ ಮಾನದಂಡದಲ್ಲಿ ನನ್ನ ಪ್ರಕಾರ ಎರಡು ಮುಖ್ಯ ಅತ್ಯಗತ್ಯ ಅಂಶಗಳಿವೆ. ಅವು ಪ್ರತಿಭೆ ಹಾಗೂ ಬಂಡವಾಳ. ಯಾವುದೇ ಸಂಸ್ಥೆ ಕ್ಷಿಪ್ರ ಬೆಳವಣಿಗೆ ಸಾಧಿಸಿ ಯಶಸ್ಸಿನ ಹಾದಿ ತುಳಿಯಲು ಅತ್ಯುತ್ತಮ ಪ್ರತಿಭೆಗಳನ್ನು ಅನ್ವೇಷಿಸುವುದು ಅತಿ ಮುಖ್ಯ. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅಂತಹ ಪ್ರತಿಭೆಗಳನ್ನು ಗುರುತಿಸಿ ಕರೆತಂದು ನೇಮಿಸಿಕೊಳ್ಳಬೇಕು. ಇಲ್ಲಿ ಅಂತಹ ಪ್ರತಿಭಾನ್ವೇಷಣೆಗೆ ಅಗತ್ಯವಿರುವ ಸೌಕರ್ಯಗಳನ್ನು ಸಂಸ್ಥೆಯ ಮುಖ್ಯಸ್ಥರು ಒದಗಿಸಬೇಕು.

ನಿಮ್ಮ ಅಗಾಧ ಅನುಭವದ ಪ್ರಕಾರ ಶೈಕ್ಷಣಿಕ ಅನುಭವಕ್ಕೆ ಸಂಬಂಧಪಟ್ಟಂತೆ, ಒಬ್ಬ ವ್ಯಕ್ತಿ ಯಾವ ವಯಸ್ಸಿನಲ್ಲಿ ಉದ್ಯಮಿಯಾಗಲು ಪ್ರಯತ್ನಿಸಬಹುದು?

ನನ್ನ ಪ್ರಕಾರ ಉದ್ಯಮಿಯಾಗ ಬಯಸುವ ಜನರು ತಮ್ಮ ಯೌವನ ಕಳೆಯುವ ಮುನ್ನವೇ ಈ ನಿಟ್ಟಿನಲ್ಲಿ ಯೋಚಿಸಬೇಕು. ಅವರು ಉದ್ಯಮಿಯಾಗಲು ಸರಿಯಾದ ವಯೋಮಾನ ಯಾವುದು, ನಿಧಾನವಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರೇ ಸಾಕೇ, ಬೇಗನೇ ಅಡಿಯಿಡಬೇಕೆ ಅಥವಾ ಈ ಉದ್ಯಮ ಕ್ಷೇತ್ರದಿಂದ ದೂರ ಉಳಿಯಬೇಕೆ ಎಂದು ಯೋಚಿಸಲು ತಾರುಣ್ಯದ ದಿನಗಳೇ ಅತ್ಯುತ್ತಮ.

ನನ್ನ ಕುಟುಂಬ ಉದ್ಯಮಿಗಳ ಮೂಲವನ್ನು ಹೊಂದಿತ್ತು. ಆದರೂ ನಾನು ಉದ್ಯಮಿಯಾಗುವ ಸಮಯದಲ್ಲಿ ಅತ್ಯಂತ ಕಡಿಮೆ ತಂತ್ರಜ್ಞಾನದ ಸೌಲಭ್ಯವಿತ್ತು. ಹಾಗಾಗಿ ಸಿಲಿಕಾನ್ ವ್ಯಾಲಿಗೆ ಬಂದ ನಂತರ ಹಾಗೂ ಹಲವು ಬಿಲಿಯನ್ ಡಾಲರ್ ಕಂಪೆನಿಗಳೊಂದಿಗೆ ವ್ಯವಹರಿಸಿದ ನಂತರವಷ್ಟೇ ಉದ್ಯಮ ಕ್ಷೇತ್ರದ ಮೂಲಭೂತ ಅಗತ್ಯತೆಗಳ ಬಗ್ಗೆ ನನಗೆ ಅರಿವಾಯಿತು.

ಹೀಗಾಗಿ ಉದ್ಯಮ ಕ್ಷೇತ್ರದ ಕಡೆಗೆ ಆಸಕ್ತಿ ಹೊಂದಿರುವವರು ಬೇಗನೇ ಈ ಕ್ಷೇತ್ರಕ್ಕೆ ಕಾಲಿಟ್ಟರೇ ಹೊಸತನ್ನು ಕಲಿಯಲು ಹಾಗೂ ತಮ್ಮ ವಿಭಿನ್ನ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಾಕಷ್ಟು ಅನುಕೂಲವಾಗುತ್ತದೆ.

ಕಂಪಾಸ್ ನಂತರ ಮುಂದೇನು?

ಕೆಲವು ಕಾರ್ಯಕ್ರಮಗಳನ್ನು ಕೂಡಲೇ ಮಾಡಿಕೊಳ್ಳಬೇಕು ಅನ್ನುವ ಯೋಜನೆಯಿದೆ:

1.ಕೆಲವು ನಿರ್ದಿಷ್ಟ ಉದ್ಯಮಗಳ ಪ್ರಗತಿಗಾಗಿ ಮಾಪನಗಳಿವೆ- ಇ-ಕಾಮರ್ಸ್ ಕ್ಷೇತ್ರಕ್ಕೆ ಸರಾಸರಿ ಶಾಪಿಂಗ್ ಕಾರ್ಟ್ ಒದಗಿಸುವುದು ಅಥವಾ ಗೇಮ್​​ಗಳಿಗೆ ಡಿಎಯು/ಎಂಎಯು ಸೇವೆ ಒದಗಿಸುವುದು

2.ಹೈ ರೆಸಲ್ಯಕ್ಷನ್ ಮಾನದಂಡಗಳು-ಭೂಭಾಗಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ಗ್ರಾಹಕರನ್ನು ಸ್ವಾಧೀನ ಪಡಿಸುವ ವೆಚ್ಚಗಳನ್ನು ಕಡಿತಗೊಳಿಸುವುದು

3.ಹೆಚ್ಚುವರು 100 ಬೇರೆ ಮಾಹಿತಿ ಕೇಂದ್ರಗಳ ಸೇರ್ಪಡೆ

ನಮ್ಮ ದೀರ್ಘಕಾಲಿಕ ಯೋಜನೆಯ ಮಧ್ಯದಲ್ಲಿ ರೆಸ್ಟೋರೆಂಟ್ಗಳು ಹಾಗೂ ಚಿಲ್ಲರೆ-ಸಗಟು ವ್ಯಾಪಾರಿ ಕ್ಷೇತ್ರಗಳಿಗೆ ವ್ಯಾವಹಾರಿಕ ತಂತ್ರಜ್ಞಾನ ರೂಪಿಸುವ ಯೋಜನೆಯೂ ಇದೆ.

ನಿಮಗೆ ಯಾವುದೇ ರೀತಿಯ ಉದ್ಯಮದಲ್ಲಿ ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ ಪರಿಣಿತ ಸಹಾಯ ನೀಡಲು ಕಂಪಾಸ್ ಪೂರ್ಣ ಪ್ರಮಾಣದ ತಯಾರಿಯೊಂದಿಗೆ ಸದಾ ಸಿದ್ಧವಾಗಿರುತ್ತದೆ ಎನ್ನುವುದು ಅವರ ವಿಶ್ವಾಸದ ಭರವಸೆ.