ಮದನ್ ಹೇಳಿಕೊಟ್ಟ ವೀಡಿಯೋ ಚಿತ್ರೀಕರಣದ ಸುಳಿವುಗಳು

ಟೀಮ್​​ ವೈ.ಎಸ್​​.

ಮದನ್ ಹೇಳಿಕೊಟ್ಟ ವೀಡಿಯೋ ಚಿತ್ರೀಕರಣದ ಸುಳಿವುಗಳು

Tuesday November 10, 2015,

3 min Read

ಚೀನು ಮದನ್ ಒಬ್ಬ ಹವ್ಯಾಸಿ ಫೋಟೋಗ್ರಾಫರ್ ಹಾಗೂ ವೀಡಿಯೋ ಚಿತ್ರೀಕರಣದಲ್ಲಿ ಆಸಕ್ತಿ ಹೊಂದಿರುವವರು. ಪ್ರಪಂಚದಾದ್ಯಂತ ಇರುವ ವೀಡಿಯೋಗ್ರಫಿ ಆಸಕ್ತರಿಗೆ ಮದನ್ ತಮ್ಮದೇ ಆದ ದಾಟಿಯಲ್ಲಿ ಕೆಲವು ಉಪಾಯಗಳನ್ನು ಹೇಳಿಕೊಟ್ಟಿದ್ದಾರೆ. ಈ ಸಂಬಂಧ ಅವರೇ ಬರೆದಿರುವ ಲೇಖನ ಇಲ್ಲಿದೆ.

image


ನಮ್ಮ ಯೋಜನೆಯ ಪ್ರಾಯೋಗಿಕ ವೀಡಿಯೋ ಶೂಟಿಂಗ್ ಅಥವಾ ಡೆಮೋ ವೀಡಿಯೋ ಚಿತ್ರೀಕರಣ ನಡೆಸಿದೆವು. ಅದರ ಫಲಿತಾಂಶ ಇಲ್ಲಿದೆ.

ನಾವು ಚಿತ್ರೀಕರಿಸಿದ ವೀಡಿಯೋ ಹಾಲಿವುಡ್ ಚಿತ್ರಗಳಷ್ಟು ಅತ್ಯುತ್ತಮ ಗುಣಮಟ್ಟದ್ದಾಗಿಲ್ಲ. ಮೊದಲ ಹಂತದ ಚಿತ್ರೀಕರಣದ ನಂತರ ನಾವು ಅಭಿವೃದ್ಧಿಗೊಳಿಸಬೇಕಾದ ಅಂಶಗಳನ್ನು ಗುರುತಿಸಿದ್ದೇವೆ. ಆದರೆ ಗಮನಿಸಬೇಕಾದ ಸಂಗತಿ ಎಂದರೆ ನಾವು ಈ ಚಿತ್ರೀಕರಣವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಸಾಕಷ್ಟು ಉತ್ತಮ ಗುಣಮಟ್ಟದೊಂದಿಗೆ ಮುಗಿಸಿದ್ದೇವೆ. ಇದು ನಮ್ಮ ಪಾಲಿನ ಅತ್ಯುತ್ತಮ ಕಲಿಕಾ ಅನುಭವವೂ ಹೌದು.

image


ನಾವು ಕೇವಲ 900 ರೂಪಾಯಿ ಖರ್ಚು ಮಾಡಿ ವೀಡಿಯೋ ಚಿತ್ರೀಕರಣ ಮುಗಿಸಿದ್ದೇವೆ. ಆದರೆ ಈ ವೀಡಿಯೋದ ಪ್ರಚಾರ ಅಭಿಯಾನ ಹಾಗೂ ಅರೆಕಾಲಿಕ ವೃತ್ತಿಪರರಿಂದ ಸಮರ್ಪಕ ವೀಡಿಯೋ ಮಿಕ್ಸಿಂಗ್‌ ಬಳಿಕ ಸುಮಾರು 30ರಿಂದ 50 ಸಾವಿರದಷ್ಟು ಆದಾಯ ನಿರೀಕ್ಷಿಸಿದ್ದೇವೆ. ಯಾವುದೇ ಪ್ರಾರಂಭಿಕ ಸಂಸ್ಥೆ ಪಾಲಿಗೂ ಇಂತಹದ್ದು ಅತ್ಯುತ್ತಮ ಫಲಿತಾಂಶವಾಗಿದೆ.

ನಾವು ಪಟ್ಟಿ ಮಾಡಿರುವಂತೆ ಮುಂಬರುವ ದಿನಗಳಲ್ಲಿ ನಮಗೆ ಇವುಗಳ ಅಗತ್ಯವಿದೆ.

image


ಚಿತ್ರೀಕರಣಕ್ಕೆ ಸೂಕ್ತವಾದ ಡಿಎಸ್‌ಎಲ್‌ಆರ್ ಕ್ಯಾಮೆರಾ

ನಿಮ್ಮ ಬಳಿ ಕ್ಯಾಮೆರಾ ಇಲ್ಲದಿದ್ದರೇ ಬೇರೆಯವರಿಂದ ಎರವಲು ಪಡೆಯುವುದು ಸುಲಭ. ನಿಮ್ಮ ಫೇಸ್‌ಬುಕ್‌ ಪೇಜ್‌ಗೆ ಹೋಗಿ “ಫಸ್ಟ್ ನೇಮ್ ಲಾಸ್ಟ್ ನೇಮ್ ಫೋಟೋಗ್ರಫಿ” ಎನ್ನುವ ಫೇಸ್ ಬುಕ್ ಪೇಜ್‌ನಲ್ಲಿ ನಿಮ್ಮ ಅಗತ್ಯತೆಗಳನ್ನು ಬರೆಯಿರಿ. ಅದು ಸಂಬಂಧಿಸಿದವರಿಗೆ ತಲುಪುತ್ತದೆ. ಕೇವಲ ಪಿಜ್ಜಾ ಹಾಗೂ ಬಿಯರ್ ಆಫರ್ ಮಾಡಿದರೆ ಸಾಕು ಕೆಲವು ದಿನಗಳ ಮಟ್ಟಿಗೆ ಕ್ಯಾಮೆರಾ ನೀವಿಟ್ಟುಕೊಳ್ಳಲು ಅವರು ಅನುಮತಿ ನೀಡುತ್ತಾರೆ.

ಟ್ರೈಪಾಡ್ ಸ್ಟ್ಯಾಂಡ್(ಕ್ಯಾಮೆರಾ ಅಳವಡಿಸಲು ಇರುವ ಉಪಕರಣ)

ನಿಮಗೆ ಟ್ರೈಪಾಡ್ ಅವಶ್ಯಕತೆ ಇದ್ದರೆ ನಿಮ್ಮ ತೋಳುಗಳನ್ನೂ ಬಳಸಬಹುದು. ನಿಮ್ಮ ಮೊಬೈಲ್‌ನ ಪೋರ್ಟ್ರೈಟ್ ಮೋಡ್‌ನಲ್ಲಿ ಚಿತ್ರೀಕರಣ ನಡೆಸುವುದಕ್ಕಿಂತ ಕ್ಯಾಮೆರಾದಲ್ಲಿ ಶೂಟ್ ಮಾಡುವುದು ಉತ್ತಮ. ಆದರೂ ನಾವು ನಮ್ಮ ಛಾಯಾಚಿತ್ರ ಆಸಕ್ತ ಸ್ನೇಹಿತರಿಂದ ಕ್ಯಾಮೆರಾಗ್ರಫಿಗೆ ಸಂಬಂಧಿಸಿದ ಪರಿಕರಗಳನ್ನು ಒದಗಿಸಲು ಯೋಚಿಸುತ್ತಿದ್ದೇವೆ.

image


ಮೊದಮೊದಲು ನಾವು ಫೋಟೋಗ್ರಫಿಗೆ ಸಂಬಂಧಿಸಿದ ಪರಿಕರಗಳನ್ನು ಬಾಡಿಗೆಗೆ ಒದಗಿಸುವ ಕೆಲವು ಪ್ರಯತ್ನಕ್ಕೆ ಮುಂದಾಗಿದ್ದೆವು. ಆದರೆ ಸಮರ್ಪಕ ಡೆಲಿವರಿ ನಿರ್ವಹಿಸುವುದು ನಮ್ಮಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಟ್ರೈಪ್ಯಾಡ್‌ಗಾಗಿ ಆನ್‌ಲೈನ್‌ನಲ್ಲಿ ಹುಡುಕಿದಾಗ ನಮಗೆ ಆಶ್ಚರ್ಯ ಹುಟ್ಟಿಸುವಂತೆ ಫೋಟ್ರಾನ್‌ನಲ್ಲಿ ಕೇವಲ 710ರೂ.ಗೆ ಟ್ರೈಪ್ಯಾಡ್ ಸಿಕ್ಕಿತು. ಅದರ ದರಕ್ಕಿಂತಲೂ ಉತ್ತಮ ಗುಣಮಟ್ಟದ ಟ್ರೈಪ್ಯಾಡ್ ಅದಾಗಿತ್ತು. ಅಮೇಜಾನ್‌ನಲ್ಲೂ 710ರೂ.ಗೆ ಟ್ರೈಪ್ಯಾಡ್ ಸಿಗುತ್ತಿದೆ.

ಎರಡೂ ಕಡೆ ಮಡಚಬಲ್ಲ ವಿನ್ಯಾಸ

ನಿಮ್ಮ ಸ್ಮಾರ್ಟ್‌ ಫೋನನ್ನು ಗೋಡೆಗೆ ಅಂಟಿಸಲು ನಿಮಗೇನಾದರೂ ಬೇಕೇ ಬೇಕು. ಎರಡೂ ಬದಿಗೆ ಅಂಟು ಇರುವ ಟೇಪ್ ಗೋಡೆಗೆ ಅಂಟಿಸಿ ಅದಕ್ಕೆ ಸ್ಮಾರ್ಟ್‌ ಫೋನ್ ಅಂಟಿಸಬಹುದು. ಆದರೆ ಸ್ಮಾರ್ಟ್ ಫೋನನ್ನು ತೆಗೆಯುವಾಗ ಟೇಪ್‌ನ ಅಂಟಿನೊಂದಿಗೆ ಗೋಡೆಯ ಬಣ್ಣವೂ ಬಿಟ್ಟುಕೊಳ್ಳುತ್ತದೆ. ಇದೊಂದು ತೊಂದರೆಯ ಕಾರಣ ಪರ್ಯಾಯ ಯೋಚನೆ ಮಾಡಬೇಕಾಯಿತು. ಆಗ ಪ್ಲೇ ಡಫ್ ಕ್ಲೇ ಅನ್ನುವ ವಿನೂತನ ಟೇಪ್ ಆವಿಷ್ಕಾರ ಸಾಧ್ಯವಾಯಿತು. ಇದರ ಬೆಲೆ ಅಮೇಜಾನ್‌ನಲ್ಲಿ ಕೇವಲ 190 ರೂ.

image


ನೀವು ಸತತವಾಗಿ ಮೂರು ನಿಮಿಷಗಳ ಕಾಲ ವೀಡಿಯೋ ಚಿತ್ರೀಕರಣ ಮಾಡಿದ್ದೀರಿ. ಆದರೆ ಅಂತಿಮವಾಗಿ ನಿಮಗೆ ಅಗತ್ಯವಿರುವುದು ಕೇವಲ 45 ಸೆಕೆಂಡ್‌ಗಳ ವೀಡಿಯೋ ಮಾತ್ರ. ಇಂತಹ ಸಂದರ್ಭದಲ್ಲಿ ಅಡೋಬ್ ಪ್ರೀಮಿಯರ್ ಅನ್ನುವ ಅತ್ಯದ್ಭುತ ವೀಡಿಯೋ ಎಡಿಟಿಂಗ್ ಸಾಫ್ಟ್‌ ವೇರ್‌ನ ಫ್ರೀ ಟ್ರಯಲ್ ಲಭ್ಯವಿದೆ. ಇದು ವೃತ್ತಿಪರ ಚಿತ್ರ ನಿರ್ಮಾಪಕರಿಗೆ ಹಾಗೂ ನಿರ್ದೇಶಕರು, ವೀಡಿಯೋ ಎಡಿಟರ್‌ಗಳಿಗೆ ಸುಲಭ ನಿರ್ವಹಣೆಗೆ ಸಹಕರಿಸಬಲ್ಲ ಸ್ವಭಾವ ಹೊಂದಿದೆ.

ಯೂ ಟ್ಯೂಬ್‌ನ ಆಡಿಯೋ ಲೈಬ್ರರಿಯಲ್ಲಿ ನಮಗೆ ಅತ್ಯುತ್ತಮ ಅವಕಾಶಗಳಿವೆ. ನೀವೂ ಸಹ ನಿಮ್ಮ ಸೃಜನಾತ್ಮಕ ಮ್ಯೂಸಿಕ್ ವೀಡಿಯೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ ನಿಯಮಿತವಾಗಿ ರಾಯಲ್ಟಿ ಪಡೆಯಬಹುದು.

ಕೋಣೆಯ ಬೆಳಕಿನ ಪ್ರತಿಬಿಂಬವನ್ನು ಕಡಿಮೆ ಮಾಡಬಹುದು

ನಿಮ್ಮ ಕೋಣೆಯಲ್ಲಿ ಬಲ್ಬ್ ಬೆಳಗಿಸಿ ಮೊಬೈಲ್ ಸ್ಕ್ರೀನ್‌ ನೋಡಿದರೆ ಅದರಲ್ಲಿ ಬಲ್ಬ್ ಬೆಳಕಿನ ಪ್ರತಿಬಿಂಬ ಮೂಡುತ್ತದೆ. ಇದು ಬಹಳಷ್ಟು ಸಮಯ ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಂತ ಲೈಟ್ ಆಫ್ ಮಾಡುವುದು ಇದಕ್ಕೆ ಪರಿಹಾರವಲ್ಲ. ಜೊತೆಗೆ ಬಲ್ಬ್‌ ನ ದಿಕ್ಕನ್ನು ಬದಲಾಯಿಸುವುದೂ ಕೂಡ ಸೂಕ್ತ ಪರಿಹಾರವಾಗಲಾರದು. ಅದರ ಬದಲಿಗೆ ರಿಫ್ಲೆಕ್ಟರ್ ಗಳೆಂಬ ನವೀನ ಪರಿಹಾರ ಇಲ್ಲಿದೆ.

ಮಂದಬೆಳಕು

ಮಟ ಮಟ ಮಧ್ಯಾಹ್ನ ಹೊರಗೆ ಆಗಸದಲ್ಲಿ ಉರಿವ ಸೂರ್ಯನಿದ್ದರೆ ನಿಮ್ಮ ಕೋಣೆಯಲ್ಲೂ ಸ್ಮಾರ್ಟ್ ಬಳಸಿ ಚಿತ್ರೀಕರಣ ನಡೆಸಲು ನಿಮಗೆ ತೊಡಕುಂಟಾಗುತ್ತದೆ. ಏಕೆಂದರೆ ವೀಡಿಯೋದಲ್ಲಿ ಪ್ರಖರ ಸೂರ್ಯ ಕಾಂತಿಯ ಕಾರಣ ವೀಡಿಯೋ ಗುಣಮಟ್ಟ ಮಂದವಾಗಿರುತ್ತದೆ ಹಾಗೂ ಬ್ರೈಟ್‌ನೆಸ್ ಕಳೆಗುಂದಿರುತ್ತದೆ. ಈ ತೊಂದರೆ ನಿವಾರಿಸಲು ಅಡೋಬ್ ಪ್ರೀಮಿಯರ್ ಸಾಫ್ಟ್ ವೇರ್ ಆ ಕಾಂತಿಯನ್ನು ತಗ್ಗಿಸುವ ಹಾಗೂ ವೀಡಿಯೋ ಗುಣಮಟ್ಟ ಸುಧಾರಿಸುವ ಆಯ್ಕೆ ಹೊಂದಿದೆ.

image


ಫೋನ್ ನೋಟಿಫಿಕೇಶನ್ ಹಾಗೂ ಬ್ಯಾಟರಿ ಬಾಳಿಕೆಯ ಎಚ್ಚರಿಕೆ

ನೀವು ಚಿತ್ರೀಕರಣ ನಡೆಸುವ ಮುನ್ನ ನಿಮ್ಮ ಫೋನ್‌ನ ನೋಟಿಫಿಕೇಶನ್ ಆಫ್ ಮಾಡಬೇಕು ಹಾಗೂ ಫೋನ್‌ನ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಏಕೆಂದರೆ ವೀಡಿಯೋ ಚಿತ್ರೀಕರಣಕ್ಕಾಗಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಸಾಕಷ್ಟು ವ್ಯಯವಾಗುತ್ತದೆ.

ವೀಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದ ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆಗೊಂಡಿದೆ. ಇದರಿಂದ ಸಾಕಷ್ಟು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಕೆಲವು ತಿಂಗಳ ಕಾಲ ನಾವು ವೀಡಿಯೋ ಚಿತ್ರೀಕರಣವೊಂದರ ಯೋಜನೆ ಹೆಣೆದಿದ್ದೇವೆ. ಈ ಆ್ಯಪ್‌ನ ಸಹಾಯದಿಂದ ಚಿತ್ರೀಕರಣ ಸುಗಮವಾಗುತ್ತದೆ ಎಂಬ ನಂಬಿಕೆ ನಮ್ಮದಾಗಿದೆ.

ಈ ಮೇಲಿನ ಲೇಖನದ ಲೇಖಕರು

ವಾಂಟೋ ಅನ್ನುವ ಸಂಸ್ಥೆಯ ಸಹ ಸಂಸ್ಥಾಪಕ ಚೀನು ಮದನ್ ಈ ಮೇಲಿನ ಲೇಖನ ಬರೆದವರು. ಈ ವಾಂಟೋ ಸಂಸ್ಥೆ ಹೊಸ ಉತ್ಪನ್ನಗಳನ್ನು ಕಂಡು ಹಿಡಿಯುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸೃಜನಾತ್ಮಕ ಆಲೋಚನೆ ಹೊಂದಿರುವ ಪ್ರತಿಯೊಬ್ಬರಿಗೂ ಅವಕಾಶವಿದೆ. ಆಸಕ್ತಿ, ಹವ್ಯಾಸ, ಪ್ರವೃತ್ತಿ ಹಾಗೂ ಜೀವನಶೈಲಿಯ ಉತ್ಪನ್ನಗಳ ಹೊಸ ಹೊಸ ಆಯಾಮಗಳನ್ನು ಇಲ್ಲಿ ಅನ್ವೇಷಿಸಲಾಗುತ್ತಿದೆ. ಜೊತೆಗೆ ಇದು 100ಕ್ಕೂ ಹೆಚ್ಚು ಬೇರೆ ಬೇರೆ ಬಗೆಯ ಇ-ಕಾಮರ್ಸ್ ಸ್ಟೋರ್‌ಗಳೊಂದಿಗೆ ವ್ಯವಹರಿಸುತ್ತಿದೆ. ನೀವು ಮದನ್‌ರನ್ನು ಅವರ ಟ್ವಿಟ್ಟರ್ ಅಕೌಂಟ್ @cmadan_ ಮೂಲಕ ಸಂಪರ್ಕಿಸಬಹುದು.