ಉದಯಪುರದ ಮೂರು ಕಂಪನಿಗಳ ಒಡೆಯನಿಗೆ ಕೇವಲ 25ರ ಹರೆಯ.. !

ಟೀಮ್​​​ ವೈ.ಎಸ್​​.ಕನ್ನಡ

ಉದಯಪುರದ ಮೂರು ಕಂಪನಿಗಳ ಒಡೆಯನಿಗೆ ಕೇವಲ 25ರ ಹರೆಯ.. !

Sunday April 17, 2016,

3 min Read

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಉದ್ಯಮದಲ್ಲಿ ಯಶಸ್ಸು ಕಾಣುವುದೇ ಕಷ್ಟ. ಅಂತದ್ರಲ್ಲಿ ಸೀರಿಯಲ್ ಆಗಿ ಉದ್ಯಮಗಳನ್ನ ಮುನ್ನಡೆಸುವುದು ಕನಸಿನ ಮಾತು. ಆದ್ರೆ ವಿನವ್ ಭನಾವತ್ ತಮ್ಮ 25ನೇ ವರ್ಷದಲ್ಲಿ ಸಾಲು ಸಾಲಾಗಿ ಮೂರು ಉದ್ಯಮಗಳನ್ನ ಯಶಸ್ವಿಯಾಗಿ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉದಯಪುರದ ಸರ್ ಪದಾಮ್ ಪಟ್ ಸಿಂಘಾನಿಯಾ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಪದವಿ ಪಡೆದ ವಿನವ್ 2012ರಲ್ಲಿ ಎನ್ ಎಂ ಕೋರ್ಪ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನ ಮೊದಲು ಆರಂಭಿಸಿದ್ರು. ನಂತ್ರ 2014ರಲ್ಲಿ ಆನ್ ಲೈನ್ ಫ್ಯಾಷನ್ ಸ್ಟೋರ್ ಆರಂಭಿಸಿ ಅಲ್ಲೂ ಯಶಸ್ಸಿನ ಓಟ ಮುಂದುವರಿಸಿದ್ರು. ಫ್ಯಾಷನ್ ಜಗತ್ತಿನಲ್ಲಿ ಅಪೂರ್ವ ಸಾಧನೆಗಳೊಂದಿಗೆ ಹೆಜ್ಜೆ ಇಟ್ಟ ಈ ಯಂಗ್ ಸ್ಟರ್ ನಂತ್ರ 2015ರ ಏಪ್ರಿಲ್ ನಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ್ರು. ಆದ್ರೆ ಮೊದಲೆರಡು ಕಂಪನಿಗಳನ್ನ ಮುನ್ನಡೆಸಲು ಸಾಕಷ್ಟು ಪರದಾಡಿದ ವಿನವ್ ಅನುತ್ಪಾದಕತೆ ಹಿಂದಿರುವ ಸಮಸ್ಯೆಗಳನ್ನ ಎದುರಿಸುವುದು ಅನಿವಾರ್ಯವಾಯ್ತು.

image


ಇವರ ಹೊಸ ಪ್ರಯತ್ನಗಳಿಗೆ ದೊಡ್ಡ ಮಟ್ಟದ ಬಂಡವಾಳ ಹೂಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಮೊದಲೆರಡು ಕಂಪನಿಗಳಿಗೆ ಹೂಡಿದ್ದ ಹಣದಲ್ಲೇ ಮತ್ತಷ್ಟು ಲಾಭವೆತ್ತಲು ಯೋಜನೆ ರೂಪಿಸಿದ್ರು. ಜೊತೆಗೆ ತಮ್ಮ ಕಂಪನಿಯಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನ ಎಚ್ಚರಿಕೆಯಿಂದ ಸಂಗ್ರಹಿಸಲು ದೊಡ್ಡ ಮಟ್ಟದ ಸ್ಟೋರೆಜನ್ನ ಉದಯಪುರದಲ್ಲೇ ಆರಂಭಿಸಿದ್ರು. ಹೀಗಾಗಿ ರಿಜೆಕ್ಟ್ ಆಗುವ ಹಂತದಲ್ಲಿದ್ದ ಕೆಲವು ವಸ್ತುಗಳ ಮೇಲೂ ಮೂಲ ಬಂಡವಾಳಕ್ಕೆ ಕೊರತೆಯಾಗದಂತೆ ಲಾಭಾಂಶಗಳಿಸಿದ್ರು. ಜೊತೆಗೆ ಇತರೆ ಕಂಪನಿಗಳ ಪ್ರಾಡಕ್ಟ್ ಗಳ ಡಾಟಾವನ್ನೂ ಶೇರ್ ಮಾಡಲು ಇಲ್ಲಿ ಅವಕಾಶ ನೀಡಿದ್ರು. ಹೀಗೆ ಹರಿದು ಬಂದ ಇತರೆ ಅಪ್ ಲೌಡ್ ಗಳು ವಿನವ್ ಭನಾವತ್ ಸಂಸ್ಥೆಗೂ ನೆರವಾಗಿದ್ದು ವಿಶೇಷ. ಮುಖ್ಯವಾಗಿ ವೈಯುಕ್ತಿಕವಾಗಿ ವಿನವ್ ಅವರ ಚಿಂತನಾ ಶೈಲಿಯನ್ನ ಮತ್ತು ವೃತ್ತಿ ಪರತೆಯಲ್ಲಿ ಇನ್ನಷ್ಟು ನೆರವಾಗಿದ್ದು ವಿಶೇಷ.

ಇದನ್ನು ಓದಿ: ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

ಸಿಲಿಕಾನ್ ವ್ಯಾಲಿಯತ್ತ ನೆಟ್ಟ ಚಿತ್ತ..

ವಿನವ್ ಭನಾವತ್ 2016ರ ಫೆಬ್ರವರಿಯಲ್ಲಿ ಸಿಲಿಯಕಾನ್ ವ್ಯಾಲಿಯನ್ನ ನಡೆದ ಬ್ಲ್ಯಾಕ್ ಬಾಕ್ಸ್ ಕಾರ್ಯಕ್ರಮದಲ್ಲಿ ಭಾರತವನ್ನ ಪ್ರತಿನಿಧಿಸಿದ್ರು. ಇದ್ರಲ್ಲಿ 14 ವಿವಿಧ ಉದ್ಯಮಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಂಕೀರ್ಣಗಳಲ್ಲಿ ಭಾಗವಹಿಸಿದ್ರು. ಇನ್ನು ಬ್ರ್ಯಾಕ್ ಬಾಕ್ಸ್ ಜಗತ್ತಿನ ಇತರೆಡೆ ಇರುವ ಉದ್ಯಮಿಗಳನ್ನ ಒಂದೇ ಕಡೆ ಕಲೆಹಾಕುವ ವಿಶೇಷ ಕಾರ್ಯಕ್ರಮ ಅದಾಗಿತ್ತು. ಆ ಅಪೂರ್ವ ಕಾರ್ಯಕ್ರಮದಲ್ಲಿ ವಿನವ್ ಭನಾವತ್ $ 15,000 ಬಂಡವಾಳದ ಸ್ಟಾರ್ಟ್ ಅಪ್ ಬಗ್ಗೆ ಕೊಟ್ಟ ಪ್ರಸೆಂಟೇಷನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳು ವಿದ್ಯುತ್ ಉಪಕರಣಗಳು, ಯಂತ್ರಗಳು, ಮೋಟರ್ಸ್, ಕೇಬಲ್ ಗಳು, ಡಿಸೇಲ್ ಜನರೇಟ್ ಸೆಟ್ ಗಳು ಹಾಗೂ ಅರ್ಥ್ ಮೂವಿಂಗ್ಸ್ ನ ಬಿಡಿಭಾಗಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲದೆ ಹಿಂದೂಸ್ತಾನ್ ಝಿಂಕ್ ಲಿಮಿಟೆಡ್, ಬಿರ್ಲಾ ಕಾರ್ಪೋರೇಶನ್, ಜೆಕೆ ಟೈರ್ಸ್ ಮತ್ತು ಜೆಕೆ ಸಿಮೆಂಟ್, ಪಿಟ್ರೋಕ್ ಎಲೆಕ್ಟ್ರಾನಿಕ್ಸ್ ಮತ್ತು ಪಿಕಾಕ್ ಇಂಡಸ್ಟ್ರೀಸ್ ನಂತಹ ಪ್ರತಿಷ್ಠಿತ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ವು. ಇದು ವಿನವ್ ಭನಾವತ್ ಅವರಿಗೆ ಅದ್ಭುತ ರೀತಿಯಲ್ಲಿ ಸಹಕಾರಿಯಾಯ್ತು.

ಇನ್ನು ವಿನವ್ ಭನಾವತ್ ಅವರ ಕಂಪನಿ ಏಳು ಕ್ಲೈಂಚ್ಸ್ ಮತ್ತು ಐದು ಮಂದಿ ನೌಕರರನ್ನ ಹೊಂದಿದೆ. ವಿಶೇಷ ಅಂದ್ರೆ ಇವರ ಕಂಪನಿ 25 ಸಾವಿರಕ್ಕೂ ಹೆಚ್ಚು ಪ್ರಾಡಕ್ಟ್ ಗಳ ಬಗ್ಗೆ ವಿವಿರವಾದ ಮಾಹಿತಿಗಳನ್ನ ಕಲೆಹಾಕಿದೆ. ಇನ್ನು ಈ ಮಾಹಿತಿಗಳನ್ನ ಪಡೆದುಕೊಳ್ಳಲು ಈ ಕಂಪನಿ 500ರಿಂದ 5 ಸಾವಿರ ವರೆಗಿನ ಪ್ರಾಡಕ್ಟ್ ಗಳಿಗೆ ಮಾಡುವ ಚಾರ್ಜ್ 5 ಸಾವಿರದಿಂದ 20 ಸಾವಿರ ರೂಪಾಯಿ.

ಮುಂದಿನ ಯೋಜನೆಗಳು..

ವಿನವ್ ಲೆಕ್ಕಾಚಾರದ ಪ್ರಕಾರ ಮುಂದಿನ ಕ್ವಾರ್ಟರ್ ಇಯರ್ ಎಂಡ್ ನೊಳಗೆ ಕನಿಷ್ಠ 200 ಕಂಪನಿಗಳು ನೊಂದಣಿಯಾಗಲಿವೆ. ಕಮಿಷನ್ ಆಧಾರಿತವಾಗಿರುವ ಈ ಯೋಜನೆಗಳು ವಿವಿಧ ಮಾಡೆಲ್ ಗಳನ್ನ ಹೊಂದಿದೆ. ಭಾರತದ ಜೊತೆಗೆ ಚೈನಾ, ಯುಎಸ್ ಮಾರುಕಟ್ಟೆಗಳನ್ನೂ ಇವರ ಕಂಪನಿ ಟಾರ್ಗೆಟ್ ಮಾಡಿಕೊಂಡಿದೆ. “ ಚೈನಾ ಅಥವಾ ಅಮೆರಿಕಾದ ಮಾರುಕಟ್ಟೆಯನ್ನ ಟಾರ್ಗೆಟ್ ಮಾಡುವ ಮೊದ್ಲು ಭಾರತದಲ್ಲೇ ಕನಿಷ್ಠ 500 ಪ್ರಾಡಕ್ಟ್ ಗಳನ್ನ ಸೇಲ್ ಮಾಡಬೇಕು. ಇದಕ್ಕಾಗಿ ಪ್ರಮೋಷನ್ ಕಾರ್ಯಕ್ಕೆ ಮುಂದಾಗಿದ್ದೇವೆ. ಹಾಗೂ ಇದಕ್ಕೆ ಬೇಕಾದ ಮೂಲ ಅಗತ್ಯ ಕೆಲಸಗಳನ್ನ ಈಗಾಗಲೇ ಮಾಡಿ ಮುಗಿಸಿದ್ದೇವೆ. ಅಲ್ಲದೆ ನಮ್ಮ ಪ್ರಾಡಕ್ಟ್ ಗಳನ್ನ ಕ್ಲೈಂಟ್ ಗಳು ನೇರವಾಗಿ ನಮ್ಮಿಂದಲೇ ಪಡೆಯಬೇಕು ಅನ್ನೋದು ಕಂಪನಿಯ ಆಶೋತ್ತರ ” ಅಂತಾರೆ ವಿನವ್ ಭನಾವತ್ . ಪ್ರಸ್ತುತ ಪ್ರತೀ ತಿಂಗಳೂ ಶೇಕಡಾ 200ರಷ್ಟು ಹೆಚ್ಚು ಪಟ್ಟು ಕಂಪನಿಗಳನ್ನ ಲಿಸ್ಟ್ ಮಾಡಲಾಗುತ್ತಿದೆ. 2016 – 17 ರ ಸಾಲಿನಲ್ಲಿ ಒಟ್ಟು 1,25,000ಕ್ಕೇರುವ ಲೆಕ್ಕಾಚಾರ ಇವರದ್ದು. ಜೊತೆಗೆ ಸರಾಸರಿ ವಹಿವಾಟಿನ ಮೊತ್ತ $ 50,000. ಇನ್ನು ಬ್ಲ್ಯಾಕ್ ಬಾಕ್ಸ್ ವಿಚಾರ ಸಂಕೀರ್ಣ ಪರಿಣಾಮದಿಂದಾಗಿ ವಿನವ್ ಭನಾವತ್ ಮಾರ್ಕೆಟ್ ನಲ್ಲಿ ಇನ್ನಷ್ಟು ಚುರುಕಾಗಲು ಸಹಕಾರಿಯಾಗಿದೆ. ಹೀಗೆ ಕೇವಲ 25 ವರ್ಷದಲ್ಲಿ ಮೂರು ಕಂಪನಿಗಳಿಗೆ ಮಾಲಿಕನಾಗಿ ಮಿಂಚುತ್ತಿವ ವಿನವ್ ಭನಾವತ್ ಭವಿಷ್ಯದಲ್ಲಿ ಉದ್ಯಮ ಕ್ಷೇತ್ರದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವುದು ಖಚಿತ.

ಲೇಖಕರು – ಅಪರಾಜಿತ ಚೌಧರಿ

ಅನುವಾದ - ಸ್ವಾತಿ

ಇದನ್ನು ಓದಿ:

1. ಅಂಗವೈಕಲ್ಯವನ್ನೇ ಮೀರಿ ನಿಂತ ದಿಟ್ಟೆ : ಸ್ಟೇಜ್ ನಲ್ಲಿ ‘ಮಾಸ್ಟರ್’ ಆಫ್ ಸೆರೆಮನಿ..!

2. ಸಿನಿಮಾ ನಿರ್ಮಾಣ ಮಾಡೋದಷ್ಟೆ ನಮ್ಮ ಕೆಲಸ ಅಲ್ಲ...

3. ಉದ್ಯೋಗ ಕ್ಷೇತ್ರದಲ್ಲಿ ಸಹಜ ಸೌಂದರ್ಯವಂತರಾಗಿ ಗುರುತಿಸಿಕೊಳ್ಳುವುದು ಹೇಗೆ.. ?