ಭಾರತ ನಿರ್ಮಾಣದಲ್ಲಿ ಉದಯ್ ಹೋಮ್ಸ್ ಪಾಲು...

ಟೀಮ್​​ ವೈ.ಎಸ್​​.

ಭಾರತ ನಿರ್ಮಾಣದಲ್ಲಿ ಉದಯ್ ಹೋಮ್ಸ್ ಪಾಲು...

Tuesday October 27, 2015,

3 min Read

2012ರಲ್ಲಿ ಸ್ಥಾಪಿತವಾದ. ಉದಯ್ ಹೋಮ್ಸ್ ಗೃಹ ಕಟ್ಟಡ ನಿರ್ಮಾಣದಲ್ಲಿ ಅತ್ಯಂತ ಸಂಘಟಿತ ಮತ್ತು ಗ್ರಾಹಕ ಕೇಂದ್ರಿತ ಕಂಪನಿಗಳಲ್ಲಿ ಒಂದು. ಐಟಿ-ಪ್ರೇರಿತ ವಸತಿ ಬಂಡವಾಳ ಸಲಹಾ ಸಂಸ್ಥೆಯಲ್ಲಿ ಅಪನಂಬಿಕೆ ಮತ್ತು ಪಾರದರ್ಶಕತೆಯ ಕೊರತೆ ಇದೆ ಎಂದು ಉದಯ್ ಹೋಮ್ಸ್ ಸಿಇಓ ಮತ್ತು ಸಂಸ್ಥಾಪಕರಾದ ಗೌರವ್ ಯಾದವ್ ನಂಬಿರುತ್ತಾರೆ. ಇವರು ಸಿಕ್ಕ ಅವಕಾಶವನ್ನು ಬಿಡದೆ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಕೇಂದ್ರಿತ ವಲಯದಲಿ ನಿವೇಶನ ನಿರ್ಮಿಸುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.

ಸಂಸ್ಥೆಯ ಉದ್ದೇಶವೇನೆಂದರೆ ಖರೀದಿದಾರರಿಗೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಆಸ್ತಿಗಳ ಮೇಲೇ ಬಂಡವಾಳ ಹೂಡುವುದು ಮತ್ತು ಇದರ ಜೊತೆಯಲ್ಲಿ ಆಸ್ತಿಗಳ ಮೇಲೆ ವಿಸ್ತೃತವಾದ ವಿವರ, ಭವಿಷ್ಯ ಹಾಗೂ ವರ್ತಮಾನ ಕಾಲದ ಸರಿಸಮ ಹೋಲಿಕೆ, ದಾಖಲೆ ಪತ್ರಗಳೊಂದಿಗೆ ಕಟ್ಟಡದ ಮೌಲ್ಯ, ಪೂರ್ವ ಖರೀದಿ ಮತ್ತು ಭವಿಷ್ಯ ಖರೀದಿ, ಗ್ರಾಹಕ ಸೇವೆ, ಮತ್ತು ವಾಸ್ತು ಶಾಸ್ತ್ರ - "ಇದು ಖರೀದಿದಾರರ ಮೊದಲ ಆದ್ಯತೆಯಾಗಿರುತ್ತದೆ "

image


Udayhomz.com ವೆಬ್‍ಸೈಟ್, ಗ್ರಾಹಕರಿಗೆ ಉಚಿತ ಸಲಹೆ ನೀಡುವುದಲ್ಲದೆ ಸೈಟ್ ಭೇಟಿ ಕೂಡ ಒದಗಿಸುತ್ತದೆ. ಜಾಗತಿಕ ಉದ್ಯಮ ಪದ್ಧತಿಯನ್ನು ಅಳವಡಿಸಿಕೊಂಡು ಯಾವುದೇ ಗೊಂದಲವಿಲ್ಲದೇ ಸೇವೆ ಒದಗಿಸುತ್ತದೆ. ಹೀಗೆ ತನ್ನ ಕಂಪನಿಯು ಬಹಳಷ್ಟು ಪಾರದರ್ಶಕತೆಯಿಂದ ವ್ಯವಹರಿಸುತ್ತದೆ, ಎಂದು ಗೌರವ್ ವಿವರಿಸುತ್ತಾರೆ. " ಇತರ ವೆಬ್​ಸೈಟ್​​​ಗಳಿಗಿಂತ ಭಿನ್ನವಾಗಿ, ನಾವು ಸಂಭಾವ್ಯ ಭಾರತೀಯ ಹೂಡಿಕೆದಾರರು ಹಾಗೂ ಅನಿವಾಸಿ ಭಾರತೀಯರಿಗೆ ಒನ್ ಸ್ಟಾಪ್ ಪರಿಹಾರವನ್ನು ಒದಗಿಸಿದ್ದೇವೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಅತ್ಯುತ್ತಮ ಸೇವೆಗಳನ್ನು ಒದಗಿಸಲು ನಾವು ಒಂದು ಸಂಘಟಿತ ಹಾಗೂ ವ್ಯವಸ್ಥಿತ ವ್ಯವಹಾರ ಮಾದರಿ ಅನುಸರಿಸುತ್ತೇವೆ. ಒಂದು ಯೋಜನೆ ಪ್ರಾರಂಭವಾದ ನಂತರ ಆ ಇಡೀ ಪ್ರಕ್ರಿಯೆ ಸ್ಥಳೀಯ ಸಿಆರ್‍ಎಮ್ ವ್ಯವಸ್ಥೆಯ ನಿಯಂತ್ರಣದಲ್ಲಿರುತ್ತದೆ. ಯಾವುದೇ ಒಪ್ಪಂದ ಪೂರ್ಣಗೊಳಿಸುವ ಮೊದಲು, ನಾವು ನಮ್ಮ ಗ್ರಾಹಕರಿಗೆ ಅವುಗಳ ವ್ಯವಹಾರ ಮತ್ತು ರಿಯಾಯಿತಿ ಬಗ್ಗೆ ದೃಢೀಕರಿಸಲು ಪರಿಶೀಲನೆ ಕರೆ ಮಾಡಿ ಆ ಎಲ್ಲಾ ಕರೆಗಳನ್ನು ಪರೀಕ್ಷಿಸುತ್ತೇವೆ. ಹೀಗಾಗಿ, ವ್ಯವಹಾರ ಮತ್ತು ಗ್ರಾಹಕ ತೃಪ್ತಿ ಪಾರದರ್ಶಕತೆ ನಮ್ಮ ಉದ್ದೇಶ ಆಗಿರುತ್ತದೆ," ಎಂದು ಅವರು ಹೇಳುತ್ತಾರೆ

ಗ್ರಾಹಕರಿಗೆ ಒದಗಿಸುವ ಸೌಲಭ್ಯಗಳು

ಆಸಕ್ತ ಖರೀದಿದಾರರು ತಮಗೆ ಬೇಕಾದ ಎಲ್ಲ ಮಾಹಿತಿಗಳನ್ನು ವೆಬ್‍ಸೈಟ್ ಮೂಲಕ ಪಡೆಯಬಹುದು ಮತ್ತು ಆಸ್ತಿ ಸಂಬಂಧಿತ ಪ್ರಶ್ನೆಗಳನ್ನೂ ಕೇಳಬಹುದು. ಒಂದು ಪ್ರತ್ಯೇಕ ತಂಡ ಖರೀದಿದಾರರ ಸೇವೆಯಲ್ಲಿರುತ್ತದೆ ಖರೀದಿಯ ನಂತರ ಯಾವಗಲು ಲಭ್ಯವಿರುತ್ತದೆ. ಇದಲ್ಲದೆ, ಉದಯ್ ಹೋಮ್ಸ್ - ಪ್ರಾಥಮಿಕವಾಗಿ ನೋಯ್ಡಾ, ಗುರ್ಗಾಂವ್, ಭಿವಾಡಿ, ಅಹಮದಾಬಾದ್, ಬೆಂಗಳೂರು, ಪುಣೆ, ಮುಂಬೈ, ಜೈಪುರ, ಮತ್ತು ಚಂಡೀಘಢ ಸೇರಿದಂತೆ ಹಲವು ಸ್ಥಳಗಳಲ್ಲಿ ಮನೆ ಸಾಲ ಸೇವೆಗಳನ್ನು ಒದಗಿಸುತ್ತದೆ. ಕೆಲವು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಎನ್‍ಬಿಎಫ್‍ಸಿ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

"ವರ್ಷದಿಂದ ವರ್ಷಕ್ಕೆ - ನಾಲ್ಕು ಪಟ್ಟು ಬೆಳವಣಿಗೆ"

" ನಾವು ವರ್ಷದಿಂದ ವರ್ಷಕ್ಕೆ ನಾಲ್ಕು ಪಟ್ಟು ಬೆಳವಣಿಗೆ ಕಾಣುತ್ತಿದ್ದೇವೆ. ಮೊದಲ ವರ್ಷ ರೂ 45 ಲಕ್ಷ ವಹಿವಾಟು ಆಗಿದ್ದು , ಪ್ರಸ್ತುತ ವಾರ್ಷಿಕ ವಹಿವಾಟು ಸುಮಾರು 2 ಕೋಟಿ ದಾಟಿದೆ" ಎಂದು ಉದಯ್ ಹೋಮ್ಸ್ ಪ್ರಗತಿಯ ಕುರಿತು ಗೌರವ್ ತಿಳಿಸುತ್ತಾರೆ. 15 ಲಕ್ಷ ಮೂಲತಃ ಬಂಡವಾಳ ಇಟ್ಟುಕೊಂಡಿದ್ದೆವು. ಆದರೆ ಅದರಿಂದ ಇದುವರೆಗೂ ಯಾವುದೇ ಹಣ ಮಾಡಲಾಗಲಿಲ್ಲ, ಮತ್ತು ಆರಂಭಿಕ ಬಂಡವಾಳ ಗರಿಷ್ಠ ಭಾಗವನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪನ್ಮೂಲ ನೇಮಕಾತಿಗೆ ಹೂಡಲಾಯಿತು. ಆದರೆ ಸದ್ಯ 12 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಲು ಹೂಡಿಕೆದಾರರೊಂದಿಗೆ ಗೌರವ್ ಮಾತುಕತೆಯಲ್ಲಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದ ಮೇಲೊಂದು ಪಕ್ಷಿನೋಟ

ಭಾರತೀಯ ರಿಯಲ್ ಎಸ್ಟೇಟ್, ಕೃಷಿಯ ನಂತರ ಎರಡನೇ ದೊಡ್ಡ ವಲಯವಾಗಿದ್ದು ಕಚೇರಿ ಹಾಗೂ ವಸತಿ ಜಾಗಗಳ ಬೇಡಿಕೆಯನ್ನು ಹೆಚ್ಚುತ್ತಲೇಯಿದೆ. ಮುಂದಿನ ದಶಕದಲ್ಲಿ ಶೇಕಡಾ 30ರಷ್ಟು ಬೆಳೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ' ಎಲ್ಲರಿಗೂ ವಸತಿ ಮತ್ತು ಸ್ಮಾರ್ಟ್ ನಗರಗಳನ್ನು ನಿರ್ಮಿಸಲು ವ್ಯವಸ್ಥೆ ಮಾಡಲಾಗಿದೆ.

ಹೆಚ್ಚೆಚ್ಚು ಉತ್ತಮ ಮಾಹಿತಿಗಳನ್ನೊಂದಿರುವ ಭಾರತೀಯ ಉದ್ಯಮಿಗಳು ಹಾಗೂ ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ನೀಡಲು, ರಿಯಲ್ ಎಸ್ಟೇಟ್ ಡೆವಲಪರ್‍ಗಳು ಕೂಡ ತಮ್ಮ ಆಲೋಚನೆಗಳನ್ನು ಬದಲಾಯಿಸಿ, ಅತ್ಯಂತ ಒಳ್ಳೆಯ ಬದಲಾವಣೆಗಳನ್ನು ತಮ್ಮ ವೃತ್ತಿಯಲ್ಲಿ ತಂದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಮೊದಲು ಪಾರಂಪರಿಕ ಎನ್ನುತ್ತಿದ್ದವರು ಈಗ ಯಾರು ಬೇಕಾದರೂ ತೊಡಗಬಹುದಾದ ಆಡಳಿತವಿರುವ ವ್ಯವಹಾರ ಎಂದು ಹೇಳುತ್ತಾರೆ. ರಿಯಲ್ ಎಸ್ಟೇಟ್ ಡೆವಲಪರ್‍ಗಳು, ನಗರಗಳಲ್ಲಿ ಅನೇಕ ಯೋಜನೆಗಳನ್ನು ನಿರ್ವಹಿಸಿ ಬೆಳೆಯುವುದಲ್ಲದೆ, ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರದೇಶಗಳಲ್ಲಿ ಅರ್ಹ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಸಂಕ್ಷಿಪ್ತವಾಗಿ, ಕ್ರಿಯಾಶೀಲತೆ ಆರರಿಂದ 12 ತಿಂಗಳಲ್ಲಿ ಬದಲಾಗಬಹುದೆಂದು ಗೌರವ್ ಹೇಳುತ್ತಾರೆ.

ಸವಾಲಿನೊಂದಿಗೆ ಬೆಳವಣಿಗೆ

ರಿಯಾಲ್ ಎಸ್ಟೇಟ್ ವಲಯ ಅನೇಕ ಅಂಶಗಳಿಂದ ಹೊರತುಪಡಿಸಲಾಗುತ್ತದೆ . ಎರವಲು ವ್ಯಚ್ಚ ಹೆಚ್ಚು, ಅನುಮೋದನೆ ಪ್ರಕ್ರಿಯೆಗಳು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಪೂರೈಕೆಯ ಮಾರ್ಗವು ಕಷ್ಟಕರ ಮತ್ತು ಹಣದ ಕೊರತೆ. ಉದ್ಯಮದಲ್ಲಿ ಪ್ರವೇಶ ನಿರ್ಬಂಧ, ದಲ್ಲಾಳಿ ಮತ್ತು ಮಧ್ಯವರ್ತಿಗಳಿಗೆ ಇರುವೆ ಅಲ್ಪ ಜ್ಞಾನ ಗ್ರಾಹಕರ ಅಪನಂಬಿಕೆಗೆ ಕಾರಣವಾಗುತ್ತದೆ.

"ಕಂಪೆನಿಯ ಮುಂದಿನ ಬೆಳವಣಿಗೆಗಾಗಿ, ಬಂಡವಾಳ ವೆಚ್ಚವನ್ನು ರೂ 12 ಕೋಟಿಗೆ ಹೆಚ್ಚಿಸಿದೆ. ಇದಕ್ಕಾಗಿ ಬೆಂಗಳೂರು, ಪುಣೆ, ಚೆನೈ, ಹೈದರಾಬಾದ್, ಅಹಮದಾಬಾದ್ ಮತ್ತು ಜೈಪುರ ಪ್ರವೇಶಿಸುವ ಮೂಲಕ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತೇವೆ. ನಾವು ಪ್ರತಿ ವರ್ಷ 10 ರಿಂದ 12 ಕಚೇರಿಗಳನ್ನು ತೆರೆಯಲು ಯೋಜನೆ ಮಾಡಿದ್ದೇವೆ. ಈ ವಿಸ್ತರಣಾ ಯೋಜನೆಗಳ ಭಾಗವಾಗಿ, ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿ ಸ್ಥಾಪಿಸುತ್ತೇವೆ. 2019ರ ಒಳಗೆ ಭಾರತದ ವಿವಿಧ ನಗರಗಳಲ್ಲಿ 60 ಕಚೇರಿಗಳನ್ನು ಹೊಂದುವ ಗುರಿ ನಮ್ಮದು, ಅಂತಾರೆ ಗೌರವ್ ಹೇಳುತ್ತಾರೆ

ಅದಲ್ಲದೆ, ಗ್ರಾಹಕರ ಸೇವೆಗಾಗಿ ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಅದು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು. ಹೀಗೆ ಸಣ್ಣ ಕಟ್ಟಡದಿಂದ ಪ್ರಾರಂಭವಾದ ಉದಯ್ ಹೋಮ್ಸ್ ಇಂದು ದೊಡ್ಡ ಉದ್ಯಮವಾಗುವತ್ತ ದಾಪುಗಾಲು ಹಾಕಿದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ರಿಯಲ್ ಎಸ್ಟೇಟ್ ಹಾಗೂ ರೆಡಿಮೇಡ್ ಅಪಾರ್ಟ್‍ಮೆಂಟ್‍ಗಳಿಗೆ ದಿನೇ ದಿನೇ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಉದಯ್ ಹೋಮ್ಸ್ ವಿಶಿಷ್ಠ ಬದಲಾವಣೆಗಳೊಂದಿಗೆ ಮುನ್ನುಗ್ಗುತ್ತಿದೆ. ಗ್ರಾಹಕರಿಗೆ, ಮನೆ ಖರೀದಿದಾರಿಗೆ ಉತ್ತ ಮ ಸೇವೆ ನೀಡಲು ಸಾಕಷ್ಟು ಶ್ರಮ ವಹಿಸುತ್ತಿರುವ ಉದಯ್ ಹೋಮ್ಸ್ ಭವಿಷ್ಯ ಉಜ್ವಲವಾಗಿರೋದರಲ್ಲಿ ಅನುಮಾನವೇ ಇಲ್ಲ ಅನ್ನುತ್ತಿದ್ದಾರೆ ರಿಯಲ್ ಎಸ್ಟೇಟ್ ಪಂಡಿತರು.