ನವದೆಹಲಿಯಲ್ಲಿ ಅತ್ಯುತ್ತಮ ಕ್ಯಾಬ್ ಸರ್ವೀಸ್ ಬೇಕಾ..? ರುಟೋಗೋ ರೆಡಿ ಇದೆ ನೋಡಿ

ಟೀಮ್​​ ವೈ.ಎಸ್​​.

0

ವೀಕೆಂಡ್ ಟ್ರಿಪ್​ಗಾಗಿ ಯೋಜನೆ ಹಾಕಿಕೊಂಡು ಅತ್ಯುತ್ತಮ ಕ್ಯಾಬ್ ಸೇವೆಗಳಿಗಾಗಿ ಹುಡುಕುತ್ತಿದ್ದೀರಾ? ಹಾಗಿದ್ದರೆ ನಿಮಗೆ ಉತ್ತಮ ದರ್ಜೆಯ ಸೇವೆ ಒದಗಿಸುವ ಕ್ಯಾಬ್ ಆಪರೇಟಿಂಗ್ ವ್ಯವಸ್ಥೆ ಇಲ್ಲಿದೆ.. ಹೌದು, ರುಟೋಗೋ ನಿಮ್ಮ ಪ್ರದೇಶದಲ್ಲಿ ಬೇರೆ ಸೇವೆಗಳಿಗಿಂತ ಉತ್ತಮ ಸರ್ವೀಸ್ ನೀಡಲು ಲಭ್ಯವಿದೆ.. ರುಟೋಗೋ ಕ್ಯಾಬ್ ಸೇವೆಯನ್ನು ಸ್ಥಾಪಿಸಿದ ವೀನಸ್ ದುರಿಯಾರ ಪ್ರಕಾರ, ಕ್ಯಾಬ್ ಸರ್ವೀಸ್ ಬಯಸುವ ಅಸಂಖ್ಯಾತ ಗ್ರಾಹಕರಿಗೆ ಎದುರಾಗುವ ಅತಿ ದೊಡ್ಡ ಸಮಸ್ಯೆ ಅಂದರೆ ಕೈಗೆಟುಕುವ ದರದಲ್ಲಿ ಉತ್ತಮ ಕ್ಯಾಬ್ ಸೇವೆ ಪಡೆದುಕೊಳ್ಳುವುದು.. ಜೊತೆಗೆ ಈ ವಿಚಾರದಲ್ಲಿ ಬೇರೆ ಬೇರೆ ಕ್ಯಾಬ್ ಆಪರೇಟರ್ ಸೇವೆಗಳನ್ನು ವಿಚಾರಿಸಿ ಕೊನೆಗೆ ಜಗಳಕ್ಕೆ ಕಾರಣವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ..

ವೀನಸ್ ಹೇಳುವಂತೆ ರೂಟೋಗೋ ಸಂಸ್ಥೆಯ ಸೇವೆಗಳಿಗೆ ನಿರ್ದಿಷ್ಟ ಚಾನೆಲ್ ಇಲ್ಲ.. ಉಳಿದ ಕ್ಯಾಬ್ ಆಪರೇಟಿಂಗ್ ವ್ಯವಸ್ಥೆಗಳಂತೆಯೇ ರುಟೋಗೋ ಸಹ ಟೂರ್ ಹಾಗೂ ಟ್ರಾವೆಲ್ ಸಂಪರ್ಕಗಳು ಸಂಧಿಸುವ ಹಾಗೂ ಗ್ರಾಹಕರು ತಮ್ಮ ಪ್ರಯಾಣಕ್ಕಾಗಿ ಸಂಪರ್ಕ ಪಡೆಯುವ ಮಾರುಕಟ್ಟೆಯಲ್ಲಿಯೇ ಸೇವೆ ಒದಗಿಸಲು ಸಿದ್ಧವಾಗಿರುತ್ತದೆ..

ರುಟೋಗೋದ ಸಹಸಂಸ್ಥಾಪಕ ಅನೀಶ್ ರಾಯಂಚು ಜರ್ಮನಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಇಂತಹದ್ದೊಂದು ಆಲೋಚನೆ ಮಾಡಿದ್ದರು.. ಜರ್ಮನಿಯಲ್ಲಿ ಸುತ್ತಾಡಲು ಅನೀಶ್ mitfahrgelegenheit.de ನಂತಹ ಕೆಲವು ಕ್ಯಾಬ್ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದರು.. ಆಗ ಭಾರತದಲ್ಲೂ ಇಂತಹದ್ದೇ ಪರಿಣಿತ ಕ್ಯಾಬ್ ಆಪರೇಟಿಂಗ್ ಸೇವೆ ಆರಂಭಿಸುವ ಇಚ್ಛೆ ಅವರಿಗೆ ಉಂಟಾಗಿತ್ತು.. ಆದರೆ ಅವರ ಈ ಚಿಂತನೆಗೆ ಸಮಾನ ಮನಸ್ಥಿತಿಯ ಸ್ನೇಹಿತರ ನೆರವು ಸಿಗದ ಕಾರಣ ಕೂಡಲೆ ಈ ಯೋಜನೆ ಕಾರ್ಯಗತವಾಗಲಿಲ್ಲ.

ಅನೀಶ್ ರೆಕ್ಕಿಟ್ ಬೆಂಕಿಸರ್ ಅನ್ನುವ ಸಂಸ್ಥೆಗೆ ಸೇರಿದ ನಂತರ ಅವರಿಗೆ ವೀನಸ್​ರ ಪರಿಚಯವಾಯಿತು. ಈ ಕ್ಯಾಬ್ ಆಪರೇಟಿಂಗ್ ಸೇವೆಯ ಕುರಿತಾಗಿ ಇಬ್ಬರೂ ಸಮಾನ ಯೋಜನೆ ಹೊಂದಿದ್ದು ಅವರ ಭೇಟಿಯಿಂದ ಒಬ್ಬರಿಗೊಬ್ಬರು ಅರಿತುಕೊಂಡರು. ಹೆಚ್ಚುತಡಮಾಡದೆ ಇಬ್ಬರೂ ಮಾರುಕಟ್ಟೆಯ ಅವಲೋಕನಕ್ಕೆ ಮುಂದಾದರು.. ಅಂತರ್​​ನಗರ ಸುತ್ತಾಟದ ಯೋಜನೆಯ ಆಲೋಚನೆಯ ಬದಲಿಗೆ ಕ್ಯಾಬ್ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ತೀರ್ಮಾನಿಸಿದರು. ಆಗಿನ ಪರಿಸ್ಥಿತಿಯಲ್ಲಿ ಭಾರತದಲ್ಲಿ ಇಂಟರ್​​ಸಿಟಿ ಪ್ರಯಾಣಕ್ಕಾಗಿ ಕ್ಯಾಬ್ ಬುಕ್ ಮಾಡುವುದು ದುಸ್ತರವಾಗಿತ್ತು..

ಜನ ಬೇರೆ ಬೇರೆ ಕ್ಯಾಬ್​​ಗಳನ್ನು ಕರೆದು ಬಳಿಕ ಅವರು ನಿಗದಿಪಡಿಸಿದ ದರವನ್ನು ಗಮನಿಸಿ ಯಾವುದು ಸೂಕ್ತ ಅಂತ ಆಯ್ಕೆ ಮಾಡುತ್ತಿದ್ದರು.. ಈ ಹಳೆಯ ಮಾದರಿಯ ಆಯ್ಕೆಯ ವಿಧಾನ ಕೆಲವು ಬಾರಿ ಗೊಂದಲ ಸೃಷ್ಟಿಸುತ್ತಿತ್ತು.. ಹೀಗಾಗಿ ಅವರು ಮಾರುಕಟ್ಟೆಯಲ್ಲಿರುವ ಎಲ್ಲಾ ಟೂರ್ಸ್ ಹಾಗೂ ಟ್ರಾವಲರ್ಸ್ ಕ್ಯಾಬ್ ಆಪರೇಟರ್​​ಗಳನ್ನು ಒಂದೇ ಪ್ಲಾಟ್​​ಫಾರಂ ಅಡಿಯಲ್ಲಿ ಒಟ್ಟುಗೂಡಿಸುವ ಪ್ರಯತ್ನಕ್ಕೆ ಮುಂದಾದ್ರು.. ಬಳಿಕ ಏಕರೂಪ ದರ ಹಾಗೂ ಮಾನದಂಡ ನಿಗದಿಪಡಿಸಿದರು.

ಅವರ ಉಳಿತಾಯದ ಹಣವನ್ನು ಒಟ್ಟುಗೂಡಿಸಿ ವಿನಿಯೋಗಿಸಿ ಮೊದಲು ಮಾಡಬೇಕಿದ್ದ ತಂತ್ರಜ್ಞಾನ ಅಭಿವೃದ್ಧಿ ಕೆಲಸ ಮುಗಿಸಿದರು. ತಮ್ಮ ಈ ಯೋಜನೆಯನ್ನು ಪ್ರಾಥಮಿಕವಾಗಿ ಅಭಿವೃದ್ಧಿಗೊಳಿಸಿದ ನಂತರ ತಮ್ಮ ಸಂಸ್ಥೆಯ ಹಿರಿಯ ಹಾಗೂ ದೊಡ್ಡ ಹುದ್ದೆಯಲ್ಲಿರುವ ಸಹುದ್ಯೋಗಿಗಳಿಂದ, ಸ್ನೇಹಿತರಿಂದ ಹಾಗೂ ಸಂಬಂಧಿಗಳಿಂದ ಬಂಡವಾಳ ಹೂಡಿಕೆ ಮಾಡಿಸಿದರು. ಈಗ ಸಂಸ್ಥೆಯಲ್ಲಿ ತಂತ್ರಜ್ಞಾನ, ಮಾರ್ಕೆಟಿಂಗ್, ಕಾರ್ಯನಿರ್ವಹಣೆ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ 8 ಜನರೂ ಸೇರಿದಂತೆ ಒಟ್ಟು 13 ಸದಸ್ಯರಿದ್ದಾರೆ.. ಡಿಜಿಟಲ್ ಮಾರುಕಟ್ಟೆಯ ಜೊತೆಗೆ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಟ್ರಾವೆಲ್ ಏಜೆಂಟ್​​​ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಹೊಂದಿದೆ.

ಸವಾಲುಗಳು

ಪ್ರಾಥಮಿಕವಾಗಿ ಯೋಜನೆ ಹಣೆದಂತೆಯೇ ಅದನ್ನು ಕಾರ್ಯರೂಪಕ್ಕಿಳಿಸುವುದು ಅತಿ ದೊಡ್ಡ ಸವಾಲಾಗಿತ್ತು.. ತಮ್ಮ ಆಲೋಚನೆಗಳನ್ನು ಜೈಪುರದ ಸಾಫ್ಟ್​​ವೇರ್​​ ಕಂಪೆನಿಯೊಂದಕ್ಕೆ ಹೊರಗುತ್ತಿಗೆ ನೀಡಿದ್ದರು.. ಆದರೆ ಆ ಔಟ್​​ಪುಟ್​​ ನಿರೀಕ್ಷಿಸಿದಂತಹ ಫಲ ನೀಡಿರಲಿಲ್ಲ.. ಹೀಗಾಗಿ ಯೋಜನೆ ಜಾರಿ ವಿಳಂಬವಾಗುತ್ತಾ ಸಾಗಿತು. ಒಂದು ಹಂತದಲ್ಲಿ ಸಂಸ್ಥೆ ಮುಚ್ಚುವ ಭೀತಿಯೂ ಎದುರಾಗಿತ್ತು. ಆದರೆ ಕೂಡಲೆ ಕಷ್ಟದಿಂದಲೇ ಸಂಸ್ಥೆಯ ಬೆಳವಣಿಗೆಯತ್ತ ಗಮನ ಹರಿಸಿದ ವೀನಸ್ ಹಾಗೂ ಅನೀಶ್ ದೆಹಲಿಯಲ್ಲಿ ಸಂಸ್ಥೆಯೊಂದನ್ನು ಹುಡುಕಿಕೊಂಡರು. ಸ್ಥಳೀಯ ಕ್ಯಾಬ್ ಮಾಲೀಕರನ್ನು ಈ ಪ್ಲಾಟ್​ಫಾರಂ ಅಡಿ ತರುವ ನಿಟ್ಟಿನಲ್ಲಿ ಮನವೊಲಿಕೆ ಅವರ ಮುಂದಿದ್ದ ಇನ್ನೊಂದು ಸವಾಲಾಗಿತ್ತು.. ಅವರಲ್ಲಿ ಅನೇಕರು ಆಫ್​​ಲೈನ್ ಬುಕಿಂಗ್ ವ್ಯವಸ್ಥೆಯನ್ನು ಒಪ್ಪಿಕೊಂಡಿರಲಿಲ್ಲ. ಆದ್ದರಿಂದ ಅವರ ಮನವೊಲಿಕೆಗೆ ಆನ್​ಲೈನ್ ಬುಕಿಂಗ್ ಸೇವೆಯ ಸವಾಲು ಸ್ವೀಕರಿಸಬೇಕಾಯಿತು ಅಂತಾರ ವೀನಸ್.

ಕಾರ್ಯಾಚರಣೆ ಹಾಗೂ ಸೆಳೆದುಕೊಳ್ಳುವ ತಂತ್ರ

ವೀನಸ್​​ ಮತ್ತು ಅನೀಷ್​​​ ಕಳೆದ ಮೇನಲ್ಲಿ ಫೋನ್ ಕಾಲ್ ಮೂಲಕ ಆಫ್​​ಲೈನ್ ಸರ್ವೀಸ್ ಆರಂಭಿಸಿದರು. ಆದರೆ ಸಂಸ್ಥೆಯ ಆನ್​ಲೈನ್ ಸೇವೆಯ ಆ್ಯಂಡ್ರಾಯ್ಡ್ ಆ್ಯಪ್ ಬಿಡುಗಡೆಯಾಗಿದ್ದು ಮಾತ್ರ ಇತ್ತೀಚೆಗೆ. ಅಲ್ಲಿಂದ ಇಲ್ಲಿಯವರೆಗೆ ಈ ಆ್ಯಪ್ ಸುಮಾರು 2500 ಡೌನ್​ಲೋಡಿಂಗ್ ಕಂಡಿದೆ.. 5 ಸಾವಿರ ರೂಪಾಯಿ ದರದಂತೆ ಸುಮಾರು 300 ಬುಕಿಂಗ್​​ಗಳನ್ನು ಇದು ನಿರ್ವಹಿಸಿದೆ.. ಬೆಳಿಗ್ಗೆ 8ರಿಂದ ರಾತ್ರಿ 10ರ ನಡುವೆ ಬುಕ್ ಮಾಡಬಲ್ಲ ವ್ಯವಸ್ಥೆಯಿದ್ದು, ಕೆಲವು ಒಳ್ಳೆಯ ದಿನಗಳಲ್ಲಿ ನಮಗೆ 12 ಬೇಡಿಕೆಗಳೂ ಸಿಕ್ಕಿವೆ. ಕಳೆದ ಎರಡು ತಿಂಗಳಿಂದ ನಮ್ಮ ಸಂಸ್ಥೆ ಸುಮಾರು ಶೇ 250ರಷ್ಟು ಪ್ರಗತಿ ಕಂಡಿದೆ.. ರುಟೋಗೋ ಒಟ್ಟು ಬುಕಿಂಗ್​ನಲ್ಲಿ ಪ್ಲ್ಯಾಟ್ ಕಮಿಷನ್ ಆಧಾರದಲ್ಲಿ ಆದಾಯಗಳಿಸುತ್ತಿದೆ ಅಂತ ಮಾಹಿತಿ ನೀಡಿದ್ದಾರೆ ವೀನಸ್.

ಮಾರುಕಟ್ಟೆಯಲ್ಲಿ ಕ್ಯಾಬ್​ಗಳ ಲಭ್ಯತೆಯ ಆಧಾರದಲ್ಲಿ ಕೆಲವೊಮ್ಮೆ ದರ ನಿಗದಿಪಡಿಸಲಾಗುತ್ತದೆ. ಇಲ್ಲಿ ದರಗಳ ಅನ್ವಯದಲ್ಲೂ ಗ್ರಾಹಕರು ಕ್ಯಾಬ್ ಸೇವೆಗಳನ್ನು ಬುಕ್ ಮಾಡಬಹುದಾಗಿದೆ. ಕ್ಯಾಬ್​ಗಳಿಗೆ ಬೇಡಿಕೆ ಇದ್ದಾಗಲೂ ಗ್ರಾಹಕರು ಕೈಗೆಟುಕುವ ದರದಲ್ಲಿ ಅವುಗಳ ಸೇವೆ ಪಡೆಯಬಹುದಾಗಿದೆ. ಅಂತ್ಯದಲ್ಲಿ ಬಿಲ್ಲಿಂಗ್ ಮೊತ್ತದಲ್ಲಿ ಹತ್ರಹತ್ರ 2 ಸಾವಿರನ ರೂಪಾಯಿಯಷ್ಟು ಉಳಿತಾಯ ಮಾಡಲು ಸಾಧ್ಯವಿದೆ.. ಉಳಿದ ಕ್ಯಾಬ್ ಆಪರೇಟಿಂಗ್ ಸೇವೆಗಳಂತೆ ಫಿಕ್ಸೆಡ್ ದರ ನಿಗದಿ ಮಾಡುವಂತೆ ತಮ್ಮ ಸಂಸ್ಥೆ ಮಾಡುವುದಿಲ್ಲ ಅಂತ ದೃಢೀಕರಿಸಿದ್ದಾರೆ ವೀನಸ್.

ಮಾಮೂಲಿಯಂತೆ ಬೇರೆ ವೆಂಡರ್​​ಗಳು ಚಾರ್ಜ್ ಮಾಡುವ ಹಣದಲ್ಲಿ ಕೇವಲ ಶೇ 50ರಷ್ಟು ಮಾತ್ರ ಒಂದು ಸುತ್ತಿನ ಪ್ರಯಾಣಕ್ಕೆ ಈ ಪ್ಲಾಟ್​ಫಾರಂನಲ್ಲಿ ಗ್ರಾಹಕರು ಪಾವತಿಸಬೇಕು.. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲ ಒದಗಿಸಲು ರುಟೋಗೋ ತಂಡ ಪ್ರಯತ್ನಿಸುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೀಗೆ ಒಂದು ಸುತ್ತಿನ ಪ್ರಯಾಣ ಮಾಡುವ ಸುಮಾರು 32 ವಿಷಮ ರಸ್ತೆಗಳಿವೆ.. ಇಲ್ಲಿಯೂ ಈ ರೀತಿಯ ಸೇವೆ ಒದಗಿಸುವ ಕಡೆಗೆ ಸಂಸ್ಥೆ ಕಾರ್ಯನಿರತವಾಗಿದೆ. ಓಲಾ, ಟ್ಯಾಕ್ಸಿ ಫಾರ್ ಶ್ಯೂರ್, ಉಬರ್​ನಂತೆ ರುಟುಗೋ ಸಹ ಗಂಟೆಗಳ ಲೆಕ್ಕದಲ್ಲಿ ಮಹಾನಗರಗಳ ಸುತ್ತಾಟದ ಸರ್ವೀಸ್ ನೀಡಲಿದೆ.

ರುಟೋಗೋ ಸದ್ಯ ರಾಷ್ಟ್ರರಾಜಧಾನಿ ದೆಹಲಿ ಹಾಗೂ ಚಂಡೀಗಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಉತ್ತರಭಾರತದ ಎಲ್ಲಾ ಮುಖ್ಯ ಪಟ್ಟಣಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಜೊತೆಗೆ ಹಳೆಯ ಯೋಜನೆಯಾದ ಶೇರಿಂಗ್ ಮೂಲಕ ಅಂತರ್​ನಗರ ಸುತ್ತಾಟ ಯೋಜನೆಯನ್ನೂ ಅಭಿವೃದ್ಧಿಪಡಿಸುವ ಚಿಂತನೆಯಲ್ಲಿದೆ.

ಮಾರುಕಟ್ಟೆ:

ಭಾರತೀಯ ರೇಡಿಯೋ ಟ್ಯಾಕ್ಸಿ ಮಾರುಕಟ್ಟೆ ಸುಮಾರು 6ರಿಂದ 9 ಬಿಲಿಯನ್ ಅಮೇರಿಕನ್ ಡಾಲರ್ ವಹಿವಾಟು ನಡೆಸಿದೆ ಅಂತ ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಉದ್ಯಮ ವಾರ್ಷಿಕವಾಗಿ ಶೇ. 17-20ರಷ್ಟು ಅಭಿವೃದ್ಧಿ ಸಾಧಿಸಲಿದೆ ಅನ್ನುವ ಅವಲೋಕನ ಸಹ ನಡೆಸಲಾಗಿದೆ.. ಮುಖ್ಯವಾಗಿ ಇಲ್ಲಿ ಕೇವಲ 4-6 ಪ್ರತಿಶತಃ ಮಾರುಕಟ್ಟೆ ಮಾತ್ರ ಸಂಘಟಿತವಾಗಿದೆ.. ಉಳಿದ 2-50 ಪ್ರತಿಶತಃ ಟ್ಯಾಕ್ಸಿಗಳು ಸ್ವತಂತ್ರವಾಗಿ ಮಾಲೀಕರ ಮೂಲಕವೇ ಕಾರ್ಯನಿರ್ವಹಣೆಗೊಳ್ಳುತ್ತಿವೆ..

ಆದರೂ ಶೀಘ್ರದಲ್ಲಿಯೇ ಈ ಟ್ಯಾಕ್ಸಿ ಕ್ಯಾಬ್ ಸೇವೆಯಲ್ಲಿ ಅಮೇಜಾನ್-ಫ್ಲಿಫ್​​ಕಾರ್ಟ್​ ಮಾದರಿಯಲ್ಲಿ, ದೊಡ್ಡ ಪೈಪೋಟಿ ಆರಂಭವಾಗುವ ಸಾಧ್ಯತೆಯಿದೆ. ಮುಂದಿನ 18-24 ತಿಂಗಳಿನಲ್ಲಿ ಸುಮಾರು 8-10 ಉದ್ದಿಮೆದಾರರು 10ರಿಂದ 15 ಸಾವಿರ ಕ್ಯಾಬ್​​ಗಳನ್ನು ಕ್ರೂಢೀಕರಿಸಿಕೊಂಡು ವಹಿವಾಟು ಮಾಡುವ ಯೋಜನೆಯಲ್ಲಿದೆ. ರೂಟುಗೋ ಸಂಸ್ಥೆ ಈ ಸವಾಲನ್ನು ಭರ್ಜರಿಯಾಗಿಯೇ ಸ್ವೀಕರಿಸಲು ಸಿದ್ಧವಾಗಿದೆ.