ರಿಯೋದಲ್ಲಿ"ರೈಲ್ವೇಸ್​"ಕ್ರೀಡಾಪಟುಗಳದ್ದೇ ಕಾರುಬಾರು..!

ಟೀಮ್​​ ವೈ.ಎಸ್​. ಕನ್ನಡ

0

ಕ್ರೀಡಾಲೋಕದ ಮಹಾಸಂಗ್ರಾಮ ಒಲಿಂಪಿಕ್ಸ್​ಗೆ  ಬ್ರೆಝಿಲ್ ರಾಜಧಾನಿ ರಿಯೋ ಡಿ ಜನೈರೋ ಸಿದ್ಧವಾಗಿ ನಿಂತಿದೆ. ಭಾರತದ ಕ್ರೀಡಾಭಿಮಾನಿಗಳು ಪದಕದ ನಿರೀಕ್ಷೆ ಮಾಡ್ತಿದ್ದಾರೆ. ರಿಯೋದಲ್ಲಿ ಆಗಸ್ಟ್ 5ರಿಂದ 21ರ ತನಕ 31ನೇ ಒಲಿಂಪಿಯಾಡ್ ನಡೆಯಲಿದೆ. ಈ ಬಾರಿ ಭಾರತ 119 ಸದಸ್ಯರ ಅತೀ ದೊಡ್ಡ ತಂಡವನ್ನು ಕಳುಹಿಸಿಕೊಟ್ಟಿದೆ. ಈ ಹಿಂದಿಗಿಂತ ಈ ಬಾರಿ ಅತೀ ಹೆಚ್ಚು ಪದಕಗಳನ್ನು ಗೆಲ್ಲುವ ಕನಸಿನಲ್ಲಿದೆ.

ಅಚ್ಚರಿ ಅಂದ್ರೆ ಈ ಬಾರಿ ಭಾರತೀಯ ಒಲಿಂಪಿಕ್ ಕ್ರೀಡಾಪಟುಗಳ ಪೈಕಿ ಇಂಡಿಯನ್ ರೈಲ್ವೇಯ ಪ್ರತಿನಿಧಿಗಳೇ ಹೆಚ್ಚಾಗಿದ್ದಾರೆ. 119 ಸದಸ್ಯರ ಪೈಕಿ 35 ಕ್ರೀಡಾಪಟುಗಳು ರೈಲ್ವೇ ಉದ್ಯೋಗಿಗಳಾಗಿದ್ದಾರೆ. ಭಾರತದಿಂದ ಭಾಗವಹಿಸುವ ಸ್ಪರ್ಧಿಗಳ ಪೈಕಿ 3ನೇ ಒಂದರಷ್ಟು ಸ್ಪರ್ಧಿಗಳು ಇಂಡಿಯನ್ ರೈಲ್ವೇಯ ಕೊಡಗೆಗಳಾಗಿದ್ದಾರೆ. ಅದ್ರಲ್ಲೂ ಮಹಿಳಾ ಹಾಕಿ ತಂಡದ ಬಹತೇಕ ಸದಸ್ಯರು ರೈಲ್ವೇ ಉದ್ಯೋಗಿಗಳೇ ಅನ್ನೋದು ಗಮನಾರ್ಹವಾಗಿದೆ.

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ಭಾರತ 81 ಅಥ್ಲೀಟ್​​ಗಳನ್ನು ಪದಕದ ಬೇಟೆಗೆ ಕಳುಹಿಸಿಕೊಟ್ಟಿತ್ತು. ಆ ತಂಡದಲ್ಲಿಯೂ 12 ಕ್ರೀಡಾಪಟುಗಳು ರೈಲ್ವೇ ಉದ್ಯೋಗಿಗಳಾಗಿದ್ದರು. ಈ ಬಾರಿ ಒಟ್ಟಾರೆ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ರೈಲ್ವೇಯ ಕೊಡುಗೆಯೂ ಹೆಚ್ಚಿದೆ. ರೈಲ್ವೇಯ ಈ ಸಾಧನೆ, ರೈಲ್ವೇ ಬೋರ್ಡ್​ನಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಪ್ರೋತ್ಸಾಹ ಸಿಗುತ್ತೆ ಅನ್ನೋದಿಕ್ಕೆ ಉತ್ತಮ ಉದಾಹರಣೆ.

ಇದನ್ನು ಓದಿ: ಕರ್ನಾಟಕದಲ್ಲಿ ಸಿದ್ದವಾಯ್ತು ಸುಲ್ತಾನ್ ಗೇಮ್

ಅಂದಹಾಗೇ ರೈಲ್ವೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರೀಡಾಲೋಕದಲ್ಲಿ ಸಂಚಲನ ಸೃಷ್ಟಿಸುವಂತಹ ಸಾಧನೆ ಮಾಡ್ತಿದೆ. ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ಸೌತ್ ಏಷಿಯನ್ ಗೇಮ್ಸ್​ನಲ್ಲಿ ರೈಲ್ವೇಯ 81 ಸ್ಪರ್ಧಿಗಳ ಪೈಕಿ 76 ಕ್ರೀಡಾಪಟುಗಳು ಪದಕ ಗೆದ್ದಿದ್ದರು.

ಇತ್ತೀಚಿನ ದಿನಗಳಲ್ಲಿ ರೈಲ್ವೇ ಕ್ರೀಡಾಪಟುಗಳ ಖೋಟಾದಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಕ್ರೀಡಾಪಟುಗಳಿಗೆ ಕೆಲಸದ ಜೊತೆಗೆ ಕ್ರೀಡಾ ಭವಿಷ್ಯವನ್ನು ಕೂಡ ಕಟ್ಟಿಕೊಡುತ್ತಿದೆ. ಕೇಂದ್ರ ಸರ್ಕಾರ ಕೂಡ ರೈಲ್ವೇ ಇಲಾಖೆಯಲ್ಲಿರುವ ಕ್ರೀಡಾಪಟುಗಳಿಗೆ ವಿಶೇಷ ಸ್ಕಿಲ್ ಡೆವಲಪಿಂಗ್  ಪ್ರೋಗ್ರಾಂ ಅನ್ನು ಕೂಡ ಮಾಡಿಕೊಡುತ್ತಿದೆ. ಹೀಗಾಗಿ ಇವತ್ತು ರೈಲ್ವೇಸ್ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಇಂಡಿಯನ್ ರೈಲ್ವೇ ಸಾರಿಗೆ ವಿಭಾಗದಲ್ಲಿ ದಿನದಿಂದ ದಿನಕ್ಕೆ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಜೊತೆಗೆ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡಿ ಭಾರತೀಯ ಕ್ರೀಡಾಭಿಮಾನಿಗಳ ಮನ ಗೆಲ್ಲುತ್ತಿದೆ.

ಇದನ್ನು ಓದಿ

1. ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..

2. ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ

3. ರೈತರಿಗಾಗಿ ಬಂದಿದೆ ಮೊಬೈಲ್ ಎಟಿಎಂ..