ಮಲೆನಾಡ ಮಡಿಲಿನಲ್ಲೊಬ್ಬಅಪ್ರತಿಮ ವೈದ್ಯ..! ಮಾರಣಾಂತಿಕ ಕಾಯಿಲೆಗೆ ಇಲ್ಲಿದೆ ಮದ್ದು..!

ಪೂರ್ವಿಕಾ

ಮಲೆನಾಡ ಮಡಿಲಿನಲ್ಲೊಬ್ಬಅಪ್ರತಿಮ ವೈದ್ಯ..! ಮಾರಣಾಂತಿಕ ಕಾಯಿಲೆಗೆ ಇಲ್ಲಿದೆ ಮದ್ದು..!

Sunday December 06, 2015,

2 min Read

ಈಗಿನ ದಿನಗಳಲ್ಲಿ ನಾವುಗಳು ಕೆಲಸಗಳಲ್ಲಿ ಅದೆಷ್ಟು ಬ್ಯೂಸಿ ಆಗ್ತಿದ್ದೀವೋ ಅದೇರೀತಿ ಖಾಯಿಲೆಗಳು ಕೂಡ ಅಷ್ಟೇ ವೇಗವಾಗಿ ಹೆಚ್ಚುತಿವೆ. ಅದ್ರಲ್ಲೂ ಈಗಿನ ಪೀಳಿಗೆಗೆ ಹೆಚ್ಚಾಗಿ ಕಾಡ್ತಿರೋದು ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯ. ಎಷ್ಟೇ ಆಸ್ಪತ್ರೆಗಳು ತಿರುಗಿದ್ರುಅದೆಷ್ಟೇ ಹಣ ಸುರಿದ್ರು ಕೂಡ ಖಾಯಿಲೆ ವಾಸಿ ಆಗ್ತಿಲ್ಲ ಅನ್ನೋ ಕೊರಗನ್ನ ನೀಗಿಸೋ ವೈದ್ಯ ಮಲೆನಾಡಿನ ತಪ್ಪಲಿನಲ್ಲಿದ್ದಾರೆ. ಇವ್ರು ಸಾವಿಗೆ ಸವಾಲೆಸೆಲೋ ನಾಟಿ ವೈದ್ಯ. ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ಇವ್ರೇ ಸಂಜೀವಿನಿ. "ವೈದ್ಯೋ ನಾರಾಯಣ ಹರಿ" ಅಂತಾರೆ ಅದುಅಕ್ಷರ ಸಹ ನಿಜ, ಅನ್ನೋದು ಈ ನಾಟಿ ವೈದ್ಯ ನಾರಾಯಣ ಮೂರ್ತಿ ಅವ್ರನ್ನ ನೋಡಿದ್ರೆತಿಳಿಯುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂದಿಗೆ ನಾವು ಅದೆಷ್ಟೇ ಮುಂದುವರೆದಿದ್ರು ಕೂಡ ನಾಟಿ ಔಷಧ ಅನ್ನೋದು ಇಂದಿಗೂ ಕೂಡ ನಮ್ಮ ಪರಂಪರೆಯನ್ನ ಜೀವಂತವಾಗಿರಿಕೊಂಡಿದೆ. ಅದು ಇಂದಿಗೂ ಅದೆಷ್ಟೋ ಜನರಿಗೆ ನಿತ್ಯ ಸಂಜೀವಿನಿಯಾಗಿ ಜೀವ ನೀಡುತ್ತಿದೆ.

image


ತಮ್ಮ ಪಾರಂಪರಿಕ ಔಷಧಿಯಿಂದಲೇ ಸುಪ್ರಸಿದ್ದ ಆಗಿರೋ ನಾಟಿ ವೈದ್ಯ ನಾರಾಯಣ ಮೂರ್ತಿ.. ತಮ್ಮಜೀವನವನ್ನೇ ರೋಗಿಗಳ ಶ್ರುಶ್ರೂಷೆಗಾಗಿ ಮುಡಿಪಾಗಿಸಿದ್ದಾರೆ. ಪಾರಂಪರಿಕವಾಗಿ ಒಲಿದು ಬಂದಿರೋ ವಿದ್ಯೆಯನ್ನ ನಾರಾಯಣ ಮೂರ್ತಿ ಅವ್ರು 40 ವರ್ಷಗಳಿಂದ ಬಡ ರೋಗಿಗಳಿಗೆ ನೀಡುತ್ತಿದ್ದಾರೆ . ಸುಮಾರು ವರ್ಷಗಳ ಹಿಂದೆ ಮಲೆನಾಡಿನಲ್ಲಿ ವೈದ್ಯರು ಹಾಗೂ ಸರಿಯಾದ ಆಸ್ಪತ್ರೆಗಳು ಇಲ್ಲದೆ ಜನರು ಪರದಾಡುವುದನ್ನ ಕಂಡ ನಾರಾಯುಣ ಮೂರ್ತಿ ಅಂದಿನಿಂದ ಈ ನಾಟಿ ಚಿಕಿತ್ಸೆಯನ್ನು ಶುರು ಮಾಡಿಕೊಂಡಿದ್ದಾರೆ. ಇವತ್ತು ಮಲೆನಾಡಿನ ಸುತ್ತಮುತ್ತ ನೂರಾರು ಹೈಫೈ ಆಸ್ಪತ್ರೆಗಳು ತಲೆ ಎತ್ತಿದ್ರೂ ನಾರಾಯಣಮೂರ್ತಿಯ ನಾಟಿ ಚಿಕಿತ್ಸೆ ಮಾತ್ರ ಎಲ್ಲಾ ಆಸ್ಪತ್ರೆಗಳ ಚಿಕಿತ್ಸೆಗಿಂತ ವಿಭಿನ್ನ ಮತ್ತು ಪರಿಣಾಮಕಾರಿ.

image


ನಾಟಿ ವೈದ್ಯನಿಗಿದ್ದಾರೆ ಫಾರಿನ್​​ ಕಸ್ಟಮರ್ಸ್​..!

ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಬಳಿ ಇರೋ ಸಾಗರದ ನರಸೀಪುರದಲ್ಲಿ ನೆಲೆಸಿರೋ ನಾರಾಯಣ ಮೂರ್ತಿ ಅವ್ರ ಬಳಿ ಚಿಕಿತ್ಸೆ ಪಡೆಯಲು ಕೇವಲ ರಾಜ್ಯದ ಜನರಷ್ಟೇ ಅಲ್ಲದೆ ವಿದೇಶದಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. 40 ವರ್ಷದಿಂದ ಚಿಕಿತ್ಸೆ ನೀಡುತ್ತಾ ಬಂದಿರೋ ನಾರಾಯಣ ಮೂರ್ತಿ ಯಾವುದೇ ಸ್ವಾರ್ಥವಿಲ್ಲದೆ ಇಲ್ಲಿಯವರೆಗೂ ಉಚಿತವಾಗಿ ಚಿಕಿತ್ಸೆಯನ್ನ ನೀಡುತ್ತಿದ್ದಾರೆ. ಮಾರಾಂಣತಿಕ ರೋಗಗಳಾದ ಅನ್ನನಾಳ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಸೋರಿಯಾಸಿಸ್ ,ಗ್ಯಾಂಗ್ರಿನ್​​, ಕಿಡ್ನಿಯಲ್ಲಿ ಕಲ್ಲು, ಹೀಗೆ ಇನ್ನೂ ಅನೇಕ ರೋಗದಿಂದ ಬಳಲುತ್ತಿರೋ ರೋಗಿಗಳ ಪಾಲಿಗೆ ನಾರಾಯಣ ಮೂರ್ತಿ ಪ್ರತ್ಯಕ್ಷ ದೈವ.

image


ಓದಿದ್ದು ಜಸ್ಟ್​​​ 7ನೇ ಕ್ಲಾಸ್​​

ಕೇವಲ ಏಳನೇ ತರಗತಿ ಓದಿರೋ ನಾರಾಯಣ ಮೂರ್ತಿ ಇಂದಿನ ವೈದ್ಯರು ಬರೆದು ಕೊಡುವ ರಿಪೋರ್ಟ್​ ಅನ್ನ ಓದಿ ಅರ್ಥೈಸಿ ಕೊಳ್ಳೊ ಸಾಮರ್ಥ್ಯ ಹೊಂದಿದ್ದಾರೆ. ವಾರದಲ್ಲಿ ಸೋಮವಾರ ಹಾಗೂ ಗುರುವಾರ ಮಾತ್ರ ಚಿಕಿತ್ಸೆ ನೀಡೋ ಮೂರ್ತಿಗಳು, ಮಿಕ್ಕ ದಿನವನ್ನ ಮದ್ದು ತಯಾರು ಮಾಡಲು ಮುಡಿಪಾಗಿಸಿ ಕೊಳ್ತಾರೆ. ನಾರಾಯಣ ಮೂರ್ತಿ ಅವ್ರ ಬಳಿ ಬರೋ ರೋಗಿಗಳ ಸಂಖ್ಯೆಒಂದೆರೆಡಲ್ಲ. ಸಾವಿರಾರು ಜನರು ವಾರದಲ್ಲಿಎರಡು ದಿನ ಬಂದು ಮೂರ್ತಿ ಅವ್ರ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಅಲ್ಲಿಯ ಜನ ಸಾಗರವೇ ಹೇಳುತ್ತೆ ನಾರಾಯಣ ಮೂರ್ತಿ ಅವ್ರ ಚಿಕಿತ್ಸೆ ಎಂತದ್ದು ಅನ್ನೋದನ್ನ. ಅಷ್ಟೇ ಅಲ್ಲದೆ ಅದೆಷ್ಟೋ ವೈದ್ಯರು ಇನ್ನು ಅಗಲ್ಲ ಅಂತ ಕೈಬಿಟ್ಟಿದ ರೋಗಿಗಳಿಗೆ ನಾರಾಯಣ ಮೂರ್ತಿ ಅವ್ರ ಬಳಿ ಚಿಕಿತ್ಸೆ ಪಡೆದ ನಂತ್ರ ಗುಣಮುಖರಾಗಿದ್ದಾರೆ.

image


ಇಷ್ಟೆಲ್ಲ ವಿದ್ಯೆಗೊತ್ತಿದ್ದರೂ ನಾರಾಯಣ ಮೂರ್ತಿ, ಸರಳ ಸಜ್ಜನಿಕೆಯ ವ್ಯಕ್ತಿ. ಆಯುರ್ವೇದದ ಖನಿ..! ನಾರಾಯಣ ಮೂರ್ತಿ ಅವ್ರ ಈ ನಿಸ್ವಾರ್ಥ ಸೇವೆಗೆ ರಾಜ್ಯ ಸರ್ಕಾರ ಹಾಗೂ ಸಾಕಷ್ಟು ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಯನ್ನ ನೀಡಿ ಗೌರವಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಏಕಮೂತ್ರ ತಜ್ಞ ಅನ್ನೋ ಖ್ಯಾತಿ ನಾರಾಯಣ ಮೂರ್ತಿ ಅವ್ರ ಪಾಲಿಗಿದೆ. ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ, ಜೀವದಾನ ಮಾಡಿರೋ ನಾರಾಯಣ ಮೂರ್ತಿ ಅವ್ರ ನಿಸ್ವಾರ್ಥ ಸೇವೆ ಹೀಗೆಯೇ ಮುಂದುವರೆಯುತ್ತಿರಲಿ ಅನ್ನೋದು ಜನರ ಆಶಯ.