ಬುಡಕಟ್ಟು ಜನರ ಬದುಕಿನ ಆಶಾ ಕಿರಣ ಪ್ರಸನ್ನಾಕ್ಷಿ

ಟೀಮ್​ ವೈ.ಎಸ್​​. ಕನ್ನಡ

ಬುಡಕಟ್ಟು ಜನರ ಬದುಕಿನ ಆಶಾ ಕಿರಣ ಪ್ರಸನ್ನಾಕ್ಷಿ

Sunday December 06, 2015,

2 min Read

ಆಧುನಿಕತೆಯ ಭರಾಟೆಯಲ್ಲಿ ಕಾಡುಗಳು ನಾಶವಾಗ್ತಿವೆ. ಕಾಡಲ್ಲೇ ಬದಕುಕಟ್ಟಿಕೊಂಡ ಬುಡಕಟ್ಟು ಕುಟುಂಬಗಳು ತುತ್ತುಕುಳಿಗಾಗಿ ನಾಡಿನತ್ತ ಒಲಸೆ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬುಡಕಟ್ಟು ಜನರ ಬದುಕನ್ನ ಉಳಿಸಬೇಕು, ಅವರ ಭಾಷೆ, ಸಂಸ್ಕೃತಿಯನ್ನು ಬೆಳಸಬೇಕು ಎಂದು ಪಣತೊಟ್ಟವರು ಪ್ರಸನ್ನಶ್ರೀ. 

ಅಂದು ಬುಡುಕಟ್ಟು ಜನರಿಂದ ಕೈ ಮುರಿಯುವಂತೆ ಹೊಡೆತ ತಿಂದ ಪ್ರಸನ್ನಾಕ್ಷಿ , ಚಿಕಿತ್ಸೆಗಾಗಿ ಮತ್ತೆ ವಿಶಾಖಪಟ್ಟಣಂಗೆ ಹಿಂದಿರುಗಬೇಕಾಯಿತು. ನಂತರ ದಿನಕಳೆದಂತೆ ಗುಣಮುಖರಾದ್ರು. ಆದ್ರೆ ತಾನು ಪೆಟ್ಟು ತಿಂದ ಬಡಕಟ್ಟು ಹಳ್ಳಿಯಲ್ಲಿ, ಬುಡಕಟ್ಟು ಜನರ ಜೊತೆ ಹೇಗೆ ಕೆಲಸ ಮಾಡಬೇಕೆಂಬುದು ಪ್ರಸನ್ನಾಕ್ಷಿ ಗೊತ್ತಿತ್ತು. ಮತ್ತೆ ಅದೇ ಹಳ್ಳಿಗೆ ಪ್ರಸನ್ನಾಕ್ಷಿ ಹಿಂದಿರುಗಿದ್ರು. ಬುಡುಕಟ್ಟು ಜನರ ಮೌಕಿಕ ಸಾಹಿತ್ಯವನ್ನು ವರ್ಣಮಾಲೆಯಲ್ಲಿ ದಾಖಲಿಸಲು ಮುಂದಾದ್ರು.

image


ಅದು 1991 ರಿಂದ 2005 ರ ನಡುವಿನ ಕಾಲ. ಪ್ರಸನ್ನಶ್ರೀ ಮಧ್ಯ ಭಾರತದ 167 ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಿದ್ರು. ಅಲ್ಲಿ ಬುಡಕಟ್ಟು ಜನರಿಂದ ಕಥೆಗಳನ್ನು ಹೇಳಿಸುತ್ತಾ ಅವುಗಳನ್ನು ರೆಕಾರ್ಡ್ ಮಾಡಿ, ಮತ್ತು ಲಿಖಿತ ರೂಪದಲ್ಲಿ ದಾಖಲಿಸಿದ್ರು. ಇಲ್ಲಿಯವರೆಗೂ ಪ್ರಸನ್ನಶ್ರೀ ಬುಡಕಟ್ಟು ಜನರಿಗೆ ಸಂಬಂಧಿಸಿದ ಸುಮಾರು 18 ಲೇಖನಗಳನ್ನು ಆವಿಷ್ಕಾರ ಮಾಡಿದ್ದಾರೆ.

ಅದು 1991ನೇ ಇಸವಿ ಪ್ರಸನ್ನಶ್ರೀ ತಮ್ಮ ಪುಟ್ಟ ಮಗುವನ್ನು ಕರೆದುಕೊಂಡು ವಿಷಾಖಪಟ್ಟಣಂ ಹತ್ತಿರವಿರುವ ಅರಕು ಕಣಿವೆಗೆ ಬಂದ್ರು. ಬುಡಕಟ್ಟು ಜನರೇ ಹೆಚ್ಚಾಗಿದ್ದ ಈ ಅರುಕು ಕಣಿವೆಗೆ ಬರುವಾಗೆಲ್ಲಾ ಪ್ರಸನ್ನಶ್ರೀ ಟೇಪ್ ರಿಕಾರ್ಡ್‍ನ ಹಿಡಿದುಕೊಂಡು ಬರ್ತಿದ್ರು. ಇದ್ರಲ್ಲಿ ಬುಡಕಟ್ಟು ಜನರು ಹಾಡುವ ಹಾಡುಗಳನ್ನ ರೆಕಾರ್ಡ್ ಮಾಡಿಕೊಳ್ತಿದ್ರು.

ಬುಡಕಟ್ಟು ಮೂಲದಿಂದ ಬಂದ ಪ್ರಸನ್ನಶ್ರೀಗೆ, ಆ ಜನರನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳೋ ಹಂಬಲವಿತ್ತು. ಹೀಗಾಗೆ ತಾನೆಂದೂ ಭೇಟಿ ನೀಡದ, ತನ್ನ ಪೂರ್ವಜರು ವಾಸಿಸುತ್ತಿದ್ದ ಪ್ರಕಾಶಂ ಜಿಲ್ಲೆಗೆ ಭೇಟಿ ನೀಡಿದ್ರು. ಪ್ರಸನ್ನಶ್ರೀ ಅವರ ಅಜ್ಜಿಯ ಮನೆಯ ಸಮೀಪವೇ ಬುಡಕಟ್ಟು ಸಮುದಾಯವಿತ್ತು. ಆ ಜನರ ಪರಿಸ್ಥಿತಿ ಬಗ್ಗೆ ಪ್ರಸನ್ನಶ್ರೀಗೆ ಅರಿವಿತ್ತು. ಸಂಪನ್ಮೂಲಕ್ಕಾಗಿ ಬುಡಕಟ್ಟು ಜನಾಂಗದವರನ್ನ ಹೇಗೆ ನಾಗರೀಕ ಸಮಾಜದವರು ಬೆದರಿಸುತ್ತಾರೆ ಎಂದು ತಿಳಿದಿದ್ರು.

image


ಹೀಗೆ ಒಂದು ದಿನ ಪ್ರಸನ್ನಶ್ರೀ ಅಜ್ಜಿ ನಿನ್ನ ಕಣ್ಣಿಂದಲೇ ನೀನು ಜಗತ್ತನ್ನ ನೋಡೋಕೆ ಇಷ್ಟ ಪಡ್ತೀಯಾ ಅಂತಾ ಕೇಳಿದ್ರು. ಅದಕ್ಕೆ ಥಟ್ಟನೆ ಉತ್ತರಿಸಿದ್ದ ಪ್ರಸನ್ನಶ್ರೀ ನನ್ನ ಕಣ್ಣುಗಳಿಂದ ನಾನು ಜಗತ್ತನ್ನು ನೋಡ್ಲೇಬೇಕು ಅಂದಿದ್ರು.

ಜಗತ್ತಿನ ಬದಲಾವಣೆಗಳನ್ನು, ಹೊಸ ಸಂ ತಿಯನ್ನ ಅಳವಡಿಸಿಕೊಳ್ಳೋದು ತಪ್ಪೇನಿಲ್ಲ, ಆದ್ರೆ ನಮ್ಮ ಮೂಲವನ್ನ ನಾವೆಂದೂ ಮರೆಯಬಾರದು ಅಂತಾರೆ ಪ್ರೋಫೆಸರ್​​​​ ಪ್ರಸನ್ನಶ್ರೀ.

ಸದ್ಯ ಬುಡಕಟ್ಟು ಜನರ ಮೌಕಿಕ ಸಂಪ್ರದಾಯಗಳನ್ನು ರಕ್ಷಿಸುವ, ಬಡುಕಟ್ಟು ಸಮುದಾಯಗಳನ್ನು ಗುರುತಿಸುವ, ಮಹಿಳೆಯರ, ಯುವಕರ ಗುಂಪುಗಳು, ಶಾಲೆಗಳು, ಆ ಸಮುದಾಯ ನಾಯಕರನ್ನ ಭೇಟಿ ಮಾಡಿ ಅವರ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಸಲಹೆಗಳು, ಇತರ ಬುಡಕಟ್ಟು ಭಾಷೆಗಳ ಬಗ್ಗೆ ಜನ ಜಾಗೃತಿ ಕೆಲಸ ಜೊತೆಗೆ ಬುಡಕಟ್ಟು ಭಾಷಿಕರನ್ನು ಸ್ಥಳಾಂತರಿಸುವವರ ವಿರುದ್ಧ ಪ್ರಚಾರ ಸೇರಿದಂತೆ ಬುಡಕಟ್ಟು ಜನರ ಏಳಿಗೆಗಾಗಿ ಪ್ರಸನ್ನಶ್ರೀ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಬುಡಕಟ್ಟು ಜನರ ಉಳಿವಿಗಾಗಿ ಹೋರಾಡ್ತಿದ್ದ ಪ್ರಸನ್ನಶ್ರೀಗೆ ಸಮಸ್ಯೆ ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲೇ ಬುಡಕಟ್ಟು ಮಂದಿ ತಮ್ಮ ಭಾಷೆಯನ್ನ ಬಿಟ್ಟು ಮುಖ್ಯವಾಹಿನಿಯ ಭಾಷೆಗಳತ್ತ ಒಲವು ತೋರಲಾರಂಭಿಸಿದ್ರು. ಇಂತಹ ಸನ್ನಿವೇಶದಲ್ಲಿ ಬುಡಕಟ್ಟು ಜನರ ಕೆಲವು ಅಮೂಲ್ಯ ಪದಗಳು ಕಾಣೆಯಾಗಿದ್ವು. ಇದನ್ನರಿತ ಪ್ರಸನ್ನಾಕ್ಷಿ ಬೇಗ ಬೇಗನೆ ಬುಡಕಟ್ಟು ಜನರ ಸಾಹಿತ್ಯವನ್ನ ದಾಖಲಿಸಿಕೊಂಡು ಸುರಕ್ಷಿಸಲು ಮುಂದಾದ್ರು.

ಈ ಮಧ್ಯೆ ಪ್ರಸನ್ನಾಕ್ಷಿಗೆ ಬುಡಕಟ್ಟು ಜನರ ಬಗ್ಗೆ ಕಾಳಜಿ, ಬುಡಕಟ್ಟು ಜನರ ಜೀವನವನ್ನು ಉತ್ತಮಗೊಳಸಿಲು ಮುಂದಾಗಿದ್ದು, ಮೇಲ್ವರ್ಗದ ಜನರಿಗೆ ಅತೃಪ್ತಿಯನ್ನುಂಟುಮಾಡಿತ್ತು. ಬುಡುಕಟ್ಟು ಜನರನ್ನು ಶಿಕ್ಷಿತರನ್ನಾಗಿ ಮಾಡುತ್ತಿದ್ದ, ಮತ್ತು ಅವರಹಕ್ಕುಗಳ ಬಗ್ಗೆ ಪ್ರಶ್ನಿಸುವಂತೆ ಮಾಡಿದ ಪ್ರಸನ್ನಾಕ್ಷಿಯ ಮೇಲೆ ಆಡಳಿತ ಶಾಹಿಗಳು ಕಿಡಿಕಾರಲಾರಂಭಿಸಿದ್ರು.

image


ಸಧ್ಯ ಪ್ರಸನ್ನಶ್ರೀ ಆಂಧ್ರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಡಿಪಾರ್ಟ್‍ಮೆಂಟ್‍ನ ಪ್ರೊಫೆಸರ್ ಮತ್ತು ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿಸುತ್ತಿದ್ದಾರೆ.

ಬುಡಕಟ್ಟು ಸಾಹಿತ್ಯ ಪುನರುಜ್ಜೀವನಗೊಳಿಸಲು ಪ್ರಸನ್ನಾಕ್ಷಿ ಕೊಡುಗೆ ಅಪಾರ. ವಿಶ್ವದ ಇತರ ಭಾಗಗಳಲ್ಲೂ ಬುಡಕಟ್ಟು ಜನರಿಗಾಗಿ ತನ್ನ ಸೇವೆ ಮಾಡಬೇಕೆಂಬುದು ಪ್ರಸನ್ನಾಕ್ಷಿ ಆಸೆ. ಇಂತಹ ಕೆಲಸಕ್ಕೆ ಬೆನ್ನೆಲುಬಾಗಿ ನಿಂತವರು ಆಕೆಯ ಸಮಾಜಶಾಸ್ತ್ರದ ಪತಿ ಮತ್ತು ಮೆಕಾನಿಕಲ್ ಇಂಜಿನಿಯರ್ ಮಗಳು.

ಇಂದು ಪ್ರಸನ್ನಾಕ್ಷಿ 25 ಪುಸ್ತಕಗಳನ್ನು ರಚಿಸಿದ್ದಾರೆ. ಮತ್ತು ಅವರ ಕೆಲ ಪುಸ್ತಕಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕದ ಭಾಗವಾಗಿವೆ. ಪ್ರಸನ್ನ ಶ್ರೀ ಸಾಧನೆ ಇತರರಿಗೆ ಮಾದರಿಯಾಗಿ ನಿಂತಿದೆ.

ಲೇಖಕರು: ಸಾಸ್ವತಿ ಮುಖರ್ಜಿ

ಅನುವಾದಕರು: ಟಿಎಎ