ಪ್ರತಿಭಾವಂತರನ್ನು ಸೆಳೆಯುತ್ತಿರುವ ಸ್ಟಾರ್ಟ್​ ಅಪ್​​ : ಇದರ ಸ್ಪೆಷಾಲಿಟಿ ಏನು..?

ಟೀಮ್​​​ ವೈ.ಎಸ್​​. ಕನ್ನಡ

0

ಸ್ಟಾರ್ಟ್ ಅಪ್​ ಇದೀಗ ಚಿರಪರಿಚಿತ ಹೆಸರು. ಅತೀ ಜನಪ್ರಿಯ ಹೆಸರು. ಇದರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದತ್ತ ವಲಸೆ ಹೋಗುತ್ತಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಂಸ್ಥೆಗಳಿಂದ ಸ್ಟಾರ್ಟ್ ಅಪ್​ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.

ಹೆಚ್ಚಿನ ಪ್ರತಿಭಾವಂತರು ಸ್ಟಾರ್ಟ್ ಅಪ್​ ಸೇರುತ್ತಿದ್ದಾರೆ ಯಾಕೆ..?

ಪ್ರಸಕ್ತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತರು ಸ್ಟಾರ್ಟ್ ಅಪ್​ ಅಂದರೆ ವಿನೂತನ ಯೋಜನೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅತೀ ಹೆಚ್ಚಿನ ವೇತನ, ಹೆಚ್ಚಿದ ಹೊಣೆಗಾರಿಕೆ, ಪಾತ್ರ ಮತ್ತು ಶೀಘ್ರವೇ ಉದ್ಯೋಗದಲ್ಲಿ ಬಡ್ತಿ ಅವಕಾಶ . ಈ ಎಲ್ಲಾ ಅಂಶಗಳು ಇದಕ್ಕೆ ಕಾರಣ ಎನ್ನುತ್ತಾರೆ ಪೀಪಲ್ ಸ್ಟ್ರಾಂಗ್ ಹೆಚ್​​​.ಆರ್.ಸರ್ವಿಸ್​​ನ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಪಂಕಜ್ ಬನ್ಸಾಲ್.

ಈಗಾಗಲೇ ಹೆಸರುವಾಸಿಯಾಗಿರುವ, ಜನ ಮನ್ನಣೆ ಗಳಿಸಿರುವ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುವವರು, ಅದಕ್ಕೆ ವಿದಾಯ ಹೇಳಿ ಸ್ಚಾರ್ಟ್ ಅಪ್​ ಯೋಜನೆಯತ್ತ ಮುಖ ಮಾಡುತ್ತಿದ್ದಾರೆ. ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ಅರ್ಥಪೂರ್ಣಆಶೋತ್ತರದ ಪ್ರತಿಫಲನವಾಗಿದೆ. ತಮ್ಮ ಕೆಲಸ ಮತ್ತು ಕಾರ್ಯ ಕ್ಷೇತ್ರ ಕುರಿತ ಪ್ರತಿಬಿಂಬ ಕೂಡ ಈ ಬದಲಾವಣೆಯಲ್ಲಿ ಅಡಗಿದೆ ಎನ್ನುತ್ತಾರೆ ಪಂಕಜ್ ಬನ್ಸಾಲ್.

ಸ್ಟಾರ್ಟ್ ಅಪ್​ ಯೋಜನೆಗಳು ಕೇವಲ ಕನಸಿನ ಸರಕುಗಳಾಗಿ ಮಾತ್ರ ಉಳಿದಿಲ್ಲ. ಹೂಡಿಕೆದಾರರ ಆಕರ್ಷಣೆಯನ್ನು ಕೂಡ ಗಳಿಸಿದೆ. ಖಾಸಗಿ ಹೂಡಿಕೆ ಮತ್ತು ವೆಂಚರ್ ಕ್ಯಾಪಿಟಲ್​​ಗಳ ಮೂಲಕ ನಿಧಿ ಎತ್ತಲಾಗುತ್ತಿದೆ. ಇದು ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರಿದ್ದು, ಉತ್ತಮ ಬೆಳವಣಿಗೆಗೆ ದಾರಿದೀಪವಾಗಿದೆ ಎನ್ನುತ್ತಾರೆ ಮೈಕಲ್ ಪೇಜ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕ ನಿಕೋಲಸ್ ಡುಮೋಲಿನ್.

ತಂತ್ರಜ್ಞಾನ ಆಧಾರಿತ ಅಥವಾ ಈ ಕಾಮರ್ಸ್​ ವ್ಯವಹಾರ ಇದರಿಂದ ಲಾಭ ಪಡೆದಿದೆ. ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿರುವುದರಿಂದ ಅತ್ಯುತ್ತಮ ಬೆಳವಣಿಗೆ ಹಾಗೂ ಹೆಚ್ಚಿನ ಪ್ರತಿಭಾವಂತರ ಸೇರ್ಪಡೆ ಈ ಸ್ಟಾರ್ಟ್ ಅಪ್​ ಯೋಜನೆ ದಾಖಲಿಸಿದೆ.

ಪರಿಣಿತರು ಏನನ್ನುತ್ತಾರೆ..?

ಪ್ರತಿಭಾವಂತರು ಸ್ಟಾರ್ಟ್ ಅಪ್​ ಯೋಜನೆಗಳತ್ತ ಒಲವು ಹೊಂದಿರುವುದರ ಬಗ್ಗೆ ಗ್ಲೋಬಲ್ ಹಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಸುನಿಲ್ ಗೋಯಲ್ ಈ ರೀತಿ ಹೇಳುತ್ತಾರೆ. ಮುಖ್ಯವಾಗಿ ವೃತ್ತಿ ಜೀವನಕ್ಕೆ ಈಗಷ್ಟೇ ಕಾಲಿರಿಸಿದವರು ಒಂದೆಡೆಯಾದರೆ, ಹದಿನೈದು ವರ್ಷಕಾಲ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಪರಿಣಿತಿ ಪಡೆದ ಪ್ರತಿಭಾಶಾಲಿಗಳು, ಸ್ಟಾರ್ಟ್ ಅಪ್​​ನತ್ತ ಆಕರ್ಷಿತರಾಗುತ್ತಿದ್ದಾರೆ. ಸವಾಲನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ.

ಸ್ಟಾರ್ಟ್ ಅಪ್​​​ನ ಯಶಸ್ಸಿನ ಬಗ್ಗೆ ಮಾತನಾಡುತ್ತ ಮೈ ಕೈಂಡ್ ಜೋಬ್ ಸಂಸ್ಥೆಯ ಸಂಸ್ಥಾಪಕ ಅಂಕಿತ್ ಬನ್ಸಾಲ್ ಈ ರೀತಿ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಸ್ಟಾರ್ಟ್ ಅಪ್​​ ಯೋಜನೆಗಳ ಯಶಸ್ಸಿನಿಂದ ಜನರ ಮನೋಸ್ಥಿತಿಯಲ್ಲಿ ಕೂಡ ಬದಲಾವಣೆಯಾಗಿದೆ. ಈ ಕ್ಷೇತ್ರದತ್ತ ಹೆಜ್ಜೆ ಇರಿಸುತ್ತಿದ್ದಾರೆ. ಇದಲ್ಲದೆ ಕಾಲೇಜ್ ಕ್ಯಾಂಪಸ್ ಗಳಿಂದ ಕೂಡ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಂಕಿತ್ ಬನ್ಸಾಲ್.

ಪ್ರತಿಭೆಗಳನ್ನು ಈ ವಿನೂತನ ಯೋಜನೆಗಳತ್ತ ಆಕರ್ಷಿಸಲು ಶೇರು ಬಂಡವಾಳ ಕೊಡುಗೆಯನ್ನು ನೀಡಲಾಗುತ್ತದೆ. ಇದು ಪ್ರತಿಭಾವಂತರನ್ನು ಇದೇ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ನೆರವಾಗುತ್ತಿದೆ ಎನ್ನುತ್ತಾರೆ ಡೌಮ್ಲಿನ್.

ವೇತನ ಪ್ರಮುಖ ಅಂಶವಾಗಿದ್ದರೂ ಅದನ್ನು ಮೀರಿ ಕೆಲವು ಆದ್ಯತೆಗಳು ಇಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿವೆ ಎನ್ನುತ್ತಾರೆ ಬನ್ಸಾಲ್. ವೃತ್ತಿ ಜೀವನದಲ್ಲಿ ಬೆಳವಣಿಗೆ, ಉತ್ತಮ ಅವಕಾಶಗಳನ್ನು ಹುಡುಕುತ್ತಿರುವ ಯುವ ಜನಾಂಗಕ್ಕೆ ಸ್ಟಾರ್ಟ್ ಅಪ್​ ಆಕರ್ಷಕವಾಗಿ ಕಂಡು ಬರುತ್ತಿದೆ. ಇದು ಪೀಪಲ್ಸ್ ಸ್ಟ್ರಾಂಗ್ ಹೆಚ್ ಆರ್ ಸಂಸ್ಥೆಯ ಬನ್ಸಾಲ್ ಅಭಿಮತ

ಮುಖ್ಯವಾಗಿ ಮಾಹಿತಿ ವಿಶ್ಲೇಷಣೆ, ಸಂಚಾರ ಕ್ಷೇತ್ರ, ರಕ್ಷಣೆ, ಕ್ಲೌಡ್ ಮತ್ತು ಮೊಬೈಲ್ ಅಪ್ಲಿಕೇಷನ್ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್ ಅಪ್​, ವಿನೂತನ ಯೋಜನೆಗಳು ಜನ ಮೆಚ್ಚುಗೆ ಗಳಿಸುತ್ತಿವೆ. ಒಲವು ಸಂಪಾದಿಸುತ್ತಿವೆ.

ಉತ್ತಮ ಬಂಡವಾಳ ಹೂಡಿಕೆ ಹೊಂದಿರುವ ಸಂಸ್ಥೆಗಳು ವೃತ್ತಿಪರ ಬೆಳವಣಿಗೆ ದಾಖಲಿಸುತ್ತಿವೆ. ಇದೇ ವೇಳೆ, ಪ್ರವರ್ತಕರ ಬಂಡವಾಳವನ್ನು ಮಾತ್ರ ನೆಚ್ಚಿರುವ ವಿನೂತನ ಯೋಜನೆಗಳು ಇನ್ನಷ್ಟೇ ಪೂರ್ಣ ಪ್ರಮಾಣದ ಬೆಳವಣಿಗೆ ದಾಖಲಿಸಬೇಕಾಗಿದೆ. ಪ್ರತಿಭಾವಂತರ ಪೂರ್ಣ ಪ್ರತಿಭೆ, ಈ ಸಂಸ್ಥೆಗಳಲ್ಲಿ ಹೊರ ಹೊಮ್ಮ ಬೇಕಾಗಿದೆ. ಇದು ಈ ಕ್ಷೇತ್ರದ ಪರಿಣಿತರಾಗಿರುವ ಅಂಕಿತ್ ಬನ್ಸಾಲ್ ಅವರ ಮಾತು.

ಅನುವಾದಕರು: ಎಸ್​​.ಡಿ.

Related Stories