ಎಷ್ಟು ಬೇಗ ವಿಫಲರಾಗ್ತೀರೋ ಅಷ್ಟೇ ಬೇಗ ಕಲಿಯಿರಿ...ಉದ್ಯಮ ಆರಂಭಕ್ಕೆ ಇಲ್ಲಿದೆ ಟಿಪ್ಸ್

ಟೀಮ್​​ ವೈ.ಎಸ್​​.

0

ಒಂದು ಉದ್ಯಮದ ಯಶಸ್ಸಿಗೆ ನಾಯಕತ್ವ, ತಂತ್ರಜ್ಞಾನ ಮತ್ತು ಸಂಸ್ಕೃತಿ ಮಾತ್ರ ಅವಶ್ಯವಲ್ಲ. ವೇಗ, ಸಮಯ ಮತ್ತು ಉದ್ದೇಶ ಕೂಡ ಬಹಳ ಮುಖ್ಯ. ಹೊಸ ಉದ್ದಿಮೆಯ ಬಗ್ಗೆ ಜನರ ಪ್ರತಿಕ್ರಿಯೆ ಪಡೆಯೋದು ಈಗ ಬಹಳ ಸುಲಭ. ಇದಕ್ಕೆಲ್ಲ ಸಾಮಾಜಿಕ ಜಾಲತಾಣಗಳಂತಹ ಆನ್‍ಲೈನ್ ಅಸ್ತ್ರಗಳಿವೆ. ಸಂಸ್ಥಾಪಕರು ಹೊಸ ಆಯ್ಕೆಗಳನ್ನು ಬಹುಬೇಗ ಕಲಿಯಬಹುದು. ವೈಫಲ್ಯದ ಅಪಾಯವನ್ನೂ ತಪ್ಪಿಸಿಕೊಳ್ಳಬಹುದು.

ಯಾಹೂ, ಆ್ಯಪಲ್, ಅಮೇಝಾನ್‍ನಂತಹ ಘಟಾನುಘಟಿ ಕಂಪನಿಗಳಲ್ಲಿ ಮಾರ್ಕೆಟಿಂಗ್ ಅನುಭವ ಹೊಂದಿರುವ ಬೆರ್ನ್‍ಹಾರ್ಡ್ ಶೋರ್ಡರ್ ಇವನ್ನೆಲ್ಲ ತಮ್ಮ 196 ಪುಟಗಳ ಪುಸ್ತಕ `ಫೊಮೇಲ್ ಫಾಸ್ಟ್ ಔರ್ ವಿನ್ ಬಿಗ್ : ದಿ ಸ್ಟಾರ್ಟ್‍ಅಪ್ ಪ್ಲಾನ್ ಫಾರ್ ಸ್ಟಾರ್ಟಿಂಗ್ ನೌ'ನಲ್ಲಿ ಬರೆದಿದ್ದಾರೆ. ಸಮಸ್ಯೆಗಳು, ಪರಿಹಾರ ಮತ್ತು ಗ್ರಾಹಕರ ಬಗ್ಗೆ ಉದ್ಯಮಿ ಯಾಂತ್ರಿಕವಾಗಿ ಕುತೂಹಲ ಹೊಂದಿರಬೇಕು. ಹೊಸ ಹೊಸ ಟ್ರೆಂಡ್‍ಗಳನ್ನು ಪರಿಚಯಿಸೋದು ಹಾಗೂ ಐಡಿಯಾಗಳನ್ನು ಪರೀಕ್ಷೆ ಮಾಡುವಲ್ಲಿ ಸದಾ ಮುಂದಿರಬೇಕು. ಇದನ್ನೆಲ್ಲ ತಿಳಿಯಲು `ದಿ ಲೀನ್ ಸ್ಟಾರ್ಟ್‍ಅಪ್', `ದಿ ಲೀನ್ ಎಂಟರ್‍ಪ್ರೆನ್ಯೂರ್' , `ಡಿಸಿಪ್ಲಿನ್ಡ್ ಎಂಟರ್‍ಪ್ರೆನ್ಯೂರ್‍ಶಿಪ್' , `ಫೇಲ್ ಬೆಟರ್ : ಡಿಸೈನ್ ಸ್ಮಾರ್ಟ್ ಮಿಸ್ಟೇಕ್ಸ್ & ಸಕ್ಸೀಡ್ ಸೂನರ್' ಎಂಬೆಲ್ಲಾ ಪುಸ್ತಕಗಳನ್ನು ಓದುವಂತೆ ಬೆರ್ನ್‍ಹಾರ್ಡ್ ಸಲಹೆ ನೀಡಿದ್ದಾರೆ.

ಉದ್ಯಮ ಮಾದರಿ...

ಒಂದೊಳ್ಳೆ ಉದ್ದಿಮೆಯ ಯೋಜನೆ ಮಾರುಕಟ್ಟೆಸ್ಥಳದ ವಿಭಜನೆ, ಉತ್ಪನ್ನಗಳ ಬಗೆಗಿನ ಪ್ರತಿಕ್ರಿಯೆ, ಮಾರಾಟ ತಂತ್ರ, ತಂಡ ಕಟ್ಟುವಿಕೆ ಹಾಗೂ ಹಣಕಾಸಿನ ಕಲ್ಪನೆಗಳನ್ನು ಒಳಗೊಂಡಿರಬೇಕು. ಬಜೆಟ್ ಲೆಕ್ಕಾಚಾರ, ಪೈಪೋಟಿ, ಗ್ರಾಹಕರು ಮತ್ತು ಹೂಡಿಕೆದಾರರಿಗೆ ಸ್ಪಷ್ಟ ಚಿತ್ರಣ ನೀಡಲು ಇದು ನೆರವಾಗುತ್ತದೆ. ಬ್ಯುಸಿನೆಸ್ ಪ್ಲಾನ್ ಅನ್ನೋದು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಉದ್ಯಮ ಮಾದರಿ ಕ್ಯಾನ್‍ವಾಸ್ ಸಂಸ್ಥಾಪಕನಿಗಿರೋ ದೊಡ್ಡ ಅಸ್ತ್ರ. ಬ್ಯುಸಿನೆಸ್ ಮಾದರಿ ಅನ್ನೋದು ಒಂದು ಯಶಸ್ವಿ ಉದ್ಯಮದ ಕಾರ್ಯಾಚರಣೆ ಅಂತಾ ಬೆರ್ನ್‍ಹಾರ್ಡ್ ಬಣ್ಣಿಸುತ್ತಾರೆ. ಉತ್ಪನ್ನಗಳ ಶೋಧ, ಆದಾಯದ ಮೂಲ, ಗ್ರಾಹಕರ ಅಡಿಪಾಯ ಜೊತೆಗೆ ಹಣಕಾಸಿನ ವಿವರಕ್ಕೂ ಬ್ಯುಸಿನೆಸ್ ಮಾಡೆಲ್ ಮೂಲವಾಗಿದೆ.

ಮೊಬೈಲ್ ಫೋನ್, ಮೈಕ್ರೋವೇವ್ ಓವನ್ ಹಾಗೂ ರೆಫ್ರಿಜರೇಟರ್ ಕ್ರಾಂತಿಕಾರಿ ಸಂಶೋಧನೆ. ಆದ್ರೆ ಸದ್ಯ ಮಾರುಕಟ್ಟೆಯನ್ನು ಆಳುತ್ತಿರುವ ಉದ್ಯಮಿಗಳಲ್ಲಿ ಬಹುತೇಕ ಯಾರೂ ಅವರವರ ಉತ್ಪನ್ನಗಳ ಸೃಷ್ಟಿಕರ್ತರಲ್ಲ. ಗೂಗಲ್ ಮೊಟ್ಟಮೊದಲ ಹುಡುಕಾಟದ ಯಂತ್ರವೇನಲ್ಲ, ಫೇಸ್‍ಬುಕ್ ಕೂಡ ಪ್ರಥಮ ಸಾಮಾಜಿಕ ಜಾಲತಾಣವಲ್ಲ, ಅಮೇಝಾನ್ ಮೊದಲ ಆನ್‍ಲೈನ್ ವೆಬ್ ಅಲ್ಲ, ಆ್ಯಪಲ್ ಕೂಡ ಸ್ಮಾರ್ಟ್‍ಫೋನ್ ತಯಾರಿಸಿದ ಮೊದಲ ಕಂಪನಿಯಲ್ಲ. ಈ ಸಂಸ್ಥೆಗಳೆಲ್ಲ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿವೆ ಅಷ್ಟೆ. ಉತ್ಪನ್ನ ಅಥವಾ ಸೇವೆ ಮಾರುಕಟ್ಟೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಮಯ ಹಾಗೂ ಸಕಾಲ ನಿರ್ಣಾಯಕ.

ಸಂಪನ್ಮೂಲಗಳ ಅವಲಂಬನೆ...

ನಿರ್ಬಂಧಗಳು ಉದ್ಯಮದಲ್ಲಿ ಕೌಶಲ್ಯವನ್ನು ತರಬಲ್ಲವು. ಫ್ರೀಲಾನ್ಸರ್ ಪ್ರತಿಭೆಗಳನ್ನು ಹುಡುಕಲು, ಮೂಲಸೌಕರ್ಯ ಕಲ್ಪಿಸಲು, ಬಂಡವಾಳಶಾಹಿಗಳನ್ನು ಹುಡುಕಲು ಆನ್‍ಲೈನ್ ಅಸ್ತ್ರವಾಗಿದೆ. ಸಾಮಾಜಿಕ ಜಾಲತಾಣದ ಜೊತೆಗೆ ಸರ್ವೆ ಮಂಕಿ, ಸ್ಕ್ವೇರ್, ಗೂಗಲ್ ಟ್ರೆಂಡ್, ಹೂಟ್‍ಸೂಟ್‍ನಂತಹ ವೆಬ್‍ಸೈಟ್‍ಗಳು ಕೂಡ ಸಹಕಾರಿಯಾಗಿವೆ. ಕೆಲವರು ದೊಡ್ಡ ಉದ್ಯಮ ಆರಂಭಕ್ಕೂ ಮುನ್ನ ತಾತ್ಕಾಲಿಕವಾದುದನ್ನೂ ಶುರು ಮಾಡ್ತಾರೆ. ಆನ್‍ಲೈನ್ ವಿತರಣೆಯಲ್ಲಿ ಹೂಡಿಕೆದಾರರು ನೇರವಾಗಿ ತಮ್ಮ ವೆಬ್‍ಸೈಟ್ ಮೂಲಕವೇ ಮಾರಾಟ ಮಾಡಬಹುದು. ಇಂಟರ್ನಿಗಳು, ಸ್ಥಳೀಯ ಗ್ರಂಥಾಲಯಗಳು, ಕಾಲೇಜುಗಳು ಕೂಡ ರಕ್ಷಕ ಕವಚಗಳಂತಾಗುತ್ತವೆ. ಅದೆಷ್ಟೋ ವಿದ್ಯಾರ್ಥಿಗಳು ಕೂಡ ಉದ್ಯಮ ಆರಂಭಕ್ಕೆ ಕ್ಯಾಂಪಸ್‍ಗಳನ್ನು ಬಳಸಿಕೊಂಡಿದ್ದಾರೆ. ಸಂಸ್ಥಾಪಕರು ಗಳಿಕೆಯ ದರವನ್ನು, ವೆಚ್ಚದೊಂದಿಗೆ ದರದೊಂದಿಗೆ ಹೊಂದಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಸಂಸ್ಥಾಪಕರಿಗೆ ಕ್ರೌಡ್ ಫಂಡಿಂಗ್‍ನಲ್ಲಿ ಮೂರು ಬಗೆಯ ಅವಕಾಶಗಳಿವೆ. ಪ್ರತಿಫಲ, ಸಾಲ ಹಾಗೂ ನ್ಯಾಯ.

ಕ್ಷಿಪ್ರಗತಿಯ ಮೊದಲ ಮಾದರಿ...

ಐಡಿಯಾ ಹಾಗೂ ಪ್ರಯೋಗದ ಗುಣಮಟ್ಟ ಮತ್ತು ಪ್ರಮಾಣ ಉದ್ಯಮದ ಯಶಸ್ಸಿನ ಮೂಲ. ವೈಫಲ್ಯದಿಂದ ಕಲಿಯುವುದು ತುಂಬಾ ಇರುತ್ತೆ ಎನ್ನುತ್ತಾರೆ ಬೆರ್ನ್‍ಹಾರ್ಡ್. ಮೊದಲ ಗ್ರಾಹಕ ವಿಭಾಗದ ಆಯ್ಕೆ ಕೂಡ ಮಹತ್ವದ್ದು. ಥ್ರಿಡಿ ಪ್ರಿಂಟಿಂಗ್, ವೆಬ್‍ಸೈಟ್‍ಗಳು, ಸ್ಥಳೀಯ ಮಾರಾಟ ಕೂಡ ಮಾರುಕಟ್ಟೆ ವೇಗವನ್ನು ಅಳೆಯಲು ಸಹಕಾರಿ. ತಪ್ಪುಗಳಿಂದ ಪಾಠ ಕಲಿಯಲು ಕೂಡ ಅವಕಾಶ ಮಾಡಿಕೊಡುತ್ತದೆ. ನೀವೊಬ್ಬ ಯಶಸ್ವಿ ಉದ್ಯಮಿಯಾಗಬೇಕು ಎಂದುಕೊಂಡಿದ್ರೆ ನಿಮಗೆ ವೈಫಲ್ಯದ ಭಯ ಇರಬಾರದು. ಒಂದು ಹಂತದ ವರೆಗೆ ಅಪಾಯವನ್ನು ಎದುರಿಸುವ ಸಹನೆ ಇರಬೇಕು ಅನ್ನೋದು ಬೆರ್ನ್‍ಹಾರ್ಡ್ ಅವರ ಸಲಹೆ.

ಗ್ರಾಹಕರ ಸತ್ಯ...

ಗ್ರಾಹಕರನ್ನು ಭೇಟಿಯಾಗಲು ಸಂಸ್ಥಾಪಕರು ಬೇಸರಪಡಬಾರದು. ಎಷ್ಟು ಜನ ಉದ್ಯಮಿಗಳು ಗ್ರಾಹಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ತಿದ್ದಾರೆ? ಗ್ರಾಹಕರಿಗೆ ಯಾವುದರಲ್ಲಿ ಸಂತೋಷವಿದೆ ಅನ್ನೋದನ್ನು ಎಷ್ಟು ಮಂದಿ ಅರಿತಿದ್ದಾರೆ? ಅನ್ನೋದು ಬೆರ್ನ್‍ಹಾರ್ಡ್ ಅವರ ಪ್ರಶ್ನೆ. ಸಂಸ್ಥಾಪಕರು ಗ್ರಾಹಕರ ಸತ್ಯವನ್ನು ಅರಿಯಬೇಕು. ಸದಾಕಾಲ ನೆರವು ನೀಡುವ ಮಸ್ಥಿತಿಯೊಂದಿಗೆ ಗ್ರಾಹಕರ ಸೇವೆ ಮಾಡಬೇಕು. ಗ್ರಾಹಕರ ನಿರೀಕ್ಷೆಯನ್ನು ಅರಿಯುವುದು ನಿಜಕ್ಕೂ ಕಷ್ಟದ ಕೆಲಸ ಅನ್ನೋದು ಬೆರ್ನ್‍ಹಾರ್ಡ್‍ರ ಅಭಿಪ್ರಾಯ. ಗ್ರಾಹಕರ ಮನದಾಳವನ್ನು ಅರಿಯುವ ಪ್ರಯತ್ನ ಮಾಡಲೇಬೇಕು ಎನ್ನುತ್ತಾರೆ ಅವರು. ಮಾರ್ಕೆಟ್ ಟ್ರೆಂಡ್‍ಗಳ ಬಗ್ಗೆ ಸಂಶೋಧನೆ ನಿರಂತರವಾಗಿರಬೇಕು. ಅವರ ಜೀವನ ಶೈಲಿ, ಕೆಲಸ ಹಾಗೂ ತಂತ್ರಜ್ಞಾನ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಬದಲಿಗೆ ಅವಕಾಶವಿಲ್ಲದಂಥ ಸರಳ ಉತ್ಪನ್ನಗಳಿಗೆ ಆದ್ಯತೆ ನೀಡಿ. ಈ ಬಗ್ಗೆ ಅರಿಯಲು ಮಾರ್ಟಿ ನ್ಯೂಮರಿಯರ್ ಬರೆದ `ಬ್ರಾಂಡ್ ಗ್ಯಾಪ್' ಅಲ್ ರಿಯಾಸ್ ಮತ್ತು ಜಾಕ್ ಟ್ರಾಟ್ ಬರೆದ `ಪೊಸಿಶನಿಂಗ್' ಮತ್ತು ನೀಲ್ ರಖಮ್‍ರ `ಸ್ಪಿನ್ ಸೆಲ್ಲಿಂಗ್' ಪುಸ್ತಕಗಳನ್ನು ಓದ್ಬಹುದು.

ಕೇಸ್ ಸ್ಟಡಿ...

ಕೆಲ ಉದಾಹರಣೆಗಳೊಂದಿಗೆ ಬೆರ್ನ್‍ಹಾರ್ಡ್ ಪುಸ್ತಕವನ್ನು ಮುಗಿಸಿದ್ದಾರೆ. ಆರೋಗ್ಯಕರ ಆಹಾರ ಕಾಶಿ ಸಿರೀಲ್ಸ್ ಕೂಡ ಈ ಮಟ್ಟದ ಜನಪ್ರಿಯತೆಯನ್ನು ನಿರೀಕ್ಷಿಸಿರಲಿಲ್ಲ. ಅರ್ಧಗಂಟೆಯಲ್ಲಿ ತಯಾರಿಸಬಹುದಾದ ಆಹಾರವನ್ನು ಮೊದಲು ಉತ್ಪಾದಿಸಿತ್ತು. ಆದ್ರೀಗ ಸಂಸ್ಥೆಯ ಉತ್ಪನ್ನಗಳು ಭಾರೀ ಬೇಡಿಕೆ ಗಳಿಸಿವೆ. ವೆಬ್‍ಸೀನ್, ಎಕೋಎಟಿಎಂ, ವೊಲ್ಕೋಮ್, ಪ್ರೋ ಫ್ಲವರ್ಸ್‍ನಂತಹ ಬ್ರಾಂಡ್‍ಗಳು ಕೂಡ ನಿರೀಕ್ಷೆಗಿಂತ್ಲೂ ದುಪ್ಪಟ್ಟು ಜನಪ್ರಿಯತೆ ಗಳಿಸಿವೆ.

ಉದ್ಯಮ ಅನ್ನೋದು ಹೊಸ ಟ್ರೆಂಡ್ ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂಥ ಮನಸ್ಥಿತಿ, ಟೀಮ್‍ವರ್ಕ್ ಅನ್ನೋದು ಬೆರ್ನ್‍ಹಾರ್ಡ್ ಅವರ ಸ್ಪಷ್ಟನೆ. ಬೆರ್ನ್‍ಹಾರ್ಡ್ ಅವರ ಪುಸ್ತಕವನ್ನು ಓದಿ, ಅದರಲ್ಲಿರುವ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡ್ರೆ ಯಶಸ್ಸು ಕಠಿಣವೇನಲ್ಲ.

Related Stories