ಯಾರಿಗೂ ಬಿಟ್ಟುಕೊಡಬೇಡಿ ನಿಮ್ಮಗುಟ್ಟು- ಸ್ಯಾಲರಿ ಸ್ಲಿಪ್​ನಲ್ಲಿ ಅಡಗಿದೆ ಭವಿಷ್ಯದ ಕನಸು

ಟೀಮ್​ ವೈ. ಎಸ್​. ಕನ್ನಡ

2

ಒಂದೇ ಕಡೆ ಕೆಲಸ ಮಾಡಿ ಬೋರ್​ ಆಗುತ್ತಿದೆ. ಹೊಸ ಕೆಲಸವನ್ನು ಹುಡುಕಿ ಆಗಿದೆ. ಇನ್ನೇನು ಇಂಟರ್​ವೀವ್ಯೂ ಡೇಟ್​ ಕೂಡ ಫಿಕ್ಸ್​ ಆಗಿದೆ. ಡಾಕ್ಯುಮೆಂಟ್​ಗಳನ್ನು ಸಂಗ್ರಹಿಸಿಟ್ಟುಕೊಂಡಾಗಿದೆ. ಕಂಪನಿಯ HR, ಎಂ.ಡಿ ಅಥವಾ ಟೀಮ್​ ಲೀಡರ್​ಗಳು ಏನೇನು ಪ್ರಶ್ನೆ ಕೇಳ್ತಾರೆ ಅನ್ನುವ ಬಗ್ಗೆ ಐಡಿಯಾ ಕೂಡ ಇದೆ. ಎಲ್ಲವೂ ಸಿದ್ಧವಾಗಿದೆ. ಆದರೆ ಕೆಲಸಕ್ಕೆ ಸೇರಿಕೊಳ್ಳುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು. ಯಾಮಾರಿದ್ರೆ ನಿಮ್ಮ ಭವಿಷ್ಯಕ್ಕೆ ಮತ್ತು ಅಭಿವೃದ್ಧಿಗೆ ಕೊಡಲಿಯೇಟು ಬೀಳುವುದು ಗ್ಯಾರೆಂಟಿ.

ಬುದ್ಧಿವಂತಿಕೆಯಿಂದ ಉತ್ತರಿಸಿ..!

ಕೆಲಸ ಬದಲಿಸುವುದು, ಇನ್ನೊಂದು ಫೀಲ್ಡ್​ನಲ್ಲಿ ಕೆಲಸಕ್ಕಾಗಿ ಟ್ರೈ ಮಾಡೋದು ಕಾಮನ್. ಆದ್ರೆ ಕೆಲಸಕ್ಕಾಗಿ ಇಂಟರ್​ವೀವ್ಯೂಗೆ ಹೋಗೋದಿದ್ಯಾಲ್ಲ ಅದು ದೊಡ್ಡ ನಿರ್ಧಾರದ ಕ್ಷಣ. ಇಂಟರ್​ವೀವ್ಯೂವ್​ನಲ್ಲಿ ಕೆಲಸದಾತರಿಂದ ಒಂದಷ್ಟು ಪ್ರಶ್ನೆಗಳು ಬರುತ್ತವೆ. ಅನುಭವ ಮತ್ತು ನಾವು ನೀಡಬಲ್ಲ ಕೊಡುಗೆಗಳ ಬಗ್ಗೆ ಸಾಮಾನ್ಯವಾಗಿ ಮಾತುಕತೆ ನಡೆಯುತ್ತದೆ. ಎಲ್ಲಾ ಔಪಚಾರಿಕ ಮಾತುಗಳ ನಂತರ ಇನ್ನೊಂದು ಪ್ರಶ್ನೆ ಬಂದೇ ಬರುತ್ತದೆ. ನೀವ್ಯಾಕೆ ಈ ಕಂಪನಿಗೆ ಸೇರಲು ಬಯಸಿದ್ದೀರಾ..? ಹಿಂದಿನ ಕೆಲಸ ಬಿಡಲು ಕಾರಣವಾದ್ರೂ ಏನು..? ಅನ್ನೋದು ಸಾಮಾನ್ಯ. ಆದ್ರೆ ಕೊನೆಯಲ್ಲಿ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಹಳೆಯ ಸಂಸ್ಥೆಯಲ್ಲಿನ ಸ್ಯಾಲರಿ ಸ್ಲಿಪ್ ನೀಡಬಹುದಾ..? ಅನ್ನೋ ಪ್ರಶ್ನೆ ಇಂಟರ್ವೀವ್ಯೂಗೆ ಹೋದವನ ಮನಸ್ಸನ್ನು ಒಂಚೂರು ಒಡೆದು ಬಿಡುತ್ತದೆ.

ಆರಂಭದಲ್ಲಿ ಎದುರಾಗುವ ಕೆಲವು ಪ್ರಶ್ನೆಗಳಿಗೆ ನೀವು ಬುದ್ಧಿವಂತಿಕೆ ಮೂಲಕ ಉತ್ತರ ನೀಡಬಹುದು. ಅವುಗಳು ನಿಮಗೆ ಬೇರೆಯೇ ಫೀಲ್ ಕೊಡಬಹುದು. ಆದ್ರೆ ಕೊನೆಯಲ್ಲಿ ಎದುರಾಗುವ ಬರುವ ಸ್ಯಾಲರಿ ಸ್ಲಿಪ್​ನ ಪ್ರಶ್ನೆ ನಿಜಕ್ಕೂ ಸಾಮಾನ್ಯ ಸಂಗತಿಯ ಮೂಡ್​ನಿಂದ ಪ್ರೊಫೆಷನಲ್ ವಿಷಯಗಳ ಮೂಡ್​ಗೆ ತಿರುಗಿಸಿಬಿಡುತ್ತದೆ. ಕೆಲವೊಮ್ಮೆ ಸ್ಯಾಲರಿ ಸ್ಲಿಪ್ ಒದಗಿಸಿಕೊಡುವುದು ಕಂಪನಿಯ ಬೇಡಿಕೆ ಕೂಡ ಆಗಿರುತ್ತದೆ. ಆದ್ರೆ ಇದು ಕಂಪನಿ ಕೆಲಸ ನೀಡುವ ವಿಚಾರದಲ್ಲಿ ಕಡ್ಡಾಯವೂ ಆಗಿರುತ್ತದೆ. ಆದ್ರೆ ನಿಮಗೇನಾದ್ರೂ ಧೈರ್ಯ ಇದ್ರೆ ಸ್ಯಾಲರಿ ಸ್ಲಿಪ್ ನೀಡದೇ ಕೆಲಸಕ್ಕೆ ಸೇರುವ ಬಗ್ಗೆ ಮಾತುಕತೆ ಆಡಬಹುದು. ಅಷ್ಟೇ ಅಲ್ಲ ಸ್ಯಾಲರಿ ಸ್ಲಿಪ್ ಕೇಳುವ ಆಫರ್​ ಅನ್ನು ತಿರಸ್ಕರಿಸಲು ಕೂಡ ಸಾಧ್ಯ.

ಇದನ್ನು ಓದಿ: ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

ಕೆಲಸದಲ್ಲಿ ಅನುಭವ ಕಡಿಮೆ ಇರುವ ಅಭ್ಯರ್ಥಿಗಳು ಸ್ಯಾಲರಿ ಸ್ಲಿಪ್ ಕೇಳದ ತಕ್ಷಣ ಸ್ವಲ್ಪ ಗಾಬರಿ ಆಗುವುದು ಮಾಮೂಲಿ. ಆದ್ರೆ ಕೆಲಸದ ಅನಿವಾರ್ಯತೆ ಸ್ಯಾಲರಿ ಸ್ಲಿಪ್ ನೀಡುವಂತೆ ಮಾಡುತ್ತದೆ. ಕೆಲವೊಮ್ಮೆ ಕಂಪನಿಯ ಕಡ್ಡಾಯ ನಿಯಮಗಳಿಗೆ ಹೊಂದಿಕೊಂಡು ಹೋದರೆ, ಬೇಗನೆ ಕೆಲಸ ಸಿಗುತ್ತದೆ ಅನ್ನುವ ಭಾವನೆಯೂ ನಮ್ಮಲ್ಲಿದೆ ಅನ್ನೋದು ಸುಳ್ಳಲ್ಲ. ಆದ್ರೆ ಅನುಭವಸ್ಥರು ಈ ಸ್ಯಾಲರಿ ಸ್ಲಿಪ್​ಗಳ ವಿಚಾರದಲ್ಲಿ ರಾಜಿ ಆಗುವುದು ಬಹುತೇಕ ಕಡಿಮೆ. ಕೆಲಸದಲ್ಲಿ ಅನುಭವ ಪಡೆದವರು ಕೆಲಸಕ್ಕೆ ಸೇರಿಸಿಕೊಳ್ಳುವವರನ್ನು ತಮ್ಮ ಬುದ್ಧಿ ಮತ್ತು ಚಾಣಾಕ್ಷತೆಯಿಂದ ಗೆಲ್ಲುವಂತಹ ಪ್ರಯತ್ನ ಮಾಡುತ್ತಾರೆ. ಆದ್ರೆ ಕೊನೆಯಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳನ್ನು ಸ್ಯಾಲರಿ ಸ್ಲಿಪ್ ಮೂಲಕ ಸುಲಭವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ.

ಬಹುತೇಕ ಕಂಪನಿಗಳು ಹಿಂದಿನ ಸ್ಯಾಲರಿ ಡಾಕ್ಯುಮೆಂಟ್​ಗಳನ್ನು ಕೇಳುತ್ತವೆ. ಇಂತಹ ಕಂಪನಿಗಳಿಗೆ ನೀವು ಸ್ಯಾಲರಿ ಡಾಕ್ಯುಮೆಂಟ್​ಗಳನ್ನು ಕೊಡಲಾಗುವುದಿಲ್ಲ ಅನ್ನುವ ಉತ್ತರ ನೀಡಿದರೆ ಉತ್ತಮ. ಯಾಕಂದ್ರೆ ಸ್ಯಾಲರಿ ಚರ್ಚೆಯ ವೇಳೆ ಹಳೆಯ ಸಂಬಳವನ್ನು ತಾಳೆ ಹಾಕಿ ಹೊಸ ಸಂಬಳವನ್ನು ನಿರ್ಧಾರ ಮಾಡಲು ಈ ಸ್ಯಾಲರಿ ಸ್ಲಿಪ್ ದೊಡ್ಡ ಅಸ್ತ್ರವಾಗುತ್ತದೆ. ಕೆಲವೊಮ್ಮೆ ಕಂಪನಿಯಯ ನಿಯಮ ಅಂತ ನಿಮ್ಮಲ್ಲಿ ಹೇಳಬಹುದು. ಆದ್ರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಜ ಏನು ಅಂದ್ರೆ ಸ್ಯಾಲರಿ ಸ್ಲಿಪ್​ನಂತಹ ಚಿಕ್ಕ ವಿಚಾರದಲ್ಲಿ ನೀವು ಎಡವಿದ್ರೆ, ನಿಮ್ಮ ಸಂಬಳದ ಚರ್ಚೆ ಬೇಗನೆ ಕೊನೆಯಾಗುತ್ತದೆ. ಉದಾಹರಣೆಗೆ ನೀವು ಹಳೆಯ ಕೆಲಸದಲ್ಲಿ 35000 ರೂಪಾಯಿ ಸಂಬಳ ಪಡೆಯುತ್ತೀದ್ದೀರಿ ಅಂತ ಇಟ್ಟುಕೊಳ್ಳೋಣ. ಹೊಸ ಕಂಪನಿಯಲ್ಲಿ ನೀವು 45000 ರಿಂದ 50,000 ರೂಪಾಯಿ ಸಂಬಳದ ಬೇಡಿಕೆ ಇಡುತ್ತೀರಿ. ಈ ಹಂತದಲ್ಲಿ ನೀವು ಸ್ಯಾಲರಿ ಸ್ಲಿಪ್ ಕೊಟ್ಟಿದ್ದೇ ಆದಲ್ಲಿ ಕಂಪನಿ ನಿಮ್ಮ ಸಂಬಳವನ್ನು 40000ಕ್ಕೆ ಮಿತಗೊಳಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಅಲ್ಲಿಗೆ ನಿಮಗೆ ಸ್ಯಾಲರಿ ಸ್ಲಿಪ್ ವಿಷದಿಂದ ಸುಮಾರು 5000 ರೂಪಾರಿ ಕಡಿಮೆ ಸಿಗುತ್ತದೆ.

ಈಗ ಕಂಪನಿ ಕಡ್ಡಾಯ ಅನ್ನುವ ಸ್ಯಾಲರಿನ ಸ್ಲಿಪ್​ ಅನ್ನು ನೀಡುವುದಿಲ್ಲ ಅನ್ನುವುದು ಹೇಗೆ ಅನ್ನುವ ಪ್ರಶ್ನೆ ಮೂಡುತ್ತದೆ. ಅದು ಕೂಡ ಸಿಂಪಲ್. ಹ್ಯೂಮನ್ ವರ್ಕ್​ಪ್ಲೇಸ್ ಸಂಸ್ಥಾಪಕ ಮತ್ತು ಸಿಇಒ ಲಿಝ್ ರ್ಯಾನ್ ಹೇಳುವ ಹಾಗೆ, ನನ್ನ ಕಳೆಯ ಉದ್ಯೋಗದಾತರು ನನ್ನ ಸಂಬಳ ಗುಪ್ತವಾಗಿರಬೇಕು ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈಗ ನಾನು ಈಗ ನಿಮಗೆ ಸ್ಯಾಲರಿ ಸ್ಲಿಪ್ ನೀಡಲಿ..?ಅನ್ನುವ ಪ್ರಶ್ನೆಯನ್ನು ಕೇಳಿದರೆ, ಉದ್ಯೋಗದಾತರು ಕೂಡ ಒಂಚೂರು ಕಾಂಪ್ರಮಮೈಸ್ ಆಗಬಹುದು.

ಇಷ್ಟರ ನಂತರ ನಿಯಮಗಳ ವಿಚಾರದಲ್ಲಿ ಸ್ಯಾಲರಿ ಸ್ಲಿಪ್ ಕಡ್ಡಾಯ ಅಂದ್ರೆ ನೀವು ಇನ್ನೂ ಒಂದು ಮುಂದಕ್ಕೆ ಹೋಗಬಹುದು. ಹಳೆಯ ಕಂಪನಿಯು ಸ್ಯಾಲರಿ ವಿಚಾರವನ್ನು ಎಲ್ಲೂ ತಿಳಿಸದಂತೆ ಹೇಳೊದೆ. ನಿಮ್ಮ ಕಂಪನಿಯ ಆಫರ್ ಬಗ್ಗೆಯೂ ಅವರ ಬಳಿ ಹೇಳಿದರೆಹಳೆಯ ಕಂಪನಿಗೂ ಇರುಸುಮುರುಸಾಗುತ್ತದೆ ಅನ್ನೊದನ್ನು ತಿಳಿಸಿಕೊಡಿ. ಅಷ್ಟೇ ಅಲ್ಲ ನಿಮಗೆ ನನ್ನ ಬೇಡಿಕೆಯ ಸಂಬಳಕೊಡಲು ಸಾಧ್ಯವಿದೆಯೋ ಇಲ್ವೋ ಅನ್ನೋದನ್ನ ಕಂಪನಿಯ HRಗೆ ಕೇಳಿಬಿಡಿ. ಒಂದು ವೇಳೆ ನಿಮ್ಮ ಪ್ರಶ್ನೆಯ ನಂತರ ಅವರ ಮುಖದಲ್ಲಿ ಸಂದೇಹ ಮೂಡಿದರೆ, ಹೊಸ ಕೆಲಸದ ಆಸೆಯನ್ನು ಕೈ ಬಿಟ್ಟುಬಿಡಿ. ಒಂದುವೇಳೆ ನಿಮ್ಮ ಇಂಟರ್ ವೀವ್ಯೂ ಮತ್ತೆ ಮುಂದುವರೆದರೆ, ನೀವು ನಿಮ್ಮ ಕೆಲಸದ ರೇಸ್​ನಲ್ಲಿ ಇದ್ದಿರಿ ಅನ್ನುವುದೇ ಗೂಡಾರ್ಥ.

“ಸ್ಯಾಲರಿ ಸ್ಲಿಪ್ ಚರ್ಚೆ ಇಂಟರ್ ವೀವ್ಯೂನ ಮೊದಲ ಕೆಲವೇ ನಿಮಿಷಗಳಲ್ಲಿ ಬಂದು ಬಿಡುತ್ತದೆ. ಈ ಮೂಲಕ ನಿಮ್ಮ ಡೇಟಾಗಳನ್ನು ಸಂಗ್ರಹಿಸುವ ಕೆಲಸ ಇದಾಗಿರುತ್ತದೆ. ಕಂಪನಿಯ ನಿಯಮ ಅನ್ನುವುದು ಸುಮ್ಮನೆ ಹೇಳುವ ಮಾತಾಗಿರುತ್ತದೆ.”
- ರ್ಯಾನ್, ಹ್ಯೂಮನ್ ವರ್ಕ್​ಪ್ಲೇಸ್ ಸಂಸ್ಥಾಪಕ ಮತ್ತು ಸಿಇಒ

ಕೆಲವೊಂದು ಆನ್​ಲೈನ್ ಕೆಲಸದ ಅಪ್ಲಿಕೇಷನ್​ಗಳಲ್ಲಿ ಕಡ್ಡಾಯವಾಗಿರುವ ಪ್ರಸ್ತುತ ಸಂಬಳವನ್ನು ನಮೂದಿಸಬೇಕಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನೇರವಾಗಿ ಆ ಕಂಪನಿಯನ್ನು ಫೋನ್ ಮೂಲಕವೋ ಅಥವಾ ಇ-ಮೇಲ್ ಮೂಲಕವೋ ಸಂಪರ್ಕಿಸುವುದು ಅತ್ಯುತ್ತಮ. ಹೀಗೆ ಮಾಡಿದರೆ ಮೂರನೇ ವ್ಯಕ್ತಿಗೆ ನಿಮ್ಮ ಡೇಟಾ ಕೈಗೆ ಸಿಗುವುದು ತಪ್ಪುತ್ತದೆ.ಅಚ್ಚರಿ ಅಂದ್ರೆ ಬಹುತೇಕ ಎಲ್ಲಾ ಕಂಪನಿಗಳಲ್ಲಿ ಒಂದೊಂದು ಹುದ್ದೆಗೂ ಒಂದೊಂದು ಸಂಬಳ ಫಿಕ್ಸ್ ಆಗಿರುತ್ತದೆ. ನೀವು ಆ ಕೆಲಸಕ್ಕೆ ಸೇರಿಕೊಂಡರೆ ಅಷ್ಟು ಗರಿಷ್ಟ ಅಂದ್ರೆ ಆ ಹುದ್ದೆಗೆ ಸಿಗುವಷ್ಟೇ ಸಂಬಳ ಸಿಗುತ್ತದೆ. ಹೀಗಿದ್ದರೂ ಸ್ಯಾಲರಿ ಸ್ಲಿಪ್ ಯಾಕೆ ಅನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.

ನಿಮ್ಮ ಬಯೋಡಾಟವನ್ನು ಹೊಸ ಕಂಪನಿಗೆ ಕೊಡಬೇಕು. ನಿಮ್ಮ ಸಾಧನೆಗಳ ವಿವರವನ್ನು ತಿಳಿಸುವುದು ತಪ್ಪಲ್ಲ. ನಿಮ್ಮಿಂದ ಕಂಪನಿಗೆ ಏನು ಲಾಭವಾಗುತ್ತದೆ ಅನ್ನೋದನ್ನ ಮನದಟ್ಟು ಮಾಡಿಕೊಡಿ. ಆದರೆ ನಿಮ್ಮ ವೈಯಕ್ತಿಕವಾಗಿರುವ ಸ್ಯಾಲರಿ ಸ್ಲಿಪ್ ಗುಟ್ಟನ್ನು ಬಿಟ್ಟುಕೊಟ್ಟರೆ ಅದು ಯಾವ ರೀತಿಯಲ್ಲೂ ಒಳ್ಳೆಯದು ಅಂತ ಅನಿಸುವುದಿಲ್ಲ.

ಇದನ್ನು ಓದಿ:

1. ಅಂಕಿಅಂಶದ ಕಡೆಗೆ ಗಮನ- ಪಕ್ಕಾ ಲೆಕ್ಕ ಕೊಡ್ತಾರೆ ರೇಣುಕಾ ಮತ್ತು ಅರ್ಚನಾ..!

2. 13ನೇ ವರ್ಷಕ್ಕೆ ಶಾಲೆ ಬಿಟ್ರೂ ಹಠ ಬಿಡಲಿಲ್ಲ- ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ ಆಶಾ ಕೆಮ್ಕಾ

3. ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

Related Stories