ರುಚಿಯಿಂದ ಫೇಮಸ್​..ಗ್ರಾಹಕ ಸೇವೆಯಲ್ಲಿ ಸೂಪರ್​ ಸರ್ವೀಸ್​.. ಬಿರಿಯಾನಿಗೆಂದೇ ಅಮ್ಮಿಸ್​ ಸ್ಪೆಷಲ್​ ಪ್ಲೇಸ್​

ಟೀಮ್​ ವೈ.ಎಸ್​.ಕನ್ನಡ

0

ಹೊಟೇಲ್​ ಬ್ಯುಸಿನೆಸ್​ ಇತ್ತೀಚಿನ ದಿನಗಳಲ್ಲಿ ಲಾಭದತ್ತ ಮುಖ ಮಾಡುತ್ತಿವೆ. ಚಿಕ್ಕದಾಗಿ ಹೊಟೇಲ್​ ಆರಂಭಿಸಿದವರು 5ಸ್ಟಾರ್​ ಹೊಟೇಲ್​ಗಳನ್ನು ಕಟ್ಟಿದ ಕಥೆಯನ್ನೂ ಯುವರ್​ಸ್ಟೋರಿಯಲ್ಲಿ ಓದಿದ್ದೇವೆ. ಕೆಲವು ಹೊಟೇಲ್​ಗಳು ಹೆಸರಿನ ಮೂಲಕ ಮುಂದೆ ಬಂದ್ರೆ, ಇನ್ನು ಕೆಲವು ಕೇವಲ ಜನರ ಆಕರ್ಷಣೆಯಿಂದ ಲಾಭ ಮಾಡಿಕೊಂಡಿವೆ. ಆದ್ರೆ ಗ್ರಾಹಕರ ಮನಸ್ಸಿನಲ್ಲಿ ಸದಾ ಸ್ಥಾನ ಪಡೆಯುವುದು ಅದ್ಭುತ ರುಚಿ ಕೊಟ್ಟ ಹೊಟೇಲ್​ಗಳು ಮಾತ್ರ. ಒಮ್ಮೆ ಊಟ ಮಾಡಿದ್ರೆ ಅಥವಾ ಹೊಟ್ಟೆ ತುಂಬಿಸಿಕೊಂಡ್ರೆ ಮತ್ತೊಮ್ಮೆ ಅಲ್ಲಿಗೇ ಕರೆಸಿಕೊಂಡು ಊಟ ಮಾಡಿಸುವಷ್ಟು ಅದ್ಭುತ ರುಚಿಯನ್ನು ಕೊಡುವ ಹೊಟೇಲ್​ಗಳು ಬೆಂಗಳೂರಿನಲ್ಲಿ ಬೇಕಾದಷ್ಟು ಸಿಗುತ್ತವೆ.

ನಗರದಲ್ಲಿ ಬಿರಿಯಾನಿ ಹೆಸರಿನಲ್ಲೇ ಬಹಳಷ್ಟು ಹೋಟೆಲ್, ರೆಸ್ಟೊರೆಂಟ್​ಗಳಿವೆ. ಆದರೆ ಒಳ್ಳೆ ರುಚಿ ಮಾತ್ರ ಎಲ್ಲ ಕಡೆ ಸಿಗುವುದಿಲ್ಲ. ಕೆಲ ಹೊಟೇಲ್​ಗಳು ಮಾತ್ರ ತೀರಾ ವಿಭಿನ್ನ. ಇಲ್ಲಿ ಒಮ್ಮೆ ಬಿರಿಯಾನಿ ತಿಂದರೆ ಮುಗೀತು. ಅವರು ಆ  ಹೊಟೇಲ್​ಗೆ​ ಖಾಯಂ ಗ್ರಾಹಕರಾಗಿ ಬರಬೇಕು ಅನ್ನೋ ಹಾಗೇ ಮಾಡುತ್ತವೆ. ಅಂತಹ ಹೊಟೇಲ್​ಗಳ ಪೈಕಿ ತುಂಬಾ ಪರಿಚಿತವಾಗಿರೋದು ಮತ್ತು ಫೇಮಸ್​ ಆಗಿರೋದು 'ಅಮ್ಮಿಸ್ ಬಿರಿಯಾನಿ' ರೆಸ್ಟೊರೆಂಟ್.

ಇದನ್ನು ಓದಿ: ಆಹಾರೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ರಾಜು ಭೂಪತಿ

ಅಮ್ಮಿಸ್​ಗೆ ಬರುವ ಗ್ರಾಹಕರು ಬರುವ ಬಹಳಷ್ಟು ಮಂದಿ ಬಿರಿಯಾನಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬಾಸುಮತಿ ಅನ್ನದೊಂದಿಗೆ ಮಸಾಲೆಯುಕ್ತ ಮಾಂಸವನ್ನು ಸವಿಯುತ್ತಿದ್ದರೆ ರುಚಿ ಮೊಗ್ಗು ಅರಳುತ್ತವೆ. ಒಮ್ಮೆ ಬಿರಿಯಾನಿ ತಿಂದವರು ಮತ್ತೊಮ್ಮೆ ತಿನ್ನಬೇಕು ಎನಿಸುತ್ತದೆ. ಅಂತಹ ಅದ್ಭುತ ರುಚಿ ಈ ಹೊಟೇಲ್​ನಲ್ಲಿ ಸಿಗುತ್ತದೆ.

8ವರ್ಷದ ಹರುಷ.. 44 ಶಾಖೆಗಳ ಸಂಭ್ರಮ..!

ಬೆಂಗಳೂರಿನ ಕೋರಮಂಗಲದಲ್ಲಿ 2008ರಲ್ಲಿ ನವಾಜ್ ಷರೀಫ್ ಅವರು ಮೊದಲ ಬಾರಿಗೆ ಅಮ್ಮಿಸ್ ಬಿರಿಯಾನಿ ರೆಸ್ಟೋರೆಂಟ್​​ ಆರಂಭಿಸಿದರು. ಇದೀಗ 8ನೇ ವರ್ಷಕ್ಕೆ ಕಾಲಿಟ್ಟಿದ್ದು, ನಗರದ ವಿವಿಧೆಡೆ 44 ಶಾಖೆ ಹೊಂದಿದೆ. ಕೇರಳ ಶೈಲಿಯ ಥಲಸೇರಿ ಚಿಕನ್ ಬಿರಿಯಾನಿ, ಸ್ಪೈಸಿ ಆಂಧ್ರ ಚಿಕನ್ ಬಿರಿಯಾನಿ ಅಮ್ಮಿಸ್​ ಬಿರಿಯಾನಿ ವಿಶೇಷ. ಮತ್ತೊಂದು ವಿಶೇಷತೆಯೆಂದರೆ ಆರ್ಡರ್ ಮಾಡಿದ 45 ನಿಮಿಷಗಳ ಒಳಗೆ ನಿಮ್ಮ ಮನೆ ಬಾಗಿಲಿಗೆ ಬಿರಿಯಾನಿ ತಲುಪಿಸುವ ವ್ಯವಸ್ಥೆ ಇದೆ. ಆಹಾರವನ್ನು ಪ್ಯಾಕ್ ಮಾಡುವ ರೀತಿ, ಗುಣಮಟ್ಟ ಕಾಪಾಡಿಕೊಳ್ಳುವುದು ಮತ್ತು ವೇಗದ ಡೆಲಿವರಿಗೆ ಆದ್ಯತೆ ನೀಡಿದ್ದು,ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

" ರುಚಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ರೆಸ್ಟೊರೆಂಟ್ ನಡೆಸುತ್ತಿರುವುದು ನಮ್ಮ ವಿಶೇಷ. ಪ್ರತಿದಿನವೂ ಮಾಂಸ, ಚಿಕನ್ ಹಾಗೂ ತರಕಾರಿಯನ್ನು ಫ್ರೆಶ್ ಆಗಿ ತರುತ್ತೇವೆ. ಫ್ರಿಡ್ಜ್​ನಲ್ಲಿಟ್ಟ ಮಾಂಸವನ್ನು ಬಳಸುವುದಿಲ್ಲ. ರೆಸ್ಟೊರೆಂಟ್​ಗೆ ಬರುವ ಮಾಂಸವನ್ನು ಗುಣಮಟ್ಟ ತಂಡದವರು ಪರೀಕ್ಷಿಸುತ್ತಾರೆ. ಹಾಗಾಗಿಯೇ ನಾವು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ."
                           - ದೀಪಾಂಜನ್ ದೇ, ಅಮ್ಮಿಸ್​ ಬಿರಿಯಾನಿ ಸಿಇಒ

ಅಮ್ಮಿಸ್​ ರೆಸ್ಟೋರೆಂಟ್​ನಲ್ಲಿ ಬಿರಿಯಾನಿಗೆ ಬಳಸುವ ಅಕ್ಕಿ ಕೂಡ ಅದ್ಭುತವಾಗಿರುತ್ತೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಉದ್ದ ಕಡಿಮೆ ಇರುವ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಮನೆ ರುಚಿಯನ್ನು ಗ್ರಾಹಕರಿಗೆ ಕೊಡಬೇಕೆಂಬುದೇ 'ಅಮ್ಮಿಸ್ ಬಿರಿಯಾನಿ'ಯ ಮೊದಲ ಆಧ್ಯತೆ.

ಅಮ್ಮಿಸ್​ನಲ್ಲಿ ವೆರೈಟಿ ರುಚಿ...

ಅಮ್ಮಿಸ್ ಬಿರಿಯಾನಿಯಲ್ಲಿ , ಥಲಸೇರಿ ಬಿರಿಯಾನಿ, ಸ್ಪೈಸಿ ಆಂಧ್ರ ಬಿರಿಯಾನಿ, ಎಕ್ಸಿಕ್ಯೂಟಿವ್ ಹೈದರಾಬಾದಿ ಬಿರಿಯಾನಿ ವಿಭಾಗದಲ್ಲಿ ವೆಜ್ ಬಿರಿಯಾನಿ, ಚಿಕನ್ ಬಿರಿಯಾನಿ, ಎಗ್ ಬಿರಿಯಾನಿ ಆಯ್ಕೆಗಳಿವೆ. ಮೂರರಿಂದ ನಾಲ್ಕು ಮಂದಿಗೆ ಆಗುವಷ್ಟು ಊಟದ ಫ್ಯಾಮಿಲಿ ಪ್ಯಾಕ್, 7ರಿಂದ 8ಮಂದಿಗೆ ಪಾರ್ಟಿ ಪ್ಯಾಕ್ ಸೌಲಭ್ಯಗಳಿವೆ.

ಮಧ್ಯಾಹ್ನ 3ರಿಂದ 7ರವರೆಗೆ ಸ್ನ್ಯಾಕ್ಸ್ ಲಭ್ಯವಿರುತ್ತದೆ. ಹಲವು ಕೂಲ್ ಡ್ರಿಂಕ್ಸ್, ವಿವಿಧ ಸಸ್ಯಹಾರಿ ಪದಾರ್ಥಗಳಿವೆ. ಆದರೆ ಬಿರಿಯಾನಿ ಬಹಳಷ್ಟು ಜನರ ಫೇವರೇಟ್. ಹಲವು ಬಿರಿಯಾನಿಗಳನ್ನು ಜನರಿಗೆ ಇಷ್ಟವಾಗುವಂತೆ ಮಾಡಿಕೊಡುವುದು ಅಮ್ಮಿಸ್ ಬಿರಿಯಾನಿ ವಿಶೇಷತೆಯಾಗಿದೆ, 8 ವರ್ಷದಿಂದ ಅನೇಕ ಜನರ ಫೇವರೇಟ್ ಆಗಿರುವ ಅಮ್ಮಿಸ್ ಬಿರಿಯಾನಿ, ಗ್ರಾಹಕರ ರುಚಿಗೆ ತಕ್ಕಂತೆ ಕೆಲವೊಂದು ಬದಲಾವಣೆ ಮಾಡಿಕೊಂಡಿದೆ. ಹಾಗಾಗಿ ನಾವು ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿಗಳು.

ರುಚಿ ಒಂದೇ ಕೊಟ್ರೆ ಗ್ರಾಹಕರು ಮರಳಾಗುವುದಿಲ್ಲ. ಜೊತೆಗೆ ಅದ್ಭುತ ಸರ್ವೀಸ್​ನ್ನು ಕೂಡ ಅಮ್ಮಿಸ್​ ಕೊಡಬೇಕಾಗುತ್ತದೆ. ಹೀಗಾಗಿ ಕಸ್ಟಮರ್​ಗಳನ್ನು ಅಮ್ಮಿಸ್​ ದೇವರಂದೇ ಭಾವಿಸುತ್ತದೆ. ಹೋಮ್​ ಡೆಲಿವರಿ ಸಂದರ್ಭಗಳಲ್ಲಿ ಸ್ವಲ್ಪ ಲೇಟ್​ ಆದ್ರೂ ಆರ್ಡರ್​ ಮಾಡಿದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಕ್ಷಮೆ ಇರಲಿ ಅಂತ ವಿನಯವಾಗಿ ಕೇಳಿ ಗ್ರಾಹಕರ ಮನ ಗೆಲ್ಲುತ್ತಾರೆ. ಅಮ್ಮಿಸ್​ ಬಿರಿಯಾನಿಯ ಟೇಸ್ಟ್​ ನೋಡಿದವರಿಗೆ ಮತ್ತೆ ಅಲ್ಲಿಗೇ ಹೋಗಬೇಕೆನ್ನುವ ಮನಸ್ಸಾಗೋದ್ರಲ್ಲಿ ಅನುಮಾನವಿಲ್ಲ. ಅಮ್ಮಿಸ್​ನಲ್ಲಿ ಮೊದಲ ಬಾರಿ ಬಿರಿಯಾನಿ ಟ್ರೈ ಮಾಡಬೇಕು ಅನ್ನುವವರು ಕೂಡ ಲೇಟ್​ ಮಾಡದೆ ಟೇಸ್ಟ್​ ಮಾಡಿ ಅನ್ನೋದು ನಮ್ಮ ಅಡ್ವೈಸ್​​.

ಇದನ್ನು ಓದಿ: 

1. 30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್: ಅಮೆರಿಕಾದಲ್ಲಿ ಓದಿದ ವೈದ್ಯನ ಸಾಹಸ..!

2. ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

3. ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್​​ಗಳಿಗೇ ಟೀಚರ್....

Related Stories