ಸಾಕುಪ್ರಾಣಿಗಳಿಗೊಂದು ಬೇಕರಿ

ಅಗಸ್ತ್ಯ

0

ನೀವು ಮನೆಯಲ್ಲಿರುವಷ್ಟೂ ಹೊತ್ತು ನಿಮ್ಮ ಜೊತೆ ಇದ್ದು ನಿಮ್ಮನ್ನು ಖುಷಿಯಾಗಿರಿಸುವ ನಿಮ್ಮ ಮುದ್ದಿನ ನಾಯಿ, ನೀವು ಮನೆಗೆ ಬಂದು ಕೂತ ಕೂಡಲೆ ನಿಮ್ಮ ಕಾಲ ಮೇಲೆ ಬಂದು ಕೂರುವ ನಿಮ್ಮ ಪ್ರೀತಿಯ ಬೆಕ್ಕಿಗೆ ನೀವು ಏನಾದರೂ ಸರ್ಪೈಸ್ ಕೊಡ್ಬಹುದು. ಅವುಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು. ನಿಮ್ಮ ನಾಯಿ ಅಥವಾ ಬೆಕ್ಕಿಗೆಂದೇ ತಯಾರಿಸಿದ ಕೇಕ್ ತಂದು ಅದರ ಮೇಲೆ ನಿಮ್ಮ ಪ್ರೀತಿಯ ಪ್ರಾಣಿಯ ಹೆಸರನ್ನು ಬರೆದು ಬರ್ತ್‍ಡೇ ಆಚರಿಸಬಹುದು.

ಸಾಕುಪ್ರಾಣಿಗಳ ಬೇಕರಿ:

ಇಂತಹದ್ದೊಂದು ವ್ಯವಸ್ಥೆಯನ್ನು ನಿಮಗೆ ಡಾಗ್ ಅಪಿಟೈಟ್ ಅಥವಾ ಬೋನ್ ಅಪಿಟೈಟ್ ಎಂಬ ಬೇಕರಿ ನೀಡುತ್ತಿದೆ. ಈ ಬೇಕರಿಯ ವಿಶೇಷತೆ ಏನೆಂದರೆ ಇದು ಸಾಕುಪ್ರಾಣಿಗಳಿಗಾಗಿಯೇ ಇರುವ ಬೇಕರಿ. ಇಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆಂದೇ ಕೇಕ್, ಕುಕೀಸ್ ಸೇರಿದಂತೆ ಎಲ್ಲಾ ರೀತಿಯ ತಿಂಡಿಗಳನ್ನು ತಯಾರಿಸಿ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ನಾವು ತಿನ್ನಲು ಮನೆಗೆ ತರುವ ಕೇಕ್ ಅಥವಾ ಬಿಸ್ಕಿಟ್‍ಗಳನ್ನು ಸಾಕು ಪ್ರಾಣಿಗಳಿಗೂ ನೀಡುತ್ತೇವೆ. ಆದರೆ ಸಾಕುಪ್ರಾಣಿಗಳಿಗೆ ಅಂತಲೇ ಕೇಕ್ ತರಿಸುವುದು ಕಡಿಮೆ. ಈ ಬೇಕರಿಯಲ್ಲಿ ನೇ ಸಿಕ್ಕಿದರೂ ಅದು ಸಾಕು ಪ್ರಾಣಿಗಳಿಗಾಗಿ ಮಾತ್ರ.

ರುಚಿಗೆ ಅನುಗುಣವಾದ ತಿಂಡಿ:

ನಾಯಿ, ಬೆಕ್ಕುಗಳ ರುಚಿಯೇ ಬೇರೆ. ಅವು ಏನು ತಿನ್ನುತ್ತವೆ, ಯಾವುದು ಇಷ್ಟವಾಗುತ್ತವೆ ಎನ್ನುವುದು ನಮಗೆ ಕೆಲವೊಮ್ಮೆ ತಿಳಿಯುವುದಿಲ್ಲ. ಆದರೆ, ಡಾಗ್ ಅಪಿಟೈಟ್ ಅಥವಾ ಬೋನ್ ಅಪಿಟೈಟ್ ಸಾಕು ಪ್ರಾಣಿಗಳ ಇಷ್ಟಕ್ಕೆ, ಅವುಗಳ ರುಚಿಗೆ ತಕ್ಕಂತೆ ಬೇಕರಿ ತಿಂಡಿಗಳನ್ನು ತಯಾರಿಸುತ್ತದೆ. ನೀವು ನಿಮ್ಮ ಸಾಕುಪ್ರಾಣಿಗಳಿಗೆ ಏನು ತಿಂಡಿ ಬೇಕು ಅಂತ ಹೇಳಿದರೆ ಸಾಕು ಆ ತಿಂಡಿಗಳನ್ನು ತಯಾರಿಸಿ ಕೊಡಲಾಗುತ್ತದೆ.

ಸಾಕು ಪ್ರಾಣಿಗಳಿಗೆ ಕೇಕ್:

ನಿಮ್ಮ ನಾಯಿಮರಿ ಸೇರಿದಂತೆ ಸಾಕು ಪ್ರಾಣಿಯ ಬರ್ತ್‍ಡೇ ಇದ್ದರೆ ಅದಕ್ಕೆ ವಿಶೇಷವಾಗಿ ಇಲ್ಲಿ ಕೇಕ್ ತಯಾರಿಸಿಕೊಡಲಾಗುತ್ತದೆ. ಆ ಕೇಕ್ ಮೇಲೆ ನೀವು ಇಷ್ಟದಿಂದ ಕರೆಯುವ ಹೆಸರು ಬರೆಸಿ ಬರ್ತ್‍ಡೇಯನ್ನು ಸೆಲಬ್ರೇಟ್ ಮಾಡಬಹುದು. ಪ್ರಾಣಿಗಳ ಹೆಜ್ಜೆ ಗುರುತು, ಎಲುಬಿನ ಆಕಾರದ ಕೇಕ್, ಕುಕೀಸ್‍ಗಳೆಲ್ಲವನ್ನೂ ಇಲ್ಲಿ ತಯಾರಿಸಿ ಕೊಡಲಾಗುತ್ತದೆ. ಕೇಕ್‍ಗಳು 500 ರೂ.ನಿಂದ ಆರಂಭವಾಗುತ್ತದೆ. ಪ್ರಿಯಾ ಕುಲಕರ್ಣಿ ಮತ್ತು ಶೃತಿ ಸಾಹಾ ಎಂಬಿಬ್ಬರು ಸೃಷ್ಟಿಸಿರುವ ಈ ಬೋನ್ ಅಪಿಟೈಟ್ ಬೇಕರಿಯ ಒಡತಿಯರು. ಸಾಕುಪ್ರಾಣಿಗಳನ್ನು ಜನರು ಪ್ರೀತಿಸುವ ರೀತಿಯನ್ನು ಕಂಡು, ಪ್ರಾಣಿಗಳಿಗಾಗಿಯೇ ಏನನ್ನಾದರೂ ಮಾಡಬೇಕೆಂದು ಈ ಬೇಕರಿ ಆರಂಭಿಸಿದ್ದಾರೆ.

ಎಲ್ಲಾ ಫ್ಲೇವರ್ ಕೇಕ್:

ನೀವು ಕೇಕ್‍ಗೆ ಆರ್ಡರ್ ಮಾಡುವುದಕ್ಕೂ ಮುನ್ನ ನಿಮ್ಮ ಸಾಕು ಪ್ರಾಣಿಗೆ ಯಾವುದನ್ನು ತಿಂದರೆ ಅಲರ್ಜಿಯಾಗುತ್ತದೆ ಅದನ್ನು ತಿಳಿಸಿದರೆ, ಆ ಪದಾರ್ಥವನ್ನು ಬಿಟ್ಟು ಕೇಕ್ ತಯಾರಿಸಿಕೊಡುತ್ತಾರೆ. ಅಲ್ಲದೆ, ಇನ್ನಿತರ ತಿನಿಸುಗಳನ್ನು ಅದೇ ರೀತಿ ಮಾಡುತ್ತಾರೆ. ಜೇನು, ಓಟ್ಸ್, ಕ್ರೀಮ್, ಹಣ್ಣು ಮತ್ತಿತರ ಪದಾರ್ಥಗಳನ್ನು ಹಾಕಿ ಕೇಕ್ ತಯಾರಿಸಲಾಗುತ್ತದೆ. ಅದನ್ನು ನಿಮ್ಮ ಸಾಕು ಪ್ರಾಣಿಗೆ ನೀಡಿದರೆ ನಿಮ್ಮ ಪಪ್ಪಿಯೂ ಖುಷ್ ನೀವೂ ಖುಷ್. ಎಲ್ಲಿದೆ ಬೋನ್ ಅಪಿಟೈಟ್:

ಸಾಕು ಪ್ರಾಣಿಗಳಿಗೆಂದೇ ಇರುವ ಈ ಬೇಕರಿ ಇರುವುದು ಬಸವನಗರದಲ್ಲಿರುವ ಎಚ್‍ಎಎಲ್ ಮ್ಯೂಸಿಯಂ ಹಿಂಭಾಗದಲ್ಲಿ. ನೀವು ಏನಾದರೂ ನಿಮ್ಮ ಸಾಕು ಪ್ರಾಣಿಗಳಿಗೆ ತಿನಿಸನ್ನು ಆರ್ಡರ್ ಮಾಡಬೇಕೆಂದರೆ WWW.dogspot.in/ ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಇನ್ನು ಹೆಚ್ಚಿನ ಮಾಹಿತಿ ಬೇಕೆಂದರೆ https://www.facebook.com/BoneAppetiteIndiaಅಥವಾ 9845707030, 9845177162 ಗೆ ಕರೆ ಮಾಡಬಹುದು. ಬೇಕರಿಯ ಈಮೇಲ್ boneappetite@rocketmail.com ಗೆ ಮೇಲ್ ಮಾಡಿ ನಿಮ್ಮ ಸಾಕು ಪ್ರಾಣಿಗಳಿಗೆ ವಿಶೇಷ ತಿನಿಸುಗಳ ಆರ್ಡರ್ ಮಾಡಬಹುದು.