ಯಾವುದೇ ಸ್ವತ್ತು ಹೊಂದದೆ ಪರ್ಯಾಯ ಹೂಡಿಕೆ ವೇದಿಕೆಯಾದ 'ಆಲ್ಟ್​​ಫ್ಲೋ'

ಟೀಮ್​ ವೈ.ಎಸ್​. ಕನ್ನಡ

ಯಾವುದೇ ಸ್ವತ್ತು ಹೊಂದದೆ ಪರ್ಯಾಯ ಹೂಡಿಕೆ ವೇದಿಕೆಯಾದ 'ಆಲ್ಟ್​​ಫ್ಲೋ'

Friday February 19, 2016,

5 min Read

ಸಾಂಪ್ರದಾಯಿಕ ಉದ್ಯಮಗಳಲ್ಲೂ ತಂತ್ರಜ್ಞಾನ ಬದಲಾಗಿದೆ. ಹೊಸ ಯುಗದ ಉದ್ಯಮಗಳನ್ನು ಕೂಡ ಸುಲಭವಾಗಿ ಪ್ರಮಾಣೀಕರಿಸಬಹುದು ಮತ್ತು ಪ್ರವೇಶ ಪಡೆಯಬಹುದು. ವಿಶ್ವದ ಅತಿ ದೊಡ್ಡ ಟ್ಯಾಕ್ಸಿ ಕಂಪನಿ ಊಬರ್ ಬಳಿ ಸ್ವಂತದ ವಾಹನಗಳೇ ಇಲ್ಲ. ಜಗತ್ತಿನ ಅತ್ಯಂತ ಜನಪ್ರಿಯ ಮಾಧ್ಯಮ ಫೇಸ್ಬುಕ್ ಯಾವುದೇ ಕಂಟೆಂಟ್ ಅನ್ನು ಸೃಷ್ಟಿಸುವುದಿಲ್ಲ. ಅತ್ಯಮೂಲ್ಯ ರಿಟೇಲರ್ ಎನಿಸಿಕೊಂಡಿರುವ ಅಲಿಬಾಬಾ ಯಾವುದೇ ಆವಿಷ್ಕಾರಗಳನ್ನು ಮಾಡುತ್ತಿಲ್ಲ. ಇನ್ನು ಅತಿ ಹೆಚ್ಚು ವಸತಿ ಸೌಕರ್ಯಗಳನ್ನು ಒದಗಿಸುತ್ತಿರುವ ವಿಶ್ವದ ಜನಪ್ರಿಯ ಸಂಸ್ಥೆ Airbnb ಯಾವುದೇ ರಿಯಲ್ ಎಸ್ಟೇಟ್ ಇಲ್ಲ ಎನ್ನುತ್ತಾರೆ `ಹವಾಸ್ ಮೀಡಿಯಾ'ದ ವಿಪಿ ಟಾಮ್ ಗುಡ್ವಿನ್.

ಎಲ್ಲೆಡೆ ಉದ್ಯಮಕ್ಕೆ ಅಡ್ಡಿಪಡಿಸುವಲ್ಲಿ ತಂತ್ರಜ್ಞಾನ ಸಫಲವಾಗಿದೆ. ಸೂಕ್ತ ಸಮಯದಲ್ಲಿ ಉಳಿತಾಯವನ್ನು ತಂದುಕೊಟ್ಟಿದೆ. ಉದ್ಯಮ ಮತ್ತು ಗ್ರಾಹಕರಿಗೆ ವೆಚ್ಚ ಹಾಗೂ ಶ್ರಮವನ್ನು ಕಡಿಮೆ ಮಾಡಿದೆ. ಸಾಂಪ್ರದಾಯಿಕ ಆಸ್ತಿ ವರ್ಗಗಳು ಒದಗಿಸಿದ ಖಿನ್ನ ಆದಾಯದಿಂದ ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಪರ್ಯಾಯ ಆಸ್ತಿ ಹೂಡಿಕೆಗೆ ಹೆಚ್ಚು ಆದ್ಯತೆ ನೀಡುವಂತಾಗಿದೆ. ಮುಂಬೈ ಮೂಲದ ಸಂಸ್ಥೆ `ಆಲ್ಟೋ ಫ್ಲೋ' ಕೂಡ ಯಾವುದೇ ಬಂಡವಾಳ, ಆಸ್ತಿಯ ಮೇಲೆ ನಿಯಂತ್ರಣ ಅಥವಾ ನಿರ್ವಹಣೆ ಇಲ್ಲದೆ ಜಾಗತಿಕ ಪರ್ಯಾಯ ಹೂಡಿಕೆ ವೇದಿಕೆಯಾಗುವ ಉದ್ದೇಶ ಹೊಂದಿದೆ.

ಏನಿದು `ಆಲ್ಟೋ ಫ್ಲೋ '?

ಆಲ್ಟೋ ಫ್ಲೋ ಟೆಕ್ನಾಲಜೀಸ್, ಪರ್ಯಾಯ ಆಸ್ತಿ ಮತ್ತು ಹೂಡಿಕೆ ನಿರ್ವಹಿಸುವ ಖಾಸಗಿ ಮಾರುಕಟ್ಟೆ ಸ್ಥಳ. ಡೀಲ್ ತಯಾರಿಕೆಯ ವೇಗವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುವ ಡಿಜಿಟಲ್ ಎಂಜಿನ್ ಇದಾಗಿದೆ. ಪರ್ಯಾಯ ಸ್ವತ್ತುಗಳ ಸಮರ್ಥ ನಿರ್ವಹಣೆಯನ್ನು ಕೂಡ ಇದು ಸಕ್ರಿಯಗೊಳಿಸುತ್ತದೆ. ಯಾವುದೇ ಆಸ್ತಿ ಸ್ಟಾಕ್ ಅಲ್ಲ. ಬಾಂಡ್ ಅಥವಾ ನಗದು ಪರ್ಯಾಯ ಆಸ್ತಿಗಳು ಎನ್ನುತ್ತಾರೆ ಆಲ್ಟೋ ಫ್ಲೋ ಸಹ ಸಂಸ್ಥಾಪಕ ಅಭಿನಂದನ್ ಬಾಲಸುಬ್ರಮಣಿಯನ್. ``ಖಾಸಗಿ ಕಂಪನಿಗಳು, ತೊಂದರೆಗೀಡಾದ ಭದ್ರತೆ, ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಈಕ್ವಿಟಿ, ಹೆಡ್ಜ್, ಸೆಕಂಡರಿಯಂತಹ ಇನ್ವೆಸ್ಟ್ಮೆಂಟ್ ಫಂಡ್ಗಳು, ರಿಯಲ್ ಎಸ್ಟೇಟ್, ಮೂಲಸೌಕರ್ಯ, ಆರ್ಥಿಕ ಉತ್ಪನ್ನಗಳು, ಕಲೆ ಮತ್ತು ವೈನ್ ಇವೆಲ್ಲ ಚಿರಪರಿಚಿತ ಪರ್ಯಾಯ ಸ್ವತ್ತುಗಳು.

image


ಸದ್ಯ ಆಲ್ಟೋ ಫ್ಲೋ ಒಂದು ನೆಟ್ವರ್ಕಿಂಗ್, ಡೀಲ್ ಒರಿಜಿನೇಟಿಂಗ್ ಹಾಗೂ SಚಿಚಿS ವೇದಿಕೆಯಂತೆ ಕಾರ್ಯನಿರ್ವಹಿಸುತ್ತಿದೆ. ತನ್ನ 3 ಉತ್ಪನ್ನ ಮತ್ತು ಸೇವೆಗಳೊಂದಿಗೆ ನಿಯಂತ್ರಣ ಚೌಕಟ್ಟಿನ ಹೊರಗೆ ಕಾರ್ಯಾಚರಿಸುತ್ತಿದೆ. 12-18 ತಿಂಗಳುಗಳಲ್ಲಿ ಉತ್ಪನ್ನ ಹೆಚ್ಚು ಸ್ಕೇಲೇಬಲ್ ಆಗಲಿದ್ದು, ನಿಯಂತ್ರಿತ ವಲಯ ಪ್ರವೇಶಿಸಲಿದೆ ಎಂಬ ನಿರೀಕ್ಷೆ ಆಲ್ಟೋ ಫ್ಲೋಗಿದೆ. ಜೊತೆಗೆ ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದ ಮರ್ಚೆಂಟ್ ಬ್ಯಾಂಕಿಂಗ್, ಬ್ರೋಕರ್ ಡೀಲರ್ ಲೈಸೆನ್ಸ್​​ನಂತಹ ಎಲ್ಲ ಅಗತ್ಯ ಪರವಾನಿಗೆಗೆ ಅರ್ಜಿ ಸಲ್ಲಿಸಲಿದೆ.

ಇದುವರೆಗಿನ ಕಹಾನಿ...

ಅಭಿನಂದನ್, ಆದಿತ್ ದೇವಾನಂದ್, ಸರವಣನ್ ಶಣ್ಮುಗಂ ಹಾಗೂ ವರುಣ್ ಅಗರ್ವಾಲ್ ಜೊತೆಯಾಗಿ ಆಲ್ಟೋ ಫ್ಲೋ ಟೆಕ್ನಾಲಜೀಸ್ ಅನ್ನು ಕಟ್ಟಿ ಬೆಳೆಸಿದ್ದಾರೆ. 2015ರ ಡಿಸೆಂಬರ್ನಲ್ಲಿ ಸಂಸ್ಥೆ ಪ್ರೈವೇಟ್ ಲಿಮಿಟೆಡ್ ಆಗಿ ಸಂಯೋಜನೆಗೊಂಡಿದೆ. ಅಭಿನಂದನ್ ಹಾಗೂ ಸರವಣನ್ ಈ ಮೊದಲು ಚೆಫ್ಗಳನ್ನು ಸಂಪರ್ಕಿಸುವ ಚೆಫ್ಹೋಸ್ಟ್ ಕಂಪನಿಯನ್ನು ಆರಂಭಿಸಿದ್ದರು. 18 ತಿಂಗಳಲ್ಲಿ ಚೆಫ್ಹೋಸ್ಟ್ ಡಬಲ್ ಆದಾಯ ತಂದುಕೊಟ್ಟಿತ್ತು. ಅಭಿನಂದನ್ `ಲಿಕ್ವಿಟಿ'ಯ ಸಂಸ್ಥಾಪಕ ತಂಡದಲ್ಲೂ ಇದ್ದಾರೆ. ಈ ಮೊದಲ ಲೋಕಲ್ ಸರ್ಕಲ್ಸ್ನಲ್ಲಿ ಟೆಕ್ ಲೀಡ್ ಆಗಿದ್ದ ಸರವಣನ್, ಈಗ ಆಲ್ಟೋ ಫ್ಲೋನಲ್ಲಿ ಸಿಟಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಸಿಲಿಕಾನ್ ವ್ಯಾಲಿಯ ಈಬೇ ಹಾಗೂ ವಾಲ್ಮಾರ್ಟ್ ಇನ್ನೋವೇಶನ್ ಲ್ಯಾಬ್ಸ್​​ನಲ್ಲಿ ಕೆಲಸ ಮಾಡಿದ್ದಾರೆ.

ಆದಿತ್ ಐಐಎಂ ಬೆಂಗಳೂರಿನಲ್ಲಿ ಪದವಿ ಪಡೆದಿದ್ದಾರೆ. ಅವರು ಸಿಎ, ಸಿಎಫ್ಎ ಕೂಡ ಮಾಡಿದ್ದಾರೆ. ಬ್ಯಾಂಕ್ ಆಫ್ ಅಮೆರಿಕ ಎಂಎಲ್​ನಲ್ಲಿ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ವರುಣ್ ಆಲ್ಟೋ ಫ್ಲೋನಲ್ಲಿ ಸಿಎಂಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ವರುಣ್, ಎಸ್&ಆರ್ ಅಸೋಸಿಯೇಟ್ಸ್ ಮತ್ತು ಹರ್ಬರ್ಟ್ ಸ್ಮಿತ್ ಫ್ರೀಹಿಲ್ಸ್​ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದಾರೆ. ಆನ್ ಡಿಮಾಂಡ್ ಕಾನೂನು ಸಂಶೋಧನಾ ಸಂಸ್ಥೆ ಲೆಕ್ಸ್ ಕೊನ್ಸಿಲಿಯಾದ ಸಹ ಸಂಸ್ಥಾಪಕರೂ ಹೌದು. ಐಬ್ಯಾಂಕ್ನ ಸಲಹೆಗಾರರ ಪ್ಯಾನೆಲ್ ಒಂದನ್ನು ಕೂಡ ಆಲ್ಟ್ಫ್ಲೋ ಹೊಂದಿದೆ. ಉತ್ಪನ್ನ ಮತ್ತು ಪರಿಚಯದ ನಿರ್ಮಾಣಕ್ಕಾಗಿ ಆಲ್ಟ್ಫ್ಲೋಗೆ ಸಾಂಸ್ಥಿಕ ನಿಧಿಗಳು, ಕಾನೂನು ಸಂಸ್ಥೆಗಳು, ಯುನಿಕಾರ್ನ್ ಉದ್ಯಮಗಳು ಸಲಹೆ ನೀಡುತ್ತಿವೆ. ಯುವರ್ಸ್ಟೋರಿ ಜೊತೆ ಮಾತನಾಡಿದ ಅಭಿನಂದನ್, ಸಂಸ್ಥಾಪಕ ತಂಡದಲ್ಲಿ ತಾವು ನಂಬಿಕೆ ಇಟ್ಟಿರುವುದೇಕೆ ಅನ್ನೋದನ್ನು ವಿವರಿಸಿದ್ರು. ``ಸರವಣ ಮತ್ತು ನಾನು ಸ್ಟಾರ್ಟ್ಅಪ್ ಪರಿಸರದಿಂದ್ಲೇ ಬಂದವರು. ತಾಜಾ ದೃಷ್ಟಿಕೋನಗಳು ಮತ್ತು ನವೀನ ವಿಚಾರಗಳನ್ನು ನಾವು ಒಟ್ಟುಗೂಡಿಸಿದೆವು. ವರುಣ್ ಹಾಗೂ ಆದಿತ್ ಕ್ಯಾಪಿಟಲ್ ಮಾರ್ಕೆಟ್ನಲ್ಲಿ ಕೆಲಸ ಮಾಡಿದ್ದಾರೆ. ಜಾಗತಿಕ ಮಟ್ಟದ ಬ್ಯಾಂಕ್ಗಳಿಗೆ ಸಲಹೆ ನೀಡಿದ್ದಾರೆ. ಹಣಕಾಸು ಜಗತ್ತನ್ನೇ ಅಲ್ಲಾಡಿಸಬಲ್ಲ ಚಿಂತಕರು, ನಾಯಕರೊಂದಿಗೆ ನಾವು ಕೆಲಸ ಮಾಡಿದ್ದೇವೆ. ಆ ಜ್ಞಾನ ಮತ್ತು ಅನುಭವವನ್ನು ಈಗ ಆಲ್ಟ್ಫ್ಲೋ ಬೆಳವಣಿಗೆಗಾಗಿ ಬಳಸಿಕೊಳ್ಳುತ್ತಿದ್ದೇವೆ.

ಆಲ್ಟೋ ಫ್ಲೋ ಹೇಗೆ ಕಾರ್ಯನಿರ್ವಹಿಸುತ್ತೆ?

ಆಲ್ಟೋ ಫ್ಲೋ ಎರಡು ಅಂಗಗಳನ್ನು ಹೊಂದಿರುವ ಎಂಜಿನ್ - ಮಾರ್ಕೆಟ್ ಪ್ಲೇಸ್ ಹಾಗೂ SಚಿಚಿS ವಿಭಾಗ. ಮಾರ್ಕೆಟ್ಪ್ಲೇಸ್ನಲ್ಲಿ ಡೀಲ್ಫ್ಲೋ ಮತ್ತು ಕನ್ಸಲ್ಟ್ಫ್ಲೋ ಎಂಬ ಎರಡು ರೀತಿಯ ಕಾರ್ಯಾಚರಣೆಯಿದೆ.

ಡೀಲ್ಫ್ಲೋ: ಇದೊಂದು ಡೀಲ್ ಮೇಕಿಂಗ್ ಮಾರುಕಟ್ಟೆ ಸ್ಥಳ. ಮಾರಾಟಗಾರರು ಮತ್ತು ಖರೀದಿದಾರರು ಇಲ್ಲಿ ಭೇಟಿಯಾಗುತ್ತಾರೆ. ಇದು ಅನಾಮಧೇಯವದದ್ದು ಮತ್ತು ಆಯ್ಕೆಯ ಪರಿಚಯಗಳನ್ನು ಆಧರಿಸಿದೆ.

ಕನ್ಸಲ್ಟ್ಫ್ಲೋ: ಇದು ಬೇಡಿಕೆಗೆ ತಕ್ಕಂತೆ ಸಲಹೆ ನೀಡುವ ನೆಟ್ವರ್ಕ್, ವಕೀಲರು, ಅಕೌಂಟಂಟ್ಗಳು, ಆರ್ಥಿಕ ಸಲಹೆಗಾರರನ್ನು ಭೇಟಿಯಾಗಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಮೌಲ್ಯಮಾಪನ ಸೇವೆಗಳು ಮತ್ತು ಭರವಸೆಯ/ಮೇಲ್ವಿಚಾರಕ ಸೇವೆಗಳನ್ನೂ ಒದಗಿಸುತ್ತದೆ.

SಚಿಚಿS ವಿಭಾಗದಲ್ಲಿ ಎರಡು ರೀತಿಯ ಕಾರ್ಯಶಕ್ತಿಯಿದೆ - ಕಂಟ್ರೋಲ್ಫ್ಲೋ ಮತ್ತು ಡೇಟಾಫ್ಲೋ.

ಕಂಟ್ರೋಲ್ ಫ್ಲೋ : ಇದು ಆಸ್ತಿ ನಿರ್ವಹಣೆಯ ಕಾರ್ಯ, ಇಲ್ಲಿ ಬಳಕೆದಾರರು ತಮ್ಮ ಆಸ್ತಿಯ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ. ಉದಾಹರಣೆಗೆ ಪೋರ್ಟ್ಫೋಲಿಯೊ ಮೇಲ್ವಿಚಾರಣೆ, ಹೂಡಿಕೆದಾರರ ಜೊತೆಗಿನ ಸಂಬಂಧ, ಈಕ್ವಿಟಿ ನಿರ್ವಹಣೆ ಮತ್ತು ಕಾರ್ಪೊರೇಟ್ ಆಡಳಿತ.

ಡೇಟಾಫ್ಲೋ: ಇದು ದಾಖಲೆಗಳನ್ನು ಸಂಗ್ರಹಿಸಲು ಬಳಸುವ ವಾಸ್ತವ ಡೇಟಾ ಕೊಠಡಿ. ಬ್ಯಾಂಕ್ ಮಟ್ಟದ ಭದ್ರತೆಯನ್ನು ಒದಗಿಸುವುದಲ್ಲದೆ, ಡೇಟಾ ಫೈಲಿಂಗ್ ಅನ್ನೂ ಸರಳಗೊಳಿಸುತ್ತದೆ. ಖಾಸಗಿ ಕಂಪನಿಯ ನಿರ್ದೇಶಕರು, ಡೀಲ್ ಮೇಕರ್ಗಳು, ಹೂಡಿಕೆದಾರರು, ಬಂಡವಾಳ ನಿಧಿ, ಸಲಹೆಗಾರರು ಮತ್ತು ಇತರೆ ವೃತ್ತಿಪರರತ್ತ ಚಿತ್ತ ನೆಟ್ಟಿದೆ. ಈ ವೇದಿಕೆಯ ಪ್ರತಿ ಬಳಕೆದಾರರನ್ನೂ ಆಲ್ಟ್ಫ್ಲೋ ತಂಡ ಪರಿಶೀಲನೆ ನಡೆಸುತ್ತದೆ.

ಒಮ್ಮೆ ಸೈನ್ ಇನ್ ಆದಲ್ಲಿ ಅಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಈ ವೇದಿಕೆಯಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳಬಹುದು. ``ಖಾಸಗಿ ಕಂಪನಿಯ ನಿರ್ದೇಶಕರು ಬಂಡವಾಳ ಹೆಚ್ಚಿಸಿಕೊಳ್ಳಲು ಉದ್ದೇಶಿಸಿರಬಹುದು, ಅದೇ ವೇದಿಕೆಯಲ್ಲಿರುವ ಸಾಂಸ್ಥಿಕ ಹೂಡಿಕೆದಾರ ಅವರ ಪೋರ್ಟ್ಫೋಲಿಯೋ ಮಾನಿಟರ್ ಮಾಡಲು ಬಯಸಬಹುದು. ಮಧ್ಯವರ್ತಿಗಳು ಮತ್ತು ಸಲಹೆಗಾರರ ಮುಖಾಂತರ ಈ ವೇದಿಕೆಯಲ್ಲಿ ಹೊಸದೊಂದು ಉದ್ಯಮಕ್ಕೆ ನಾಂದಿ ಹಾಡುವ ಅವಕಾಶವಿದೆ, ಹೊಸ ಹೊಸ ಗ್ರಾಹಕರನ್ನು ಕೂಡ ಸಂಪಾದಿಸಬಹುದು'' ಎನ್ನುತ್ತಾರೆ ಅಭಿನಂದನ್. ಆಲ್ಟ್ಫ್ಲೋನಲ್ಲಿ ಪ್ರಮುಖವಾಗಿ ಮೂರು ಬಗೆಯ ಗ್ರಾಹಕರಿದ್ದಾರೆ.

image



ಹುಡುಕುವವರು (ದಿ ಸೀಕರ್ಸ್): ಖಾಸಗಿ ಕಂಪನಿಗಳು, ಪರ್ಯಾಯ ಬಂಡವಾಳ ನಿಧಿ ಅಥವಾ ಪ್ರಮುಖ ಯೋಜನೆಗಳು ಬಂಡವಾಳ ಹೆಚ್ಚಿಸಿಕೊಳ್ಳಲು ಯೋಜಿಸಿರುತ್ತವೆ. ಅಥವಾ ನಿರ್ಗಮನದ ಆಯ್ಕೆಗಳನ್ನು ಅನ್ವೇಷಿಸುತ್ತಾರೆ.

ಪೂರೈಕೆದಾರರು (ದಿ ಪ್ರೊವೈಡರ್ಸ್): ಅಲ್ಟ್ರಾ ಹೈ ನೆಟ್ ವರ್ತ್ ವ್ಯಕ್ತಿಗಳು, ಸಾಂಸ್ಥಿಕ ಹೂಡಿಕೆದಾರರು ಮತ್ತು ಫಂಡ್ಸ್ ಅಥವಾ ಸಿಂಡಿಕೇಟ್ಗಳು ವಿವಿಧ ಸ್ತರದ ಆಸ್ತಿಯಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿರುತ್ತಾರೆ.

ಸಮರ್ಥಕರು (ದಿ ಎನೇಬ್ಲರ್ಸ್): ಇನ್ವೆಸ್ಟ್ಮೆಂಟ್ ಬ್ಯಾಂಕ್ಗಳು, ಕಾನೂನು ಸಂಸ್ಥೆಗಳು, ಅಕೌಂಟಿಂಗ್ ಸಂಸ್ಥೆಗಳು, ಆರ್ಥಿಕ ಸಲಹೆಗಾರರು, ಒಪ್ಪಂದ ಮಧ್ಯವರ್ತಿಗಳು ಮತ್ತು ಸೇವೆ ಪೂರೈಕೆದಾರರು. ಆಲ್ಟ್ಫ್ಲೋ ಸದ್ಯ ಡೀಲ್ಫ್ಲೋ ಮತ್ತು ಕಂಟ್ರೋಲ್ ಫ್ಲೋನಿಂದ ಆದಾಯ ಸಂಗ್ರಹಿಸುತ್ತಿದೆ. ``ಖಾಸಗಿ ಕಂಪನಿಗಳಿಗೆ ಅಂದಾಜು 4 ಮಿಲಿಯನ್ ಡಾಲರ್ ಸಂಗ್ರಹಿಸಲು ನೆರವಾಗಿದ್ದೇವೆ. ಕಂಟ್ರೋಲ್ಫ್ಲೋ ಮೂಲಕ ಬಳಕೆದಾರರಿಗೆ ಅಗತ್ಯ ಸೇವೆ ಒದಗಿಸಿದ್ದೇವೆ. ನಮ್ಮ ಆರೋಗ್ಯ ಸಂಸ್ಥೆ 3 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದ್ರೆ, ಪ್ರೊಡಕ್ಷನ್ ಹೌಸ್ 100 ಮಿಲಿಯನ್ ಡಾಲರ್ ಸಂಗ್ರಹ ಮಾಡಿದೆ. ಸ್ಪೋಟ್ರ್ಸ್ ವೆಂಚರ್ನಿಂದ 10 ಮಿಲಿಯನ್ ಡಾಲರ್ ಸಿಕ್ಕಿದ್ದು, ಮೂರು ಸಾಹಸೋದ್ಯಮಗಳು 20-50 ಮಿಲಿಯನ್ ಡಾಲರ್ ಬಂಡವಾಳ ನಿಧಿಯನ್ನು ಸಂಗ್ರಹಿಸಿವೆ'' ಅಂತಾ ಅಭಿನಂದನ್ ಮಾಹಿತಿ ನೀಡಿದ್ದಾರೆ.

ವಲಯ ಅವಲೋಕನ...

ಜಾಗತಿಕವಾಗಿ ಬದಲಿ ಬಂಡವಾಳ ಹೂಡಿಕೆ ಪರಿಸರದ ಮೌಲ್ಯ ಲಕ್ಷಾಂತರ ಕೋಟಿ ಎಂದು ಅಂದಾಜಿಸಲಾಗಿದೆ. ಈ ಕ್ಷೇತ್ರದಲ್ಲಿ ಸಂಸ್ಥಾಪಕರಿಗೆ ಆದ ಅನುಭವದ ಪ್ರಕಾರ ಇಲ್ಲಿ ಅದಕ್ಷತೆ, ಪಾರದರ್ಶಕತೆಯ ಕೊರತೆ, ತಲುಪಲಾಗದಿರುವಿಕೆಯಿದೆ. ವಿಶ್ವ ಆರ್ಥಿಕತೆ ಅವಲಂಬಿಸುವಂತೆ ಮಾರುಕಟ್ಟೆಗೆ ಕೂಡ ನಿರ್ವಹಣೆ, ಮೇಲ್ವಿಚಾರಣೆಯ ಜೊತೆಗೆ ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಅನ್ನೋದು ಆದಿತ್ ಅವರ ಅಭಿಪ್ರಾಯ. ಪರ್ಯಾಯ ಸ್ವತ್ತುಗಳ ಹಂಚಿಕೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸಂಸ್ಥೆಗಳಿಂದ ಹಾಗೂ ವ್ಯಕ್ತಿಗಳು ಕೂಡ ಇತ್ತೀಚಿನ ದಿನಗಳಲ್ಲಿ ನೇರವಾಗಿ ತಮ್ಮ ಹಣ ಹೂಡಿಕೆ ಮಾಡುತ್ತಿದ್ದಾರೆ. ಇತ್ತೀಚಿನ ಸಂಶೋಧನೆ ಪ್ರಕಾರ ವರ್ಷಕ್ಕೆ ಸುಮಾರು 100 ಬಿಲಿಯನ್ ಡಾಲರ್ ಬಂಡವಾಳ ಲಭ್ಯವಿದೆ. ಪರ್ಯಾಯ ಆಸ್ತಿ ಮಾರುಕಟ್ಟೆಯ ಮೌಲ್ಯ 10 ಟ್ರಿಲಿಯನ್ ಡಾಲರ್.


ಆಲ್ಟ್ ಫ್ಲೋ ಸರ್ವಿಸ್ ಪ್ರೊವೈಡರ್ಗಳೊಂದಿಗೆ ಪೈಪೋಟಿಗಿಳಿದಿದೆ. ಸಾಂಪ್ರದಾಯಿಕ ಮತ್ತು ಆಫ್ಲೈನ್ ಪ್ಲೇಯರ್ಗಳು, ಐ ಬ್ಯಾಂಕ್ಗಳು, ಆನ್ಲೈನ್ ವೇದಿಕೆಗಳಿಂದ ಸ್ಪರ್ಧೆ ಎದುರಾಗಿದೆ. ಸದ್ಯ ಆಲ್ಟ್ಫ್ಲೋ ಕ್ರೌಡ್ಫಂಡಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಸ್ಟಾರ್ಟ್ಅಪ್ ಕ್ಷೇತ್ರದೆಡೆಗೂ ಗಮನಹರಿಸುತ್ತಿಲ್ಲ. ಏಂಜಲಿಸ್ಟ್ ಮತ್ತು ಲೆಟ್ಸ್ ವೆಂಚರ್ ಕ್ರೌಡ್ ಫಂಡಿಂಗ್ ಮೂಲಕ ಉದ್ಯಮಗಳಿಗೆ ನೆರವಾಗುತ್ತಿವೆ. ಸಿಬಿ ಇನ್ಸೈಟ್ಸ್ ಮತ್ತು ಟ್ರ್ಯಾಕ್ಸನ್ನಂತಹ ಕೆಲ ವೇದಿಕೆಗಳು ವಿಮರ್ಷೆ ಮತ್ತು ಒಳನೋಟಗಳ ಮೂಲಕ ಉದ್ಯಮಗಳು ಮತ್ತು ಹೂಡಿಕೆದಾರರಿಗೆ ಪರಿಸರವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತಿವೆ.

ಭವಿಷ್ಯದ ಯೋಜನೆಗಳು..

ಹೂಡಿಕೆ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಆದಾಯ ಗಳಿಸುವತ್ತ ಆಲ್ಟ್ಫ್ಲೋ ಗಮನಹರಿಸಿದೆ. ಸದ್ಯ ದೊರೆತಿರುವ ಆಸಕ್ತಿಯನ್ನು ಆಧರಿಸಿ ಅವರು ಕಾರ್ಯತಂತ್ರದ ಹೂಡಿಕೆಗಾಗಿ ಸಾಂಸ್ಥಿಕ ಹೂಡಿಕೆದಾರರ ಗಮನ ಸೆಳೆಯಲು ಮುಂದಾಗಿದ್ದಾರೆ. ವಿಸಿಗಳೆಡೆಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಆಲ್ಟ್ಫ್ಲೋ ಮೊದಲ ವರ್ಷ ಒಂದು ಬುಟಿಕ್ನಂತೆ ಕಾರ್ಯನಿರ್ವಹಿಸಲಿದ್ದು, ಭೌಗೋಳಿಕ ವಲಯಗಳು ವತ್ತು ಆಸ್ತಿಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಬಳಿಕ ನಿಜವಾದ ಅರ್ಥದಲ್ಲಿ ಒಂದು ಸಂಗ್ರಾಹಕವಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ. ಈ ವರ್ಷ ಇನ್ನಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆಲ್ಟ್ಫ್ಲೋ ಮುಂದಾಗಿದ್ದು, 10 ಮಂದಿಯ ತಂಡ ಕಟ್ಟುವ ಗುರಿ ಹೊಂದಿದೆ.

ಉದ್ಯಮದ ದೂರದೃಷಿ ನಾಲ್ಕು ಪ್ರಮುಖ ಅಂಶಗಳನ್ನು ಹೊಂದಿದೆ:

1. ಖಾಸಗಿ ಮಾರುಕಟ್ಟೆಯನ್ನು ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿಯನ್ನಾಗಿ ಮಾಡುವುದು

2. ದ್ರವ ಪರ್ಯಾಯ ಸ್ವತ್ತುಗಳ ಹೊಸ ವರ್ಗ ರಚನೆ

3. ಕಾರ್ಯ ಪ್ರಗತಿಗಾಗಿ ತಂತ್ರಜ್ಞಾನ ಸುಧಾರಣೆ, ಸ್ವಯಂಚಾಲಿತ ಪ್ರಕ್ರಿಯೆ ಮತ್ತು ಮುಖ್ಯವಾಹಿನಿಯ ಬಂಡವಾಳ ಹೂಡಿಕೆ ಬ್ಯಾಂಕ್ಗಳಿಗೆ ಪರ್ಯಾಯವಾಗಿ ಕೆಲಸ ಮಾಡುವುದು

4. ಯಾವುದೇ ಬಂಡವಾಳ ಅಥವಾ ಸ್ವತ್ತುಗಳ ಮಾಲೀಕತ್ವ ಹೊಂದದೆ, ನಿಯಂತ್ರಿಸದೆ ಜಾಗತಿಕ ಪರ್ಯಾಯ ಹೂಡಿಕೆ ವೇದಿಕೆಯಾಗಿ ಕಾರ್ಯನಿರ್ವಹಿಸುವುದು.

ಲೇಖಕರು: ಹರ್ಷಿತ್ ಮಲ್ಯ

ಅನುವಾದಕರು: ಭಾರತಿ ಭಟ್