ರೈಲಿನಲ್ಲಿ ಸಿಗಲಿದೆ ಬಗೆ ಬಗೆಯ ಚಹಾ

ಅಗಸ್ತ್ಯ

0

ಚುಕು ಚುಕು ಸದ್ದು, ಒಂದೆಡೆ ಗದ್ದಲ, ಇನ್ನೊಂದೆಡೆ ಪ್ರಶಾಂತ ವಾತಾವರಣದಿಂದ ಕೂಡಿರುವ ರೈಲು ಪ್ರಯಾಣ ಇನ್ನು ಮುಂದೆ ಮಜವಾಗಲಿದೆ. ಅದರಲ್ಲೂ ಬೆಳಗಿನ ಅಥವಾ ಸಂಜೆಯ ತಣ್ಣನೆಯ ಹೊತ್ತಿನಲ್ಲಿ ರೈಲು ಪ್ರಯಾಣ ಮಾಡಿದರೆ 25 ಬಗೆಯ ಬಿಸಿ-ಬಿಸಿ ಚಹಾ ನಿಮಗಾಗಿ ಕಾದಿರುತ್ತವೆ. ತಮಗೆ ಇಷ್ಟವಾದ ಚಹಾ ಕುಡಿಯುತ್ತ ನೆಮ್ಮದಿಯಾಗಿ ರೈಲು ಪ್ರಯಾಣ ಮಾಡಬಹುದಾಗಿದೆ.

ಹೌದು, ರೈಲು ಪ್ರಯಾಣದ ವೇಳೆ ಸಿಗುವ ಚಹಾದ ರೂಪ ಇದೀಗ ಬದಲಾಗಿದೆ. ಈವರೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಒಂದೇ ಬಗೆಯ ಚಹಾ ಕುಡಿದು ಬೇಸರವಾಗಿರುವರಿಗಾಗಿಯೇ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಸಂತಸದ ವಿಷಯವೊಂದನ್ನು ನೀಡಿದೆ. ಪ್ರಯಾಣಿಕರಿಗಾಗಿ ಇನ್ನು ಮುಂದೆ 25 ಬಗೆಯ ಟೀಗಳನ್ನು ನೀಡಲಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಮತ್ತು ಪ್ರಯಾಣದ ವೇಳೆಯಲ್ಲಿನ ಒತ್ತಡ, ಸುಸ್ತನ್ನು ನಿವಾರಿಸಿ ಮನಸು ಹಗುರಗೊಳಿಸುವ ಸಲುವಾಗಿ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಈ ಉಪಾಯ ಮಾಡಿದೆ. ಈ ಪ್ರಯತ್ನಕ್ಕೆ ಈಗಾಗಲೆ 12 ದಿನಗಳಾಗಿದ್ದು ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

ಇದನ್ನು ಓದಿ

ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ  

25 ಬಗೆಯ ಟೀ

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಪರಿಚಯಿಸಿರುವ ನೂತನ ಬಗೆಯ ಚಹಾಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ದೇಶಿ ಚಹಾ, ಕ್ಲಾಸಿಕ್ ಚಹಾ ಮತ್ತು ಸ್ಪೆಷಾಲಿಟಿ ಚಹಾ ಎಂದು ವಿಂಗಡಿಸಿ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ದೇಶಿ ಚಹಾದಲ್ಲಿ ತುಳಸಿ, ಏಲಕ್ಕಿ, ದಪ್ಪ ಏಲಕ್ಕಿ. ಕರಿ ಮೆಣಸು, ಅಜ್ವಾನಿ, ಪುದೀನ, ಮಸಾಲೆ, ಹಸಿರು ಮೆಣಸು, ಖಡಕ್, ಎಕ್ಟ್ರಾ ಸ್ಟ್ರಾಂಗ್, ಬ್ಲಾೃಕ್ ಟೀ, ಲಿಂಬು ಟೀ, ಇರಾನಿ ಟೀ, ಮಸಾಲಾ ಟೀ, ಚಿನ್ನಮೋನ್, ಲವಂಗ, ಅರ್ದಕ್ ಹೀಗೆ 12 ಬಗೆಯ ಟೀಗಳನ್ನು ನೀಡಲಾಗುತ್ತದೆ. ಇನ್ನು ಕ್ಲಾಸಿಕ್ ಟೀನಲ್ಲಿ ಜಾಸ್ಮಿನ್ ಟೀ, ಗ್ರೀನ್ ಟೀ, ಸ್ಪೆಷಾಲಿಟಿ ಟೀಯಲ್ಲಿ ಗಾಡ್ಸ್ ಚಾಯ್, ಚಿನ್ನಮೋನ್ ಗ್ರೀನ್, ಪಹಾಡಿ ಚಾಯ್, ಮಿಂಟ್ ಮತ್ತು ಲೆಮನ್ ಗ್ರೀನ್ ಚಾತ್, ರೋಸ್ ಚಾಯ್, ಹನಿ ಜಿಂಜರ್ ಲೆಮನ್, ಆಮ್ ಪಾಪಡ್ ಚಾಯ್ ತಯಾರಿಸಿ ನೀಡಲಾಗುತ್ತದೆ. ಇವುಗಳಲ್ಲಿ ಕ್ಲಾಸಿಕ್ ಮತ್ತು ಸ್ಪೆಷಾಲಿಟಿ ಟೀಗಳನ್ನು ಕೋರಿಕೆ ಮೇರೆಗೆ ಮಾತ್ರ ಮಾಡಿ ಪ್ರಯಾಣಿಕರಿಗೆ ವಿತರಿಸಲಾಗುತ್ತದೆ.

ಚಾಯೋಸ್‍ನಿಂದ ಸರಬರಾಜು:

ಭಾರತೀಯ ರೈಲ್ವೆ ಸುಮಾರು 65 ಸಾವಿರ ಕಿ.ಮೀ.ಗೂ ಹೆಚ್ಚಿನ ಉದ್ದದ ಮಾರ್ಗದಲ್ಲಿ ರೈಲು ಸಂಚರಿಸುವಂತೆ ಮಾಡಿದೆ. ಅದರಲ್ಲಿ ಸದ್ಯ 12 ಸಾವಿರ ಕಿ.ಮೀ. ಉದ್ದ ಮಾರ್ಗದಲ್ಲಿ ಈ ವಿಶೇಷ ಚಹಾಗಳನ್ನು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಪ್ರಯಾಣಿಕರ ಕೋರಿಕೆ ಮೇರೆ ಚಹಾ ಮಾಡಿಕೊಡಲು ಕೆಫೆ ಸಮೂಹ ಸಂಸ್ಥೆ ಚಾಯೋಸ್‍ಗೆ ವಹಿಸಲಾಗಿದೆ. ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಚಾಯೂಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರಯಾಣಿಕರು ಕೋರಿದಂತೆ, ರುಚಿಕಟ್ಟಾದ ಚಹಾ ಮಾಡಿಕೊಡುವ ಜವಾಬ್ದಾರಿಯನ್ನು ವಹಿಸಿದೆ.

ಮತ್ತಷ್ಟು ವಿಶೇಷತೆಗಳು:

ರೈಲ್ವೆ ಪ್ರಯಾಣಿಕರಿಗೆ 25 ಬಗೆಯ ಚಹಾ ನೀಡುವುದಷ್ಟೇ ಅಲ್ಲದೆ, ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಮಾಂಸಾಹಾರ ಮತ್ತು ಶಾಖಾಹಾರಗಳನ್ನು ಪ್ರಯಾಣಿಕರಿಗೆ ಸರಬರಾಜು ಮಾಡುತ್ತಿದೆ. ದೇಶೀಯ ಮತ್ತು ಪಾಶ್ಚಾತ್ಯ ಬೆಗೆಯ ಆಹಾರವನ್ನು ನೀಡುತ್ತಿದೆ. ಅಲ್ಲದೆ, ಚಹಾದಿಂದ ಊಟದವರೆಗೆ ಐಆರ್‍ಸಿಟಿಸಿ ನೂತನವಾಗಿ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕವೇ ರೈಲು ಪ್ರಯಾಣಿಕರು ಆರ್ಡರ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಪ್ರಯಾಣಿಕರು ಐಆರ್‍ಸಿಟಿಸಿ ಕನೆಕ್ಟ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳಬೇಕಾಗಿದೆ. ಹಾಗೆಯೇ 300 ರೂಪಾಯಿಗೂ ಹೆಚ್ಚಿನ ಮೊತ್ತದ ಆಹಾರ ಆರ್ಡರ್ ಮಾಡಿದರೆ ಶೇ.10ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.

ಇದನ್ನು ಓದಿ

1. ವಾಣಿಜ್ಯ ನಗರಿಯಲ್ಲಿ ಮತ್ತೊಂದು ಐಟಿ ಹಬ್ಬ 'ಐಂಡಿಯಾ ಐಟಿ ಶೋ'ಗೆ ಬೆಂಗಳೂರಲ್ಲಿ ತಾಲೀಮು


2. ಆತ್ಮ ವಿಶ್ವಾಸವೇ ಈ ಕುಸುಮಗಳ ಬಂಡವಾಳ..

3. ಹೆಲ್ತಿ ಆರೋಗ್ಯಕ್ಕೆ ಟೆಸ್ಟಿ ಜ್ಯೂಸ್.. ಜ್ಯೂಸ್​​​ಗೆ ಸಾಥ್ ನೀಡೋಕೆ ಹೆಲ್ತಿ ಬೀಡಾ