ಆತ್ಮಸಾಕ್ಷಿಗೆ ಬಿಕ್ಕಟ್ಟು ತಂದ ತರ್ತುಪರಿಸ್ಥಿತಿ - ಅಶುತೋಷ್

ಟೀಮ್​ ವೈ.ಎಸ್​. ಕನ್ನಡ

ಆತ್ಮಸಾಕ್ಷಿಗೆ ಬಿಕ್ಕಟ್ಟು ತಂದ ತರ್ತುಪರಿಸ್ಥಿತಿ - ಅಶುತೋಷ್

Sunday October 16, 2016,

3 min Read

aಸ್ವತಂತ್ರ ಭಾರತದ ಇತಿಹಾಸದಲ್ಲಿ ತರ್ತುಪರಿಸ್ಥಿತಿ ಅನ್ನುವುದು ಅತೀ ದೊಡ್ಡ ಕಪ್ಪುಚುಕ್ಕೆ. ರಾಷ್ಟ್ರೀಯ ಸುರಕ್ಷೆತೆಯನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿ ಸಮಯದಲ್ಲಿ ಭಾರತೀಯ ನಾಗರೀಕರ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು. ವಿರೋಧ ಪಕ್ಷಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ಮಾದ್ಯಮಗಳ ಧ್ವನಿಗೂ ಕಡಿವಾಣ ಹಾಕಲಾಗಿತ್ತು. ಹಲವು ರಾಜಕೀಯ ನಾಯಕರನ್ನು ಬಂಧಿಸಲಾಗಿತ್ತು. ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು 34988ರನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ಸುರಕ್ಷತೆಗಾಗಿ 75818 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಬಿಜೆಪಿಯ ಅಧಿಕಾರಾವಧಿಯಲ್ಲಿ ಶಾ ಕಮಿಷನ್ ನೀಡಿದ ವರದಿಯಲ್ಲಿ ಈ ಅಂಕಿಸಂಖ್ಯೆಗಳೆಲ್ಲವನ್ನೂ ಬಹಿರಂಗಗೊಳಿಸಲಾಗಿತ್ತು.

ತುರ್ತುಪರಿಸ್ಥಿತಿಯ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಅನ್ನೋದು ಕೇವಲ ಮಾತಾಗಿತ್ತೇ ಹೊರತು ಅದು ಕಾರ್ಯರೂಪದಲ್ಲಿ ಇರಲಿಲ್ಲ. ವಿರೋಧ ಪಕ್ಷಗಳು ಇಲ್ಲದೇ ಇದ್ದಾಗ ಪತ್ರಿಕೋದ್ಯಮ ವಿರೋಧ ಪಕ್ಷಗಳಂತೆ ಕಾರ್ಯನಿವರ್ಹಹಿಸಬೇಕಿತ್ತು. ಆದ್ರೆ ತುರ್ತುಪರಿಸ್ಥಿತಿಯ ಸಮಯದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲಾಗಿತ್ತು. ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ ಎಲ್.ಕೆ.ಅಡ್ವಾಣಿಯವರು ಅಂದಿನ ಸ್ಥಿತಿಯನ್ನು “ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ”ಅಂತ ಕರೆದಿದ್ದರು. ಈಗ ಮತ್ತೆ ಅಡ್ವಾಣಿಯವರ ಮಾತುಗಳು ನೆನಪಿಗೆ ಬರುತ್ತಿವೆ. ಆದ್ರೆ ಈಗ ತುರ್ತುಪರಿಸ್ಥಿತಿ ಇಲ್ಲ. ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ವಿರೋಧ ಪಕ್ಷದವರನ್ನು ಜೈಲಿಗೆ ಕಳುಹಿಸಿಲ್ಲ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ. ಆದ್ರೆ ಮಾಧ್ಯಮಗಳ ನೀತಿನಿಯಮಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಕೆಲವು ಮಾಧ್ಯಮಗಳು ಸರ್ಕಾರದ ಪಾಲಿಗೆ ಮಿತ್ರರಂತೆ ವರ್ತಿಸುತ್ತಿವೆ. ಟೀಕಿಸುವ ಶಕ್ತಿಯನ್ನು ಕೂಡ ಕಳೆದುಕೊಂಡಿವೆ. ಕೆಲವು ಪತ್ರಕರ್ತರಂತೂ ಸರಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ.

image


ಇವತ್ತು ಪ್ರತಿಕೋದ್ಯಮ ಬದಲಾಗಿದೆ. ಎಲ್ಲಾ ಕಡೆಯೂ ಎಲ್ಲಾ ಜನರು ಕೂಡ ಪತ್ರಿಕೆಗಳ ಬಗ್ಗೆ ತಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯ, ಅನಿಸಿಕೆಗಳನ್ನು ನೀಡುವಷ್ಟು ಬುದ್ಧಿವಂತರಾಗಿದ್ದಾರೆ. 1975ರಲ್ಲಿ ಟಿವಿಗಳು ಇರಲಿಲ್ಲ. ಇವತ್ತು ಭಾರತದಲ್ಲಿ 800ಕ್ಕೂ ಅಧಿಕ ಟಿವಿ ಚಾನಲ್​ಗಳಿವೆ. ನ್ಯೂಸ್ ಪೇಪರ್​ಗಳಿಗೆ ಲೆಕ್ಕವೇ ಇಲ್ಲ. ಆ ಕಾಲದಲ್ಲಿ ರಾಷ್ಟ್ರೀಯ ಪತ್ರಿಕೆಗಳು ಕೆಲವೇ ಕೆಲವು ಆವೃತ್ತಿಗಳನ್ನು ಹೊಂದಿದ್ದವು. ಇವತ್ತು ರಾಷ್ಟ್ರೀಯ ಪತ್ರಿಕೆಗಳು ಕೂಡ ಭಾರತದ ಮೂಲೆ ಮೂಲೆಯನ್ನು ತಲುಪುವ ಪ್ರಯತ್ನಗಳನ್ನು ಮಾಡುತ್ತಿವೆ. ದೈನಿಕ್ ಭಾಸ್ಕರ್​ನಂತಹ ಪತ್ರಿಕೆಗಳು 50ಕ್ಕೂ ಹೆಚ್ಚು ಆವೃತ್ತಿಗಳನ್ನು ಹೊಂದಿದೆ. ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ನಗರಗಳು ಕೂಡ ತನ್ನದೇಯಾದ ವಿಭಿನ್ನ ಪತ್ರಿಕೆಗಳನ್ನು ಹೊಂದಿವೆ.

ಇದನ್ನು ಓದಿ: ಉಕ್ಕಿ ಹರಿಯುವ ನದಿಗೆ ಸೇತುವೆ ಕಟ್ಟಿದ್ರು- ಎರಡೂ ಗ್ರಾಮಗಳ ಜನರಿಗೆ ನೆಮ್ಮದಿ ತಂದ್ರು..!

ಇದೆಲ್ಲದರ ಹೊರತಾಗಿ ಸೋಶಿಯಲ್ ಮೀಡಿಯಾಗಳಿವೆ. ಟೆಕ್ನಾಲಜಿಯ ಅಭಿವೃದ್ಧಿಗಳು ಪತ್ರಿಕಾ ಸಂಪಾದಕನಿಗಿಂತಲೂ ನೇರವಾಗಿ, ಕಟುವಾಗಿ ಟೀಕಿಸುವ ಶಕ್ತಿಯನ್ನು ಹೊಂದಿವೆ. ಸೋಶಿಯಲ್ ಮೀಡಿಯಾದ ವರದಿಗಾರರು ಸಂಪಾದಕರು ಕೂಡ ಆಗಿದ್ದಾರೆ. ಇವತ್ತು ಯಾರು ಯಾವ ಅಭಿಪ್ರಾಯವನ್ನು ಬೇಕಾದರೂ ಮಂಡಿಸಬಹುದು. ಈ ಸೋಶಿಯಲ್ ಮೀಡಿಯಾಗಳ ಹವಾದಿಂದ ಪ್ರತಿಷ್ಠಿತ ಪತ್ರಿಕೆಗಳು ಕೂಡ ಕಂಗೆಟ್ಟಿವೆ. ಅವುಗಳ ಜೊತೆ ಸ್ಪರ್ಧೆ ನಡೆಸಲು ಒದ್ದಾಟ ನಡೆಸುತ್ತಿವೆ.

ಇತ್ತೀಚಿಗೆ ಟಿವಿ ಮಾಧ್ಯಮಗಳ ಗ್ರಾಮರ್​ಗಳೇ ಬದಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಟಿವಿ ಮಾಧ್ಯಮಗಳು ಯಾವುದಾದರೂ ಒಂದು ಪಕ್ಷದ ಪರವಾಗಿಯೇ ಸುದ್ದಿ ಬಿತ್ತರಿಸುವುದು ಸಾಮಾನ್ಯ. ಹಳೆಯ ಪತ್ರಿಕೋದ್ಯಮದ ಪಾಠಕ್ಕೂ ಈಗಿನ ಪಾಠಕ್ಕೂ ಸಾಕಷ್ಟು ಬದಲಾವಣೆಗಳಿವೆ. ಅಷ್ಟೇ ಅಲ್ಲ ಹಳೆಯ ಶೈಲಿಯ ಪತ್ರಿಕೋದ್ಯಮ ಇವತ್ತು ನೀರಸವಾಗಿ ಕಾಣುತ್ತಿದೆ. ಟಿಆರ್​ಪಿ ಅನ್ನುವುದು ಸುದ್ದಿಯ ಸತ್ಯಾಂಶ ಅರಿಯುವುದನ್ನು ಕೂಡ ತಡೆದು ನಿಲ್ಲಿಸಿದೆ. ವೇಗ ಇವತ್ತಿನ ಪತ್ರಿಕೋದ್ಯಮದ ಮೊದಲ ಆದೇಶ ಮತ್ತು ಉದ್ದೇಶವೂ ಆಗಿದೆ. ವೀಕ್ಷಕರನ್ನು ಅಥವಾ ಓದುಗನನ್ನು ಹಿಡಿದಿಡಲು ಇವತ್ತಿನ ಮಾಧ್ಯಮಗಳು ಏನು ಬೇಕಾದ್ರೂ ಮಾಡಬಲ್ಲವು.

ಇಷ್ಟೆಲ್ಲಾ ಇದ್ರೂ ಇವತ್ತಿನ ಪತ್ರಿಕೋದ್ಯಮದಲ್ಲಿ ಒಂದು ರೀತಿಯ ವಿಭಿನ್ನ ಒಮ್ಮತವಿದೆ. ಜಾತ್ಯಾತೀತ, ಆಧುನಿಕ, ಸ್ವತಂತ್ರ ಮತ್ತು ಜನಪರ ಕಾಳಜಿ ಅನ್ನೋದು ಇವರ ನಡುವೆ ಇದ್ದೇ ಇದೆ. ಈ ಒಮ್ಮತ ಕಮ್ಯೂನಾಲಿಸಂ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಹೊಂದಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಎಡಪಂಥೀಯ ಧೋರಣೆ ಮತ್ತು ಬಲ ಪಂಥೀಯ ಧೋರಣೆಗಳ ಮಧ್ಯೆ ಚರ್ಚೆ ಯಾವಗಲೂ ಇದ್ದೇ ಇರುತ್ತದೆ.

ಬಲ ಪಂಥೀಯ ಅಂತ ಗುರುತಿಸಿಕೊಳ್ಳುವುದರಲ್ಲಿ ತಪ್ಪು ಇಲ್ಲ. ಅಮೆರಿಕಾ ಮತ್ತು ಯುರೋಪ್​ಗಳಲ್ಲಿ ಬಲಪಂಥೀಯ ಧೋರಣೆ ಅನ್ನುವುವುದು ಹಳೆಯ ಮಾತು. ಆದ್ರೆ ಭಾರತದ ಮಟ್ಟಿಗೆ ಅದು ಹೊಸತು. ಆದ್ರೆ ಎಡಪಂಥೀಯ ಧೋರಣೆಗಳಂತೆ ನಿಗದಿತ ವ್ಯಾಕ್ಯಾನಾ ಬಲಪಂಥೀಯರಲ್ಲಿಲ್ಲ. ಆರ್​ಎಸ್ಎಸ್​ನ ಐಡಿಯಾಲಜಿಯನ್ನೇ ಬಲಪಂಥೀಯ ಎನ್ನಲಾಗುತ್ತಿದೆ. ಇದು ಜಾತ್ಯಾತೀತತೆಯ ಮೇಲೆ ಪ್ರಬಾವ ಬೀರುತ್ತಿದೆ. ಸದ್ಯಕ್ಕೆ ಬಲಪಂಥೀಯ ಧೋರಣೆಗಳನ್ನು ರಾಷ್ಟ್ರೀಯ ವಾದ ಅಂತ ಬಿಂಬಿಸಲಾಗುತ್ತಿದೆ. ಇದರ ವಿರೋಧಿಗಳನ್ನು ರಾಷ್ಟ್ರ ವಿರೋಧಿಗಳನು ಅಂತ ಮಾಧ್ಯಮಗಳು ಬಿಂಬಿಸಲು ಆರಂಭಿಸಿವೆ. ಮಾತಿನ ವರಸೆ ಇವತ್ತು ಮಾಧ್ಯಮಗಳ ಮೊದಲ ಬಾಣ. ಟಿವಿ ಸ್ಟುಡಿಯೋಗಳು ಅಭಿಪ್ರಾಯಕ್ಕೆ ಬೆಲೆ ಕೊಡದೆ, ಯುದ್ಧ ಭೂಮಿಗಳಂತೆ ವರ್ತನೆ ಮಾಡುತ್ತಿವೆ. ಇವತ್ತು ಪ್ರಜಾಪ್ರಭುತ್ವದ ಮೇಲೆ ಬಲ ಪಂಥೀಯರ ಕರಿ ನೆರಳು ಇದೆ ಅನ್ನುವ ಭಯ ಶುರುವಾಗಿದೆ.

ನಾನು ಪತ್ರಿಕೋದ್ಯಮ ಅಪಾಯದಲ್ಲಿದೆ ಅಂತ ಹೇಳುವುದಿಲ್ಲ. ಆದ್ರೆ ಟಿವಿ ಸ್ಟುಡಿಯೋಗಳು ಹೊಸ ಬಿಕ್ಕಟ್ಟನ್ನು ಸೃಷ್ಟಿಸುತ್ತಿವೆ. ಇದು ಆತ್ಮಸಾಕ್ಷಿಯ ಬಿಕ್ಕಟ್ಟು. ಅನಿಸಿದ್ದನ್ನು ಹೇಳಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಹೊಟ್ಟೆ ತುಂಬಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತಿದ್ದಾರೆ. ಹೀಗಾಗಿ ನೈತಿಕತೆ ಮತ್ತು ಆತ್ಮಸಾಕ್ಷಿಗೆ ಇಲ್ಲಿ ಮಹತ್ವ ಕಡಿಮೆ. ಒಂದು ಲೆಕ್ಕದಲ್ಲಿ ಪತ್ರಿಕೆಗಳು ಟಿವಿಗಳಿಗಿಂತ ಕೊಂಚ ಭಿನ್ನವಾಗಿದೆ. ಡಿಜಿಟಲ್ ಮಾಧ್ಯಮಗಳು ಹೊಸ ಆಯಾಮವನ್ನು ಹೊಂದಿವೆ. ಟಿವಿ ಪವರ್​ಫುಲ್ ಹೌದು. ಆದ್ರೆ ಬೆಲೆ ಕಳೆದುಕೊಳ್ಳುತ್ತಿದೆ. ಭಯವಿಲ್ಲದ ಪತ್ರಿಕೋದ್ಯಮ ನಡೆಸಲು ಇವತ್ತು ಹಿಂದೆಮುಂದೆ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ.

ಅಟಲ್ ಬಿಹಾರಿ ವಾಜಪೇಯಿಯವರು ತುಂಬಾ ಹಿಂದೆ 51-49 ಪ್ರತಿಶತಃ ಅನ್ನೋದು ಪ್ರಜಾಪ್ರಭುತ್ವ ಅಲ್ಲ ಅನ್ನೋದನ್ನ ಹೇಳಿದ್ದರು. ನೈತಿಕತೆ ಅನ್ನುವುದೇ ನಿಜವಾದ ಪ್ರಜಾಪ್ರಭುತ್ವ ಅಂತ ಹೇಳಿದ್ದರು. ಪಾರ್ಲಿಮೆಂಟ್ ನೀತಿ ನಿಯಮಗಳ ಕೋಣೆ ಮಾತ್ರ ಆಗಿರಬಾರದು. ಇಲ್ಲಿ ಅನಿಸಿಕೆ ಮತ್ತು ಭಾವನೆಗಳಿಗೂ ಬೆಲೆ ಕೊಡಬೇಕು ಅಂತ ಹೇಳಿದ್ದರು.

ಮಾಜಿ ಪ್ರಧಾನಿಗಳ ಈ ಮಾತು ಇವತ್ತು ಮತ್ತೆ ನೆನಪಿಗೆ ಬರುತ್ತಿದೆ. ಯಾಕಂದ್ರೆ ಇವತ್ತು ರಾಷ್ಟ್ರೀಯ ವಾದ ಅನ್ನುವುದು ಕೇವಲ ಅಭಿಪ್ರಾಯ ಅನಿಸಿಕೆಗಳ ಮೇಲೆ ನಿಂತಿಲ್ಲ. ಬದಲಾಗಿ ಅಭಿಪ್ರಾಯ ವ್ಯಕ್ತಪಡಿಸುವವರು ಬಲ ಪಂಥೀಯನೋ ಅಥವಾ ಎಡ ಪಂಥೀಯನೋ ಅನ್ನುವುದರ ಮೇಲೆ ನಿಂತಿದೆ.

ಲೇಖಕರು: ಅಶುತೋಷ್​, ಆಪ್​ ನಾಯಕರು

ಇದನ್ನು ಓದಿ:

1. "ಧ್ರುವ"ತಾರೆ ಬಗ್ಗೆ ನಿಮಗೆಷ್ಟು ಗೊತ್ತು..?

2. ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..

3. ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ