ಬ್ಯುಸಿನೆಸ್ ಜೊತೆಗೆ ಮಹಿಳೆಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿರುವ ಝಿವಾಮಿ..!

ಟೀಮ್​​ ವೈ.ಎಸ್​. ಕನ್ನಡ

ಬ್ಯುಸಿನೆಸ್ ಜೊತೆಗೆ ಮಹಿಳೆಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿರುವ ಝಿವಾಮಿ..!

Thursday December 24, 2015,

3 min Read

ಒಂದು ಹುಡುಗಿಯ ಬದುಕಿನಲ್ಲಿ ಹಲವು ಮಹತ್ವದ ಹಂತಗಳು ಹಾಗೂ ಆಕೆಯ ದೈಹಿಕ ಅಂಶಗಳು ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಅದ್ರಲ್ಲೂ ಹುಡುಗಿಯರಿಗೆ ಸ್ತನಗಳ ಬಗ್ಗೆ ಇನ್ನಿಲ್ಲದ ಎಚ್ಚರಿಕೆ, ಕಾಳಜಿ ಅತ್ಯಗತ್ಯ. ಆದ್ರೆ ಅದೆಷ್ಟೋ ಮಹಿಳೆಯರಿಗೆ ತಮ್ಮ ಸ್ತನಗಳ ಮಹತ್ವ ಹಾಗೂ ಅದರ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಗಮನವೇ ಇರೋದಿಲ್ಲ. ಅದ್ರಲ್ಲೂ ತಾವು ಬಳಸುವ ಬ್ರಾಗಳು ಯಾವ ಗುಣಮಟ್ಟ ಹಾಗೂ ಅಳತೆ ಹೊಂದಿರುತ್ತೆ ಅನ್ನುವುದರ ಪರಿಕಲ್ಪನೆ ಹಲವರಿಗಿಲ್ಲ. ಕೆಲವರಿಗೆ ಇದು ಮುಜುಗರ ತರಿಸುವ ವಿಷ್ಯವಾದ್ರೆ ಇನ್ನು ಕೆಲವರಿಗೆ ಕೇವಲ ನಿರ್ಲಕ್ಷ್ಯತನ. ಆದ್ರೆ ಬ್ರಾಗಳ ಗುಣಮಟ್ಟ ಹಾಗೂ ಅಳತೆ ಬಗ್ಗೆ ನಿಗಾವಹಿಸದೇ ಇದ್ದರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಅನ್ನುವುದು ವಾಸ್ತವ. ಮಹಿಳೆಯರು ಈ ನಿರ್ಲಕ್ಷ್ಯತನ, ಮುಜುಗರದಿಂದ ಹೊರಬಂದು ಅವರಿಗೊಪ್ಪುವ ಗುಣಮಟ್ಟದ ಬ್ರಾಗಳನ್ನ ಖರೀದಿಸಲು ಅವಕಾಶ ನೀಡಿದೆ ಝಿವಾಮಿ. ಇದೀಗ ಬೆಂಗಳೂರಿನ ಇಂದಿರಾನಗರದಲ್ಲಿ ಶುರುವಾಗಿರುವ ಝಿವಾಮಿ ಷೋ ರೂಂ, ವಿವಿಧ ಬ್ರಾಗಳು ಸೇರಿದಂತೆ, ಮಹಿಳೆಯರ ವಿಶೇಷ ಎದೆಯುಡುಪುಗಳ ಮಾರಾಟ ಕೇಂದ್ರವಾಗಿದೆ. ವಿಶೇಷ ಅಂದ್ರೆ ಇಲ್ಲಿ ಮಹಿಳೆಯರು ಮುಕ್ತವಾಗಿ ತಮ್ಮ ಶರೀರದ ರೀತಿ, ಕಪ್ ನ ಅಳತೆ ಮತ್ತು ಶೇಪ್ ಗಳ ಬಗ್ಗೆ ತಿಳಿದುಕೊಂಡು ತಮಗೊಪ್ಪುವ ಬ್ರಾ ಖರೀದಿಸಬಹುದಾಗಿದೆ.

image


ಮಹಿಳೆಯ ಶರೀರ ಶೇಪ್ ಪ್ರತೀ ಆರು ತಿಂಗಳಿಗೊಮ್ಮೆ ಬದಲಾಗುತ್ತಲೇ ಇರುತ್ತದೆ. ಅದ್ರಲ್ಲೂ ಬ್ರಾ ಸೈಜ್ ಕೂಡ ಚೇಂಜ್ ಆಗ್ತಿರುತ್ತದೆ. ಹೀಗಾಗಿ ಮಹಿಳೆಯರು ಪ್ರತೀ ಮೂರು ತಿಂಗಳಿಗೊಮ್ಮೆ, ಕನಿಷ್ಠ ವರ್ಷಕ್ಕೊಮ್ಮೆಯಾದ್ರೂ ತಮ್ಮ ಬ್ರಾದ ಅಳತೆಯನ್ನ ಬದಲಾಯಿಸುವುದು ಅನಿವಾರ್ಯ. ಒಂದೊಮ್ಮೆ ಈ ರೀತಿ ಬದಲಾವಣೆಗಳಿಗೆ ಮಹತ್ವ ನೀಡಿದ್ದೇ ಆದ್ರೆ, ಮಹಿಳೆಯರು ಶರೀರದ ಆಕಾರಕ್ಕೆ ತಕ್ಕಂತೆ ಸ್ತನಗಳು ಸುಂದರವಾಗಿ ರೂಪುಗೊಳ್ಳುತ್ತವೆ. ಹೀಗಾಗಿ ಝಿವಾಮಿ ಸ್ಟೋರ್ ನಲ್ಲಿ ಫ್ರೀ ಫಿಟ್ಟಿಂಗ್ಸ್, ಕನ್ಸಲ್ಟೇಷನ್ಸ್ ಹಾಗೂ ಸಹಾಯ ಮಾಡಲು ಸೆಶನ್ ಗಳನ್ನ ಶುರುಮಾಡಲಾಗಿದೆ. “ ಇಲ್ಲಿ ವಿಶೇಷ ಕೋಣೆಗಳನ್ನ ತೆರೆದಿರುವುದು ಕೇವಲ ಸೇಲ್ಸ್ ಹಾಗೂ ಪ್ರಮೋಷನ್ ಗಾಗಿ ಅಷ್ಟೇ ಅಲ್ಲ. ಮಹಿಳೆಯರಿಗೆ ಇದ್ರ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು ನನ್ನ ಮುಖ್ಯ ಉದ್ದೇಶ. ಅದೆಷ್ಟೋ ಮಹಿಳೆಯರಿಗೆ ಯಾವ ಸೈಸ್ ನ ಬ್ರಾ ಖರೀದಿಸಬೇಕು, ಯಾವ ಗುಣಮಟ್ಟ ಹೊಂದಿರಬೇಕು ಅನ್ನುವುದರ ಮಾಹಿತಿಯೇ ಇರುವುದಿಲ್ಲ ” ಅಂತಾರೆ ಝಿವಾಮಿಯ ಸಂಸ್ಥಾಪಕಿ ಹಾಗೂ ಸಿಇಓ ರಿಚಾ ಕರ್.

ಶೋರೂಂ ಜೊತೆಗೆ ಫಿಟ್ಟಿಂಗ್ ರೂಂ..

ಝಿವಾಮಿಯಲ್ಲಿ 16ಕ್ಕೂ ಹೆಚ್ಚು ಸೈಜ್ ಗಳು ಲಭ್ಯವಿದ್ದು, ವಿವಿಧ ಅಳತೆಗಳನ್ನೂ ಇಲ್ಲಿ ಪಡೆಯಲಾಗುತ್ತದೆ. ಹೀಗಾಗಿ ಗ್ರಾಹಕರು ನೇರವಾಗಿ ಇಲ್ಲಿ ಬಂದು ಅಳತೆಯನ್ನ ಖಚಿತಪಡಿಸಿಕೊಂಡು ಇಲ್ಲಿರುವ ಪ್ರೊಫೇಷನಲ್ ಹಾಗೂ ಎಕ್ಸ್ ಪರ್ಟ್ಸ್ ಗಳಿಂದ ಫಿಟ್ಟಿಂಗ್ ಮಾಡಿಸಿಕೊಳ್ಳಬಹುದು. ಅಲ್ಲದೆ ಫಿಟ್ಟಿಂಗ್ ಆದ ಬಳಿಕ ಅವುಗಳ ಟ್ರಯಲ್ ನೋಡುವುದಕ್ಕೂ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಗ್ರಾಹಕರು ಬಯಸಿದರೆ ತಾವು ಆಯ್ಕೆ ಮಾಡಿಕೊಂಡ ಬ್ರಾಗಳನ್ನ ಆನ್ ಲೈನ್ ನಲ್ಲಿ ಅಥವಾ ಕಾಯ್ದಿರಿಸಿ ಸ್ವಲ್ಪ ಸಮಯದ ನಂತ್ರ ತೆಗೆದುಕೊಳ್ಳಲೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿರುವ ಎದೆಗೆ ಸಂಬಂಧಿಸಿದ ಒಳಉಡುಪುಗಳ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಆನ್ ಲೈನ್ ನಲ್ಲೂ ಗ್ರಾಹಕರು ತಾವು ಬಯಸಿದ ಬ್ರಾಂಡನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಫಿಟ್ಟಿಂಗ್ ಕೋಣೆಯ ಅವಶ್ಯಕತೆ..

ಝಿವಾಮಿ ನಡೆಸಿದ ಸರ್ವೇ ಪ್ರಕಾರ ಪ್ರತೀ ಐವರು ಮಹಿಳೆಯರ ಪೈಕಿ ನಾಲ್ವರಿಗೆ ತಮಗೆ ಹೊಂದುವ ಸೂಕ್ತ ಅಳತೆ ಬಗ್ಗೆ ಜ್ಞಾನವೇ ಇಲ್ಲ. ಅವರೆಲ್ಲಾ ಅನ್ ಫಿಟ್ ಸೈಜ್ ಗಳನ್ನೇ ಧರಿಸುತ್ತಿರುವುದು ಸ್ಪಷ್ಟವಾಗಿತ್ತು. ಅದ್ರಲ್ಲೂ ಶೇಕಡಾ 82ರಷ್ಟು ಮಹಿಳೆಯರು ತಜ್ಞರಿಂದ ತಮಗೆ ಬೇಕಾಗಿರುವ ಅಳತೆಯನ್ನ ತಿಳಿದುಕೊಳ್ಳಲು ಇಚ್ಛಿಸುವುದೇ ಇಲ್ಲ. ಕೆಲವು ಮಹಿಳೆಯರು ತಾವು ಖರೀದಿಸಿದ ಬ್ರಾಗಳು ಅನ್ ಫಿಟ್ ಆಗಿದ್ರೂ ಅದನ್ನೇ ಧರಿಸುವ ಸಾಹಸ ಮಾಡುತ್ತಾರೆ. ಹಾಗಾಗಿ ಝಿವಾಮಿ ಅವರಿಗೆ ನೆರವು ನೀಡಲು ಫಿಟ್ಟಿಂಗ್ ಕೋಣೆಯನ್ನ ತಮ್ಮ ಷೋ ರೂಂನಲ್ಲಿ ಕಾಯ್ದಿರಿಸಿದೆ.

image


“ ನಮ್ಮ ಬಳಿಗೆ ಬರುವ ಪ್ರತೀ ಮಹಿಳಾ ಗ್ರಾಹಕರಿಗೂ ನಮ್ಮ ಬಳಿ ಇರುವ ವಿವಿಧ ಮಾದರಿಯ ಹಾಗೂ ಸೈಜ್ ನ ಬ್ರಾಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಕೆಲವರಿಗೆ D ಹಾಗೂ DD ಕಪ್ಸ್ ಗಳ ನಡುವೆ ಇರುವ ವ್ಯತ್ಯಾಸವೇ ಗೊತ್ತಿರುವುದಿಲ್ಲ. ” - ರಿಚಾ ಕರ್ , ಝಿವಾಮಿಯ ಸಂಸ್ಥಾಪಕಿ ಹಾಗೂ ಸಿಇಓ

ಗ್ರಾಹಕರಿಗೆ ಅತ್ಯುತ್ತಮ ಸರ್ವೀಸ್ ಕೊಡುವ ಉದ್ದೇಶದಿಂದ ಝಿವಾಮಿ ಶುರುವಾಗಿದೆ. ಅಲ್ಲದೆ ಮಹಿಳೆಯರನ್ನ ಮುಜುಗರದಿಂದ ಹೊರಗೆಳೆದು ಮುಕ್ತವಾಗಿ ತಮ್ಮ ಆಯ್ಕೆ ಮಾಡಲು ಅವಕಾಶ ನೀಡಿದೆ. ಕಳೆದ ಸೆಪ್ಟಂಬರ್ ನಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿರುವ ಝಿವಾಮಿ, ಪ್ರತೀ ನಿಮಿಷಕ್ಕೆ ಒಂದು ಬ್ರಾ ಮಾರುವ ಮೂಲಕ ಗಮನ ಸೆಳೆದಿದೆ. ಇದ್ರಲ್ಲಿ ಶೇಕಡಾ 60ರಷ್ಟು ಆದಾಯ ಇದೊಂದೇ ಷೋ ರೂಂನಿಂದ ಬರ್ತಾ ಇದ್ರೆ, ಶೇಕಡಾ 30ರಷ್ಟು ಆದಾಯ ಇತರೆ ಸಣ್ಣ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ಘಟಕಗಳಿಂದ ಬರ್ತಾ ಇದೆ. ಹೀಗೆ ಅಗತ್ಯವಿರುವ ಅಳತೆಗಳನ್ನ ಪಡೆದು ಬ್ರಾಗಳನ್ನ ಒದಗಿಸುವುದರ ಜೊತೆಗೆ, ಮಹಿಳೆಯರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಝಿವಾಮಿ ಮಾಡುತ್ತಿದೆ.

ಲೇಖಕರು – ಸಿಂಧೂ ಕಶ್ಯಪ್

ಅನುವಾದ – ಬಿ ಆರ್ ಪಿ, ಉಜಿರೆ