ಸಾಮಾನ್ಯ ಹುಡುಗ ಈಗ ಭಾರತವೇ ಮೆಚ್ಚುವ ಡಿಸೈನರ್

ಪೂರ್ವಿಕಾ

1

ಇವರ ಕೆಲಸಕ್ಕೆ ಅಸ್ತು ಅನ್ನದವರಿಲ್ಲ..ಒಂದೆರೆಡಲ್ಲ ನೂರು ಕೋಟಿ ಬ್ಯೂಸಿನೆಸ್ ಅವ್ರದ್ದು..ಸಾಕಷ್ಟು ಪ್ರಶಸ್ತಿಗಳು..ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಡಿಸೈನ್ ಮಾಡೋ ಕಾಯಕ ಕಣ್ಣ ಮುಂದೆ ಸಿನಿಮಾರಂಗದಲ್ಲಿ 25 ವರ್ಷಗಳ ಸುದೀರ್ಘ ಪ್ರಯಾಣ. ಇಷ್ಟೆಲ್ಲ ಸಾಧಿಸಿರೋ ವ್ಯಕ್ತಿ ಇಂದಿನ ಭಾರತೀಯ ಜನರಿಗಷ್ಟೆ ಅಲ್ಲದೆ ವಿದೇಶದಲ್ಲೂ ಎಲ್ಲರಿಗೂ ಚಿರಪರಿಚಿತ. ಅದು ಮತ್ಯಾರು ಅಲ್ಲ ಭಾರತದ ಮೋಸ್ಟ್ ವಾಂಟೆಂಡ್ ಸ್ಟಾರ್ ಡಿಸೈನರ್ ಮನೀಶ್ ಮಲ್ಹೋತ್ರ

ಬಣ್ಣ ಜಗತ್ತಿನಲ್ಲಿ ಸಾಮಾನ್ಯರು ಅಸಾಮಾನ್ಯರಾಗ್ತಾರೆ. ಅಸಾಮಾನ್ಯರು ಸಾಮಾನ್ಯರಾಗ್ತಾರೆ. ಚಿತ್ರರಂಗಕ್ಕೆ ಅಂತಹ ಶಕ್ತಿ ಇದೆ. ಸ್ವಂತ ಶಕ್ತಿ ,ಬುದ್ದಿ ಇದ್ರೆ ಎಂಥವ್ರು ಇಲ್ಲಿ ನೆಲೆ ನಿಲ್ತಾರೆ ಅನ್ನೋದಕ್ಕೆ ಜೀವಂತ ಸಾಕ್ಷಿ ಮನೀಶ್ ಮಲ್ಹೋತ್ರ. ಮನೀಶ್ ಅಂದ್ರೆ ಬಾಲಿವುಡ್ ಚಿತ್ರಮಂದಿಗಂತು ಅಚ್ಚು ಮೆಚ್ಚು ಸುಮಾರು 25 ವರ್ಷಗಳಿಂದ ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯರು ತೆರೆಮೇಲೆ ಚಂದುಳ್ಳಿಯರಂತೆ ಮಿಂಚುತಿರೋದಕ್ಕೆ ಏಕೈಕ ಕಾರಣ ಅಂದ್ರೆ ಮನೀಶ್ ಮಲ್ಹೋತ್ರ ಕಾಸ್ಟ್ಯೂಮ್ಸ್ ಡಿಸೈನ್ಸ್. ಹೌದು ಹಿಂದಿ ಸಿನಿಮಾಗಳಲ್ಲಿ ಮನೀಶ್ ರಂಗು ಜೋರಾಗಿದೆ…ಪ್ರತಿ ವಾರ ಬಿಡುಗಡೆಯಾಗೋ ಸಿನಿಮಾಗಳಲ್ಲಿ ಮನೀಶ್ ಮಾಡಿದ ಡಿಸೈನ್ಸ್ ರಾರಾಜಿಸುತ್ತಿರುತ್ತೆ.


ಎಲ್ಲಾ ಸ್ಟಾರ್ಸ್ ಗೂ ಮನೀಶ್ ರದ್ದೆ ಡಿಸೈನ್ಸ್

ಬಾಲಿವುಡ್ ನಲ್ಲಿರೋ ಶ್ರೀದೇವಿ, ರೇಖಾ, ಕಾಜೊಲ್, ಐಶ್ವರ್ಯ ರೈ , ಅಲಿಯಾ ಭಟ್ , ಕರೀನಾ ಕಪೂರ್ ,ಕರೀಷ್ಮಾ ಕಪೂರ್ , ಊರ್ಮಿಳಾ, ಕರ್ತೀನಾ, ದೀಪಿಕಾ ಪಡುಕೋಣೆ, ಹೀಗೆ ಇನ್ನೂ ಹತ್ತು ಹಲವು ನಾಯಕಿಯರಿಗೆ ಮನೀಶ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡ್ತಾರೆ. ಪರ್ಸನಲ್ ಮಾತ್ರವಲ್ಲದೆ ಅವ್ರ ಎಲ್ಲಾ ಸಿನಿಮಾಗಳಿಗೂ ಮನೀಶ್ ಅವ್ರೇ ಡಿಸೈನ್ ಮಾಡಿಕೊಡೋದು. ಚಿಕ್ಕವಯಸ್ಸಿನಿಂದಲೇ ಬಾಲಿವುಡ್ ಸಿನಿಮಾಗಳನ್ನ ನೋಡುತ್ತಾ ಬೆಳೆದ ಮನೀಶ್ ತನ್ನ ಎಂಟನೇ ವರ್ಷದಲ್ಲೇ ಕಾಸ್ಟ್ಯೂಮ್ಸ್​​ ಡಿಸೈನ್ಸ್ ಬಗ್ಗೆ ಒಲವು ತೋರಿದವ್ರು. ಇವ್ರಷ್ಟೆ ಅಲ್ಲದೆ ಶಾರುಖ್ ,ಅಮಿತಾಬ್ ,ಜಾನ್ ಅಬ್ರಾಹಂ ಹೀಗೆ ಇನ್ನೂ ಅನೇಕರಿಗೂ ಮನೀಶ್ ಅವ್ರೇ ಡಿಸೈನರ್

 

ಸಾಮಾನ್ಯ ಅಸಾಮಾನ್ಯನಾಗಿದ್ದು ಹೀಗೆ

ಮನೀಶ್ ಹಿಂದಿ ಸಿನಿಮಾಗಳನ್ನ ನೋಡು ನೋಡುತ್ತಲೇ ಡಿಸೈನಿಂಗ್ ಬಗ್ಗೆ ಒಲವು ಬೆಳಸಿಕೊಂಡವ್ರು. ಚಿಕ್ಕವಯಸ್ಸಿನಲ್ಲೇ ಪ್ರತಿ ವಾರ ಎರಡು ಸಿನಿಮಾಗಳನ್ನ ನೋಡುತ್ತಾ ಬೆಳೆದವ್ರು. ಸಿನಿಮಾದಲ್ಲಿ ನಟ-ನಟಿಯರ ಕಾಸ್ಟ್ಯೂಮ್ಸ್ ಅನ್ನ ನೋಡಿಕೊಂಡು ಅದನ್ನ ಮನೆಯಲ್ಲಿ ಬಂದು ಹೊಲಿದು ತನ್ನ ತಂಗಿಯರಿಗೆ ನೀಡುತ್ತಿದ್ದರಂತೆ. ನಂತ್ರ ದಿನಗಳು ಕಳೆದಂತೆ ಮನೀಶ್ ಚಿಕ್ಕದೊಂದು ಬೂಟಿಕ್ ನಲ್ಲಿ ಡಿಸೈನರ್ ಕಮ್ ಸೇಲ್ಸ್ ಬಾಯ್ ಆಗಿ ಕೆಲಸಕ್ಲೆ ಸೇರುತ್ತಾರೆ. ಅಲ್ಲಿಂದ ತನ್ನ ಡಿಸೈನಿಂಗ್ ಪ್ರಯಾಣವನ್ನ ಪ್ರಾರಂಭ ಮಾಡಿ ಮೊದಲಿಗೆ ರಂಗೀಲ ಸಿನಿಮಾಗೆ ಕಾಸ್ಟ್ಯೂಮ್ಸ್ ಡಿಸೈನ್ಸ್ ಮಾಡುತ್ತಾರೆ. ಅಲ್ಲಿ ಸಕ್ಸಸ್ ಮೆಟ್ಟಿಲನ್ನ ಏರಲು ಪ್ರಾರಂಭ ಮಾಡಿದ ಮನೀಶ್ ಇಲ್ಲಿಯ ವರೆಗೂ ಎಂದಿಗೂ ಹಿಂದೆ ಹೋಗಿದ್ದೇ ಇಲ್ಲಾ. ಸುದೀರ್ಘ 25 ವರ್ಷಗಳ ಪ್ರಯಾಣದಲ್ಲಿ ಮನೀಶ್ ಹಾಗೂ ಬಾಲಿವುಡ್ ನ ನಂಟು ಗಟ್ಟಿಯಾಗುತ್ತಾ ಬಂದಿದೆ. ಇಂದಿಗೂ ಮನೀಶ್ ಕೈನಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಿವೆ. ಡಿಸೈನಿಂಗ್ ಅಂದ್ರೆ ಸುಲಭದ ಮಾತಲ್ಲ, ಒಂದು ಕಡೆ ಇರೋ ಡಿಸೈನಿಂಗ್ ಮತ್ತೊಂದು ಕಡೆ ಬಳಸುವಂತಿಲ್ಲ. ಇಲ್ಲಿ ಪ್ರತಿ ಕ್ಷಣ ಕ್ರಿಯೇಟಿವಿಟಿ ವರ್ಕ್ ಆಗುತ್ತಲೇ ಇರಬೇಕು. ಅದ್ರಿಂದಲೇ ಮನೀಶ್ ಇಂದಿಗೂ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವ್ರ ಪರಿಶ್ರಮ ಹಾಗೂ ಶ್ರದ್ದೆ ಇಂದು ಮನೀಶ್ ಅವ್ರನ್ನ ಇಷ್ಟು ಎತ್ತರಕ್ಕೆ ಕರೆದೊಯ್ದಿದೆ.

ಬಾರತೀಯ ಸಿನಿಮಾರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಸ್ಟ್ ಬಾಲಿವುಡ್ ಡಿಸೈನರ್ ಅನ್ನೋ ಪ್ರಶಸ್ತಿ ಮನೀಶ್ ಅವ್ರಿಗೆ ಸಿಕ್ಕಿದೆ. ಇದಷ್ಟೇ ಅಲ್ಲದೆ 35 ಕ್ಕೂ ಹೆಚ್ಚು ಪ್ರಶಸ್ತಿಗಳು ಮನೀಶ್ ಅವ್ರ ಕೆಲಸಕ್ಕೆ ಸಂದಿದೆ. ಇದಲ್ಲದೇ ಫೇಸ್ ಬುಕ್ ನಲ್ಲಿ ಮನೀಶ್ ಅವ್ರಿಗೆ 407 ಸಾವಿರ ಜನರು ಫಾಲೋಹರ್ ಇದ್ದಾರೆ. ಅವ್ರ ಫೇಸ್ ಬುಕ್ ಪೇಜ್ ಗೆ 1.1 ಮಿಲಿಯನ್ ಲೈಕ್ಸ್ ಜನರಿದ್ದಾರೆ. ಹೀಗೆ ಭಾರತದಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದಿರೋ ಮನೀಶ್ ಮಲ್ಹೋತ್ರ ಅವ್ರ ಡಿಸೈನ್ಸ್ ಅನ್ನ ನೀವು ಕೊಂಡುಕೊಳ್ಳಬೇಕು ಅಂದ್ರೆ ಮನೀಶ್ ಮಲ್ಹೋತ್ರ ಡಿಸೈನ್ಸ್ ಅನ್ನೋ ಪೇಜ್ ಗೆ ಲಾಗಿನ್ ಆಗಿ ಕಾಸ್ಟ್ಯೂಮ್ಸ್ ಅನ್ನ ಕೊಂಡುಕೊಳ್ಳಬಹುದು.

Related Stories

Stories by AARABHI BHATTACHARYA