ಪುರೋಹಿತರು ನಕರಾ ಮಾಡ್ತಿದ್ದಾರಾ..? ಡೋಂಟ್​​ವರಿ ಆನ್​​ಲೈನ್​​ನಲ್ಲೇ ಬುಕ್​​ ಮಾಡಿ..!

ಉಷಾ ಹರೀಶ್

0

ಮೊಬೈಲ್​​ಗೊಂದು ಮೆಮೊರಿಕಾರ್ಡ್​ ಬೇಕು ಅಂದ್ರೆ ಆನ್​​ಲೈನ್​​ನಲ್ಲಿ ಸಿಗುತ್ತೆ. ಇನ್ನೇನೋ ಊಟ, ತಿಂಡಿ ಬೇಕಾಂದ್ರೂ ಹೋಂ ಡೆಲಿವರಿ ಫೆಸಿಲಿಟಿ ಇದೆ. ಹಾಕೋ ಬಟ್ಟೆಯಿಂದ ಹಿಡಿದು ಪರ್ಸನಲ್​​ ವಸ್ತುಗಳ ತನಕ ಎಲ್ಲವೂ ನಿಮ್ಮ ಮನೆ ಮುಂದೆ ಬಂದು ಬಿಡುತ್ತದೆ. ಕಾಸಿದ್ದರೆ ಕಜ್ಜಾಯ ಅನ್ನೋ ಈ ಕಾಲದಲ್ಲಿ ಪುರೋಹಿತರು ಕೂಡ ಆನ್​ಲೈನ್​​ನಲ್ಲೇ ಲಭ್ಯವಿದ್ದಾರೆ...!

21 ಶತಮಾನದಲ್ಲಿ ಪ್ರತಿಯೊಂದು ಪ್ಯಾಕೇಜ್ ಲೆಕ್ಕದಲ್ಲಿ ನಡೆಯುತ್ತಿದೆ. ಮದುವೆಗಾಗಿ ಮ್ಯಾರೇಜ್ ಕಂಟ್ರಾಕ್ಟರ್ಸ್, ಕಾರ್ಯಕ್ರಮಗಳಿಗೆ ಇವೆಂಟ್ ಮ್ಯಾನೇಜ್​​ಮೆಂಟ್ ಕಂಪನಿಗಳು ಹೀಗೆ ಎಲ್ಲದಕ್ಕೂ ಕಂಟ್ರ್ಯಾಕ್ಟರ್​​ಗಳಿದ್ದಾರೆ ಇತ್ತೀಚಿನ ಬೆಳವಣಿಗೆಯೆಂದರೆ ಇಬ್ಬರು ಯುವಕರ ಸಾಹಸದಿಂದ ಸ್ಥಾಪಿತವಾಗಿರುವ ಒಂದು ಕಂಪನಿ ತಮ್ಮ ಪೂಜಾ ಕೆಲಸವನ್ನು ಹಗುರ ಮಾಡಿದೆ. ಒಂದು ಫೋನ್ ಮಾಡಿ ಪೂಜಾ ಪ್ಯಾಕೇಜ್​​ಗಳನ್ನು ಆಯ್ಕೆ ಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಪುರೋಹಿತರು, ಪೂಜಾ ಸಾಮಗ್ರಿಗಳು ಬರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಪೂಜೆಗಿರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಯಾವುದೇ ಶುಭ ಸಮಾರಂಭಗಳಲ್ಲಾಗಲಿ, ಅಶುಭ ಸಮಾರಂಭಗಳಲ್ಲಾಗಲಿ ಪೂಜೆ ಹೋಮ ಹವನ ಇರಲೇಬೇಕು.

ಕೆವರಿಗಂತೂ ಪೂಜೆ ಮಾಡದೇ ಸೂರ್ಯ ಬೆಳಗುವುದೇ ಇಲ್ಲ. ಕೆಲ ದಶಕಗಳ ಹಿಂದೆ ಪೂಜೆಗಳೆಂದರೆ ಸಾಕು ಎಲ್ಲರೂ ಪುರೋಹಿತರನ್ನು ಹುಡುಕಿಕೊಂಡು ಹೋಗಿ ಬುಕ್ ಮಾಡುತ್ತಿದ್ದರು. ಹಳ್ಳಿಗಳಲ್ಲಿ ಇದು ಇಂದಿಗೂ ನಡೆದುಕೊಂಡು ಬರುತ್ತಿದೆ.

ಆದರೆ ನಗರದಲ್ಲಿ ಇದು ತುಸು ಕಷ್ಟ, ಹೋಮ ಹವನಗಳನ್ನು ಮಾಡಲು ಪುರೋಹಿತರು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಒಂದು ವೇಳೆ ಪುರೋಹಿತರು ನಮಗೆ ಸಿಕ್ಕರು ಪೂಜೆಗೆ ಬೇಕಾದ ಸಾಮಾಗ್ರಿಗಳ ಸಕಾಲಕ್ಕೆ ಮತ್ತು ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಅಲೆದಾಟ ಮಾಡಬೇಕಾಗುತ್ತಿದೆ.

ಇದೆಕ್ಕೆಲ್ಲಾ ಪರಿಹಾರ ಒದಗಿಸುವ ಸಲುವಾಗಿ ಮಹಾರಾಷ್ಟ್ರ ಮೂಲದ ಸುಘೋಷ್ ಮತ್ತು ನಿಲೇಶ್ ಇಬ್ಬರು ಯುವಕರು ಸೇರಿಕೊಂಡು ಮುಹೋರ್ತಾಮಜ ಎಂಬ ಒಂದು ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಪುರೋಹಿತರು ಮತ್ತು ಪೂಜೆಗೆ ಸಂಬಂಧಟ್ಟ ವಸ್ತುಗಳು ಕ್ಷಣ ಮಾತ್ರದಲ್ಲಿ ಕೈಗೆ ಸಿಗುವಂತೆ ಮಾಡಿದ್ದಾರೆ.

ಪ್ಯಾಕೇಜ್ ಲೆಕ್ಕ: 

ಇವರ ಕಂಪನಿಗೆ ಪೂಜೆ ಪ್ಯಾಕೇಜ್ ನೀಡಿದರೆ ಸಾಕು,ಪುರೋಹಿತರನ್ನು ಬುಕ್ ಮಾಡುವದರಿಂದ ಹಿಡಿದು ಪೂಜಾ ಸಾಮಾಗ್ರಿಗಳನ್ನು ಖರೀದಿಸಿ ನಿಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡಿಕೊಡುತ್ತಾರೆ. ಅಷ್ಟೇ ಅಲ್ಲದೆ ಸುಮಾರು 6 ವಿಧಗಳಡಿ ವೇದ ಶಾಸ್ತ್ರಗಳನ್ನು ಅಭ್ಯಾಸ ಮಾಡಿರುವ 100ಕ್ಕೂ ಹೆಚ್ಚಿನ ಪುರೋಹಿತರು ಈ ಸಂಸ್ಥೆಯಡಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.

ಹುಟ್ಟಿದ್ದು ಹೇಗೆ..?

ಈ ಸಂಸ್ಥೆಯ ಹುಟ್ಟಿನ ಹಿಂದೆ ಒಂದು ಪೂಜೆಯ ಕಥೆಯಿದೆ. ಸುಘೋಷ್ ಮದುವೆಯಾದ ಹೊಸದರಲ್ಲಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಬೇಕಿತ್ತು. ಅದಕ್ಕಾಗಿ ಸುಘೋಷ್ ದಂಪತಿ ಒಂದು ವಾರ ಸಮಯವನ್ನು ವ್ಯಯ ಮಾಡಿದರು. ಅಲ್ಲದೇ ಇಬ್ಬರೂ ಉದ್ಯೋಗಿಗಳಾಗಿದ್ದ ಅವರಿಗೆ ಪೂಜೆಗಾಗಿ ಕೆಲ ದಿನ ರಜೆ ಕೂಡಾ ಹಾಕಬೇಕಾಯ್ತು. ಆ ಸಮಯದಲ್ಲಿ ತಮಗಾದ ಅನುಭವ ಕಷ್ಟ ಮತ್ತೊಬ್ಬರು ಅನುಭವಿಸಬಾರದು ಎಂಬ ಉದ್ದೇಶದಿಂದ ಇಂತಹದ್ದೊಂದು ಸಂಸ್ಥೆ ಬಗ್ಗೆ ಅವರ ಸ್ನೇಹಿತರಾದ ನಿಲೇಶ್ ಅವರಲ್ಲಿ ಪ್ರಸ್ತಾಪಿಸಿದಾಗ ಹುಟ್ಟಿಕೊಂಡಿದ್ದೇ ಮುಹೂರ್ತಾಮಜ. ಈ ಕಂಪನಿ ಈಗಾಗಲೇ ಮುಂಬೈ ನಾಸಿಕ್, ನಾಗಪುರ, ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಗ್ರಾಹಹಕರು ತಮಗೆ ಬೇಕಾದ ಪೂಜಾ ಪ್ಯಾಕೇಜ್​​ನ್ನು ನೀಡಿದರೆ ಸಾಕು ಎಲ್ಲವನ್ನು ಮುಹೂರ್ತಾಮಜ ತಂಡ ಮಾಡುತ್ತದೆ. 1000 ಸಾವಿರದಿಂದ 30 ಸಾವಿರದವರೆಗೂ ಪ್ಯಾಕೇಜ್ ಲಭ್ಯ 300 ಕ್ಕೂ ಹೆಚ್ಚಿನ ಪಂಡಿತರು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಆನ್ ಲೈನ್​​ನಲ್ಲಿ ಲಭ್ಯ: 

ಈ ಕಂಪನಿಯು ಆನ್​​​ಲೈನ್ ಮೂಲಕವು ಪ್ಯಾಕೇಜ್​​ಗಳನ್ನು ಬುಕ್ ಮಾಡುವ ಸೌಲಭ್ಯ ಕಲ್ಪಿಸಿದೆ. ಗ್ರಾಹಕರು ವೆಬ್​​ಸೈಟ್​​​ಗೆ ಲಾಗ್ ಇನ್ ಆಗಿ ಪೂಜೆಯ ಪ್ಯಾಕೇಜ್​​ಗಳನ್ನು ಬುಕ್ ಮಾಡಬಹುದು. ಆನ್ ಲೈನ್ ವಿಳಾಸ www.muhurtmaza.com.