ನಮ್ಮಲ್ಲಿ ಇಲ್ಲದೇ ಇರೋದು ಮೈಕಲ್​ ಫೆಲ್ಫ್ಸ್​ರಲ್ಲಿ ಏನಿದೆ..?

ಟೀಮ್​ ವೈ.ಎಸ್​. ಕನ್ನಡ

ನಮ್ಮಲ್ಲಿ ಇಲ್ಲದೇ ಇರೋದು ಮೈಕಲ್​ ಫೆಲ್ಫ್ಸ್​ರಲ್ಲಿ ಏನಿದೆ..?

Thursday August 11, 2016,

2 min Read

ಒಲಿಂಪಿಕ್ಸ್‌ನಲ್ಲಿ ಮೊದಲ ಸ್ವರ್ಣಕ್ಕೆ ಚುಂಬಿಸಿದಾಗ ವಯಸ್ಸು ಜಸ್ಟ್‌ 18 ವರ್ಷ. ಈಗ ಮೈಕಲ್‌ ಫೆಲ್ಫ್ಸ್‌ಗೆ 32 ವರ್ಷ. ಆದ್ರೆ ಇವತ್ತಿಗೂ ಒಲಿಂಪಿಕ್ಸ್‌ನಲ್ಲಿ ಫೆಲ್ಫ್ಸ್‌ ಬಂಗಾರದ ಮೀನು. ಪೂಲ್‌ಗಿಳಿದ್ರೆ ಪದಕ ಗ್ಯಾರೆಂಟಿ. ಅಮೆರಿಕದ ಈ ಬಂಗಾರದ ಮನುಷ್ಯ ಒಲಿಂಪಿಕ್‌ ಇತಿಹಾಸದಲ್ಲಿ ಸ್ವರ್ಣಗೆದ್ದ ಹಿರಿಯ ಈಜುಪಟು..!

ಮೈಕಲ್‌ ಫೆಲ್ಪ್ಸ್‌.. ಸ್ವಿಮ್ಮಿಂಗ್‌ ಲೋಕಕ್ಕೆ ಈತ ಚಿನ್ನದ ಮೀನು. ಕಣಕ್ಕಿಳಿದ್ರೆ ಬಂಗಾರ ಗ್ಯಾರೆಂಟಿ ಅನ್ನುವಷ್ಟರ ಮಟ್ಟಿಗೆ ಫೆಲ್ಪ್ಸ್‌ ವಿಶ್ವಾಸ ತುಂಬಿದ್ದಾರೆ. ರಿಯೋದಲ್ಲಿ ಫೆಲ್ಪ್ಸ್‌ ಚಿನ್ನದ ಬೇಟೆಗೆ ಅಡ್ಡಿಯಾಗಿಲ್ಲ. ಪೂಲ್‌ನಲ್ಲಿ ಎದುರಾಳಿಗಿಂತ ವೇಗವಾಗಿ ಈಜಿ ಚಿನ್ನದ ಅಲೆಯೆಬ್ಬಿಸಿದ್ದಾರೆ. ಒಲಿಂಪಿಕ್‌ ಇತಿಹಾಸದಲ್ಲಿ ದಿ ಬೆಸ್ಟ್‌ ಅಥ್ಲೀಟ್‌ ಅನ್ನೋ ಖ್ಯಾತಿ ಪಡೆದುಕೊಂಡಿದ್ದಾರೆ. 32 ವರ್ಷ ವಯಸ್ಸಿನ ಮೈಕಲ್‌ ಫೆಲ್ಪ್ಸ್ ಈಜುಕೊಳದಲ್ಲಿ ಒಲಿಂಪಿಕ್‌ ಪದಕ ಗೆದ್ದ ಅತೀ ಹಿರಿಯ ಈಜುಗಾರ ಅನ್ನೋ ಖ್ಯಾತಿ ಪಡೆದುಕೊಂಡಿದ್ದಾರೆ.

ಫೆಲ್ಫ್ಸ್​ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದಷ್ಟು ಭಾರತ ಒಟ್ಟಾರೆ ಪದಕವನ್ನೇ ಗೆದ್ದಿಲ್ಲ..!

ಯಸ್‌, ಹೌದು, ಮೈಕಲ್ ಫೆಲ್ಫ್ಸ್‌ ಒಲಿಂಪಿಕ್ಸ್‌ನಲ್ಲಿ ಗೆದ್ದಿರೋದು 21 ಚಿನ್ನದ ಪದಕಗಳನ್ನು. ಇದ್ರ ಜೊತೆಗೆ 2 ಬೆಳ್ಳಿ ಪದಕಗಳು ಮತ್ತು 2 ಕಂಚಿನ ಪದಕಗಳನ್ನು ಸೇರಿಸಿದ್ರೆ, ಬಾಲ್ಟಿಮೋರ್‌ನ ಈಜುಗಾರನ ಖಾತೆಯಲ್ಲಿ ಬರೋಬ್ಬರಿ 25 ಒಲಿಂಪಿಕ್‌ ಪದಕಗಳಾಗುತ್ತದೆ. ಸ್ವಾತಂತ್ರ್ಯ ನಂತರ ಭಾರತ ಒಟ್ಟಾರೆ ಒಲಿಂಪಿಕ್ಸ್‌ಗಳಲ್ಲಿ ಗೆದ್ದಿರೋದು ಕೇವಲ 21 ಪದಕಗಳನ್ನು. ಅಂದ್ರೆ ಮೈಕಲ್‌ ಫೆಲ್ಫ್ಸ್​ ಗೆದ್ದಿರುವ ಚಿನ್ನದ ಪದಕಗಳಷ್ಟೇ ಭಾರತ ಒಟ್ಟಾರೆ ಒಲಿಂಪಿಕ್‌ ಪದಕಗಳನ್ನು ಗೆದ್ದಿದೆ ಅನ್ನೋದು ವಿಪರ್ಯಾಸ.

image


ಅಥೆನ್ಸ್‌ನಲ್ಲಿ ಆರಂಭವಾಗಿತ್ತು ಫೆಲ್ಫ್ಸ್​ ಪದಕದ ಬೇಟೆ

ಮೈಕಲ್ ಫೆಲ್ಫ್ಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆ ಆರಂಭಿಸಿದ್ದಾಗ ಕೇವಲ 18ರ ಹರೆಯದ ಪೋರ. ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಮೈಕಲ್ ಫೆಲ್ಫ್ಸ್‌ 6 ಪದಕಗಳಿಗೆ ಕೊರಳೊಡ್ಡಿದ್ದರು. ಈ ಪೈಕಿ 4 ಚಿನ್ನ ಹಾಗೂ 2 ಕಂಚಿನ ಪದಕಗಳು ಸೇರಿದ್ದವು. ಅಥೆನ್ಸ್‌ನಲ್ಲಿ ಫೆಲ್ಫ್ಸ್‌ ಅಲೆಗೆ ಆಸ್ಟ್ರೇಲಿಯಾದ ಸ್ವಿಮ್ಮಿಂಗ್‌ ದಂತಕಥೆ ಇಯಾನ್‌ ಥೋರ್ಪ್‌ರಂತಹ ಖ್ಯಾತನಾಮರೇ ಕೊಚ್ಚಿ ಹೋಗಿದ್ದರು.

ಇದನ್ನು ಓದಿ: ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

ಬೀಜಿಂಗ್‌ನಲ್ಲಿ ಫರ್ಫೆಕ್ಟ್‌ 8

2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಂತೂ ಈ ಚಿನ್ನದ ಮೀನಿನದ್ದೇ ಮಾತು. ಅಮೆರಿಕದ ಈ ಗ್ರೇಟ್‌ ಸ್ವಿಮ್ಮರ್‌ 5 ವೈಯಕ್ತಿಕ ಹಾಗೂ 3 ರಿಲೇ ಈವೆಂಟ್‌ಗಳಲ್ಲಿ ಭಾಗವಹಿಸಿದ್ದರು. ಪೂಲ್‌ಗಿಳಿದ ಎಲ್ಲಾ ವಿಭಾಗದಲ್ಲೂ ಮೈಕಲ್‌ ಫೆಲ್ಫ್ಸ್‌ ಚಿನ್ನದ ಪದಕಗಳೊಂದಿಗೆ ಮೇಲೆದ್ದಿದ್ರು. ಅಷ್ಟೇ 7 ವಿಶ್ವದಾಖಲೆ ಮತ್ತು 1 ಒಲಿಂಪಿಕ್‌ ರೆಕಾರ್ಡ್‌ ಕೂಡ ಮೈಕಲ್‌ ಫೆಲ್ಫ್ಸ್‌ ಈಜಿನ ಮುಂದೆ ಕಣ್ಮರೆಯಾಗಿತ್ತು.

ಲಂಡನ್‌ನಲ್ಲೂ ಅದ್ವಿತೀಯ ಸಾಧನೆ

ಕಳೆದ ಲಂಡನ್‌ ಒಲಿಂಪಿಕ್ಸ್‌ನಲ್ಲೂ ಮೈಕಲ್‌ ಫೆಲ್ಫ್ಸ್‌ ಅದ್ಭುತ ಸಾಧನೆ ಮಾಡಿದ್ದರು. 4 ಚಿನ್ನ ಹಾಗೂ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ಅಮೆರಿಕನ್‌ ಸ್ವಿಮ್ಮರ್‌ ಒಲಿಂಪಿಕ್‌ ಇತಿಹಾಸದಲ್ಲೇ ಅತೀ ಹೆಚ್ಚು ಪದಕ ಗೆದ್ದ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಫೆಲ್ಫ್ಸ್‌ ಒಲಿಂಪಿಕ್ಸ್‌ನಲ್ಲಿ 25 ಪದಕಗಳನ್ನು ಗೆದ್ದಿದ್ರೆ, ಸೋವಿಯಟ್‌ ಯೂನಿಯನ್‌ನ ಜಿಮ್ನಾಸ್ಟಿಕ್‌ ಆಟಗಾರ್ತಿ ಲರಿಸಾ ಲಟಿನಿನಾ 18 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ರಿಯೋದಲ್ಲೂ ಹ್ಯಾಟ್ರಿಕ್‌ ಚಿನ್ನ

ಸದ್ಯಕ್ಕೆ ರಿಯೋದಲ್ಲಿ ನಡೆಯುತ್ತಿರುವ ಕ್ರೀಡಾಮಹಾಮೇಳದಲ್ಲೂ ಮೈಕಲ್‌ ಫೆಲ್ಫ್ಸ್‌ 3 ಚಿನ್ನದ ಪದಕಗಳನ್ನು ಗೆದ್ದಾಗಿದೆ. ಕಳೆದ ಒಲಿಂಪಿಕ್ಸ್‌ ಬಳಿಕ ನಿವೃತ್ತಿಯಾಗಿದ್ದ ಫೆಲ್ಫ್ಸ್‌ ಆ ನಂತ್ರ ಕಂ ಬ್ಯಾಕ್‌ ಮಾಡಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಅದೇನೇ ಇದ್ರೂ ಫೆಲ್ಫ್ಸ್‌ ಚಿನ್ನದ ಸಾಧನೆಯನ್ನು ಮುರಿಯೋದು ಅಸಾಧ್ಯದ ಮಾತು. ಆದ್ರೆ ಭಾರತೀಯರ ಕೈಯಲ್ಲಿ ಆಗದೇ ಇರುವುದು ಫೆಲ್ಫ್ಸ್​ ಕೈಯಲ್ಲಿ ಯಾಕಾಗುತ್ತದೆ ಅನ್ನೋ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿದೆ.

ಇದನ್ನು ಓದಿ:

1. ರಿಯೋ ಒಲಿಂಪಿಕ್ಸ್​ನಲ್ಲಿ 'ಸೌದಿ'ಯ ಮಿಂಚು..

2. ರಿಯೋದಲ್ಲಿ"ರೈಲ್ವೇಸ್​"ಕ್ರೀಡಾಪಟುಗಳದ್ದೇ ಕಾರುಬಾರು..!

3. ರೈತರ ಆತ್ಮಹತ್ಯೆ ತಡೆಗೆ ಜಲಜಾಗೃತಿ ಅಭಿಯಾನ : 17 ನದಿಗಳಿಗೆ ಮರುಜೀವ ಕೊಟ್ಟ ಮುಂಬೈ ಯುವಕರು

    Share on
    close