"ಲೋಕಲ್ ಉಸ್ತಾದ್"ನ ಘರ್​​ಕೇರ್​​...!

ಟೀಮ್​​ ವೈ.ಎಸ್​​.

0

"ಲೋಕಲ್ ಉಸ್ತಾದ್" ಹೆಸರು ವಿಚಿತ್ರವಾಗಿದೆ. ಯಾವುದೋ ಉರ್ದು ಮ್ಯೂಸಿಕ್​ ಬ್ಯಾಂಡ್​​​​​ ಅನ್ನೋ ಕಲ್ಪನೆ ನಿಮಗೆ ಬರಬಹುದು. ಒಂದು ವೇಳೆ ನೀವು ಹಾಗಂದುಕೊಂಡ್ರೆ ಅದು ಸುಳ್ಳು. ಯಾಕಂದ್ರೆ "ಲೋಕಲ್ ಉಸ್ತಾದ್" ಒಂದು ಹೊಸತನದಿಂದ ಕೂಡಿರುವ ಟೆಕ್ನಾಲಜಿ. 

ಲೋಕಲ್ ಉಸ್ತಾದ್" ಮೂಲಕ ನೀವು ನಿಮ್ಮ ಫೋನ್ ಉಪಯೋಗಿಸಿಕೊಂಡು ನಿಮಗೆ ಹತ್ತಿರವಿರುವ ಕ್ಯಾಬ್, ಕೊಳಾಯಿ ರಿಪೇರಿ, ಮೆಕ್ಯಾನಿಕ್, ಕಾರ್ಪೆಂಟರ್​​​ ಹೀಗೆ ಯಾರನ್ನು ಬೇಕಾದ್ರು ಹುಡುಕಬಹುದು. ಅಂಕಿತ್ ಜೈನ್ ಮತ್ತು ಯಶ್ ಸೇಠ್​​ "ಘರ್​​ಕೇರ್"​​​​ ಹೆಸರಿನಲ್ಲಿ ಈ ಕಂಪನಿಯನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಕೊಳಾಯಿ, ಮರಗೆಲಸ ಮತ್ತು ಎಲೆಕ್ಟ್ರಿಕ್ ಸರ್ವಿಸ್ ಗಳನ್ನು ಇದು ಒದಗಿಸುತ್ತಿತ್ತು. "ಘರ್​​ಕೇರ್"​​​​ ಆರಂಭಿಸುವ ಮೊದಲು ಅಂಕಿತ್ ಕುಟುಂಬದ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದರು ಮತ್ತು ಯಶ್ ವಿಪ್ರೋ ದಲ್ಲಿ ಕೆಲಸ ಮಾಡುತ್ತಿದ್ದರು.

"ಘರ್​​ಕೇರ್"​​​​ ಹುಟ್ಟಿದ ಕಥೆ ಕೂಡ ವಿಭಿನ್ನ. 2013ರ ದೀಪಾವಳಿ ಹಬ್ಬಕ್ಕೂ ಮುಂಚೆ ಯಶ್ ತಮ್ಮ ಮನೆಗೆ ಪೈಂಟ್ ಮಾಡಿಸುವ ಸಲುವಾಗಿ ಪೇಂಟರ್​​ಗೆ ಕಾಂಟ್ರ್ಯಾಕ್ಟ್​​​ ಕೊಟ್ಟಿದ್ದರು. ಪೇಂಟಿಂಗ್ ಕೆಲಸವನ್ನು ಆರಂಭಿಸಿದ, 2 ದಿನ ಆದ್ಮೇಲೆ ಕೆಲಸ ವಹಿಸಿಕೊಂಡವರು ನಾಪತ್ತೆ..! ಅಷ್ಟೇ ಅಲ್ಲ ಮತ್ತೆಂದು ಕೆಲಸಕ್ಕೇ ಬರಲಿಲ್ಲ..! ಅಚ್ಚರಿ ಅಂದ್ರೆ ಅಂಕಿತ್ ಕೂಡ ಇದೇ ರೀತಿಯ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಕಳಪೆ ಮಟ್ಟದ ಸೇವೆಯಿಂದ ಅಸಮಾಧಾನಗೊಂಡಿದ್ದ ಅಂಕಿತ್ ಮತ್ತು ಯಶ್​ ಪರಿಹಾರ ಹುಡುಕಲು ನಿರ್ಧರಿಸಿದರು.

ಆರಂಭದಲ್ಲಿ ಸಂಪೂರ್ಣ ಮಾದರಿ ಆಫ್ಲೈನ್ ನಿಂದ ಕೂಡಿತ್ತು. ಕೇವಲ ಆರು ಜನ ತಂತ್ರಜ್ಞರು ಮಾತ್ರ ಕೆಲಸ ಮಾಡುತ್ತಿದ್ದರು ಸುಮಾರು 100 ಗ್ರಾಹಕರಿಗೆ ಸೇವೆ ಒದಗಿಸುತ್ತಿತ್ತು. ತಂತ್ರಜ್ಞರಿಗೂ ಕೂಡ ತರಭೇತಿ ಕೊಡಲಾಗಿದೆ. ಆದರೆ ಈ ಒಂದು ಮಾದರಿಯನ್ನು ಬೆಳೆಸುವ ಕೆಲಸ ನಿಜವಾಗಲೂ ಕಷ್ಟ. 2014 ರ ನವೆಂಬರ್ ನಲ್ಲಿ ಎಲ್ಲ ತಂತ್ರಜ್ಞರು ಫ್ರೀ ಆಗಿದ್ದರು. ಯಾವುದೇ ಕೆಲಸ ಬಾಕಿ ಉಳಿದಿರಲಿಲ್ಲ. ಒಂದು ಸುದೀರ್ಘ ಚರ್ಚೆಯ ನಂತ್ರ ಕಂಪನಿಯ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ನಡೆಯಿತು. ಎಲ್ಲ ತಂತ್ರಜ್ಞರು ಸಂಬಳ ಪಡೆಯುವ ನೌಕರರಾಗುವ ವರೆಗೆ ಕಮಿಶನ್ ಬೇಸಿಸ್ ಮೇಲೆ ಕೆಲಸ ಮಾಡುವದಾಗಿ ಹೇಳಿದರು. ಅವರು ಫೋನ್ ಮೂಲಕ ಕೆಲಸವನ್ನು ತೆಗೆದುಕೊಂಡು ಸೇವೆ ಒದಗಿಸುವುದಾಗಿ ಹೇಳಿದರು.

ಸಂಸ್ಥಾಪಕರು ಕೆಲವೊಂದು ಬದಲಾವಣೆಗಳನ್ನು ತರಲು ತಮ್ಮ ಗ್ರಾಹಕರ ಜೊತೆ ಮಾತನಾಡಿದ್ರು. ತಮ್ಮ ಯೋಜನೆಯನ್ನು ಜಾರಿಗೊಳಿಸಲು ಸ್ಥಳೀಯ ಮಾರಾಟಗಾರರ ಜೊತೆ ಕೂಡ ಚರ್ಚೆ ನಡೆಸಿದ್ರು. ತಮ್ಮ ಕಲ್ಪನೆಯನ್ನು ಆನ್‌ಲೈನ್ ಸೇವೆಯಾಗಿಸುವ ಕೆಲಸವನ್ನು ಸಿಟಿಓ ಆಗಿದ್ದ ರಾಹುಲ್ ಮಾಡಿಬಿಟ್ರು. ಲೋಕಲ್​​ ಉಸ್ತಾದ್​​ ಸಂಪೂರ್ಣವಾಗಿ ಮೇ 2015 ರಲ್ಲಿ ಬಿಡುಗಡೆ ಆಗಿದೆ.

ಲೋಕಲ್ ಉಸ್ತಾದ್ ಪ್ರಸ್ತುತ 11 ಜನರ ತಂಡವನ್ನು ಹೊಂದಿದೆ. ತಂಡದ ಪ್ರತಿಯೊಬ್ಬ ಸದಸ್ಯ ಕೂಡ ಬಹಳ ಬುದ್ದಿವಂತಿಕೆಯಿಂದ ಕೆಲಸ ಮಾಡುತ್ತಾರೆ. ಹೀಗಾಗಿ ಉಸ್ತಾದ್ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮುಂದೆ ಇನ್ನೂ ಹಲವು ಸೇವೆಗಳನ್ನು ಒದಗಿಸುವ ಯೋಜನೆ ಮತ್ತು 18 ನಗರಗಳಿಗೆ ಲೋಕಲ್​ ಉಸ್ತಾದ್​​ನ್ನು ವಿಸ್ತರಿಸುವ ಯೋಜನೆ ಇದೆ. ಅಷ್ಟೇ ಅಲ್ಲದೆ ಹಲವು ಹೊಸತನಗಳನ್ನು ತರುವ ಉದ್ದೇಶವನ್ನು ಕೂಡ ಕಂಪನಿ ಹೊಂದಿದೆ.