‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....

ನಿನಾದ

0

ನಾವು ಯಾವುದೇ ಹೊಸ ಊರಿಗೆ ಹೋಗಲಿ ಅಲ್ಲಿ ಮೊದಲಿಗೆ ಹುಡುಕೋದು ಇಲ್ಲಿ ನಮ್ಮೂರಿನ ಅಡುಗೆಗಳು ಹೋಟೆಲ್ ಗಳು ಎಲ್ಲಿವೆ ಅಂತಾ. ಹೆಚ್ಚಿನವರಿಗೆ ಹೋದ ಊರಿಗೆ ಹೋದಾಗ ಅಲ್ಲಿನ ಆಹಾರ ಪದ್ಧತಿಗೆ ಒಗ್ಗಿಕೊಳ್ಳೋದು ಕಷ್ಟವಾಗುತ್ತೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಯಂತೂ ಎಲ್ಲಿ ಹೋದ್ರು ಅವರೂರಿನ ಆಹಾರ ತಿನಿಸುಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ನಮ್ ಸಿಲಿಕಾನ್ ಸಿಟಿಯಾಗ ತಮ್ಮೂರಿನ ಊಟವನ್ನು ಮಿಸ್ ಮಾಡಿಕೊಳ್ಳೋ ಮಂದಿಗೆ ಅಂತ ಸ್ಪೆಷಲ್ ಹೋಟೆಲ್ ಒಂದು ವಿಲ್ಸನ್ ಗಾರ್ಡನ್ ನಲ್ಲಿದೆ.

ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್ ಮುಂಭಾಗದಲ್ಲೇ ಸಂತಪ್ತಿ ಅನ್ನೋ ಉತ್ತರ ಕರ್ನಾಟಕ ಶೈಲಿಯ ಹೋಟೆಲ್ ಒಂದಿದೆ. ಇಲ್ಲಿ ಉತ್ತರ ಕರ್ನಾಟಕ ಶೈಲಿಯ ಎಲ್ಲಾ ರೀತಿಯ ಆಹಾರಗಳು ಲಭ್ಯವಿದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೇ ಸಂಜೆಗೆ ಸ್ನ್ಯಾಕ್ಸ್ ಎಲ್ಲವೂ ಇಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲೇ ದೊರೆಯುತ್ತವೆ. ಉತ್ತರ ಕರ್ನಾಟಕ ಶೈಲಿಯ ಆಹಾರವನ್ನು ಮಿಸ್ ಮಾಡಿಕೊಳ್ಳುವ ಜನರಿಗೆ ಇದು ಬೆಸ್ಟ್ ಬ್ಲೇಸ್. ಒಂದೇ ಹೋಟೆಲ್ ನಲ್ಲಿ ಎಲ್ಲಾ ರೀತಿಯ ಅಡುಗೆಗಳು ಕಡಿಮೆ ದರದಲ್ಲಿ ಹಾಗೋ ರುಚಿ ಕೂಡ ಉತ್ತಮವಾಗಿರೋದರಿಂದ ಜನ ಇಲ್ಲಿ ವಿವಿಧ ತಿನಿಸುಗಳನ್ನು ಸವಿಯೋಕೆ ಮುಗಿ ಬೀಳುತ್ತಾರೆ.

ಬೆಳಗ್ಗಿನ ಉಪಾಹಾರಕ್ಕೆ ಪಡ್ಡು, ಉಪ್ಪಿಟ್ಟು, ಅವಲಕ್ಕಿ ಬಾತ್, ಮಂಡಕ್ಕಿ ಒಗ್ಗರಣೆ, ಮಸಾಲ ವಡೆ ಲಭ್ಯವಿದ್ರೆ, ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ರಾಗಿ ರೊಟ್ಟಿ. ಅಕ್ಕಿ ರೊಟ್ಟಿ, ಚಪಾತಿ, ಸಜ್ಜೆ ರೊಟ್ಟಿ ರೈಸ್ ಬಾತ್ ಗಳು ದೊರೆಯುತ್ತವೆ.ಇನ್ನು ಉತ್ತರಕರ್ನಾಟಕ ಶೈಲಿಯ ಬದನೆಕಾಯಿ ಪಲ್ಯ ಕಾಳ್ ಪಲ್ಯ, ಸೊಪ್ಪಿನ ಪಲ್ಯ, ಚೌಳಿಕಾಯಿ ಪಲ್ಯ ಹಾಗೇ ವಿವಿಧ ರೀತಿಯ ಚಟ್ನಿ ಪುಡಿಗಳು, ಮಸಾಲ ಪುಡಿಗಳು ದೊರಕುತ್ತವೆ. ಇನ್ನು ಸ್ವೀಟ್ ಸವಿಯಬೇಕು ಅಂದೋರಿಗೂ ಇಲ್ಲಿ ಬಿಸಿ ಬಿಸಿಯಾದ ಹೋಳಿಗೆಗೆಳು, ಧಾರವಾಡ ಪೇಡಾ, ಕರದಂಟು, ಶೇಂಗಾ ಲಡ್ಡು, ಕುಂದಾ, ಹೀಗೆ ಅನೇಕ ರೀತಿಯ ಕುರುಕುರು ತಿಂಡಿಗಳು ದೊರಕುತ್ತವೆ.

ಇದನ್ನು ಓದಿ: ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!

ಅಂದ್ಹಾಗೆ ಈ ಸಂತೃಪ್ತಿ ಹಿಂದಿರುವ ರೂವಾರಿ ರಾಣೆಬೆನ್ನೂರು ಮೂಲದ ಗೋಪಾಲಕೃಷ್ಣ ಅವರು. ಮೂರು ವರ್ಷಗಳ ಹಿಂದೆ ಅವರು ಮೊದಲಿಗೆ ಕೋರಮಂಗಲ 7th ಕ್ರಾಸ್ ನಲ್ಲಿ ಸಂತೃಪ್ತಿ ಫುಡ್ ಸ್ಟೋರ್ ನ್ನು ಆರಂಭಿಸಿದ್ರು. ಬಳಿಕ ವಿಲ್ಸನ್ ಗಾರ್ಡನ್ ನಲ್ಲಿ ತಮ್ಮ ಮತ್ತೊಂದು ಬ್ರಾಂಚ್ ತೆರೆದ್ರು. ಇನ್ನು ಬೆಂಗಳೂರಿನ ಕೆಲ ಕಡೆ ತಮ್ಮ ಫುಡ್ ಸ್ಟೋರ್ ತೆರೆಯೋ ಪ್ಲಾನ್ ನಲ್ಲಿದ್ದಾರೆ ಗೋಪಾಲಕೃಷ್ಣ. ಇನ್ನು ಇಲ್ಲಿ ಸಿಗುವ ಐಟಂಗಳ ಬೆಲೆ ಕೂಡ ತುಂಬಾನೇ ಕಡಿಮೆ. ಇಷ್ಟು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಶುಚಿ ಹಾಗೇ ರುಚಿಯಾದ ಆಹಾರಗಳನ್ನು ಹೇಗೆ ನೀಡುತ್ತೀರಿ ಅಂತಾ ಕೇಳಿದ್ರೆ ಗೋಪಾಲ್ ಗ್ರಾಹಕರ ತೃಪ್ತಿಯೇ ನಮಗೆ ಮುಖ್ಯ ಅಂತಾರೆ. ಇನ್ನು ರುಚಿಯಾದ ನಮ್ಮೂರಿನ ಆಹಾರ ಕಡಿಮೆ ದರದಲ್ಲಿ ಸಿಗೋದರಿಂದ ನಾವಿಲ್ಲಿಗೆ ಹುಡುಕಿಕೊಂಡು ಬರುತ್ತೇವೆ ಅಂತಾರೆ ಗ್ರಾಹಕ ಗೋವಿಂದ್.

ಇನ್ನು ಸಂತೃಪ್ತಿ ಫುಡ್ ಸ್ಟೋರ್ಸ್ ಸಮಾರಂಭಗಳಿಗೂ ಕೂಡ ಆಹಾರವನ್ನು ಕ್ಯಾಟರಿಂಗ್ ರೂಪದಲ್ಲಿ ಪೂರೈಕೆ ಮಾಡುತ್ತೆ. ಮುಖ್ಯವಾಗಿ ಬೆಂಗಳೂರಿನಲ್ಲೂ ಉತ್ತರ ಕರ್ನಾಟಕದ ವೆರೈಟಿ ವೆರೈಟಿ ತಿನಿಸುಗಳು ಜನ್ರಿಗೆ ದೊರಕುವಂತಾಗಬೇಕು ಅನ್ನೋದು ಸಂತೃಪ್ತಿ ತಂಡದ ಉದ್ದೇಶ. ಆ ನಿಟ್ಟಿನಲ್ಲಿ ಇನ್ನಷ್ಟು ಹೊಸ ಪ್ರಯತ್ನಗಳೊಂದಿಗೆ ಸಂತೃಪ್ತಿ ಹೆಜ್ಜೆ ಇಡುತ್ತಿದೆ.

ಇದನ್ನು ಓದಿ

1. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

2. ಹೋಟೆಲ್ ಒಂದರ ಲೆಕ್ಕಾಚಾರ, ಇಲ್ಲಿ ಎಲ್ಲವೂ ಕೆಜಿ ಲೆಕ್ಕದಲ್ಲೇ..!

3. ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..!

Related Stories