ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ! 

ಟೀಮ್​ ವೈ.ಎಸ್​. ಕನ್ನಡ

5

ಹಸಿರನ್ನು ನಂಬಿದವರು ಎಂದಿಗೂ ಸೋಲುವುದಿಲ್ಲ ಅನ್ನೋದಕ್ಕೆ ಯೋಹಾನ್ ಮತ್ತು ಮಾರ್ವಿನ್ ಅತ್ಯುತ್ತಮ ಉದಾಹರಣೆ. ಗ್ಸಾನಾಡು ಆರ್ಗಾನಿಕ್ ಗಾರ್ಡನ್‍ನ ಮುಖ್ಯಸ್ಥರಾದ ಯೋಹಾನ್ ಮತ್ತು ಮಾರ್ವಿನ್ ಸ್ಟೋರಿ ಎಲ್ಲರಿಗೂ ಸ್ಪೂರ್ತಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಕೆನಾಡಗೆ ತೆರಳಿದ ಯೋಹಾನ್ 3 ವರ್ಷ ಅಲ್ಲಿಯೇ ಕೆಲಸ ಮಾಡುತ್ತಾರೆ. ಕೈ ತುಂಬಾ ಸಂಬಳ ಬರುವ ಕೆಲಸವಿದ್ರೂ ಯೋಹಾನ್‍ಗೆ ಏನೋ ಮಿಸ್ಸಿಂಗ್ ಅನ್ನಿಸುತ್ತೆ. ಇಂಥ ಸಂದರ್ಭದಲ್ಲೇ ಭಾರತಕ್ಕೆ ಮರಳಿ ಬರುತ್ತಾರೆ. ಮುಂದೇನು? ಅನ್ನೋ ಚಿಂತೆ ಯೋಹಾನ್‍ಗಿರಲಿಲ್ಲ. ಏಕೆಂದರೆ ಮನೆಯವರೆಲ್ಲಾ ಹಸಿರಿನ ಪ್ರೇಮಿಗಳು. ಯೋಹಾನ್ ಕೂಡ ಹಸಿರಿನ ಒಡನಾಟದಿಂದಲೇ ಏನಾದ್ರೂ ಸಾಧಿಸಬೇಕು ಅಂತ ನಿರ್ಧರಿಸಿದ್ರು. ಆಗಲೇ ಕೈ ಹಿಡಿದಿದ್ದು ಅರ್ಗಾನಿಕ್ ಗಾರ್ಡನ್.

ಏನಿದು ಆರ್ಗಾನಿಕ್ ಗಾರ್ಡನ್?

ಇತ್ತಿಚೆಗೆ ಎಲ್ಲ ಅಪಾರ್ಟ್​ಮೆಂ ವಿಲ್ಲಾಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಗಾರ್ಡನಿಂಗ್ ಎಲ್ಲರಿಗೂ ತಿಳಿದಿರುವಂಥದ್ದೇ, ಇನ್ನು ಈ ಗಾರ್ಡನಿಂಗ್‍ನಲ್ಲಿ ಹೆಚ್ಚೆಚ್ಚು ಪೆಸ್ಟಿಸೈಡ್​​ಗಳನ್ನು ಬಳಸಲಾಗುತ್ತಿದೆ. ಇದು ನಾವು ವಾಸಿಸುವವ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಇದನ್ನು ಮನಗಂಡ ಯೋಹಾನ್ ಮತ್ತು ಯೋಹಾನ್ ಸಹೋದರ ಮಾರ್ವಿನ್ ಪೆಸ್ಟಿಸೈಡ್ಸ್ ಮುಕ್ತ ಸಾವಯವ ಗಾರ್ಡನ್ ಬಗ್ಗೆ ಅರಿವು ಮೂಡಿಸೋ ಚಿಂತನೆ ಮಾಡುತ್ತಾರೆ. ಆ ಮೂಲಕ ಕೆಮಿಕಲ್ ಇಲ್ಲದೇ ಅಡುಗೆ ಮನೆಯ ವೇಸ್ಟೇಜ್‍ನಿಂದ ಗೊಬ್ಬರ ಬಳಸಿ ಹೇಗೆ ತೋಟಾಗಾರಿಕೆ ಮಾಡಬಹುದು, ಜೊತೆಗೆ ಮೂಲಿಕೆಗಳನ್ನು ಬೆಳೆಸಿ ಗಾರ್ಡನಿಂಗ್ ಮಾಡುವ ಆರ್ಗಾನಿಕ್ ಗಾರ್ಡನ್ ಪರಿಚಯಿಸುತ್ತಾರೆ.

ಸ್ಟಾರ್ಟ್ ಅಪ್ ಸ್ಟಾರ್ಟಿಂಗ್ ಹೆಜ್ಜೆ

ಮೊದ ಮೊದಲು ಫೇಸ್‍ಬುಕ್‍ನಲ್ಲಿ ಜನರಿಗೆ ಆರ್ಗಾನಿಕ್ ಗಾರ್ಡನಿಂಗ್ ಬಗ್ಗೆ ಅರಿವು ಮೂಡಿಸುವ ಪ್ರತಯತ್ನದಲ್ಲಿ ಇಬ್ಬರು ಬ್ರದರ್ಸ್ ಮುಂದಾದರೂ ನಂತರ ಯೋಹಾನ್ ಆರ್ಗಾನಿಕ್ ಗಾರ್ಡನಿಂಗ್ ಬಗ್ಗೆ ಸಾಕಷ್ಟು ರಿಸರ್ಚ್ ಆರಂಭಿಸಿದರು. ಜನರಿಗೆ ಯಾವ ಗಾರ್ಡನಿಂಗ್ ಅಗತ್ಯವಿದೆ? ಅಪಾರ್ಟ್‍ಮೆಂಟ್‍ಗಳಲ್ಲಿ ಸ್ಪೇಸ್ ಕ್ರಿಯೆಟ್ ಮಾಡೋದು ಹೇಗೇ? ಯಾವ ರೀತಿಯ ಗಿಡಗಳು ಯಾರಿಗೆ ಹೆಚ್ಚು ಸೂಕ್ತ? ಗಿಡಗಳನ್ನು ಎಲ್ಲಿಂದ ತರಿಸಿಕೊಳ್ಳಬೇಕು? ಹೀಗೆ ಹತ್ತು ಹಲವಾರು ಮಾರ್ಕೆಟ್ ರಿಸರ್ಚ್ ಮಾಡಿದ ನಂತರ ಮೊದಲು ತಮ್ಮ ಮನೆಯಲ್ಲೆ ಗಾರ್ಡನಿಂಗ್ ಆರಂಭಿಸಿದ್ರು. ಇದನ್ನು ಕಂಡ ಯೋಹಾನ್ ಸ್ನೇಹಿತರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು. ಅವರ ಮನೆಯಲ್ಲೂ ಇಂಥದ್ದೆ ಗಾರ್ಡನ್ ಮಾಡಲು ಕೇಳಿಕೊಂಡರು. ಯೋಹಾನ್ ತಮ್ಮ ಮೊದಲ ಗ್ರಾಹಕರನ್ನು ಸೆಳೆದ್ದು ಹೀಗೆ.

ಶುರುವಾಯಿತು ಆರ್ಡ್​ರ್​ಗಳ ಸುರಿಮಳೆ

ಇದಾದ ನಂತರ ಯೋಹಾನ್‍ರ ಇನ್ನೊಬ್ಬ ಸ್ನೇಹಿತರಿಗೆ ಹೇರ್ ಲಾಸ್ ಸಮಸ್ಯೆ ಇತ್ತು. ಇದಕ್ಕಾಗಿ ಮನೆಯಲ್ಲೇ ಬೆಳೆಯಬಹುದಾದ ಮೆಡಿಸಿನಲ್ ಗಿಡಗಳನ್ನು ಸೇರಿಸಿ ಗಾರ್ಡನಿಂಗ್ ಮಾಡಿಕೊಡಲು ಆರ್ಡರ್ ಸಿಕ್ಕಿತ್ತು. ದಾಸಾವಾಳ, ಬ್ರಾಹ್ಮಿ, ಸೇರಿದಂತೆ ಹಲವಾರು ಗಿಡಮೂಲಿಕೆಗಳನ್ನು ಯೋಹಾನ್ ಅವರ ಮನೆಯಲ್ಲಿ ವಿನ್ಯಾಸ ಮಾಡಿದ್ರು. ಇದು ಯೋಹಾನ್‍ಗೆ ಹೊಸ ಆತ್ಮವಿಶ್ವಾಸ ತಂದಿತು. ಇಲ್ಲಿಂದ ಹಮ್ಮಿಂಗ್ ಕ್ಲಬ್‍ನಲ್ಲೂ ಡಿಸೈನ್ ಮಾಡಲು ಅವಕಾಶ ದೊರೆಯಿತು. ಹಮ್ಮಿಂಗ್ ಕ್ಲಬ್ ಸಂಗೀತಕ್ಕೆ ಹೆಸರುವಾಸಿಯಾದ ಕ್ಲಬ್. ಇದಕ್ಕಾಗಿ ಯೋಹಾನ್ ಮತ್ತು ಮಾರ್ವಿನ್ ಹೊಸ ಆಲೋಚನೆ ಮಾಡಿದರು. ಸಂಗೀತ ಸಾಧನಗಳಾದ, ಡ್ರಮ್ಸ್, ಗಿಟಾರ್‍ಗಳನ್ನು ಬಳಸಿ ಗಿಡಗಳನ್ನು ಬಳಸಿ ಗಾರ್ಡನಿಂಗ್ ವಿನ್ಯಾಸ ಮಾಡಿದರು. ಇಂದಿಗೂ ಇದು ಹೆಚ್ಚು ಆಕರ್ಷಣಿಯವಾಗಿದೆ. ಇದಾದ ನಂತರ ಬ್ಲೂ ಫಾಗ್ ಕ್ಲಬ್‍ನಲ್ಲೂ ಲೈಟಿಂಗ್‍ಗೆ ಹೊಂದುವಂತೆ ಗಾರ್ಡನಿಂಗ್ ವಿನ್ಯಾಸ ಮಾಡಲಾಗಿತ್ತು. ಇದು ಮತ್ತಷ್ಟು ಅವಕಾಶಗಳನ್ನು ತಂದುಕೊಟ್ಟಿತ್ತು

ಇದು ಯೋಹಾನ್ ಮತ್ತು ಮರ್ಫೀನ್ ಟಿಂ

ಯೋಹಾನ್ ಮತ್ತು ತಂಡ ಹೀಗೆ 60-70 ಪ್ರಾಜೆಕ್ಟ್​​ಗಳನ್ನು ಸಂಪೂರ್ಣ ಮಾಡಿದೆ. ಇದರಲ್ಲಿ ಹಲವಾರು ರೆಸಿಡೆನ್ಷಿಯಲ್ ಮನೆಗಳು ಸೇರಿವೆ. ಕಿಚನ್ ಗಾರ್ಡನ್‍ನಲ್ಲಿ ಹಣ್ಣು ತರಕಾರಿ ಸೊಪ್ಪು ಬೆಳೆಯಲಾಘುತ್ತೆ, ಜೆನ್ ಹೋಂ, ಮೆರಿಡಿಯನ್, ಫ್ರೆಂಚ್ ಹೋಮ್, ವಿಕ್ಟೋರಿಯನ್ ಹೋಂ ಸೇರಿದಂತೆ ಹಲವಾರು ವೈವಿಧ್ಯಮಯವಾದ ಗಾರ್ಡನಿಂಗ್‍ಗಳನ್ನು ಯೋಹಾನ್ ಮಾಡಿಕೊಟ್ಟಿದ್ದಾರೆ. ಯೋಹಾನ್‍ರವರ ಸಹೋದರ ಮರ್ವಿನ್ ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಗಾರ್ಡನಿಂಗ್ ವಿನ್ಯಾಸ ಮಾಡುತ್ತಾರೆ. ಸೇಲ್ಸ್, ಮಾರ್ಕೆಟಿಂಗ್, ಕಾರ್ಪೆಂಟರ್, ವೆಂಡರ್ಸ್ ಸೇರಿದಂತೆ ಸುಮಾರು 10 ಜನರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಪ್ಯಾಷನ್ ಇದ್ರೆ ಮಾತ್ರ ಇಲ್ಲಿಗೆ ಬನ್ನಿ

ಆರಂಭದಲ್ಲಿ 5 ಲಕ್ಷ ಇನ್‍ವೆಸ್ಟ್ ಮಾಡಿದ ಯೋಹಾನ್ ಇಂದು ಅದಕ್ಕಿಂತಲೂ ಹೆಚ್ಚು ಗಳಿಸುತ್ತಿದ್ದಾರೆ. ಮಾಡುವ ಕೆಲಸದಲ್ಲಿ ತೃಪ್ತಿ ಇದೆ. ತಮ್ಮದೇ ಕಂಪನಿ, ತಾವೇ ಬಾಸ್. ಯಾವುದೇ ಕೆಲಸದಲ್ಲೂ ಅಡ್ಡಿ ಆತಂಕ ಬರುತ್ತೆ. ಆದ್ರೆ ಪ್ಯಾಷನ್ ಇದ್ರೆ ಎಲ್ಲವನ್ನು ಸೈಡ್‍ಲೈನ್ ಮಾಡಬಹುದು. ಹಾರ್ಡ್ ವರ್ಕ್ ಮಾಡಿ ಬ್ಯುಸಿನೆಸ್ ಬಿಲ್ಡ್ ಮಾಡಬೇಕು. ಆಗ ಗೆಲುವು ನಮ್ಮದೇ ಅಂತಾರೆ ಯೋಹಾನ್ ಮತ್ತು ಮಾರ್ವಿನ್. ಏನೇ ಆಗಲಿ ಹೊಸತೊಂದು ಕೆಲಸವನ್ನು ಶುರು ಮಾಡುವ ಮುನ್ನ ರಿಸರ್ಚ್ ಮತ್ತು ನಂತರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂದುವರೆದರೇ ಸ್ಟಾರ್ಟ್ ಅಪ್‍ನಿಂದ ಲೈಫ್‍ನಲ್ಲೊಂದು ಹೊಸ ಸ್ಟಾರ್ಟ್ ಸಿಗುತ್ತೆ ಅನ್ನೋಕೆ ಈ ಬ್ರದರ್ಸ್ ಗ್ರೇಟ್ ಎಕ್ಸಾಂಪಲ್.

ಇದನ್ನು ಓದಿ

1. ಹೃದಯದ ಡಾಕ್ಟರ್ ಅಲ್ಲ, ಆದ್ರೆ ಇವರೊಬ್ಬ 'ಹೃದಯವಂತ' ವೈದ್ಯ

2. ಸೀರೆಯ ಮೇಲೆ "ಮಾನಸ" ಚಿತ್ತಾರ!

Related Stories