ಬ್ರೇಕ್ ನ ನಂತ್ರ ಮಹಿಳೆಯರ ಕೆರಿಯರ್ ರೀ ಲಾಂಚ್ ಮಾಡಿದ ಅಪರೂಪದ ಕಂಪನಿಗಳು... !

ಟೀಮ್​ ವೈ.ಎಸ್​. ಕನ್ನಡ

0

ಪುರುಷರು ಹಾಗೂ ಮಹಿಳೆಯರ ಸಮಾನತೆಗಳ ಬಗ್ಗೆ ಸಾಕಷ್ಟು ಕಾಳಜಿಗಳು ಹಾಗೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಮಾನತೆ ತರುವ ಉದ್ದೇಶದಿಂದ ಕೆಲವು ಪ್ರಯತ್ನಗಳೂ ನಡೆಯುತ್ತಲೇ ಇರುತ್ತವೆ. ಆದ್ರೆ ಲಿಂಗ ತಾರತಮ್ಯಕ್ಕೆ ಕಾರಣವಾಗುವ ಮೊದಲ ಅಂಶ ಅಂದರೆ ಅದು ಶಿಕ್ಷಣ. ಇದಕ್ಕೊಂದು ಉದಾಹರಣೆ ಅನ್ನೋ ಹಾಗೆ ಕೆಲವು ಸಂಶೋಧನಾ ವರದಿಗಳೂ ಇವನ್ನೇ ಸಾಕ್ಷೀಕರಿಸುತ್ತವೆ. ಕೆಲವು ಸಂಸ್ಥೆಗಳು ನೀಡಿರುವ ಸಂಶೋಧನಾ ವರದಿ ಪ್ರಕಾರ 45.9 ರಷ್ಟು ಮಹಿಳೆಯರು ಪದವಿಗಿಂತ ಕೆಳ ಮಟ್ಟದ ಅರ್ಹತೆ ಹೊಂದಿದ್ರೆ, 40.5ರಷ್ಟು ಮಹಿಳೆಯರು ಪಿಹೆಚ್ ಡಿಗೆ ನೋಂದಾವಣೆ ಮಾಡಿಸಿದವರಾಗಿದ್ದಾರೆ. ಆದ್ರೆ ಕಾರ್ಮಿಕ ವಲಯವಾಗಿ ಯೋಚಿಸಿದ್ರೆ, ಮಹಿಳಾ ವರ್ಗ ದುಡಿಯುತ್ತಿರುವ ಪ್ರಮಾಣವೂ ಕುಸಿಯುತ್ತಿದೆ. 2004 – 05 ರಲ್ಲಿ ಶೇಕಡಾ 37 ರಷ್ಟು ಪ್ರಮಾಣ ಕುಸಿದಿದ್ರೆ, 2009 – 10 ರಲ್ಲಿ ಇದು 29 ಶೇಕಡಾದಷ್ಟು ಇಳಿಕೆಯಾಗಿತ್ತು. ಇನ್ನು ನಗರ ಪ್ರದೇಶದ 14.7 ರಷ್ಟು ಮಹಿಳೆಯರು ವಿವಿಧ ಕಾರಣಗಳಿಂದ ಕೆಲಸಕ್ಕೆ ತಿಲಾಂಜಲಿ ಹೇಳಿದ್ದೇ ಹೆಚ್ಚು. ಅಚ್ಚರಿ ಅಂದ್ರೆ 1972 – 73 ರಲ್ಲಿ ಈ ಪ್ರಮಾಣ 13.4 ರಷ್ಟಿತ್ತು. ವಿಶೇಷ ಅಂದ್ರೆ ದೇಶದಲ್ಲಿ ಮಹಿಳೆಯರು ಕೆಲಸಕ್ಕೆ ತೆರಳುವ ಪ್ರಮಾಣ 2025ರಲ್ಲಿ ಅದು ಶೇಕಡಾ 16 ರಷ್ಟು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಇದನ್ನು ಓದಿ: ಡೆಡ್ಲಿ ಡೇಂಜರಸ್​ ಗೇಮ್​ನ ಪಂಟ, ಬೆಂಗಳೂರಿನ ಯುವ ಸಂತ..!

ಮಹಿಳೆಯರ ಕಲ್ಯಾಣಕ್ಕಾಗಿ ಹಾಗೂ ಅವರಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲು ಕೆಲವು ಸಂಸ್ಥೆಗಳು ಮುಂದಾಗಿವೆ. ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನ ನೀಡುತ್ತಿದೆ. ಅಲ್ಲದೆ ಕೆಲವೊಮ್ಮೆ ಮರು ಸೇರ್ಪಡೆಗೂ ಅವಕಾಶಗಳನ್ನ ನೀಡುವ ಮೂಲಕ ಮುಕ್ತ ಅವಕಾಶಗಳನ್ನ ನೀಡುತ್ತಿದೆ. ವಿಶೇಷ ಅಂದ್ರೆ ಸಂಸ್ಥೆಯಲ್ಲಿರುವ ಇತರೆ ಉದ್ಯೋಗಿಗಳೂ ಮಹಿಳಾ ಉದ್ಯೋಗಿಗಳ ಬಗ್ಗೆ ಕಾಳಜಿ ತೋರುತ್ತಿರುವುದು ವಿಶೇಷ. ಅವರಿಗೆ ಪೂರಕವಾದ ಬೆಂಬಲ ನೀಡುವುದರ ಜೊತೆಗೆ ಮರು ಸೇರ್ಪಡೆಗೆ ಬೇಕಾದ ಬೆಂಬಲವನ್ನೂ ನೀಡುತ್ತಿದ್ದಾರೆ. ಹೀಗಾಗಿ ಕಾರಣಾಂತರಗಳಿಂದ ಒಮ್ಮೆ ಬ್ರೇಕ್ ಪಡೆದುಕೊಂಡ ಮಹಿಳೆಯರು ಸುಲಭವಾಗಿ ಕೆಲಸಕ್ಕೆ ವಾಪಸ್ಸಾಗಲು ಇದು ಸಹಕಾರಿಯಾಗಿದೆ. ಹೆರಿಗೆ ರಜೆ ಅಥವಾ ಕೌಟುಂಬಿಕ ಕಾರಣಗಳಿಂದ ಕಂಪನಿ ತೊರೆಯುವ ಮಹಿಳೆಯರಿಗೆ ಕಾರ್ಪೊರೆಟ್ ಕಂಪನಿಗಳೂ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರುತ್ತಿರುವುದು ಸ್ವಾಗತಾರ್ಹ.

ಜಾಬ್ಸ್ ಫರ್ ಹರ್..

ಬೆಂಗಳೂರು ಮೂಲದ ಜಾಬ್ಸ್ ಫರ್ ಹರ್ ಮಹಿಳಯರ ಪಾಲಿನ ಆಶಾಕಿರಣವಾಗಿದೆ. ನೇಹಾ ಬಗಾರಿಯಾ ಎಂಬುವವರಿಂದ ಸ್ಥಾಪಿಸಲ್ಪಟ್ಟಿರುವ ಜಾಬ್ಸ್ ಫರ್ ಹರ್, ಮಹಿಳೆಯರಿಗೆ ಕೆಲಸ ನೀಡುವ ಮೂಲಕ ಆಶಾ ಕಿರಣವಾಗಿದೆ. ಮಹಿಳೆಯರ ದಿನಾಚರಣೆಯಾದ ಮಾರ್ಚ್ 7ರಿಂದ 11ರವರೆಗೂ ವೈವಿಧ್ಯಮಯ ಪಯಣ ಅನ್ನೋ ಕಾನ್ಸೆಪ್ಟ್ ನಲ್ಲಿ ಮಹಿಳೆಯರಿಗೆ ನೆರವಾಗೋ ಕಾರ್ಯದಲ್ಲಿ ತೊಡಗಿಕೊಂಡಿತ್ತು.  ಉದ್ಯೋಗಕ್ಕಾಗಿ ಅನ್ವೇಷಣೆ ನಡೆಸುವುದು ಇಲ್ಲಿನ ಮುಖ್ಯ ಉದ್ದೇಶ.  ಪ್ರಮುಖ ಕಂಪನಿಗಳಾದ ಸಪೆಂಯಟ್, ಟಾರ್ಗೆಟ್, ಮೇಕ್ ಮೈ ಟ್ರಿಪ್, ರಿಯಾಯನ್ಸ್,  ಮತ್ತು ಮಂತ್ರಿ ಡೆವಲಪರ್ಸ್ ನಂತಹ ಕಂಪನಿಗಳು ಭಾಗವಹರಿಸುತ್ತವೆ. ಅಲ್ಲದೆ ಜಾಬ್ಸ್ ಫರ್ ಹರ್ ಬೆಂಗಳೂರು, ಮುಂಬೈ, ಡೆಲ್ಲಿ ಹಾಗೂ ಚೆನ್ನೈ ನಂತಹ ಜಾಗದಲ್ಲಿ ಅವಕಾಶಗಳನ್ನ ಅನ್ವೇಷಿಸುತ್ತದೆ. ಅಲ್ಲದೆ ಇದ್ರ ವೆಬ್ ಸೈಟ್ ನಲ್ಲಿ 2.50 ಲಕ್ಷ ಮಂದಿ ವಿಸಿಟರ್ ಗಳಿದ್ದು ಪ್ರತೀ ತಿಂಗಳೂ ಅಂದಾಜು 50 ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. 750ಕ್ಕೂ ಹೆಚ್ಚು ಕಂಪನಿಗಳು ಇಲ್ಲಿವೆ. ಸಿಟಿ ಬ್ಯಾಂಕ್, ಫ್ಯೂಚರ್ ಗ್ರೂಪ್, ಜಿ ಇ, ಗೊದ್ರೇಜ್ ಗ್ರೂಪ್, ಕೋಟಕ್ ಮಹೀಂದ್ರ ನಂತಹ ಸಂಸ್ಥೆಗಳೂ ಮಹಿಳೆಯರ ಪಾಲಿಗೆ ಇಲ್ಲಿ ಆಧಾರವಾಗಿವೆ.

ಅವ್ತಾರ್ ಐ - ವಿನ್

ಚೆನ್ನೈ ಮೂಲದ ಅವ್ತಾರ್ ಐ – ವಿನ್ ಕಂಪನಿ 2005ರಿಂದಲೂ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ. ಅದೆಷ್ಟೋ ಮಂದಿ ಮಹಿಳೆಯರಿಗೆ ಅವಕಾಶಗಳನ್ನ ಒದಗಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾ ಸೌಂದರ್ಯ ರಾಜೇಶ್ ಈ ಕಂಪನಿಯನ್ನ ಆರಂಭಿಸಿದ್ದು, ಕಾರ್ಪೋರೆಟ್ ವಲಯದಲ್ಲಿರುವ ಲಿಂಗ ತಾರತಮ್ಯವನ್ನ ಹೋಗಲಾಡಿಸಲು ಇವರು ಪಣತೊಟ್ಟಿದ್ದಾರೆ. ಅಲ್ಲದೆ 2006ರಿಂದ ಇಲ್ಲಿವರೆಗೂ ಬಹಳಷ್ಟು ಶ್ರಮ ವಹಿಸಿರುವ ಈ ಕಂಪನಿ 450ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶಗಳನ್ನ ನೀಡಿದೆ. ಭಾರತದಲ್ಲಿ ಮಹಿಳೆಯ ವಯಸ್ಸು 30ಕ್ಕೆ ಬಂದ್ರೆ ಸಾಕು ಆಕೆ ಕೆಲಸದಿಂದ ವಿಮುಖವಾಗಲು ಯತ್ನಿಸುತ್ತಾಳ. ಇದೇ ಚಾಳಿ ದಕ್ಷಿಣ ಏಷ್ಯಾದ ಇತರೆ ರಾಷ್ಟ್ರಗಳಲ್ಲೂ ಇದೆ. ಆದ್ರೆ ಇದಕ್ಕೆ ಕಡಿವಾಣ ಬೀಳಬೇಕು ಅನ್ನೋದು ಅವ್ತಾರ್ ಐ – ವಿನ್ ಕಂಪನಿಯ ಮೂಲೋದ್ದೇಶ.

ಶಾರೋಸ್ ಮತ್ತು ಹರ್ ಸೆಕೆಂಡ್ ಇನ್ನಿಂಗ್ಸ್..

2014ರಲ್ಲಿ ಅಸ್ಥಿತ್ವಕ್ಕೆ ಬಂದಿರೋ ಶಾರೋಸ್ ಕೂಡ ಮಹಿಳೆಯರ ಪರವಾಗ ಹೆಚ್ಚು ಕಾಳಜೆ ಹಾಗೂ ಆಸ್ಥೆ ವಹಿಸಿದೆ. ಕೌಟುಂಬಿಕ ಕಾರಣಗಳಿಂದ ಮಹಿಳೆಯ ಬದುಕು ಏರು ಪೇರಾಗಬಾರದು. ಆಕೆ ಸ್ವಾಯತ್ತವಾಗಿ ಬದುಕಲು ಯತ್ನಿಸಬೇಕು ಅನ್ನೋದು ಕಂಪನಿಯ ಮೂಲೋದ್ದೇಶ. ಇದಕ್ಕಾಗಿ ಪ್ರತೀ ವರ್ಷ 5 ಕೋಟಿ ರೂಪಾಯಿಗಳನ್ನ ಫಂಡಿಂಗ್ ಮಾಡುವ ಶಾರೋಸ್, ಈಗಾಗಲೇ ಹಲವು ಮಂದಿಗೆ ದಾರೀ ದೀಪವಾಗಿದೆ. ಹಾಗೇ ಹರ್ ಸೆಕೆಂಡ್ ಇನ್ನಿಂಗ್ಸ್ ಕೂಡ ಮಹಿಳಾ ಬದುಕಿಗೆ ಹೊಸ ಸ್ಫೂರ್ತಿ ನೀಡಿದೆ. ಬ್ರೇಕ್ ನ ನಂತ್ರ ಮತ್ತೆ ಕೆಲಸಕ್ಕೆ ಬರುವ ಮಹಿಳೆಯರ ಕೈ ಹಿಡಿದಿರುವ ಹರ್ ಸೆಕೆಂಡ್ ಇನ್ನಿಂಗ್ಸ್, ಈಗಾಗಲೇ 2000ಕ್ಕೂ ಹೆಚ್ಚು ಮಂದಿಗೆ ಬೆಳಕು ನೀಡಿದೆ. 2014ರಲ್ಲಿ ಪ್ರತಿಷ್ಠಿತ ಕಂಪನಿಗಳೊಂದಿಗೆ ಟೈ ಅಪ್ ಮಾಡಿಕೊಂಡಿರುವ ಹರ್ ಸೆಕೆಂಡ್ ಇನ್ನಿಂಗ್ಸ್ ಮತ್ತಷ್ಟು ಹೊಸ ಕನಸಿನಲ್ಲಿದೆ. ಹೀಗೆ ವಿವಿಧ ಕಾರಣಗಳಿಂದ ಉದ್ಯೋಗ ತೊರೆಯುವ ಮಹಿಳೆಯರನ್ನ ಸಂಸ್ಥೆಗಳು ದೂರವಿಡುವ ಸಂದರ್ಭಗಳೇ ಹೆಚ್ಚು. ಹೀಗಿರುವಾಗ ಈ ಕೆಲವು ಸಂಸ್ಥೆಗಳು ಅಂತಹ ನೊಂದವರಿಗೆ ವರದಾನವಾಗಿರೋದು ಸ್ವಾಗತಾರ್ಗ.

ಲೇಖಕರು – ಶಾರಿಕಾ ನಾಯರ್

ಅನುವಾದ – ಸ್ವಾತಿ 

ಇದನ್ನು ಓದಿ: 

1. ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

2. ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!

3. ಗಾಳಿಪಟದಿಂದ ವಿದ್ಯುತ್ ಉತ್ಪಾದನೆ: ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸಂಶೋಧನೆ

Related Stories