ಏರ್​ಫೋರ್ಸ್ ಸೇರಲು ಬಹು ರಾಷ್ಟ್ರೀಯ ಕಂಪನಿಯ ಕೆಲಸ ಕೈಬಿಟ್ಟ ಮಹಿಳಾಮಣಿ..!

ಟೀಮ್​ ವೈ.ಎಸ್​. ಕನ್ನಡ

1

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಅಂತ ಕನಸು ಕಾಣುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆರ್ಮಿ, ನೇವಿ ಮತ್ತು ಏರ್​ಫೋರ್ಸ್ ಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನಿಧಾನವಾಗಿ ಹೆಚ್ಚುತ್ತಿದೆ. ರುಚಾ ಸುರೇಂದ್ರ ಸಿಯಲ್ ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದರು. ಆರಂಭದಲ್ಲಿ ರುಚಾ ಪುಣೆಯ ಬನೆರ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ ಈಗ ಫೈಟರ್ ಜೆಟ್ ಸ್ಕ್ವಾಡ್ರನ್ ಗೆ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಏರ್ ಫೋರ್ಸ್ ಗೆ ಆಯ್ಕೆಯಾದ 3 ಮಹಿಳಾ ಅಭ್ಯರ್ಥಿಗಳ ಪೈಕಿ ರುಚಾ ಕೂಡ ಒಬ್ಬರಾಗಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಇಟ್ಟುಕೊಂಡಿದ್ದ ರುಚಾಗೆ ಈಗ ಕನಸನ್ನು ನನಸು ಮಾಡಿಕೊಂಡ ಸಂಭ್ರಮ.

ರುಚಾ ಕಂಪ್ಯೂಟರ್ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದ ಮೇಲೆ ಬೆಂಗಳೂರು ಮೂಲದ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದರು. ಆದರೆ ಏರ್ ಫೋರ್ಸ್ ಸೇರುವ ಕನಸು ಇದ್ದಿದುದರಿಂದ ಆ ಕೆಲಸವನ್ನು ಒಪ್ಪಿಕೊಳ್ಳಲಿಲ್ಲ. ಇದು ಅವರಿಗೆ ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT)ಗೆ ಸಿದ್ಧತೆ ಮಾಡಿಕೊಡಲು ಅವಕಾಶ ಮಾಡಿಕೊಟ್ಟಿತ್ತು. ಕನಸು ನನಸು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.

“ನಾನು ಪದವಿಯ ಕೊನೆಯ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾಗಲೇ ಬೆಂಗಳೂರು ಮೂಲದ ಸಾಫ್ಟ್ ವೇರ್ ಕಂಪನಿ ನನಗೆ ಕೆಲಸ ಕೊಟ್ಟಿತ್ತು. ಆದರೆ ನಾನು ಆ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ. ನಾನು ಪುಣೆಯಲ್ಲಿ ಇದ್ದು ಇಂಡಿಯನ್ ಏರ್ ಫೋರ್ಸ್ ಸೇರುವ ಕನಸು ಕಂಡಿದ್ದೆ. ಇವತ್ತು ನಾನು ಆವತ್ತು ಮಾಡಿದ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದೇನೆ.”
- ರುಚಾ, ಐಎಎಫ್ ಸದಸ್ಯೆ

ರುಚಾ ಪ್ರತಿದಿನ ಸಂಜೆ ಎರಡರಿಂದ, ಮೂರು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದರು. ಕೆಲಸದ ವೇಳೆಯಲ್ಲಿ ಸಮಯ ಸಿಗುತ್ತಾ ಇದ್ದುದರಿಂದ ಬೆಳಗ್ಗಿನ ಅವಧಿಯಲ್ಲೂ ರುಚಾ ಅಭ್ಯಾಸ ನಡೆಸುತ್ತಿದ್ದರು. ಕೇವಲ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಏರ್ ಫೋರ್ಸ್ ಎಕ್ಸಾಂ ಪಾಸ್ ಮಾಡಿ ಈಗ ಕೆಲಸದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೈದ್ರಾಬಾದ್ ನಲ್ಲಿ ರುಚಾ 78 ವಾರಗಳ ತರಬೇತಿ ಪಡೆಯಲಿದ್ದು, ತರಬೇತಿಯ ನಂತರ ಏರ್ ಫೋರ್ಸ್ ನ ಟೆಕ್ನಿಕಲ್ ಬ್ರಾಂಚ್ ಸೇರ್ಪಡೆಯಾಗಲಿದ್ದಾರೆ.

ಇದನ್ನು ಓದಿ: ಗ್ರಾಮೀಣ ಕ್ರೀಡಾಪಟುಗಳ ಜೀವನ ರೂಪಿಸುವ ಸಿದ್ಧಾರ್ಥ್- ಒಂದೂವರೆ ಲಕ್ಷ ಪ್ರತಿಭೆಗಳ ಬದಕು ಕಟ್ಟಿಕೊಡುವ ಸ್ಟೈರ್ಸ್

ರುಚಾ ಕನಸು ನನಸು ಮಾಡಿಕೊಳ್ಳುವಲ್ಲಿ ಅವರ ಪೋಷಕರ ಸಹಾಯವೂ ಇದ್ದೇ ಇದೆ. ರುಚಾ ತಂದೆ ಉದ್ಯಮಿಯಾಗಿದ್ದರೆ ಅಮ್ಮ ದೀಪಾಲಿ ಸೆಂಟ್ರಲ್ ಎಕ್ಸೈಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್​ನಲ್ಲಿ ಸುಪರಿಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ವರ್ಷ ಬಿಹಾರದ ಭಾವನಾ ಕಾಂತ್, ರಾಜಸ್ಥಾನದ ಮೋಹನ ಸಿಂಗ್ ಮತ್ತು ಮಧ್ಯ ಪ್ರದೇಶದ ಅವನಿ ಚತುರ್ವೇದಿ, ಕಳೆದ ವರ್ಷ ಐಎಎಫ್ ಫೈಟರ್ ವಿಮಾನದ ಪೈಲಟ್ ಗಳಾಗಿ ಇತಿಹಾಸ ಬರೆದಿದ್ದರು.

ಐಎಎಫ್ ಸೇರಿರುವ ಈ ಮಹಿಳಾ ಮಣಿಗಳು ಸೆಪ್ಟಂಬರ್ ವೇಳೆಯಲ್ಲಿ ಸುಖೋಯ್-30 ಫೈಟರ್ ಜೆಟ್ ಗಳನ್ನು ಹಾರಿಸಲಿದ್ದಾರೆ. ಸುಖೋಯ್-30 ಸ್ಕ್ವಾಡ್ರನ್ ಫೈಟರ್ ಜೆಟ್ ಆತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಒಟ್ಟಿನಲ್ಲಿ ಮಹಿಳಾ ಮಣಿಗಳ ಸಾಹಸ ಎಲ್ಲರಿಗೂ ಮಾದರಿ ಆಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. 8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!

2. ಜಲಚರ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಈ ಟೀಮ್​..!

3. ಸಾಂಪ್ರದಾಯಿಕ ದೋಸೆ ತಿನ್ನಲು ಇಲ್ಲಿ ಬೇಟಿ ನೀಡಿ

Related Stories