ನಿಮ್ಮ ಮನೆಗೆ ಮರಳು, ಇಟ್ಟಿಗೆ ಬೇಕಿಲ್ಲ ಇದೊಂದಿದ್ರೆ ಸಾಕು!

ಟೀಮ್​ ವೈ.ಎಸ್​. ಕನ್ನಡ

6

ನೀವು ಮನೆ ಕಟ್ಟೋದಿಕೆ ನಿರ್ಧರಿಸಿದ್ದೀರಾ..? ಹಾಗಾದ್ರೆ ವಿಶ್ವನಾಥ್‍ರವರ ಮನೆಯನ್ನೊಮ್ಮೆ ನೋಡಲೇಬೇಕು. 30*40 ಸೈಟ್‍ನಲ್ಲಿ ಇವರು ಕಟ್ಟಿರುವ ಮನೆ ಬೆಂಗಳೂರಿನಲ್ಲಿ ಅದೆಷ್ಟೋ ಜನರಿಗೆ ಸ್ಪೂರ್ತಿ. ಅತ್ಯಂತ ಕಡಿಮೆ ಬೆಲೆಯಲ್ಲಿ ನಿರ್ಮಾಣವಾಗಿರೋ ಇವರ ಮನೆ ಹಲವಾರು ವಿಶೇತೆಗಳನ್ನು ಒಳಗೊಂಡಿದೆ. ಅಂದ್ರೆ ಈ ಮನೆಯ ನಿರ್ಮಾಣದ ವಿನ್ಯಾಸ ನಿಮಗೆ ಕಾಸ್ಟ್ ಕಟಿಂಗ್ ಮಾಡುತ್ತದೆ. ಇದನ್ನರಿತು ಬೆಂಗಳೂರಿನಲ್ಲಿ 500 ಕ್ಕೂ ಹೆಚ್ಚು ಜನರು ಇದೇ ಶೈಲಿಯಲ್ಲಿ ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ನಂಜನಗೂಡು, ಮೈಸೂರಿನಲ್ಲೂ ಈ ಶೈಲಿಯ ಮನೆಗಳನ್ನು ಕಾಣಬಹುದು.

ಆಧುನಿಕ ಭಗೀರಥ

ವಿಶ್ವನಾಥ್‍ರವರು ಮೂಲತಹ ಮೈಸೂರಿನವರು. ಓದಿದ್ದು ಇಂಜಿನಿಯರಿಂಗ್. ಆದ್ರೆ ಹೆಚ್ಚು ಪರಿಣತಿ ಮಳೆ ನೀರು ಕೊಯ್ಲುವಿನ ಬಗ್ಗೆ. ನೀರಿನ ಅಭಾವ, ಭಾರತದ ನೀರಿನ ಬಗ್ಗೆ ನಿಮಗೆ ಏನೇ ಅನುಮಾನಗಳಿದ್ರೂ ಅದನ್ನು ಥಟ್ಟನೇ ಬಗೆ ಹರಿಸಬಲ್ಲ ಭಗೀರಥ. ಇವರ ಮನೆಯೇ ಒಂದು ವಿಭಿನ್ನ ಪ್ರಯತ್ನ ಅಂತ ಹೇಳಬಹುದು. ಇವರದು ಪರಿಸರ ಸ್ನೇಹಿ ಮನೆ. ಆದ್ರೆ ಇದು ಎಲ್ಲ ಮನೆಗಳಂಥಲ್ಲ. ಬಹಳ ಭಿನ್ನ. ಮನೆ ನಿರ್ಮಾಣ ಹಂತದಲ್ಲೆ ಕಾಸ್ಟ್ ಕಟಿಂಗ್ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಬ್ರಿಲಿಯಂಟ್ ಎನ್ನುವಂತೆ ಮನೆ ನಿರ್ಮಾಣ ಮಾಡಿದ್ದಾರೆ.

ಮರಳು ಇಟ್ಟಿಗೆ ಇಲ್ಲದ ಮನೆ

ಈ ಮನೆಯ ಮೊದಲ ಪ್ಲಸ್ ಪಾಯಿಂಟ್ ಅಂದ್ರೆ ಈ ಮನೆಯಲ್ಲಿ ಮರಳು ಮತ್ತು ಇಟ್ಟಿಗೆಗಳನ್ನು ಬಳಸದೇ ಇರುವುದು. ಇಟ್ಟಿಗೆ ಮರಳು ಇಲ್ಲದೇ ಮನೆ ಹೇಗೆ ಅಂತಿರಾ? ಹಾಗಾದ್ರೆ ಇಲ್ಲಿ ಕೇಳಿ. ಮೊದಲು ಮನೆ ನಿರ್ಮಾಣ ಮಾಡುವಾಗ ಮನೆ ಕಟ್ಟಲು ಬೇಕಾದ ಮರಳು ಮತ್ತು ಇಟ್ಟಿಗೆಗೆ ಬದಲಾಗಿ ಮನೆಯ ಬೇಸ್‍ಮೆಂಟ್ ಮಣ್ಣನ್ನು ಬಳಸಿಕೊಳ್ಳಲಾಗಿದೆ. ಈ ಮಣ್ಣನ್ನು ಹಲವಾರು ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ನಂತರ ಲ್ಯಾಬ್ ಟೆಸ್ಟ್​​ಗೂ ಕಳುಹಿಸಲಾಗುತ್ತದೆ. ಅಲ್ಲಿಂದ ಈ ಮಣ್ಣಿನ ಇಟ್ಟಿಗೆಗಳು ಮನೆ ಕಟ್ಟಲು ಸೂಕ್ತವಾಗಿದೆ ಎಂದು ಸರ್ಟಿಫೈ ಮಾಡಿದ ಮೇಲೆಯೇ ಮನೆ ನಿರ್ಮಾಣ ಮಾಡಲಾಗುತ್ತದೆ. ಇನ್ನು ಈ ಮನೆಗೆ ಪ್ಲಾಸ್ಟರ್ ಬಳಸುವುದಿಲ್ಲ ಸೋ ಸಿಮೆಂಟ್‍ನ ಅಗತ್ಯವೂ ಬೀಳುವುದು ಇಲ್ಲ.

ಋತುಮಾನಕ್ಕೆ ತಕ್ಕ ಹಾಗೇ ಬದಲಾಗುವ ಮನೆ

ಈ ಮನೆಯ ಮತ್ತೊಂದು ವಿಶೇಷತೆ ಅಂದ್ರೆ ಇದು ಋತುಮಾನಕ್ಕೆ ಅನುಗುಣವಾಗಿ ಈ ಮನೆಯಲ್ಲಿ ವಾತಾವರಣ ಬದಲಾಗುತ್ತದೆ. ಚಳಿಗಾಲದಲ್ಲಿ ಈ ಮನೆ ಬೆಚ್ಚಗಿದ್ದರೇ, ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ. ಅದಕ್ಕೆ ಹೊಂದುವಂತೆ ಈ ಮನೆಯಲ್ಲಿ ಎರಡು ಬೆಡ್‍ರೂಂಗಳಿದ್ದು ಬೇಸಿಗೆ ಕಾಲದಲ್ಲಿ ಕೆಳಗಿನ ರೂಂ ತಣ್ಣಗೆ ಫೀಲ್ ಆಗುತ್ತೆ, ಚಳಿಗಾಲದಲ್ಲಿ ಮೇಲುಗಡೆ ರೂಂ ಬೆಚ್ಚಗಿನ ಅನುಭವ ನೀಡುತ್ತೆ. ಅದಕ್ಕೆ ಹೊಂದುವಂತೆ ಗಾಜು ಮತ್ತು ಕಿಟಕಿಗಳಿಂದ ವೆಂಟಿಲೇಷನ್ ಮಾಡಿದ್ದಾರೆ. ಇನ್ನು ಬೇಸ್‍ಮೆಂಟ್‍ನಲ್ಲಿ ಮಣ್ಣು ತೆಗೆದ ನಂತರ ಆ ಸ್ಥಳವನ್ನು ಒಂದು ದೊಡ್ಡ ಹಾಲ್ ಆಗಿ ಪರಿವರ್ತಿಸಿ ಅದನ್ನು ಸ್ಪೋರ್ಟ್ಸ್​​  ಕೋಣೆಯನ್ನಾಗಿ ಮಾಡಲಾಗಿದೆ.

ಇದನ್ನು ಓದಿ: ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

ನೀರಿನ ಬಿಲ್ ಕಟ್ಟುವ ಹಾಗಿಲ್ಲ

ಈ ಮನೆಯಲ್ಲಿ ಎಲ್ಲ ಕಡೆಯಲ್ಲೂ ಮಳೆ ನೀರು ಸಂಗ್ರಹಣೆನ್ನು ಮಾಡಲಾಗುತ್ತೆ. ವರ್ಷ ಪೂರ್ತಿ ಮಳೆ ನೀರಿನ ಮೇಲೆ ಈ ಮನೆ ನಡೆಯುತ್ತೆ. ಅಲ್ಲದೇ ಗ್ರೇ ವಾಟರ್ ಮ್ಯಾನೇಜ್‍ಮೆಂಟ್ ಮಾಡಲಾಗುತ್ತೆ. ಅಂದ್ರೆ ವಾಶಿಂಗ್ ಮೆಶಿನ್ ನೀರನ್ನು ಸಂಗ್ರಹಿಸಿ ಅದನ್ನು ಕ್ಲೀನಿಂಗ್ ಹಂತದಿಂದ ಸೋಪಿನಿಂದ ಬೇರ್ಪಡಿಸಿ ಉಳಿದ ನೀರನ್ನು ಗಿಡಗಳಿಗೆ ಹಾಕಲಾಗುತ್ತೆ. ಇದೇ ನೀರನ್ನು ಬಳಸಿ ಟೆರೆಸ್ ಮೇಲೆ ಹಲವಾರು ತರಕಾರಿ ಗಿಡಗಳಲ್ಲದೇ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ ಈ ಟೆರೆಸ್‍ಗೆ ಸ್ಮಾರ್ಟ್ ರೂಫ್ ಎಂಬ ಅವಾರ್ಡ್ ಕೂಡ ಬಂದಿದೆ.

ಈ ಮನೆಯಲ್ಲಿದೆ ನ್ಯಾಚುರಲ್ ಲೈಟ್

ಈ ಮನೆಯಲ್ಲಿ ಎಲ್ಲೂ ಎಲ್‍ಇಡಿ ಬಲ್ಬ್​ಗಳಿಲ್ಲ. ಅದಕ್ಕೆ ಬದಲಾಗಿ ಸೂರ್ಯನ ಬೆಳಕಿನಿಂದ ಈಡಿ ಮನೆಯನ್ನು ಬೆಳಗುತ್ತಾರೆ. ಸೋಲಾರ್ ಲೈಟ್ ಪ್ಯಾನ್ ಬಳಸಿಕೊಂಡು ಆ ಮೂಲಕ ಈಡಿ ಮನೆಯಲ್ಲು ಸೋಲಾರ್ ಲೈಟ್ ಅಳವಡಿಸಿಕೊಂಡಿದ್ದಾರೆ. ಈ ಮನೆಗೆ ಫ್ಯಾನ್ ಅಗತ್ಯವಿರದ ಕಾರಣ ಪ್ರತಿ ತಿಂಗಳು ನೀರು ಮತ್ತು ಎಲೆಕ್ಟ್ರಿಕಲ್ ಬಿಲ್‍ನಲ್ಲಿ ಸಾಕಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದಾರೆ.

ಪರಿಸರ ಸ್ನೇಹಿ ಶೌಚಲಾಯ

ಇವರ ಮನೆಯಲ್ಲಿರುವ ಪರಿಸರ ಸ್ನೇಹಿ ಶೌಚಾಲಯದಿಂದ ವೇಸ್ಟ್ ಸಂಗ್ರಹಿಸಿ ಅದನ್ನು ಕಾಂಪೋಸ್ಟ್ ಮಾಡಲಾಗುತ್ತದೆ. ಆ ಕಾಂಪೋಸ್ಟ್​​ನಿಂದ ಮನೆ ಮುಂದೆ ಟೆರೆಸ್ ಮೇಲೆ ಗಿಡಗಳನ್ನು ಬೆಳೆದಿದ್ದಾರೆ. ಇನ್ನು ಮನೆಯ ಮುಂದೆ ಅಂತರ್ಜಲ ಸಂಗ್ರಹಣೆಗಾಗಿ ರಿ ಎನರ್ಜಿ ಎನ್ನುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಮಳೆ ನೀರು ಸಂಗ್ರವಾಗಿ ಆ ನೆಲದಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇದು ಆ ಮನೆಗೆ ನೀರಿನ ಸಮಸ್ಯೆಯನ್ನು ನೀಗಿಸುತ್ತದೆ.

ಒಟ್ಟಾರೆ ವಿಶ್ವನಾಥ್‍ರವರ ಈ ಯೋಜನೆ ಇಂದು ಬೆಂಗಳೂರಿನಲ್ಲಿ ನೀರಿನ ಅಭಾವಕ್ಕೆ ಒಳ್ಳೆಯ ಸಲ್ಯೂಷನ್ ಆಗಬಲ್ಲದು, ಅಷ್ಟೇ ಅಲ್ಲದೇ ಈಗಾಗಲೇ ಬಿರು ಬೀಸಿಲಿನಿಂದ ನೀರಿನ ಒರತೆ ಬತ್ತುತ್ತಿದೆ. ಲೊಡ್ ಶೆಡ್ಡಿಂಗ್ ಆರಂಭವಾತ್ತಿದೆ. ಸೋ ಈ ರೀತಿ ಮನೆಗಳನ್ನು ನಿರ್ಮಿಸುವುದು ಭವಿಷ್ಯದ ದಿನಗಳಲ್ಲಿ ನಿಸರ್ಗ ಜೊತೆಗೆ ಸಹಜವಾಗಿ ಬದುಕಲು ನೆರವಾಗುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ.

ಇದನ್ನು ಓದಿ:

1. ಸೀರೆಯ ಮೇಲೆ "ಮಾನಸ" ಚಿತ್ತಾರ!

2. ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

3. ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

Related Stories