ಸ್ಟಾರ್ಟಪ್ ನಿರ್ಮಾಣದಲ್ಲಿ ನಾನು ಎದುರಿಸಿದ 5 ಸವಾಲುಗಳು.. 

ಟೀಮ್​ ವೈ.ಎಸ್​. ಕನ್ನಡ

0

2014ರಲ್ಲಿ ಸ್ಟಾರ್ಟಪ್ ಅಂದ್ರೆ ಭಯಾನಕ ವಿಷಯ ಎನ್ನುವಂತಹ ಸ್ಥಿತಿ ಇತ್ತು. ಆಗ ನಾನು ಐಐಟಿ ಬಾಂಬೆಯಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದೆ. ನನ್ನ ಕೆಲ ಸೀನಿಯರ್‍ಗಳು ನನ್ನಲ್ಲಿ ಉತ್ಸಾಹ ತುಂಬುವಂತಹ ಕಾರ್ಯ ಮಾಡುತ್ತಿದ್ದರು, ಆದ್ರೆ ನಾನು ಕೂಡ ಅವರ ಹಾದಿಯಲ್ಲೇ ಸಾಗುತ್ತೇನೆ ಅನ್ನೋದ್ರ ಅರಿವು ನನಗಿರಲಿಲ್ಲ. ರಿಸ್ಕ್ ತೆಗೆದುಕೊಂಡು ಸ್ಟಾರ್ಟ್‍ಅಪ್ ಕಡೆಗೆ ಮುನ್ನುಗ್ಗುತ್ತೇನೆ ಎಂದುಕೊಂಡಿರಲಿಲ್ಲ. ಆದ್ರೆ ಇದೆಲ್ಲ ಆ ದಿನಗಳ ಮಾತು, ನಾನು `ದಿ ಮಿನಿಮಲಿಸ್ಟ್' ಅನ್ನು ಕಟ್ಟಿ ಬೆಳೆಸಿದ್ದೇನೆ. ಇದು ಎಂಟಂಕಿ ಆದಾಯ ಹೊಂದಿರುವ ಹೊಸ ಯುಗದ ಸೃಜನಾತ್ಮಕ ಸಂಸ್ಥೆ. ಕಾಲೇಜಿನಲ್ಲಿದ್ದಾಗಲೇ, 10 ತಿಂಗಳ ಅವಧಿಯಲ್ಲಿ ಕಂಪನಿ ಕಟ್ಟಿ ಬೆಳೆಸಿರುವುದು ವಿಶೇಷ. ಇದು ಅಸಂಖ್ಯಾತ ನಿರ್ಬಂಧಗಳನ್ನೊಳಗೊಂಡ ಕಠಿಣ ಪಯಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ.

1. ಉದ್ಯಮ ಮತ್ತು ಕಾಲೇಜು ಶಿಕ್ಷಣ ಒಟ್ಟೊಟ್ಟಿಗೆ

ಸೇವೆ ಒದಗಿಸುವ ಕಂಪನಿಯಾಗಿದ್ದರಿಂದ ಸಂಸ್ಥಾಪಕರು ಆರಂಭದ ದಿನಗಳಲ್ಲಿ ಎಲ್ಲ ಗಣನೀಯ ಅಂಶಗಳ ಬಗ್ಗೆ ಗಮನ ಹರಿಸಲು ಹೆಚ್ಚಿನ ಸಮಯ ಮೀಸಲಾಗಿಡುವುದು ಅನಿವಾರ್ಯ. ಆರಂಭದಲ್ಲಿ ಸಿಬ್ಬಂದಿ ಕೂಡ ಇಲ್ಲದೆ ನಾನು ಒಂಟಿಯಾಗಿಯೇ ಎಲ್ಲಾ ಕೆಲಸ ನಿರ್ವಹಿಸುತ್ತಿದ್ದೆ. ಅದು ಕೂಡ ಕಾಲೇಜು ದಿನಗಳಾಗಿದ್ದರಿಂದ ನನಗದರ ಅಭ್ಯಾಸವೇ ಇರಲಿಲ್ಲ. ಇವೆಲ್ಲದರ ಮಧ್ಯೆ ಐಐಟಿ ಶಿಕ್ಷಣ ನಿಜಕ್ಕೂ ಒಂದು ಅಸ್ಥಿರವಾದ ಸವಾರಿಯಾಗಿತ್ತು. ಅದರಲ್ಲೂ ಐಐಟಿ ಕೊನೆ ವರ್ಷದಲ್ಲಿದ್ದಾಗ ಉದ್ಯಮ, ಶಿಕ್ಷಣ ಎರಡನ್ನೂ ಮ್ಯಾನೇಜ್ ಮಾಡುವುದು ಕಷ್ಟವಾಗಿತ್ತು.

2. ಕಲ್ಪನೆಯೇ ಇಲ್ಲದ ವಲಯಕ್ಕೆ ಪ್ರವೇಶ

ಎಂಜಿನಿಯರ್‍ಗಳಾಗಿ ಜಾಹೀರಾತು, ವಿನ್ಯಾಸ, ಅಥವಾ ಡಿಜಿಟಲ್ ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಲ್ಪನೆಯೇ ನಮಗೆ ಇರಲಿಲ್ಲ. ವಿಶೇಷ ಅಂದ್ರೆ ಜಾಹೀರಾತು ಏಜೆನ್ಸಿಗೆ ಪ್ರವೇಶಿಸಲು ನನ್ನ ಸಹ ಸಂಸ್ಥಾಪಕರು ತೆಗೆದುಕೊಂಡ ಸಮಯ ಕೇವಲ 2 ತಿಂಗಳುಗಳಷ್ಟೆ. ವಿಸ್ತಾರವಾದ ಈ ಮಾರುಕಟ್ಟೆಯಲ್ಲೇ ಹೊಸ ಯುಗಕ್ಕೆ ಬೇಕಾದ ನಮ್ಮದೇ ದೃಷ್ಟಿಕೋನವುಳ್ಳ ಕಂಪನಿ ಸ್ಥಾಪಿಸುವ ಆಲೋಚನೆಯೇ ನಮಗೆ ಪ್ರೇರಣೆ. ನಮ್ಮ ಹೃದಯದ ಮಾತು ಕೇಳಿ, ನಮಗೆ ಗೊತ್ತಿಲ್ಲದ ವಲಯಕ್ಕೆ ಪ್ರವೇಶ ಪಡೆದೆವು.

3. ಹಣ ಶೂನ್ಯ

2015ರಲ್ಲಿ ಫಂಡಿಂಗ್ ಅನ್ನೋದು ನಿಜಕ್ಕೂ ದೊಡ್ಡ ವಿಷಯವಾಗಿತ್ತು, ನಾವು ಕೂಡ ಹೆಚ್ಹೆಚ್ಚು ಆರ್ಡರ್ ಪಡೆಯುವ ಮೂಲಕ ಸಂಸ್ಥೆಯನ್ನು ಮುನ್ನಡೆಸಲು ಕಸರತ್ತು ಮಾಡಿದೆವು. ವಿದ್ಯಾರ್ಥಿಗಳಾಗಿಯೇ ಉದ್ಯಮ ಜಗತ್ತಿಗೆ ಎಂಟ್ರಿಕೊಟ್ಟ ನಮ್ಮ ಬಳಿ ಇದ್ದಿದ್ದು ಕೇವಲ 1 ಲಕ್ಷ ರೂಪಾಯಿ. ಅದು ಕೂಡ ಫ್ರೀಲಾನ್ಸರ್‍ಗಳಾಗಿ ಕೆಲಸ ಮಾಡಿ ಸಂಪಾದಿಸಿದ್ದು. ಕಾಪೆಕ್ಸ್ ಮತ್ತು ಉತ್ತಮ ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಿದಾಗ ಕೈಗೆ ಸ್ವಲ್ಪ ಹಣ ಬರುತ್ತದೆ ಎಂಬ ನಂಬಿಕೆಯಿತ್ತು, ಹಾಗಾಗಿ ಯಾವುದೇ ಬಾಹ್ಯ ಬೆಂಬಲವಿಲ್ಲದೆ ಮುಂದಡಿ ಇಡಲು ನಿರ್ಧರಿಸಿದ್ದೆವು.

4. ಪ್ರತಿಭೆ ಸ್ವಾಧೀನ

2015ರ ಜೂನ್‍ನಲ್ಲಿ ಉದ್ಯಮದ ಆರಂಭ ಎರಡು ತುದಿಗಳುಳ್ಳ ಕತ್ತಿಯಂತಿತ್ತು. ಸಮಾಧಾನಕರ ಸಂಗತಿ ಅಂದ್ರೆ ನಾವು ಹೂಡಿಕೆದಾರರಾಗುವ ಉತ್ಸಾಹದಲ್ಲಿದ್ದೆವು, ನಮ್ಮ ಸುತ್ತಮುತ್ತ ಇದ್ದ ಸ್ಟಾರ್ಟ್‍ಅಪ್‍ಗಳೆಲ್ಲ ಹಿಟ್ಟಿನ ಮೇಲೆ ನಡೆಯುತ್ತಿದ್ದವು. ಅಲ್ಪಕಾಲಿಕ ಹಣವನ್ನೆಲ್ಲ ಸುಟ್ಟು ಹಾಕಲಾಗುತ್ತಿತ್ತು, ಸರಿಯಾದ ಸಮಯದಲ್ಲಿ ಕೇಕ್‍ನ ಒಂದು ತುಂಡನ್ನು ಗಿಟ್ಟಿಸಿಕೊಳ್ಳಲು ನಾವು ಕಾಯುತ್ತಿದ್ದೆವು. ಜೂನ್‍ನಲ್ಲಿ ವಿನ್ಯಾಸಗಾರರ ಹೊಸ ಬ್ಯಾಚ್ ಕೆಲಸಕ್ಕೆ ಸೇರಿತ್ತು. ಒಂದು ಸಂಸ್ಥೆಯಾಗಿ ಆಗ ನಾವಿನ್ನೂ ಹೊಸಬರು, ಪ್ರತಿಭಾವಂತ ಕೆಲಸಗಾರರನ್ನು ಆಕರ್ಷಿಸುವ ಕಲೆ ಗೊತ್ತಿರಲಿಲ್ಲ. ಈ ಸಮಯದ ಪ್ರಭಾವದಿಂದ ಕೆಲವು ಕೆಟ್ಟ ನೇಮಕ ಕೂಡ ನಡೆದು ಹೋಗಿತ್ತು.

5. ಮೊದಲು ಅನುಭವದ ಕೊರತೆ

21ರ ಹರೆಯದ ನಾವು ಕಂಪನಿ ಆರಂಭಕ್ಕೂ ಮುನ್ನ ಬಿರುಗಾಳಿಗೆ ಸವಾಲೆಸೆಯಲು ನಿರ್ಧರಿಸಿದ್ದೆವು. ಕಾರ್ಪೊರೇಟ್ ಉದ್ಯೋಗದ ಅನುಭವವಾಗ್ಲಿ, ಔದ್ಯಮಿಕ ಅನುಭವವಾಗ್ಲಿ ನಮಗಿರಲಿಲ್ಲ. ಕಂಪನಿಗಳನ್ನು ಹೇಗೆ ಕಟ್ಟಿ ಬೆಳೆಸುತ್ತಾರೆಂಬ ಸಣ್ಣ ಪರಿಕಲ್ಪನೆ ಮಾತ್ರ ನಮಗಿತ್ತು. ನನ್ನ ತಂದೆ ಮತ್ತು ಕೆಲ ಸಹ ಉದ್ಯಮಿಗಳ ಮಾರ್ಗದರ್ಶನ ನಮ್ಮೊಂದಿಗಿತ್ತು. ಇದರಿಂದಾಗಿ ಕಂಪನಿ ಆರಂಭಕ್ಕಿದ್ದ ಜಟಿಲತೆಗಳನ್ನೆಲ್ಲ ಅರ್ಥಮಾಡಿಕೊಳ್ಳಲು ಸಾಧ್ಯವಾಯ್ತು. ನನ್ನ ಪಯಣ ಇನ್ನೂ ಸುದೀರ್ಘವಾದದ್ದು, ಕಳೆದ ಕೆಲವು ತಿಂಗಳುಗಳಲ್ಲಿ ಕೆಲ ವಿಷಯಗಳನ್ನು ಅರಿತುಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಇದು ಸಂಸ್ಥೆಯನ್ನು ಸಮರ್ಥನೀಯ ರೀತಿಯಲ್ಲಿ ಅಳೆಯಲು ನೆರವಾಗಿದೆ.

ಎಲ್ಲವನ್ನೂ ಸಿಂಹಾವಲೋಕನ ಮಾಡಿದ್ರೆ ನಾನು ಎದುರಿಸಿದ ಅಡಚಣೆಗಳೆಲ್ಲ ವೈವಿದ್ಯಮಯ. ಇನ್ನು ಕೆಲವು ಪ್ರತಿಯೊಬ್ಬ ಉದ್ಯಮಿಯೂ ಎದುರಿಸುವ ಅನನ್ಯ ಕಾಠಿಣ್ಯತೆಗಳು. ನಾನು ಕುರುಡು ಕಣ್ಣಿನಿಂದಲೇ ಬ್ಯಾಟಿಂಗ್ ಮಾಡುವ ಸಂಕಲ್ಪ ಮಾಡಿದ್ದೆ ಮತ್ತು ನನ್ನ ಪಾಲಿಗೆ ಪರಿಣಾಮಕಾರಿ ವ್ಯಾಪಾರದ ಮೂಲಕ ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತ್ತು. ಸಾಂಪ್ರದಾಯಿಕ ಸೆಟಪ್‍ನಲ್ಲಿದ್ದರೂ ಕಲಿಯಲು ಅಸಾಧ್ಯವಾದಂಥದ್ದನ್ನೆಲ್ಲ ನಾನು ಕಲಿತಿದ್ದೆ. ಇದೇ ಸಾಹಸೋದ್ಯಮ ಅನ್ನೋದು ನನ್ನ ನಂಬಿಕೆ. ಪ್ರತಿಯೊಬ್ಬ ಕಾಲೇಜು ವಿದ್ವಾರ್ಥಿಯೂ ಸ್ವಂತ ಕಂಪನಿ ಆರಂಭಿಸಲು ಪ್ರಯತ್ನಿಸಬೇಕು. ಯಶಸ್ಸು ಅಥವಾ ವೈಫಲ್ಯಕ್ಕಿಂತ ಹೆಚ್ಚಾಗಿ ಇದು ಅಂತ್ಯವಿಲ್ಲದ ಕಲಿಕೆ.

ಲೇಖಕರು: ಸಾಹಿಲ್ ವೈದ್ಯ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

2. 60 ವರ್ಷದ ಟೂ-ಪೀಸ್ ಮಾಡೆಲ್..! ಬಿಕಿನಿ ಧರಿಸೋ ಬಿಂದಾಸ್ ಅಜ್ಜಿ...

3. ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

Related Stories