ಭಾಗ್ಯದ ಲಕ್ಷ್ಮೀಗೆ ಭಕ್ತಿಯ ನಮನ- ವರ್ಷವಿಡೀ ಕಾಪಾಡು ನಮ್ಮನ್ನ

ಟೀಮ್​​ ವೈ.ಎಸ್​. ಕನ್ನಡ

2

ಭಾರತೀಯ ಸಂಸ್ಕೃತಿಯಲ್ಲಿ ಲಕ್ಷ್ಮೀ ದೇವತೆಗೆ ಭಾರೀ ಮಹತ್ವವಿದೆ. ಲಕ್ಷ್ಮೀಯನ್ನು ಅಭಿವೃದ್ಧಿಯ ಸಂಕೇತ ಅಂತಲೇ ಕರೆಯಲಾಗುತ್ತದೆ. ವ್ಯಕ್ತಿಯ ಬೆಳವಣಿಗೆ, ಅಭಿವೃದ್ಧಿ ಮತ್ತು ಸೋಲಿನಲ್ಲಿ ಲಕ್ಷ್ಮೀ ದೇವರ ಪಾತ್ರ ದೊಡ್ಡದಿದೆ. ಹೀಗಾಗಿ ಹಿಂದೂ ಸಂಸ್ಕೃತಿಯಲ್ಲಿ ಲಕ್ಷ್ಮೀಗೆ ವಿಶೇಷ ಸ್ಥಾನವಿದೆ. ಹೀಗಾಗಿ ಭಾರತದ ಎಲ್ಲೆಡೆಯೂ ಲಕ್ಷ್ಮೀ ದೇವರಿಗೆ ವಿಶೇಷ ಸ್ಥಾನವಿದೆ. ಆಧುನಿಕ ಮತ್ತು ಸ್ಟಾರ್ಟ್ಅಪ್ ಲೋಕದಲ್ಲೂ ಲಕ್ಷ್ಮೀಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ ಭಾರತದ ವಿವಿದೆಡೆ ವಿವಿಧ ಸಮಯದಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತದೆ.

ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಲಕ್ಷ್ಮೀ ಪೂಜೆ ವಿಶೇಷವಾದದ್ದು. ಗುಜರಾತ್​ನಲ್ಲಿ ವ್ಯಾಪಾರಿಗಳ ಲಾಭ ಮತ್ತು ನಷ್ಟದ ಪುಸ್ತಕಗಳು ಆರಂಭವಾಗುವುದು ಲಕ್ಷ್ಮೀ ಪೂಜೆಯ ಬಳಿವೇ. ಲಕ್ಷ್ಮೀ ಪೂಜೆ ಆಚರಣೆ ಹಳೆಯದಾಗಿದ್ದರೂ, ಈಗಿನ ಸ್ಟಾರ್ಟ್ಅಪ್​ಗಳು ಮತ್ತು ಹೊಸ ಉದ್ಯಮಗಳು ಕೂಡ ಲಕ್ಷ್ಮೀ ಪೂಜೆಯ ಮೂಲಕವೇ ಆರಂಭವಾಗುತ್ತದೆ. ಲಕ್ಷ್ಮೀಯ ಕೃಪಾಕಟಾಕ್ಷ ಇದ್ದರೆ ಬೆಳವಣಿಗೆ ಆಗಿಯೇ ಆಗುತ್ತದೆ ಅನ್ನುವ ನಂಬಿಕೆಯೂ ಅಚಲವಾಗಿದೆ. ಲಕ್ಷ್ಮೀಯ ಕೃಪೆಗೆ ಒಳಗಾದ್ರೆ ಉದ್ಯಮದಲ್ಲಿ ಯಶಸ್ಸು ಕಾಣಬಹುದು, ಹೊಸ ಫಂಡಿಂಗ್ ಮೂಲಕ ಉದ್ಯಮ ಮತ್ತು ವ್ಯಾಪಾರವನ್ನು ವಿಸ್ತರಿಸಬಹುದು ಅನ್ನುವ ಕನಸು ಕೂಡ ಇರುತ್ತದೆ.

ಲಕ್ಷ್ಮೀ ಪೂಜೆಯ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಎಲ್ಲಿ ಶಿಸ್ತು ಮತ್ತು ಭಕ್ತಿ ಇರುತ್ತದೇ ಅಲ್ಲಿ ಲಕ್ಷ್ಮೀ ಇರುತ್ತಾಳೆ ಅನ್ನೋ ನಂಬಿಕೆ ಇದ್ದೇ ಇದೆ. ಪ್ರಾಮಾಣಿಕತೆ ಇದ್ದಲ್ಲಿಯೂ ಲಕ್ಷ್ಮೀ ಇರುತ್ತಾಳೆ ಅನ್ನೋ ನಂಬಿಕೆ ಇದೆ. ಪರೋಪಕಾರದ ಪ್ರತಿಫಲದಲ್ಲೂ ಲಕ್ಷ್ಮೀ ಕೃಪಾಕಟಾಕ್ಷ ಇರಬೇಕು ಅನ್ನೋ ನಂಬಿಕೆ ಇದೆ.

ಲಕ್ಷ್ಮೀ ಪೂಜೆಯನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಸಮಯದಲ್ಲಿ ಮಾಡಲಾಗುತ್ತದೆ. ಈಗಾಗಲೇ ಪಶ್ಚಿಮ ಬಂಗಾಳ, ಓಡಿಶಾ, ಅಸ್ಸಾಂ ಸೇರಿದಂತೆ ಹಲವು ಕಡೆ ದಸರಾ ಸಮಯದಲ್ಲೇ ಮಾಡಲಾಗಿದೆ. ದುರ್ಗಾ ಪೂಜೆಗೆ ಎಷ್ಟು ಮಹತ್ವ ನೀಡಲಾಗುತ್ತದೋ ಅಷ್ಟೇ ಮಹತ್ವನ್ನು ಈ ರಾಜ್ಯಗಳಲ್ಲಿ ಲಕ್ಷ್ಮೀ ಪೂಜೆಗೆ ನೀಡಲಾಗುತ್ತದೆ.

ಇದನ್ನು ಓದಿ: ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು

ಇನ್ನು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಲಕ್ಷ್ಮೀ ಪೂಜೆಯನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಗುಜರಾತ್, ಮಧ್ಯಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ದೀಪಾವಳಿ ಸಂದರ್ಭದಲ್ಲಿ ಮಾಡುವುದು ಪ್ರತೀತಿ. ಈ ಸಮಯದಲ್ಲಿ ಗಣೇಶ ಮತ್ತು ಲಕ್ಷ್ಮೀಯನ್ನು ಜೊತೆಯಾಗೇ ಪೂಜಿಸುವುದು ಸಾಮಾನ್ಯ.

ಒಟ್ಟಿನಲ್ಲಿ ಕಾಲ ಎಷ್ಟೇ ಬದಲಾಗಿದ್ದರೂ, ನಂಬಿಕೆ ಬದಲಾಗಿಲ್ಲ. ಲಕ್ಷ್ಮೀ ಪೂಜೆ ಭಾರತೀಯ ಪಾಲಿಗೆ ಸರ್ವಶ್ರೇಷ್ಠ ಮತ್ತು ಪವಿತ್ತವಾದದ್ದು.

ಇದನ್ನು ಓದಿ:

1. ದೇಶ ಸುತ್ತಿ ನೋಡಿ.. ಕೋಶ ಓದಿ ನೋಡಿ

2. ಉಕ್ಕಿ ಹರಿಯುವ ನದಿಗೆ ಸೇತುವೆ ಕಟ್ಟಿದ್ರು- ಎರಡೂ ಗ್ರಾಮಗಳ ಜನರಿಗೆ ನೆಮ್ಮದಿ ತಂದ್ರು..!

3. ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..