ವಿಜ್ಞಾನ ಪಾಠ ಮಾಡಲು ಟೀಚರ್ ಇಲ್ಲದಿದ್ದರೂ ನೋ ವರಿ- ಐಎಎಸ್ ಆಫೀಸರ್ ಪತ್ನಿ ಅಧ್ಯಾಪಕಿಯಾದ ಕಥೆ ಓದಿ..!

ಟೀಮ್​ ವೈ.ಎಸ್​. ಕನ್ನಡ

ವಿಜ್ಞಾನ ಪಾಠ ಮಾಡಲು ಟೀಚರ್ ಇಲ್ಲದಿದ್ದರೂ ನೋ ವರಿ- ಐಎಎಸ್ ಆಫೀಸರ್ ಪತ್ನಿ ಅಧ್ಯಾಪಕಿಯಾದ ಕಥೆ ಓದಿ..!

Wednesday July 19, 2017,

2 min Read

ಸಾಮಾಜಿಕ ಕಳಕಳಿ ಅಥವಾ ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾತನಾಡಲು ಜನ ಬೇಕಾದಷ್ಟು ಸಿಗ್ತಾರೆ. ಬದಲಾವಣೆ ಹೀಗೆ ಮಾಡಬಹುದು, ಹಾಗೇ ಮಾಡಬಹುದು ಅನ್ನುವ ಜನರಿಗೇನು ಕೊರತೆ ಇಲ್ಲ. ಆದ್ರೆ ಕೆಲಸ ಮಾಡಿ ತೋರಿಸುವ ಜನರಿಗೆ ಮಾತ್ರ ಕೊರತೆ ಇದೆ. ಬಾಯಲ್ಲಿ ಮಾತನಾಡಿದ ಹಾಗೇ ಕೆಲಸ ಮಾಡುವವರು ಸಿಗುವುದು ಅಪರೂಪವೇ. ಆದ್ರೆ ನಾವು ಹೇಳ ಹೊರಟಿರುವ ಕಥೆ ಎಲ್ಲದಕ್ಕಿಂತ ವಿಭಿನ್ನ. ಇದು ಐಎಎಸ್ ಆಫೀಸರ್ ಒಬ್ಬರ ಸಾಮಾಜಿಕ ಕಳಕಳಿಯ ನಿಜವಾದ ದರ್ಶನ, ಉತ್ತರ ಪ್ರದೇಶದ ರುದ್ರಪ್ರಯಾಗ ಜಿಲ್ಲೆಯ ಐಎಎಸ್ ಆಫೀಸರ್ ಒಬ್ಬರು ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಪ್ರದರ್ಶಿಸಿ ಮಾದರಿಯಾಗಿದ್ದಾರೆ. ಶಾಲೆಯೊಂದಕ್ಕೆ ವಿಜ್ಞಾನ ಪಾಠ ಹೇಳಲು ಕಳೆದ ಕೆಲ ತಿಂಗಳುಗಳಿಂದ ಅಧ್ಯಾಪಕರು ಸಿಕ್ಕಿಲ್ಲ. ಆದ್ರೆ ಅಧ್ಯಾಪಕರ ನೇಮಕ ಆಗುವ ತನಕ ಐಎಎಸ್ ಅಧಿಕಾರಿ ತನ್ನ ಪತ್ನಿಗೆ ಆ ಶಾಲೆಯಲ್ಲಿ ವಿಜ್ಞಾನ ಬೋಧನೆ ಮಾಡಲು ಕಳುಹಿಸಿಕೊಟ್ಟಿದ್ದಾರೆ.

image


ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಮಂಗೇಶ್ ಗಿಲ್ದಿಯಾಲ್ ಈ ಕಳಕಳಿ ತೋರಿಸಿದ ಮಹಾನ್ ವ್ಯಕ್ತಿ. ತನ್ನ ಪತ್ನಿ ಉಷಾ ಅರ್ಹತೆ ಪಡೆದುಕೊಂಡಿರುವುದರಿಂದ, ಬಾಲಕಿಯರ ಶಾಲೆಯೊಂದರಲ್ಲಿ ವಿಜ್ಞಾನ ಬೋಧನೆ ಮಾಡಲು ಸ್ವಯಂ ಸೇವಕಿಯಾಗಿ ಕಳುಹಿಸಿದ್ದಾರೆ. ಉಷಾ ಪೆಥಾಲಜಿಯಲ್ಲಿ ಪಿಎಚ್ ಡಿ ಪದವಿ ಕೂಡ ಪಡೆದುಕೊಂಡಿದ್ದಾರೆ.

ಮಂಗೇಶ್ ರುದ್ರಪ್ರಯಾಗದ ರಾಜ್ ಕಿಯಾ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ವಿಜ್ಞಾನ ಬೋಧಿಸಲು ಅಧ್ಯಾಪಕರು ಇಲ್ಲದೆ ಇರುವುದು ಗಮನಕ್ಕೆ ಬಂತು. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನವೂ ತುಂಬಾ ಮುಖ್ಯವಾಗಿರುತ್ತದೆ. ಆದ್ರೆ ವಿಜ್ಞಾನ ವಿಷಯಕ್ಕೆ ಟೀಚರ್ ಒಬ್ಬರನ್ನು ನೇಮಿಸಿಕೊಳ್ಳುವುದು ಸ್ವಲ್ಪ ದಿನ ತೆಗೆದುಕೊಳ್ಳುತ್ತದೆ ಅನ್ನುವ ವಿಷಯ ಗೊತ್ತಾಗುತ್ತದೆ. ಈ ಹೊತ್ತಿನಲ್ಲೆ ತನ್ನ ಪತ್ನಿಯನ್ನು ಈ ಕೆಲಸಕ್ಕೆ ಹೋಗುವಂತೆ ಕೇಳಿಕೊಳ್ಳುತ್ತಾರೆ. ಪತ್ನಿ ತನ್ನ ಪತಿಯ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

ಉಷಾ ಈಗ ದಿನವೊಂದಕ್ಕೆ ಎರಡೂವರೆ ಘಂಟೆಗಳನ್ನು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಮೂಲಕ ಪತಿಯ ಸಾಮಾಜಿಕ ಕೆಲಸಗಳಲ್ಲಿ ತನ್ನ ಕೈ ಕೂಡ ಜೋಡಿಸಿದ್ದಾರೆ.

ಇದನ್ನು ಓದಿ: ಭಾರತೀಯ ಸ್ಟಾರ್ಟ್​ಅಪ್ ಲೋಕದ ವೇದವಾಕ್ಯಗಳು..!

ಉಷಾ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಉಷಾ ಕೆಲಸದ ಬಗ್ಗೆ ಶಾಲೆಯ ಪ್ರಾಂಶುಪಾಲರಾದ ಮಮತಾ ನೌಟಿಯಾ ಕೂಡ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಉಷಾ ಟೀಚಿಂಗ್ ಟೆಕ್ನಿಕ್ ಗಳು ವಿದ್ಯಾರ್ಥಿಗಳಿಗೆ ಇಷ್ಟವಾಗಿದೆ ಅಂತ ಮಮತಾ ಹೇಳುತ್ತಾರೆ.

2011ರ ಬ್ಯಾಚ್ ನ ಐಎಎಸ್ ಆಫೀಸರ್ ಆಗಿರುವ ಮಂಗೇಶ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದರು. ತನ್ನ ಕೆಲಸಗಳಿಂದ ಮಂಗೇಶ್ ಜನರ ಮನಸ್ಸಿನಲ್ಲಿ ಹೀರೋ ಆಗಿ ಬೆಳೆದ್ರು. ಭಾಗೇಶ್ವರ ಜಿಲ್ಲೆಯಿಂದ ಮಂಗೇಶ್ ಗೆ ವರ್ಗಾವಣೆ ಆದೇಶ ಬಂದಿದ್ದಾಗ ಜನ ಆ ಆದೇಶದ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ಇದು ಅವರ ಕೆಲಸದ ಶ್ರದ್ಧೆಗೆ ಹಿಡಿದ ಕೈಗನ್ನಡಿ. ಮಂಗೇಶ್ ಉತ್ತರಾಖಂಡದಲ್ಲಿ ಶಾಲೆಗಳನ್ನು ಉತ್ತಮ ಗುಣಮಟ್ಟಕ್ಕೆ ತರಲು ಶ್ರಮಿಸುತ್ತಿದ್ದಾರೆ. ಮಂಗೇಶ್ ಯೋಜನೆಗಳು ಮತ್ತು ಯೋಜನೆಗಳು ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಸಂಶಯವಿಲ್ಲ. 

ಇದನ್ನು ಓದಿ:

1. 43ನೇ ವಯಸ್ಸಿನ ಮ್ಯಾರಾಥಾನ್ ಸ್ಪೆಷಲಿಸ್ಟ್ “ಅಂಜಲಿ”..!

2. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

3. ಬರಿ ಕಾಲಲ್ಲೇ ಓಡಿ, ಚಿನ್ನ ಗೆದ್ದ ಭಾರತದ ಬಂಗಾರ..!