ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್​ಗೆ ಚಿಂತನೆ- ಬೆಂಗಳೂರಿನಲ್ಲಿ ತಲೆ ಎತ್ತಲಿದೆ ವಂಡರ್​ಲ್ಯಾಂಡ್

ಟೀಮ್​ ವೈ.ಎಸ್​. ಕನ್ನಡ

ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್​ಗೆ ಚಿಂತನೆ- ಬೆಂಗಳೂರಿನಲ್ಲಿ ತಲೆ ಎತ್ತಲಿದೆ ವಂಡರ್​ಲ್ಯಾಂಡ್

Thursday May 04, 2017,

3 min Read

ಡಿಸ್ನಿ ವರ್ಲ್ಡ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಕನಸಿನ ಲೋಕಕ್ಕೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಅನ್ನುವ ಆಸೆ ಇದ್ದೇ ಆದೆ. ಇನ್ನು ಮುಂದೆ ಭೂಮಿ ಮೇಲಿನ ಸ್ವರ್ಗಕ್ಕೆ ಬೇಟಿ ನೀಡಲು ಕರ್ನಾಟಕದಲ್ಲೇ ಸಾಧ್ಯವಿದೆ. ಹೌದು, ನೀವೇನು ಅಚ್ಚರಿ ಆಗಬೇಡಿ. ಕರ್ನಾಟಕದಲ್ಲಿ ಡಿಸ್ನಿ ವರ್ಲ್ಡ್ ಮಾದರಿಯ ಕನಸಿನ ಪಾರ್ಕ್ ಒಂದು ಸಿದ್ಧವಾಗಲಿದೆ. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳ ಪೈಕಿ ಒಂದಾಗಿರುವ ನಂದಿ ಬೆಟ್ಟದ ಕೆಳಗೆ ಈ ಡಿಸ್ನಿ ವರ್ಲ್ಡ್ ರೀತಿಯ ವಂಡರ್​ಲ್ಯಾಂಡ್​​ ನಿರ್ಮಾಣವಾಗಲಿದೆ. ನಂದಿ ಬೆಟ್ಟದ ಕೆಳಭಾಗದಲ್ಲಿ ಹಲವು ಎಕರೆಗಳಷ್ಟು ಜಾಗ ಖಾಲಿಯಿದ್ದು, ಆ ಜಾಗದಲ್ಲಿ ಪಬ್ಲಿಕ್, ಪ್ರೈವೇಟ್ ಪಾರ್ಟ್​ನರ್​ಶಿಪ್​ ಮೂಲಕ ಪಾರ್ಕ್ ನಿರ್ಮಿಸುವ ಯೋಜನೆ ಮಾಡಲಾಗಿದೆ.

image


ಏನೇನು ಇರಲಿದೆ..?

ಸಿನಿಮಾಗಳಲ್ಲಿ ಡಿಸ್ನಿ ವರ್ಲ್ಡ್​​ಗಳನ್ನು ನೋಡಿ ಬೆರಗಾಗಿದ್ದು ಉಂಟು. ಅಲ್ಲಿನ ವೈಭವಕ್ಕೆ ಮನಸೋತು ಒಮ್ಮೆಯಾದರೂ ಅಲ್ಲಿಗೆ ಬೇಟಿ ನೀಡಬೇಕು ಅಂದುಕೊಂಡಿದ್ದವರಿಗೆ ಬೆಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ಅದಕ್ಕೆ ಅವಕಾಶ ಸಿಗಲಿದೆ. ಹೊಸದಾಗಿ ನಿರ್ಮಾಣವಾಗಲಿರುವ ವೈಭವೋಪೇತ ಪಾರ್ಕ್​ನಲ್ಲಿ ರೋಪ್ ವೇ, ಗಾಲ್ಫ್ ಕೋರ್ಸ್, ರೇಸ್ ಕೋರ್ಸ್ ಮತ್ತು ಫಿಲ್ಮ್ ಸಿಟಿಗಳು ಇರಲಿವೆ. ಇದರ ಜೊತೆಗೆ ಇತರ ಆಕರ್ಷಕ ಆ್ಯಕ್ಟಿವಿಟಿಗಳಿಗೂ ಅವಕಾಶ ಇರಲಿದೆ.

“ ನಂದಿ ಬೆಟ್ಟದ ಕೆಳಭಾಗದಲ್ಲಿರುವ ಖಾಲಿ ಜಾಗದಲ್ಲಿ ಪಬ್ಲಿಕ್ ಮತ್ತು ಪ್ರೈವೇಟ್ ಪಾರ್ಟ್​ನರ್​​ಶಿಪ್ ಮೂಲಕ ವಂಡರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಬರಡು ಭೂಮಿ ಮತ್ತು ನಂದಿ ಬೆಟ್ಟವನ್ನು ಸುತ್ತುವರೆದಿರುವ ಪ್ರದೇಶವನ್ನು ಉಪಯೋಗಿಸಿಕೊಂಡು ಪಾರ್ಕ್ ನಿರ್ಮಾಣ ಮಾಡಲಾಗುವುದು.”
- ಕೆ.ಜೆ. ಜಾರ್ಜ್, ಸಚಿವರು ಕರ್ನಾಟಕ ಸಚಿವರು

ಕರ್ನಾಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದೆ. ಪ್ರವಾಸೋದ್ಯಮದಿಂದ ಅಭಿವೃದ್ಧಿ ಮಂತ್ರವನ್ನೂ ಪಠಿಸುತ್ತಿದೆ. ಹಿಂದಿ ಚಿತ್ರರಂಗದ ಮಾಸ್ಟರ್​ಪೀಸ್ "ಶೋಲೆ" ಚಿತ್ರ ಚಿತ್ರೀಕರಣಗೊಂಡ ಜಾಗವಾದ ರಾಮನಗರದ ರಾಮದೇವರ ಬೆಟ್ಟದಲ್ಲಿ ಶೋಲೆ ಸಿನಿಮಾವನ್ನು ಮರುಸೃಷ್ಟಿ ಮಾಡಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಶೋಲೆ ಬೆಟ್ಟವನ್ನು 3ಡಿ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ತೋರಿಸಲು ಪ್ರಸ್ತಾವನೆ ಸಿದ್ದಗೊಂಡಿದೆ. ಮೈಸೂರಿನಲ್ಲಿ ಏರೋ ಮತ್ತು ಅಕ್ವಾ ಸ್ಪೋರ್ಟ್ಸ್ ಸೆಂಟರ್​ಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ.

“ ಜೆಟ್ ಸ್ಕೀಯಿಂಗ್ ಮತ್ತು ಕಯಾಕಿಂಗ್ ಹೊರತಾಗಿ ಬೇರೆ ಬೇರೆ ವಾಟರ್ ಗೇಮ್​ಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ವಾಟರ್ ರ್ಯಾಫ್ಟಿಂಗ್, ಬಂಗಿಜಂಪ್ ಸೇರಿದಂತೆ ಇತರೆ ಆಕರ್ಷಕ ಆ್ಯಕ್ಟಿವಿಟಿಗಳನ್ನು ಆರಂಭಿಸುವ ಯೋಜನೆ ಇದೆ.”
- ಹೆಚ್. ಪಿ. ಜನಾರ್ಧನ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು, ಮೈಸೂರು ಜಿಲ್ಲೆ

2015ರಲ್ಲೇ ಟೂರಿಸಂ ಇನ್ ಫ್ರಾಸ್ಟ್ರಕ್ಚರ್ ಡೆವಲಪ್​ಮೆಂಟ್ ಡಿಪಾರ್ಟ್​ಮೆಂಟ್ ಡಿಸ್ನಿಲ್ಯಾಂಡ್ ಸ್ಟೈಲ್​ನಲ್ಲೇ ಬೆಂಗಳೂರು ಉತ್ತರ ಭಾಗದಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯ ನೀಲನಕ್ಷೆಯನ್ನು ಸರಕಾರದ ಮುಂದೆ ಇಟ್ಟಿತ್ತು. ದೇವನಹಳ್ಳಿ ಅಥವಾ ತುಮಕೂರು ಸುತ್ತಮುತ್ತ ಈ ಪಾರ್ಕ್ ನಿರ್ಮಾಣ ಮಾಡುವ ಯೋಜನೆ ಇತ್ತು. ಆದ್ರೆ ಈಗ ಅದು ನಂದಿಹಿಲ್ಸ್ ಸುತ್ತಮುತ್ತ ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.

ಇದನ್ನು ಓದಿ: ನಾಳಿನ ಬಗ್ಗೆ ಕನಸು- ಸೋಲಿನ ಬಗ್ಗೆ ಅವಲೋಕನ- ಸ್ಟಾರ್ಟ್​ಅಪ್​ ಯಶಸ್ಸಿನ ಮಂತ್ರ

ಈ ಮಧ್ಯೆ ಇಂದಿರಾ ಕ್ಯಾಂಟಿನ್ ಆರಂಭಿಸುವ ಬಗ್ಗೆಯೂ ಕೆಲಸ ಕಾರ್ಯಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಆರಂಭಿಸಲು ಕಮಿಟಿಯೊಂದನ್ನು ರೂಪಿಸುವಂತೆ ಬಿಬಿಎಂಪಿಗೆ ಜಾರ್ಜ್ ಸೂಚನೆ ನೀಡಿದ್ದಾರೆ. ಕ್ಯಾಂಟೀನ್ ಆಗಸ್ಟ್ 15ರ ಒಳಗೆ ಆರಂಭವಾಗುವ ನಿರೀಕ್ಷೆ ಇದೆ. ಕ್ಯಾಂಟೀನ್ ಡಿಸೈನ್, ಲೋಗೋ ರಚನೆ ಕಾರ್ಯ ಕೂಡ ಆರಂಭಬವಾಗಿದೆ. ಕಡಿಮೆ ದರದಲ್ಲಿ ಆಹಾರ ನೀಡುವುದು ಇಂದಿರಾ ಕ್ಯಾಂಟೀನ್ ಗುರಿಯಾಗಿದೆ.

ಸರಕಾರ ಲೋಗೋ ಡಿಸೈನ್ ಮಾಡಿದವರಿಗೆ 1 ಲಕ್ಷ ರೂಪಾಯಿ ಹಾಗೂ ಕ್ಯಾಂಟೀನ್ ಮಾದರಿಯನ್ನು ಡಿಸೈನ್ ಮಾಡಿದವರಿಗೆ 2 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಈಗಾಗಲೇ ಲೋಗೋ ರಚನೆ ಮಾಡಿಕೊಡಲು 670 ಎಂಟ್ರಿಗಳು ಬಂದಿದ್ದರೆ, 175 ಮಂದಿ ಹೊಟೇಲ್ ನ ವಾಸ್ತು ಶಿಲ್ಪ ರಚನೆಗೆ ಹೆಸರು ನೊಂದಾಯಿಸಿದ್ದಾರೆ.

ಬೆಂಗಳೂರು ಈಗಾಗಲೇ ಸಾಕಷ್ಟು ಪ್ರವಾಸಿ ತಾಣಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪಠ್ಯಪುಸ್ತಕದಲ್ಲಿಸ ನಂದಿಬೆಟ್ಟ, ಕಬ್ಬನ್ ಪಾರ್ಕ್, ಕೆ.ಆರ್. ಮಾರುಕಟ್ಟೆ ಲಾಲ್ ಭಾಗ್ ಸೇರಿದಂತೆ ಬೆಂಗಳೂರಿನ ಆಕರ್ಷಣೀಯ ಸ್ಥಳಗಳ ಬಗ್ಗೆ ಉಲ್ಲೇಖವಿದೆ. ಈಗ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ಎಲ್ಲಾ ವಯೋಮಾನದವರನ್ನೂ ಕೂಡ ಆಕರ್ಷಿಸಲಿದೆ ಅನ್ನುವುದು ಸುಳ್ಳಲ್ಲ. 

ಇದನ್ನು ಓದಿ:

1. ಅಮೆರಿಕ ಆಯ್ತು.. ಈಗ ಸಿಂಗಪೂರದ ಸರದಿ- ಭಾರತೀಯ ಐಟಿ ಉದ್ಯೋಗಿಗಳ ವೀಸಾಕ್ಕೆ ಬ್ರೇಕ್

2. ಅಭಿವೃದ್ಧಿ ಮಂತ್ರಕ್ಕೆ ಟೂರಿಸಂನ ಮಾಂತ್ರಿಕ ಸ್ಪರ್ಶ

3. ನಾಳಿನ ಬಗ್ಗೆ ಕನಸು- ಸೋಲಿನ ಬಗ್ಗೆ ಅವಲೋಕನ- ಸ್ಟಾರ್ಟ್​ಅಪ್​ ಯಶಸ್ಸಿನ ಮಂತ್ರ