ಸಿನಿಮಾಗಳ ಬಣ್ಣದಜಗತ್ತಿನ ಹಿಂದೆ ಜಗ್ಗಿಕರಾಮತ್ತು..!

ಟೀಮ್​ ವೈ.ಎಸ್​.ಕನ್ನಡ

2

ಜೀವನದ ಪಯಣದ ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು ನೂರಾರು. ಅಲ್ಲಿ ಕೈ ಹಿಡಿಯುವವರಿಗಿಂತ ಕಾಲು ಎಳೆಯೋರೆ ಹೆಚ್ಚಾಗಿ ಸಿಗುತ್ತಾರೆ. ಅವಕಾಶಗಳನ್ನ, ಆಯ್ಕೆಗಳನ್ನ ಕಸಿದುಕೊಳ್ಳಬಹುದು. ಆದ್ರೆ ಜೊತೆಯಲ್ಲಿರೋ ಕಲೆಯನ್ನ ಯಾರು ಕಸಿದುಕೊಳ್ಳುವುದಕ್ಕೆ ಆಗುವುದಿಲ್ಲ. ಕಲೆಯನ್ನ ಗುರುತಿಸೋಕೆ ಸೂಕ್ತ ವ್ಯಕ್ತಿ, ಸೂಕ್ತ ಸಮಯ ಸಿಗಬೇಕಷ್ಟೆ. ಅಭಿಮಾನಿಯಾಗಿದ್ದವನು ಇಂದು ಮಾಲೀಕ. ಅಭಿಮಾನಿಯ ಕಲೆಯನ್ನ ಗುರುತಿಸಿ ದಾರಿ ತೋರಿಸಿದ್ದು ಕನ್ನಡಚಿತ್ರರಂಗದ ಕಿಚ್ಚ ಸುದೀಪ್.

ಡಿಜಿಟಲ್ ಲೋಕದಲ್ಲಿ ಜಗ್ಗಿ ಡಿಸೈನ್ಸ್

ಜಗ್ಗಿ ಡಿಸೈನ್ಸ್ ಈ ಬರಹವನ್ನ ಸಾಮಾನ್ಯವಾಗಿ ಎಲ್ಲಾ ಸಿನಿಮಾ ಪೋಸ್ಟರ್​ನಲ್ಲಿ ನೋಡಿರಬಹುದು. ಸಿನಿಮಾಗಳ ಪೊಸ್ಟರ್ ಸ್ಟ್ಯಾಂಡೀಸ್​ನಲ್ಲಿಯೂ ನೋಡಿಯೇ ನೋಡಿರ್ತಿರಾ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಣ ಆಗ್ತಿರೋ ಪ್ರತಿ ಸಿನಿಮಾಗಳ ಪ್ರಚಾರಕ್ಕಾಗಿಯೇ ಇರೋ ಕಂಪನಿ ಜಗ್ಗಿ ಡಿಸೈನ್ಸ್. ಇದ್ರ ಮಾಲೀಕರಾಗಿರೋ ಜಗದೀಶ್, ಸಾಮಾನ್ಯ ಕಲಾವಿದನಾಗಿದ್ದ. ಜಗದೀಶ್‍ ಎಂಟು ವರ್ಷದ ಪರಿಶ್ರಮದಿಂದ ತಮ್ಮದೇಯಾದ ಕಂಪನಿ ಓಪನ್ ಮಾಡಿ ಈಗ ಎಂಟು ಜನರಿಗೆ ಕೆಲಸ ನೀಡಿದ್ದಾರೆ. ಪಕ್ಕಾ ಸುದೀಪ್‍ ಅಭಿಮಾನಿಯಾಗಿದ್ದ ಜಗ್ಗಿ ಸಾಕಷ್ಟು ವರ್ಷದಿಂದ ಕಲಾವಿದರಾಗಿ ಕೆಲಸ ಮಾಡಿಕೊಂಡಿದ್ರು. ಸಿನಿಮಾದ ಪ್ರಚಾರದ ಕೆಲಸಗಳಲ್ಲೊಂದಾಗಿರೋ ವಾಲ್ ಪೈಂಟಿಂಗ್ ಮಾಡಿಕೊಂಡಿದ್ರು. ಒಮ್ಮೆ ಜಗ್ಗಿ ಕಲೆಯನ್ನ ಗುರುತಿಸಿದ ಸುದೀಪ್‍ ತಮ್ಮ ಶಾಂತಿನಿವಾಸ ಸಿನಿಮಾದ ಚಿತ್ರದ ಪ್ರಚಾರಕ್ಕಾಗಿ ಬಳಸೋ ಡಿಜಿಟಲ್ ಪೋಸ್ಟರ್ ಮತ್ತು ಸ್ಯಾಂಡೀಸ್​ನ್ನ   ಮಾಡಿಕೊಡಲು ಆರ್ಡರ್‍ ಕೊಟ್ರು. ಅಂದಿನಿಂದ ಇಲ್ಲಿಯ ತನಕ ಜಗ್ಗಿ ಕೆಲಸದ ವಿಚಾರವಾಗಿ ಹಿಂದೆತಿರುಗಿ ನೋಡಿದ್ದೇ ಇಲ್ಲ.

ಸ್ಯಾಂಡಲ್​ವುಡ್​ನ ನಂಬರ್‍ಒನ್‍ ಡಿಸೈನ್ ಕಂಪನಿ

2007 ರಿಂದ ಡಿಜಿಟಲ್ ಪ್ರಿಂಟಿಂಗ್ ಕೆಲಸ ಮಾಡಿಕೊಂಡಿರೋ ಜಗ್ಗಿ ಇಲ್ಲಿ ತನಕ ಸುಮಾರು 250ಕ್ಕೂ ಹೆಚ್ಚು ಚಿತ್ರಕ್ಕೆ ಕೆಲಸ ಮಾಡಿಕೊಟ್ಟಿದ್ದಾರೆ. ಪ್ರಿಂಟಿಂಗ್ ಕೆಲಸ ಅಂದ್ರೆ ಸಖತ್‍ ಕ್ರಿಯೇಟಿವಿಟಿ ಕೆಲಸ ಅನ್ನೋ ಜಗ್ಗಿ  ಪ್ರತೀ ಚಿತ್ರದ ಪ್ರಚಾರಕ್ಕೂ ಬೇರೆ ಬೇರೆ ರೀತಿ ಡಿಸೈನ್ಸ್ ಮಾಡಲೇಬೇಕಾಗುತ್ತದೆ. ಚಿತ್ರತಂಡದ ಮತ್ತು ನಿರ್ದೇಶಕರ ಸಹಾಯದಿಂದ ಡಿಸೈನ್​ಗಳನ್ನ ಮಾಡಲಾಗುತ್ತದೆ . ಸದ್ಯಚಿತ್ರರಂಗದಲ್ಲಿ ಬರುವ ಶೇಕಡ 90 ರಷ್ಟು ಸಿನಿಮಾಗಳ ಡಿಸೈನ್ಸ್​ ಜಗ್ಗಿ ಅವ್ರೇ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಬಿಗ್​ಸ್ಟಾರ್​ಗಳ ಸ್ಯಾಂಡೀಸ್ ಮಾಡಿರೋ ಜಗ್ಗಿ ಇತ್ತೀಚಿಗಷ್ಟೇ ಚಿತ್ರರಂಗದಲ್ಲಿ ದಾಖಲೆ ಬರೆಯುವ ಕೆಲಸವನ್ನ ಮಾಡಿದ್ದಾರೆ.

ಡಿಜಿಟಲ್ ಪ್ರಿಂಟ್​​ನಲ್ಲಿ ದಾಖಲೆ ಬರೆದ ಜಗ್ಗಿ ಡಿಜಿಟಲ್ಸ್

ಮೂಲತಃ ಟಿ.ನರಸಿನಪುರದ ಪುಟ್ಟ ಹಳ್ಳಿಯವರಾದ ಜಗ್ಗಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರನ್ನ. ಸುಮಾರು ವರ್ಷಗಳಿಂದಲೇ ಬೆಂಗಳೂರಿನಲ್ಲಿ ನೆಲೆಸಿರೋ ಜಗ್ಗಿ ಇತ್ತೀಚಿಗಷ್ಟೆ ಡಿಜಿಟಲ್ ಪ್ರಿಂಟಿಂಗ್‍ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನ ಬರೆದಿದ್ದಾರೆ. ಸಾಹಸಸಿಂಹ ಡಾ.ವಿಷ್ಣುವರ್ಧನ್‍ ಅಭಿನಯದ ರಮ್ಯ,ದಿಗಂತ್ ಅಭಿನಯಿಸಿರೋ ನಾಗರಹಾವು ಸಿನಿಮಾದ ಪ್ರಚಾರಕ್ಕಾಗಿ 3ಡಿ ಸ್ಯಾಂಡೀಸ್ ಮಾಡೋ ಮೂಲಕ ಬಾರಿ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯ ತನಕ ಎಂದಿಗೂ ಮಾಡಿರದ ಸ್ಯಾಂಡೀಸ್‍ ಇದಾಗಿದ್ದು ಈಗಾಗ್ಲೆ ರಾಜ್ಯದ ಪ್ರತೀ ಥಿಯೇಟರ್​ನಲ್ಲೂ ಈ ಸ್ಯಾಂಡೀಸ್‍ ಇದ್ದು ನೋಡುಗರನ್ನೂ ಸಖತ್‍ ಅಟ್ರಾಕ್ಟ್​ ಮಾಡ್ತಿದೆ. ಈ ಕೆಲಸ ತುಂಬಾ ಖುಷಿ ಕೊಟ್ಟಿದೆ ಎಂದು ಹೇಳೋ ಜಗ್ಗಿ ಇದಕ್ಕೆಲ್ಲಾ ಸುದೀಪ್‍ ಅವ್ರೇ ಕಾರಣ ಅನ್ನೋದನ್ನ ಹೇಳುವುದನ್ನು ಮರೆಯೋದಿಲ್ಲ.

ಸಾಮಾನ್ಯಕಲಾವಿದನಾಗಿದ್ದ ಜಗ್ಗಿ ಇಂದು ತನ್ನದೇ ಕಂಪನಿಯನ್ನ ಪ್ರಾರಂಭ ಮಾಡೋದ್ರ ಜೊತೆಗೆ ತನ್ನಂತೆ ಕಷ್ಟಪಟ್ಟು ಕೆಲಸ ಮಾಡೋ ಹಲವರಿಗೆ ಕೆಲಸ ನೀಡಿದ್ದಾರೆ.  ಜಗ್ಗಿ ಅವ್ರ ಕೆಲಸವನ್ನ ಗುರುತಿಸಿ ಸಾಕಷ್ಟು ಸಂಘಟನೆಗಳು ಗೌರವಿಸಿದ್ದು ಮುಂದಿನ ದಿನಗಳಲ್ಲಿ ಡಿಜಿಟಲ್ ಪ್ರಿಂಟಿಂಗ್‍ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ತುಂಬುವಂತೆ ಮಾಡಿದೆ.

ಇದನ್ನು ಓದಿ:

1. ಉದ್ಯಮಿಗಳಿಗೆ ಮಾರ್ಕೆಟಿಂಗ್ ಗುರು ರಮಾ ಬಿಜಾಪುರ್ಕರ್ ಸಲಹೆ

2. ಬೆಳಕು ಹಂಚುತಿರುವ ಮಹಿಳೆ-ನೂರ್ ಜಹಾನ್..!

3. ಕಸ ಆಯುವವನ ಪ್ಯಾರಿಸ್ ಪಯಣ- ಕಸದಿಂದ ಕಾಸು, ಈತ ತ್ಯಾಜ್ಯೋದ್ಯಮಿ..!


Related Stories