ಭಾರತ ಮತ್ತು ಜರ್ಮನಿ- ಸಂಬಂಧ ಸುಧಾರಣೆಯ ಹೊಸ ಶೃಂಗ - 10 ಅಂಶಗಳು

ಟೀಮ್​ ವೈ.ಎಸ್​. ಕನ್ನಡ

0

ಭಾರತ ಮತ್ತು ಜರ್ಮನಿ ಮಧ್ಯೆ ನಿಕಟ ಆರ್ಥಿಕ ಸಹಕಾರ ಇದೆ. ಜರ್ಮನಿಯಿಂದ ಉತ್ಪನ್ನಗಳನ್ನು ಆಮದು ಮಾಡುವ ವಿಷಯದಲ್ಲಿ ಭಾರತ, ಎಂಟನೇ ಸ್ಥಾನ ಪಡೆದಿದೆ. ಅದೇ ರೀತಿ, ಭಾರತದ ರಫ್ತು ಕೂಡ ಅತ್ಯುತ್ತಮ ಸಾಧನೆ ಮೆರೆದಿದೆ. ಜರ್ಮನಿ ಐರೋಪ್ಯ ಒಕ್ಕೂಟದ ಏಳನೇ ಅತೀ ದೊಡ್ಡ ರಾಷ್ಟ್ರವಾಗಿದೆ. ಈ ಬೃಹತ್ ಶಕ್ತಿಯೊಂದಿಗೆ ನಿಕಟ ಆರ್ಥಿಕ ಸಹಕಾರ ಹಲವು ಗುಣಾತ್ಮಕ ಬೆಳವಣಿಗೆಗೆ ಕಾರಣಿ ಭೂತವಾಗಿದೆ. ಬೆಂಗಳೂರಿನಲ್ಲಿ ನಡೆದ ಹೂಡಿಕೆ ಕರ್ನಾಟಕ, ಈ ನಿಕಟ ಸಹಕಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿತು.

ಜರ್ಮನಿಯ ದೃಷ್ಟಿಯಲ್ಲಿ ಕರ್ನಾಟಕ

ಜರ್ಮನಿಯ ದೃಷ್ಟಿಯಲ್ಲಿ ಕರ್ನಾಟಕ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಜರ್ಮನಿಯ ಎಂಟು ಬೃಹತ್ ಕೈಗಾರಿಕೆಗಳು ಕರ್ನಾಟಕದಲ್ಲಿ ನೆಲೆ ಕಂಡಿವೆ. ಕಾರ್ಯಾಚರಿಸುತ್ತಿವೆ. ಬೋಷ್, ಸಿಮೆನ್ಸ್ ನಂತಹ ಬೃಹತ್ ಸಂಸ್ಥೆಗಳು ಇದರಲ್ಲಿ ಸೇರಿವೆ. ಭಾರತ- ಜರ್ಮನ್ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಹೂಬೆರ್ಟ್ ರಿಲಾರ್ಡ್ ಈ ಸಂಬಂಧ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಜರ್ಮನ್ ಮಧ್ಯೆ 60 ಕೈಗಾರಿಕಾ ಸಹಭಾಗಿತ್ವವಿದೆ. ಈ ಒಂದು ಅಂಶವೇ ಉಭಯ ರಾಷ್ಟ್ರಗಳ ಸಂಬಂಧದ ಮಹತ್ವ ಸೂಚಿಸುತ್ತದೆ. ಕರ್ನಾಟಕದಲ್ಲಿ , ಜರ್ಮನ್ ಕೈಗಾರಿಕೆಗಳು ಅತ್ಯುತ್ತಮ ಸಾಧನೆ ಪ್ರದರ್ಶಿಸುತ್ತಿದ್ದು, ಭಾರತ ಸೂಕ್ತವಾಗಿ ಸ್ಪಂದಿಸುತ್ತಿದೆ ಎನ್ನುವುದು ರಿಲಾರ್ಡ್ ಅವರ ಮಾತು.

ಇದನ್ನು ಓದಿ:

ಬೆಂಗಳೂರಿನಿಂದಾಚೆಗಿನ ಉದ್ಯಮ ಲೋಕ...

ಐರೋಪ್ಯ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾರುಕಟ್ಟೆ ಆಶಾದಾಯಕವಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿನ ಗುಣಮಟ್ಟ ಮಾನವ ಸಂಪನ್ಮೂಲ ಒಂದು ಪ್ಲಸ್ ಪಾಯಿಂಟ್ ಆಗಿ ಕೂಡ ಪರಿಗಣಿಸಲಾಗಿದೆ.

2007, ಎಪ್ರಿಲ್ ನಲ್ಲಿ ಬವಾರಿಯಾ ಸಂಸ್ಥೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಬಳಿಕ ಜರ್ಮನಿಯ ಸಂಸ್ಥೆಗಳಿಗೆ ಕರ್ನಾಟಕ ಅಚ್ಚು ಮೆಚ್ಚಿನ ತಾಣವಾಗಿ ಬದಲಾಗಿದೆ.

ಬವಾರಿಯ ಹೆಗ್ಗುರುತು

ಬವಾರಿಯ ಅಂದರೆ ಅದು ಜರ್ಮನಿಯ ಬೃಹತ್ ಕೈಗಾರಿಕೆಗಳ ತವರೂರು. ಅದರಲ್ಲೂ ವಿಶ್ವ ಪ್ರಸಿದ್ಧಿ ಪಡೆದಿರುವ ಬಿಎಂಡಬ್ಲ್ಯು, ಮ್ಯಾನ್, ಅಲೆಯೆನ್ಸ್ ಮತ್ತು ಸಿಮೆನ್ಸ್ ಇದರಲ್ಲಿ ಸೇರಿವೆ. 2013ರಲ್ಲಿ ಭಾರತದ ಆಮದು 1.4 ಬಿಲಿಯನ್ ಯುರೋಗಳಾಗಿವೆ. ಅದೇ ವೇಳೆ ರಫ್ತು 943 ಮಿಲಿಯನ್ ಯುರೋಗಳಾಗಿವೆ.

ಭಾರತೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ನಗರಗಳ ಪೈಕಿ ಬವಾರಿಯ ಎರಡನೇ ಸ್ಥಾನದಲ್ಲಿದೆ. ಅಲ್ಲಿ 12 ಸಾವಿರಕ್ಕೂ ಹೆಚ್ಚು ಭಾರತೀಯರು ಕೆಲಸ ನಿರ್ವಹಿಸುತ್ತಿದ್ದಾರೆ.

ಆರಂಭಿಕ ಹೆಜ್ಜೆ

ಸಹಭಾಗಿತ್ವದ ಅಡಿಯಲ್ಲಿ ಭಾರತದ 70ಕ್ಕೂ ಹೆಚ್ಚು ಸಂಸ್ಥೆಗಳು ಬವೇರಿಯಾದಲ್ಲಿ ಚಟುವಟಿಕೆ ಆರಂಭಿಸಿವೆ. ಐರೋಪ್ಯ ಒಕ್ಕೂಟಕ್ಕೆ ಪ್ರವೇಶಿಸಲು ಇದು ಪ್ರಮುಖ ರಹದಾರಿಯಾಗಿದೆ. ಇದು ಶಿಕ್ಷಣ ಕ್ಷೇತ್ರದ ಸಹಕಾರಕ್ಕೂ ನಾಂದಿ ಹಾಡಿದೆ. 30 ಶಿಕ್ಷಣ ವಿನಿಮಯ ಯೋಜನೆಗೆ ಚಾಲನೆ ನೀಡಲಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.

ಎಲ್ಇಡಿ ಮತ್ತು ಎಂಪಿ-3 ಗಳಿಗೆ ಅತ್ಯಾಧುನಿಕ ಬಿಡಿ ಭಾಗಗಳನ್ನು ಪೂರೈಸಲಾಗುತ್ತಿದೆ. 2012ರ ಬಳಿಕ ನೂರಕ್ಕೂ ಹೆಚ್ಚು ಹೊಸ ಸಂಶೋಧನೆಗಳ ಸಾಧನೆ ಮೆರೆಯಲಾಗಿದೆ.

2 ನಗರಗಳ ಮಧ್ಯೆ ಹೋಲಿಕೆ

ಬೆಂಗಳೂರು ಮತ್ತು ಬವೇರಿಯಾ ಮಧ್ಯೆ ಹಲವು ಹೋಲಿಕೆಗಳಿವೆ. ಎರಡು ಮಹಾ ನಗರಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ನಗರಗಳಾಗಿವೆ. ಮಾಹಿತಿ ತಂತ್ರಜ್ಞಾನ, ಏರೋ ಸ್ಪೇಸ್, ವೈದ್ಯಕೀಯ ತಂತ್ರಜ್ಞಾನ ಹೀಗೆ ಹತ್ತು ಹಲವು ವಿಷಯಗಳಲ್ಲಿ ಸಾಮ್ಯತೆಗಳಿವೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ.

ಪೇಟೆಂಟ್ ಹಕ್ಕು ಸ್ವಾಮ್ಯದಲ್ಲಿ ಕೂಡ ಉಭಯ ನಗರಗಳು ದಾಖಲೆ ಬರೆದಿವೆ. ಬವೇರಿಯಾ, ಜರ್ಮನಿಯ ಪೇಟೆಂಟ್ ನಲ್ಲಿ ಶೇಕಡಾ 26 ರಷ್ಟು ಹಕ್ಕು ಹೊಂದಿದ್ದರೆ, ಅತೀ ಹೆಚ್ಚು ಸ್ಟಾರ್ಟ್ ಅಪ್​​ ಇರುವ ನಗರ ಬೆಂಗಳೂರು. ರಾಜ್ಯದ ಬೆಂಗಳೂರಿನ ಹಾಗೆ ಬವೇರಿಯಾ ಮಾಹಿತಿ ತಂತ್ರಜ್ಞಾನದಲ್ಲಿ ಗುರುತಿಸಿಕೊಂಡಿದ್ದು, ಶೇಕಡಾ 25 ರಷ್ಟು ಆದಾಯ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಮಟ್ಟಿಗೆ ಹೇಳಬೇಕಾದದ್ದೇ ಇಲ್ಲ. ಅದರ ಸಾಧನೆ ವಿಶ್ವದಾದ್ಯಂತ ಗುರುತಿಸಲಾಗಿದೆ.

ಇದನ್ನು ಓದಿ:

1.ಸಮಾವೇಶ ಯಶಸ್ವಿಯಾದರೂ ಯೋಜನೆಗಳು ಜಾರಿಯಾಗುವುದು ಮುಖ್ಯ

2.ಬಂಡವಾಳ ಹೂಡಿಕೆ ಹಬ್ಬಕ್ಕೆ ಅದ್ದೂರಿಯ ತೆರೆ..

3.ದೇಶದ ಹೆಮ್ಮೆಯ ‘ವಿರಾಟ್’ ಅಂತಿಮ ಪಯಣ

Related Stories