ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!

ವಿಸ್ಮಯ

0

ಐಲು ಐಲು ಕೈನಲ್ಲಿ ಇದ್ರೆ ಮೊಬೈಲ್ ಅನ್ನೋ ಹಾಗೇ ಮೊಬೈಲ್ ಐಲೊ ಅಥವಾ ಮೊಬೈಲ್ ಬಳಕೆದಾರರು ಐಲೊ ಗೊತ್ತಿಲ್ಲ. ಆದರೆ ಈ ಮೊಬೈಲ್‍ನಿಂದ ಎಲ್ಲವನ್ನು ನಾವು ಇರುವಲ್ಲೇ  ಪಡೆದುಕೊಳ್ಳಬಹುದು. ಒಂದು ಪುಟ್ಟ ಮೊಬೈಲ್‍ನಲ್ಲಿ ಇಡೀ ಪ್ರಪಂಚವನ್ನೇ ನೋಡಬಹುದು. ಈಗ ಎಲ್ಲರ ಕೈನಲ್ಲೂ ಮೊಬೈಲ್ ಇದ್ದೇ ಇರುತ್ತೆ. ಜೊತೆಗೆ ಆ ಆ್ಯಪ್ ಈ ಆ್ಯಪ್ ಅಂತ ಬಳಸ್ತಾನೆ ಇರುತ್ತಾರೆ. ಕಾರ್ ಬುಕ್ ಮಾಡಲು ಕಾರ್ ಆ್ಯಪ್ ಇದ್ದರೆ, ಊಟಕ್ಕೂ ಆ್ಯಪ್ ಇದೆ. ಅಷ್ಟೇ ಯಾಕೆ ಪ್ರತಿಯೊಂದಕ್ಕೂ ಈಗ ಆ್ಯಪ್ ಮೂಲ ಮಂತ್ರ. ಇಷ್ಟು ದಿನ ವಿಳಾಸ ಹುಡುಕಲ್ಲಿ ಇದ್ದ ಆ್ಯಪ್, ಈಗ ಮನೆ ಹುಡುಕಲು ಕೂಡ ಆ್ಯಪ್ ವೊಂದು ಬಂದಿದೆ. ಅದೇ ನೆಸ್‍ಟ್‍ಅವೇ ಆ್ಯಪ್.

ನೀವಿರುವ ಊರಿನಿಂದ ಗೊತ್ತಿಲ್ಲದಿರುವ ಬೇರೆ ನಗರಕ್ಕೆ ಸ್ಥಳಾಂತರಗೊಂಡಾಗ ಅಲ್ಲೊಂದು ಮನೆ ಹುಡುಕಿಕೊಳ್ಳುವುದು ಒಂದು ತಲೆನೋವಿನ ಕೆಲಸ. ಜೊತೆಗೆ ಸವಾಲಿನ ಸಂಗತಿಯಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್‍ಗಳಿಗೆ ಮನೆ ಹುಡುಕುವ ಕಷ್ಟ ದುಪ್ಪಟ್ಟು. ಇಂತಹ ಜನರಿಗೆ ಕೈಗೆಟುಕುವ ದರಗಳಲ್ಲಿ, ಮನಕ್ಕೊಪ್ಪುವ ಮನೆಯನ್ನು ಬಾಡಿಗೆ ಪಡೆಯೊದು ಕೂಡ ಕಷ್ಟವಾಗಿರುತ್ತೆ. ಇಡೀ ನಗರವನ್ನೆಲ್ಲ ರೌಂಡ್ ಹಾಕಿದ್ರೂ ಸರಿಯಾದ ಮನೆಗಳು ಸಿಗುವುದಿಲ್ಲ. ಅಂತಹವರಿಗಾಗಿಯೇ ಸಹಾಯವಾಗುವ ಆ್ಯಪ್ ಅಂದ್ರೆ ನೆಸ್‍ಟ್‍ಅವೇ ಆ್ಯಪ್.

ಹೇಗೆಲ್ಲಾ ಸಹಾಯಕ ಈ ಆ್ಯಪ್?

ನೆಸ್‍ಟ್‍ಅವೇ ಆ್ಯಪ್‍ನಲ್ಲಿ ಲಭ್ಯವಿರುವ ಮ್ಯಾಪ್ ಬಾಡಿಗೆಗೆ ಲಭ್ಯವಿರುವ ಮನೆಗಳ ಚಿತ್ರಗಳನ್ನು ವೀಕ್ಷಿಸುವ ಹಾಗೂ ಆ ಮನೆಯ ನೆರೆಯ ಚಿತ್ರಣವನ್ನು ನೋಡಲು ಅವಕಾಶ ಕಲ್ಪಿಸಲಿದೆ. ಮನೆ, ಅದರ ವಿನ್ಯಾಸ ಕಾನೂನು ದಾಖಲೆ ಪತ್ರಗಳು, ಪಾವತಿಸುವ ಬಾಡಿಗೆ, ನಿರ್ವಹಣಾ ಕೋರಿಕೆಗಳು ಸೇರಿದಂತೆ ಎಲ್ಲಾ ಪ್ರಕ್ರಿಯೆ ಹಾಗೂ ಚಟುವಟಿಕೆಗಳನ್ನು ಈ ಆ್ಯಪ್ ಮೂಲಕ ನಿರ್ವಹಿಸಬಹುದು. ಈ ಆ್ಯಪ್ ಮುಖ್ಯವಾಗಿ ಬ್ಯಾಚುಲರ್ಸ್‍ಗಳಿಗೆ ಮಾಡಲಾಗಿದೆ. ಇನ್ನು ಬಾಡಿಗೆ ತಿಂಗಳಿಗೆ 6000 ದಿಂದ ಆರಂಭಗೊಳ್ಳುತ್ತೆ. ಅಷ್ಟೆ ಅಲ್ಲ ಟಿವಿ, ಸೋಫಾ, ಬೆಡ್, ವಾಚಿಂಗ್ ಮಿಷಿನ್ ಸೇರಿದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತೆ.

ಹೇಗೆ ಈ ಆ್ಯಪ್ ಬಳಕೆ?

ನಿಮ್ಮ ಸಾರ್ಟ್‍ಫೋನ್‍ನಲ್ಲಿ ಗೊಗಲ್ ಪ್ಲೇಗೆ ಹೋಗಿ ನೆಸ್‍ಟ್‍ಅವೇ ಆ್ಯಪ್ ಅಂತ ಟೈಪ್ ಮಾಡಿ, ಡೌನ್‍ಲೋಡ್ ಮಾಡಿಕೊಳ್ಳಬೇಕು. ನೊಂದಣಿ ಮಾಡಿಕೊಂಡು ನಿಮ್ಮ ಹೆಸ್ರು, ವಿಳಾಸ, ಇ-ಮೇಲ್, ಯಾವ ಏರಿಯಾದಲ್ಲಿ ನಿಮಗೆ ಮನೆಬೇಕು ಎಂಬುದನ್ನು ಟೈಪ್ ಮಾಡಬೇಕು. ಆ ನಂತರ ನಿಮ್ಮ ಅಭಿರುಚಿಗೆ ತಕ್ಕಂತೆ ಎಲ್ಲವನ್ನು ತೋರಿಸುತ್ತೆ. ಇದರಲ್ಲಿ ಪ್ರತಿಯೊಂದು ಚಿತ್ರಣ ನೀವು ಕೂತಲೇ ನಿಮ್ಮ ಮುಂದೆ ಬರಲಿದೆ. ಎಷ್ಟು ಬಾಡಿಗೆಗೆ, ಯಾವ ಸ್ಥಿತಿಯಲ್ಲಿ ಇದೆ. ಪ್ರತಿಯೊಂದು ವ್ಯವಸ್ಥೆಗೆ ಹತ್ತಿರವಾಗಿದ್ಯಾ ಎಂಬುದನ್ನೆಲ್ಲಾ ನಾವು ಈ ಆ್ಯಪ್ ಸಹಾಯದಿಂದ ಮಾಹಿತಿ ಪಡೆಯಬಹುದು. ಆಗಾಗ ಅಲರ್ಟ್​ ಮೆಸೇಜ್‍ಗಳು ಬರುತ್ತಿರುತ್ತೆ.

ಎಲ್ಲೆಲ್ಲಿ ಈ ಆ್ಯಪ್ ಲಭ್ಯ?

ಸದ್ಯ ಈ ನೆಸ್‍ಟ್‍ಅವೇ ಆ್ಯಪ್ ಬೆಂಗಳೂರು, ಪುಣೆ, ಹೈದಾರಬಾದ್, ಡೆಲ್ಲಿ, ಘಾಜಿಯಾಬಾದ್, ಗುರಗಾಂವ್‍ನಲ್ಲಿ ಲಭ್ಯವಿದೆ. 6 ನಗರಗಳಲ್ಲಿ ನಿಮ್ಗೆ ಈ ಆ್ಯಪ್ ಹೆಲ್ಪ್ ಮಾಡುತ್ತೆ. ನಿಮ್ಮ ಬಜೆಟ್‍ಗೆ ತಕ್ಕಂತೆ ಮನೆಯನ್ನ ಬಾಡಿಗೆಗೆ ಪಡೆಯಬಹುದಾಗಿದೆ. ನಿಮ್ಗೆ ಇಷ್ಟವಾದ ಮನೆಯನ್ನ ನೀವು ಟ್ರಾಕ್ ಕೂಡ ಮಾಡಬಹುದು. ಅಗ್ರಿಮೆಂಟ್ ಡಾಕ್ಯುಮೆಂಟ್ಸ್​ಗಳನ್ನ ನೀವು ಸುಲಭವಾಗಿ ಮಾಡಿಕೊಳ್ಳಬಹುದು.

ನೆಸ್‍ಟ್‍ಅವೇ ಆ್ಯಪ್ ಬಳಕೆದಾರರು ಏನ್ ಹೇಳ್ತಾರೆ?

ಸುಲಭವಾಗಿ ಮನೆಯನ್ನ ಹುಡುಕಲು ಸಾಧ್ಯವಾಗುತ್ತೆ. ಮೊದಲೆಲ್ಲ ಗಲ್ಲಿ ಗಲ್ಲಿಗಳಲ್ಲಿ ಮನೆಯನ್ನ ಹುಡುಕಿ ಕೊಳ್ಳಬೇಕಿತ್ತು. ಆದ್ರೆ ಈಗ ಆ ಕಷ್ಟ ವಿಲ್ಲ ಅಂತಾರೆ ಸುರೇಶ್. ಕೆಲಸಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ, ಆದ್ರೆ ಮನೆಯನ್ನ ಹುಡುಕುವುದು ದೊಡ್ಡ ಕಷ್ಟ ವಾಗಿತು. ಆದ್ರೆ ಈಗ ನೆಸ್‍ಟ್‍ಅವೇ ಆ್ಯಪ್‍ನಿಂದ ಹುಡುಕಾಟದ ತಾಪತ್ರಯವೇ ಇರೋಲ್ಲ.

ಇನ್ನು ಈಗಾಗಲೇ ಈ ಆ್ಯಪ್‍ನ್ನು 1 ಲಕ್ಷಕ್ಕೂ ಹೆಚ್ಚು ಜನ ಬಳಕೆ ಮಾಡುತ್ತಿದ್ದಾರೆ. ಒಟ್ಟಾರೆ ಮನೆಯನ್ನ ಮಹಾನಗರಗಳಲ್ಲಿ ಇನ್ಮುಂದೆ ಮನೆಯನ್ನ ಹುಡುಕುವುದು ಕಷ್ಟನೇ ಇಲ್ಲ. ಒಂದು ಬಟನ್ ಕಿಕ್ಲ್ ಮಾಡಿದ್ರೆ, ಎಲ್ಲವೂ ನಿಮಗೆ ಸಿಗಲಿದೆ.


ಇದನ್ನು ಓದಿ

1. ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಜೋಗಪ್ಪ ಸಮುದಾಯದ ಹಕ್ಕುಗಳಿಗಾಗಿ ಹೋರಾಟ: ಸಾಮಾಜಿಕ ಬದಲಾವಣೆಗೆ ಸಾಲಿಡಾರಿಟಿ ಫೌಂಡೇಷನ್ ಸಂಕಲ್ಪ

2. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

3. ಸಿಟಿಯಲ್ಲೋಂದು ಹಳ್ಳಿ - ಬನ್ನಿ ಮಕ್ಕಳಿಗೆ ಪ್ರಾಣಿ ಪರಿಚಯ ಮಾಡಿಸಿ


Related Stories

Stories by YourStory Kannada