ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಸ್ಮಾರ್ಟ್​ಫೋನ್​ ... ‘ಮೊಬಿಆರ್ಬಿಟ್'ನಲ್ಲಿ ಸಿಗುತ್ತೆ ನಿಮ್ಮ ಪರ್ಸನಾಲಿಟಿಯ ಡೇಟಾ...

ಟೀಮ್​ ವೈ.ಎಸ್​. ಕನ್ನಡ

ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಸ್ಮಾರ್ಟ್​ಫೋನ್​ ... ‘ಮೊಬಿಆರ್ಬಿಟ್'ನಲ್ಲಿ ಸಿಗುತ್ತೆ ನಿಮ್ಮ ಪರ್ಸನಾಲಿಟಿಯ ಡೇಟಾ...

Thursday February 11, 2016,

4 min Read

ಬೆಲೆ ಹೋಲಿಕೆ ಮತ್ತು ಶಿಫಾರಸು ಎಂಜಿನ್​ಗಳನ್ನು ಬಹುತೇಕ ವಾಣಿಜ್ಯೀಕರಣಗೊಳಿಸಲಾಗಿದೆ. ಈ ಅಪ್ಲಿಕೇಷನ್​ಗಳು ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಸ್ಥಿರವಾದ ಅಂಕಿ-ಅಂಶಗಳನ್ನು ಸೃಷ್ಟಿಸುತ್ತವೆ. ನಂತರ ಈ ಅಂಕಿ-ಅಂಶಗಳನ್ನು ಬಳಕೆದಾರರನ್ನು ಉಪಯೋಗಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತದೆ. ವ್ಯವಸ್ಥೆ ಇದನ್ನೆಲ್ಲ ಮೀರಿ ಹೋದ್ರೆ? ವಿವಿಧ ಆ್ಯಪ್​​ಗಳಿಂದ ಬಳಸಲ್ಪಟ್ಟ ಮಾಹಿತಿ ಆಧರಿಸಿ ಒಂದು ವ್ಯಕ್ತಿತ್ವವನ್ನೇ ಹೊರತರುವಂತಾದ್ರೆ? ಅಂತಹ ಉಪಕರಣ ಬ್ರಾಂಡ್​ಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು ನೆರವಾಗುತ್ತದೆ. ಬೆಂಗಳೂರು ಮೂಲದ ‘ಮೊಬಿಆರ್ಬಿಟ್ ಲ್ಯಾಬ್ಸ್' ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಮಾರ್ಟ್ಲಿ ಡಾಟ್ ಮಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್​ಫೋನ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಈ ಮೂಲಕ ಗ್ರಾಹಕರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಮೊಬಿಆರ್ಬಿಟ್​ನ ಯೋಜನೆ. ಉದಾಹರಣೆಗೆ ಸ್ಮಾರ್ಟ್​ಫೋನ್ ಬಳಕೆದಾರರ ಡಿವೈಸ್ ಮೂಲಕ ಅವರಿಗೆ ಫೋಟೋಗ್ರಫಿ ಇಷ್ಟ ಅನ್ನೋದನ್ನು ಕೆನಾನ್ ಕಂಪನಿ ಅರ್ಥಮಾಡಿಕೊಂಡು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಮಾರ್ಟ್ಲಿ ಡಾಟ್ ಮಿ ಮೂಲಕ ಪ್ರಚಾರ ಮಾಡಬಹುದು.

image


``ಬಳಕೆದಾರ ಒಳ್ಳೆಯ ಛಾಯಾಗ್ರಾಹಕನೋ ಅಥವಾ ಸ್ಟಾರ್ಟ್ಅಪ್ ಸುದ್ದಿಗಳನ್ನು ಓದುವ ಹವ್ಯಾಸ ಉಳ್ಳವನೋ ಎಂಬುದನ್ನು ನಮ್ಮ ವಿಶ್ಲೇಷಣೆ ಪತ್ತೆ ಮಾಡುತ್ತದೆ'' ಎನ್ನುತ್ತಾರೆ ಮೊಬಿಆರ್ಬಿಟ್​​ನ ಸಹ ಸಂಸ್ಥಾಪಕ ಮುರಳೀಧರ್ ರಾಜನ್. ಸ್ಟಾರ್ಟ್ಅಪ್​ಗಳ ಕ್ರಮಾವಳಿ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರಮಾವಳಿಗಳನ್ನೆಲ್ಲ ಚಿಲ್ಲರೆ ವ್ಯಾಪಾರಿಗಳು ಅಥವಾ ಕಂಪನಿಗಳಿಗಾಗಿ ನಿರ್ಮಿಸಿದ ಅಪ್ಲಿಕೇಷನ್​ಗಳಲ್ಲಿ ದಾಖಲಿಸಲು ಹೊಸ ವೇದಿಕೆಯೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದಾಸ್ತಾನು ಘಟಕಗಳನ್ನು ಶೋಧಿಸಿ, ಲಭ್ಯವಿರುವ ರಿಯಾಯಿತಿ ಮತ್ತು ಆಫರ್ಗಳನ್ನು ಹೋಲಿಕೆ ಮಾಡಲಾಗುತ್ತದೆ. ಗ್ರಾಹಕರ ಜೊತೆಗೆ ಎಂಗೇಜ್ ಆಗಿರಲು ಸ್ಟೋರ್ ಮ್ಯಾನೇಜರ್​ಗಳು ಕೂಡ ಇದನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬಹುದು.

ಇದನ್ನು ಓದಿ

'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಯಶಸ್ಸಿನ ಮಂತ್ರ

ಇದು ಸಾಕ್ಷಾತ್ಕಾರವೊಂದರಿಂದ ಹುಟ್ಟಿಕೊಂಡ ಪರಿಕಲ್ಪನೆ. ಮೊಬಿಆರ್ಬಿಟ್​ನ ಮೂವರು ಸಂಸ್ಥಾಪಕರಾದ ಸಂತೋಷ್ ಪ್ರಭು, ಮುರಳೀಧರ್ ರಾಜನ್ ಹಾಗೂ ಪಲಾಶ್ ಪಾಟೀಲ್ ಈ ಮೊದಲು ಭಾರತದ ಸ್ಮಾಟ್​​ಫೋನ್ ತಯಾರಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದಾರೆ. ಸಹೋದ್ಯೋಗಿಗಳಾಗಿದ್ದ ಅವರು ಹೊಸ ಪರಿಕಲ್ಪನೆಯ ಬಗ್ಗೆ 2011-2014ರವರೆಗೆ ಚರ್ಚಿಸಿದ್ದಾರೆ. ಆಗ ಅವರಿಗೆ ಮೊಬೈಲ್​ಗಳು ಮಾನವರ ಎರಡನೇ ಸ್ವರೂಪ ಎಂಬುದು ಅರ್ಥವಾಗಿತ್ತು. ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಪಣತೊಟ್ಟ ಅವರು ತಮ್ಮ ಉದ್ಯೋಗ ತ್ಯಜಿಸಿದ್ರು. ಅವರ ಲೆಕ್ಕಾಚಾರ ತುಂಬಾ ಸರಳವಾಗಿತ್ತು : ಅಪ್ಲಿಕೇಷನ್ ಬಳಕೆಯ ಅಂಕಿ-ಅಂಶಗಳನ್ನು ಕಲೆಹಾಕಲು ಸಾಧ್ಯ ಅಂತಾದ್ರೆ, ಅದನ್ನು ತಾಳೆ ಹಾಕಲು, ಸಂಘಟಿಸಲು ಸಾಧ್ಯವಾದ್ರೆ ಚಿನ್ನದ ಗಣಿಯೇ ಕೈಗೆಟುಕಿದಂತೆ. ಯಾಕಂದ್ರೆ ಕ್ರಿಯೆಯ ಒಳನೋಟಗಳನ್ನು ಸೃಷ್ಟಿಸಲು ಬ್ರಾಂಡ್​ಗಳು ಎಷ್ಟು ಮೊತ್ತವನ್ನು ಬೇಕಾದ್ರೂ ಪಾವತಿಸಲು ಸಿದ್ಧವಾಗಿವೆ.

ಅಂಗಡಿಗಳಲ್ಲಿ ಮೊಬೈಲ್ ಆ್ಯಪ್​ನಿಂದ ಹೇಗೆ ಪ್ರಯೋಜನವಾಗಬಹುದು ಎಂಬುದನ್ನು ತಿಳಿದುಕೊಳ್ಳಲು ಸಂತೋಷ್, ಮುರಳೀಧರ್ ಹಾಗೂ ಪಲಾಶ್ ಚಿಲ್ಲರೆ ವ್ಯಾಪಾರಿಗಳನ್ನು ಕೂಡ ಭೇಟಿ ಮಾಡಿದ್ದಾರೆ. ವಿಶೇಷ ಅಂದ್ರೆ ಕೇವಲ 7 ತಿಂಗಳುಗಳ ಅವಧಿಯಲ್ಲಿ ಅವರು ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ತಂತ್ರಜ್ಞಾನವನ್ನು ಸ್ಪರ್ಧಾತ್ಮಕಗೊಳಿಸುವ ಒಂದು ಸಾಫ್ಟ್​ವೇರ್​, ಜೊತೆಗೆ ಡೇಟಾ ರಾಪರ್ ಕೂಡ ಹೌದು. 2015ರ ಅಕ್ಟೋಬರ್​​ನಲ್ಲಿ ಮೊಬಿಆರ್ಬಿಟ್ ತನ್ನ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಸದ್ಯ ವ್ಯಕ್ತಿತ್ವ ಪರಿಸರವನ್ನು ದೃಢಪಡಿಸುವ ಪ್ರಕ್ರಿಯೆ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. Django ಮತ್ತು Postgress db ಜೊತೆಗೆ ಇದರ ಸರ್ವರ್ ಆಕಿಟೆಕ್ಚರ್ ಅನ್ನು ನಿರ್ಮಿಸಲಾಗಿದೆ. ಬಳಕೆದಾರರಿಗೆ ಶಿಫಾರಸು ಮಾಡುವ ಮುನ್ನ ಪ್ರತಿ ಅಪ್ಲಿಕೇಷನ್ಗಳ ಮೇಲೆ ವ್ಯಯಿಸಿದ ಸಮಯ, ಅರಿತುಕೊಂಡ ವಿಷಯಗಳು ಇವನ್ನೆಲ್ಲ ಪರಿಶೀಲಿಸಲಾಗುತ್ತದೆ.

ಉದ್ಯಮ ಮಾದರಿ...

ವ್ಯಕ್ತಿತ್ವಗಳನ್ನು ಆಧರಿಸಿ ಶಿಫಾರಸು ತಲುಪಿಸುವ ಬಿ2ಸಿ ಮಾದರಿ ಇದಾಗಿದ್ದು, ಗ್ರಾಹಕರು ಉಚಿತವಾಗಿ ಪಡೆಯಬಹುದು. ಆದ್ರೆ ಅಂಕಿ ಅಂಶಗಳನ್ನು ಬ್ರಾಂಡ್ಗಳಿಗೆ ಒಂದು ಸೇವೆಯಂತೆ ನೀಡಲಾಗುತ್ತದೆ. ``ಮೊಬಿಆರ್ಬಿಟ್ ಒಂದು ಟೆಕ್ನಾಲಜಿ ಕಂಪನಿ, ಬಳಕೆದಾರರ ಅಂಕಿ ಅಂಶಗಳನ್ನು ಸೆರೆಹಿಡಿಯಬಲ್ಲದು. ಆದ್ರೆ ಇಲ್ಲಿ ಕನ್ಸಲ್ಟಿಂಗ್ ವ್ಯವಸ್ಥೆಯಿಲ್ಲ. ಬ್ರಾಂಡ್ಗಳು ನಮ್ಮೊಂದಿಗೆ ಪಾಲುದಾರಿಕೆ ಮಾಡಿಕೊಂಡು ಅವರ ಟಾರ್ಗೆಟ್ ಗ್ರಾಹಕರನ್ನು ತಲುಪಬಹುದು'' ಅಂತಾ ಮುರಳೀಧರ್ ವಿವರಿಸಿದ್ದಾರೆ. ಉತ್ಪನ್ನವನ್ನು ಒಂದು ಸೇವೆಯಂತೆ ನೀಡುತ್ತಿದ್ದು, ದೇಶದ ವಿವಿಧೆಡೆಯಲ್ಲಿರುವ ವಿತರಣಾ ಕೇಂದ್ರಗಳ ಮೂಲಕ ಅದು ಕಾರ್ಯನಿರ್ವಹಿಸಲಿದೆ. ಬಿ2ಸಿ ಉದ್ಯಮ ಮಾದರಿಗೆ ಸ್ಮಾರ್ಟ್ಲಿ ಡಾಟ್ ಮಿ ಅಪ್ಲಿಕೇಷನ್ ಸಪೋರ್ಟ್ ಮಾಡುತ್ತದೆ. ಇದುವರೆಗೆ 5000 ಮಂದಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ವೈಯಕ್ತಿಕ ಡೇಟಾವನ್ನು ಮಾರಾಟ ಮಾಡಲು ಕೆಲವು ಬ್ರಾಂಡ್ಗಳೊಂದಿಗೆ ಮೊಬಿಆರ್ಬಿಟ್ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಈ ಸಾಫ್ಟ್ವೇರ್ ವೇದಿಕೆಯನ್ನು ಅಭಿವೃದ್ಧಿಪಡಿಸಲು ಸಂಸ್ಥಾಪಕರು ಈಗಾಗ್ಲೇ 70,000 ಡಾಲರ್ ಹಣವನ್ನು ಹೂಡಿಕೆ ಮಾಡಿದ್ದಾರೆ.

ವಿಸಿ & ಸ್ಪರ್ಧೆ

ಮೊಬಿಆರ್ಬಿಟ್​​ನ ವ್ಯವಹಾರ ಮಾದರಿಗೆ ಸಂಭಾವ್ಯ ಪ್ರಮಾಣದ ಅಗತ್ಯವಿದೆ ಯಾಕಂದ್ರೆ ಅದು ಗ್ರಾಹಕರ ಆ್ಯಪ್ ಡೌನ್ಲೋಡ್​ನ್ನೇ ಅವಲಂಭಿಸಿದೆ. ಅಂಕಿ-ಅಂಶಗಳನ್ನು ತಾಳೆ ಹಾಕಲು ಮತ್ತು ಬ್ರಾಂಡ್ಗಳೊಂದಿಗೆ ಪಾಲುದಾರರಾಗಲು ಅದನ್ನು ಬಳಸಿಕೊಳ್ಳಬಹುದು. ನೇರ ವ್ಯವಹಾರಕ್ಕೆ ಬ್ರಾಂಡ್​ಗಳು ಮತ್ತು ಗ್ರಾಹಕ ವ್ಯವಹಾರಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ.

ಹೆಲಿಯನ್ ವೆಂಚರ್ಸ್ ಪಾರ್ಟ್​ನರ್ಸ್​ ಸಿಎಫ್ಓ ಆರ್.ನಟರಾಜನ್ ಅವರ ಪ್ರಕಾರ, ಎರಡೂ ಬದಿಯಲ್ಲಿ ರಿಸ್ಕ್ ಇದೆ, ಸಂಸ್ಥಾಪಕರಲ್ಲಿ ದೃಢವಾದ ತಂತ್ರಜ್ಞಾನ ನಿರ್ಮಾಣಕ್ಕೆ ಬ್ಯಾಂಡ್ ವಿಡ್ತ್ ಇರಬೇಕು ಅದೇ ಸಮಯದಲ್ಲಿ ಗ್ರಾಹಕರನ್ನು ಕಂಡುಕೊಳ್ಳಬೇಕು.

ಮೈಸ್ಮಾರ್ಟ್ ಪ್ರೈಸ್, ಸ್ಮಾರ್ಟ್ಪ್ರಿಕ್ಸ್ ಮತ್ತು ಪ್ರೈಸ್ಬಾಬಾದಂತಹ ಸಂಸ್ಥೆಗಳು ಒಂದೇ ತೆರನಾದ ವ್ಯವಹಾರ ಮಾದರಿ ಹೊಂದಿವೆ. ಆದ್ರೆ ಅಂಕಿ-ಅಂಶಗಳಿಗಾಗಿ ಗ್ರಾಹಕರ ಶೋಧಕಗಳನ್ನು ಅವಲಂಬಿಸಿವೆ. ಭಾರತದಲ್ಲಿ ಇದನ್ನು ಮಿಲಿಯನ್ ಡಾಲರ್ ಉದ್ಯಮವನ್ನಾಗಿಸಲು ಸುಮಾರು 20 ಕಂಪನಿಗಳು ಶ್ರಮಿಸುತ್ತಿವೆ. ಎಕ್ಸೆಲ್ ಹಾಗೂ ಹೆಲಿಯನ್ ವೆಂಚರ್ಸ್ ಪಾರ್ಟ್ನರ್ಸ್ನಿಂದ ಮೈಸ್ಮಾರ್ಟ್ ಪ್ರೈಸ್ 11 ಮಿಲಿಯನ್ ಡಾಲರ್ ಬಂಡವಾಳವನ್ನು ಪಡೆದುಕೊಂಡಿದೆ. ಒಂದೇ ಸ್ಕ್ರೀನ್ನಲ್ಲಿ ಎರಡು ವಿಭಿನ್ನ ಆ್ಯಪ್ಗಳಲ್ಲಿ ಬೆಲೆ ಹೋಲಿಕೆ ಮಾಡುವ ಗ್ರಾಹಕರಿಗೆ ವೂಡೂ ಟೆಕ್ನಾಲಜೀಸ್ ಈ ಸೌಲಭ್ಯ ಕಲ್ಪಿಸಿದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಅವರು ಒಂದೇ ವಿಂಡೋನಲ್ಲಿ ಫ್ಲಿಪ್ಕಾರ್ಟ್ ಮತ್ತು ಸ್ನಾಪ್ಡೀಲ್ ಬೆಲೆ ಲಭ್ಯವಾಗುವಂತೆ ಮಾಡಿದ್ದಾರೆ.

ಮೊಬಿ ಆರ್ಬಿಟ್​​ನ 2ನೇ ಉದ್ಯಮ ಮಾದರಿ ಬಿ2ಬಿ ಮಾದರಿಯಲ್ಲಿ ರೇಡಿಯೋ ಲೋಕಸ್ ಕಂಪನಿಯಿಂದ ತೀವ್ರ ಪೈಪೋಟಿ ಎದುರಾಗಿದೆ. ಇದು ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸುವುದಲ್ಲದೆ, ಗ್ರಾಹಕರ ವರ್ತನೆ ಆಧರಿಸಿದ ಕ್ರಿಯೆಯ ಒಳನೋಟಗಳನ್ನು ಒದಗಿಸುವ ನಿರೀಕ್ಷೆ ಇದೆ. ಟೆಕ್ನಾಲಜಿ ಕಂಪನಿಗಳು ಅಂತಿಮವಾಗಿ ದೊಡ್ಡ ಉದ್ಯಮವಾಗಿ ಬದಲಾಗುತ್ತವೆ, ಆದ್ರೆ ಅದರಲ್ಲಿ ಹಲವು ಸಂಸ್ಥೆಗಳು ವಿಫಲವಾಗುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಮೋಹನ್ದಾಸ್ ಪೈ.

`ಯುವರ್​ಸ್ಟೋರಿ' ಮಾಹಿತಿ

ಸಾಧನ ಆಧರಿಸಿದ ವ್ಯಕ್ತಿತ್ವಗಳನ್ನು ಯಾರೂ ನಿರ್ಮಿಸಿಲ್ಲ. ಆ್ಯಪ್ಗಳಲ್ಲಿನ ಶಾಪಿಂಗ್ ಹವ್ಯಾಸಗಳ ಆಧಾರದ ಮೇಲೆ ಎಲ್ಲರೂ ವ್ಯಕ್ತಿತ್ವ ನಿರ್ಮಾಣ ಮಾಡುತ್ತಿದ್ದಾರೆ. ಮೊಬಿಆರ್ಬಿಟ್ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ವ್ಯಕ್ತಿತ್ವ ನಿಮಾಣಕ್ಕೂ ಮುನ್ನ ಫೋನ್ನಲ್ಲಿ ಸಂಪೂರ್ಣ ಆ್ಯಪ್ ಕ್ಷೇತ್ರದ ಮಾಹಿತಿ ಪಡೆಯುವುದು ಮೊಬಿಆರ್ಬಿಟ್ನ ಉದ್ದೇಶ. ಆದ್ರೆ ಅದರ ಯಶಸ್ಸು ಮಾತ್ರ, ಬಂಡವಾಳ ಸಂಗ್ರಹ, ಗ್ರಾಹಕರ ಮೆಚ್ಚುಕೆ ಗಳಿಸುವಿಕೆ, ಕನ್ಸ್ಯೂಮರ್ ಬ್ಯುಸಿನೆಸ್ ಜೊತೆಗಿನ ಹೊಂದಾಣಿಕೆಯನ್ನು ಅವಲಂಬಿಸಿದೆ. ಅದೃಷ್ಟವಶಾತ್ ಇದು ಬಿ2ಬಿ2ಸಿ ಉದ್ಯಮದ ವರ್ಷವೂ ಆಗಬಹುದು. ಅವರು ಯಶಸ್ಸಿನತ್ತ ಮುನ್ನುಗ್ಗಬೇಕಷ್ಟೆ.

ಲೇಖಕರು: ವಿಶಾಲ್ ಕೃಷ್ಣ

ಅನುವಾದಕರು: ಭಾರತಿ ಭಟ್

ಇದನ್ನು ಓದಿ:

ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ

ಮಾರಕ ರೋಗಗಳ ಪತ್ತೆಗೆ ಮೆಡಿಕಲ್ ಕಿಟ್

ಬೆಂಗಳೂರು ಬೀದಿಯಿಂದ ಫ್ರಾನ್ಸ್​​ವರೆಗೆ-ಇದು ಸಿಲಿಕಾನ್​ಸಿಟಿ ಮಕ್ಕಳ ಫುಟ್ಬಾಲ್​​ ಪ್ರೀತಿ