ಆ್ಯಪ್​ನಲ್ಲೇ ಪಠ್ಯ, ಆ್ಯಪ್​ನಲ್ಲೇ ಓದು- ಇದು ಬಡ ಮಕ್ಕಳ ನೆರವಿಗೆ ನಿಂತ ಶಂಕರ್ ಯಾದವ್ ಕಥೆ

ಟೀಮ್​ ವೈ.ಎಸ್​. ಕನ್ನಡ

ಆ್ಯಪ್​ನಲ್ಲೇ ಪಠ್ಯ, ಆ್ಯಪ್​ನಲ್ಲೇ ಓದು- ಇದು ಬಡ ಮಕ್ಕಳ ನೆರವಿಗೆ ನಿಂತ ಶಂಕರ್ ಯಾದವ್ ಕಥೆ

Thursday July 20, 2017,

2 min Read

ರಾಜಸ್ತಾನದ ಜೈಪುರ ಜಿಲ್ಲೆಯ ರಾವುಪುರ ಒಂದು ಚಿಕ್ಕ ಗ್ರಾಮ. ಈ ಹಳ್ಳಿಯ ವಿದ್ಯಾರ್ಥಿಗಳು ಈಗ ಡಿಜಿಟಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರುವುದು 21 ವರ್ಷದ ಯುವಕ ಶಂಕರ್ ಯಾದವ್. ಶಂಕರ್ ಯಾದವ್ ತನಗೆ ಯಾವುದು ಸಿಕ್ಕಿಲ್ಲವೋ ಅದನ್ನು ಉಳಿದ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಿದ್ದಾರೆ. ಶಾಲಾ ದಿನಗಳಲ್ಲಿ ಶಂಕರ್ ಯಾದವ್ ಪುಸ್ತಕ ಕೊಂಡುಕೊಳ್ಳಲು ಕೂಡ ಅಶಕ್ತರಾಗಿದ್ದಾರೆ. ಬಡತನದ ವಿರುದ್ಧ ಗುದ್ದಾಡಿ ಅದು ಹೇಗೋ ಯಶಸ್ಸಿನ ಹೆಜ್ಜೆ ಇಟ್ಟರು. ಆದ್ರೆ ತಾನು ಬೆಳೆದುಬಂದ ಹಾದಿಯನ್ನು ಮರೆಯಲಿಲ್ಲ. ತನ್ನಂತೆಯೇ ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಪುಸ್ತಕ ಖರೀದಿಸಲಾಗದೆ ಕಷ್ಟಪಡುತ್ತಿರುವ ಬಗ್ಗೆ ಅರಿತುಕೊಂಡ್ರು. ಅಷ್ಟೇ ಅಲ್ಲ ಆ ಬಗ್ಗೆ ಚುರುಕಾಗಿ ಕಾರ್ಯ ನಿರ್ವಹಿಸಿದ್ರು. ವಿದ್ಯಾರ್ಥಿಗಳಿಗೆ ಪಠ್ಯ ಒದಗಿಸುವ ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಿದ್ರು. ಡಿಜಿಟಲ್ ಎಜುಕೇಷನ್ ಅಪ್ಲಿಕೇಷನ್ ಮೂಲಕ ಬಡ ವಿದ್ಯಾರ್ಥಿಗಳ ನೆರವಿಗೆ ನಿಂತ್ರು. ಶಂಕರ್ ಸದ್ಯ ಇಂತಹ 40ಕ್ಕೂ ಅಧಿಕ ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಿ ರಾಜಸ್ತಾನದ ಡಿಜಿಟಲ್ ಎಜುಕೇಷನ್ ನ ಪಿತಾಮಹ ಅನ್ನುವ ಹಿರಿಮೆ ಪಡೆದುಕೊಂಡಿದ್ದಾರೆ.

image


ಶಂಕರ್ ಗೆ ಯಾವುದೇ ಡಿಗ್ರಿಯಾಗಲಿ ಅಥವಾ ಟ್ರೈನಿಂಗ್ ಆಗಲಿ ಪಡೆದುಕೊಂಡಿಲ್ಲ. ಆದ್ರೆ ತನ್ನ ಗ್ರಾಮವನ್ನು ಡಿಜಿಟಲ್ ಗ್ರಾಮವನ್ನಾಗಿ ಮಾಡಲು ಶಂಕರ್ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದೇ ಉದ್ದೇಶ ಇಟ್ಟುಕೊಂಡು ಶಂಕರ್ ಎಸ್. ಆರ್. ಡೆವಲಪರ್ಸ್ ಅನ್ನುವ ಕಂಪನಿ ಆರಂಭಿಸಿದ್ದಾರೆ. ಶಂಕರ್ ಅಭಿವೃದ್ಧಿ ಪಡಿಸಿರುವ ಆ್ಯಪ್ ಗಳು ಕಳೆದ 8 ತಿಂಗಳುಗಳಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಸುಮಾರು 20 ಲಕ್ಷ ಡೌನ್ ಲೋಡ್ ಗಳನ್ನು ಕಂಡಿದೆ. shankharraopura.com. ಹೆಸರಿನಲ್ಲಿ ಈ ಆ್ಯಪ್ ಗಳು ಲಭ್ಯವಿದೆ.

ಇದನ್ನು ಓದಿ: ಭಾರತೀಯ ಸ್ಟಾರ್ಟ್​ಅಪ್ ಲೋಕದ ವೇದವಾಕ್ಯಗಳು..!

ಶಂಕರ್ 10ನೇ ತರಗತಿಯಲ್ಲಿರುವಾಗ ಒಂದು ಸ್ಪರ್ಧಾ ಪರೀಕ್ಷೆಗೆ ಸಜ್ಜಾಗುತ್ತಿದ್ದರು. ಈ ವೇಳೆಯಲ್ಲಿ ಅಧ್ಯಾಪಕರು ಶಂಕರ್ ಗೆ ಆನ್ಲೈನ್ ಮೂಲಕ ತಯಾರಾಗುವಂತೆ ಸೂಚಿಸಿದ್ರು. ಇದು ಶಂಕರ್ ಗೆ ಡಿಜಿಟಲ್ ಮಾಧ್ಯಮದ ಮೂಲಕವೂ ಓದು ಸಾಧ್ಯ ಅನ್ನುವುದನ್ನು ಅರಿಯುವಂತೆ ಮಾಡಿತು. ತಾಂತ್ರಿಕತೆಯ ಕಡೆ ಶಂಕರ್ ಹೆಚ್ಚು ಆಕರ್ಷಿತನಾಗಿರುವುದನ್ನು ಕಂಡ ಶಂಕರ್ ಅಪ್ಪ ಕಲ್ಲೂರಂ ಯಾದವ್ ತನ್ನ ಮಗನಿಗೆ ಬಡತನದ ನಡುವೆಯೂ ಲ್ಯಾಪ್ ಟಾಪ್ ಒಂದನ್ನು ನೀಡಿದ್ರು. ಇದು ಶಂಕರ್ ಗೆ ಅಪ್ಲಿಕೇಷನ್ ಅಭಿವೃದ್ಧಿ ಕಡೆಗೆ ಗಮನಹರಿಸಲು ಸಾಕಷ್ಟು ನೆರವು ನೀಡಿತು.

ಆ್ಯಂಡ್ರಾಯ್ಡ್ ಡೆವಲಪ್ ಮೆಂಟ್ ಕೋರ್ಸ್ ಮುಗಿಸಿದ ಮೇಲೆ, ಶಂಕರ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕ್ಯಾಂಪೇನ್ ನಿಂದ ಸ್ಪೂರ್ತಿ ಪಡೆದುಕೊಂಡ್ರು. ಅಷ್ಟೇ ಅಲ್ಲ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಿದ್ರು. ಸದ್ಯಕ್ಕೆ ಶಂಕರ್ ಬಳಿ 4 ಜನರು ಕೆಲಸ ಮಾಡುತ್ತಿದ್ದಾರೆ. ಆಫ್ ಲೈನ್ ಅಪ್ಲಿಕೇಷನ್ ಗಳನ್ನು ಕೂಡ ಶಂಕರ್ ಅಭಿವೃದ್ಧಿ ಪಡಿಸಿದ್ದಾರೆ.

ರಾವುಪುರದ ಮೊತ್ತ ಮೊದಲ ಆ್ಯಪ್ ಡೆವಲಪರ್ ಆಗಿರುವ ಶಂಕರ್, ತನ್ನ ಗ್ರಾಮದ ಬಗ್ಗೆಯೂ, ಒಂದು ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಆರ್ಥಿಕವಾಗಿಯೂ ಉತ್ತಮ ಸ್ಥಿತಿಯಲ್ಲಿರುವ ಶಂಕರ್, ತನ್ನ ಸಾಧನೆಯಿಂದಲೇ ಎಲ್ಲವನ್ನೂ ಸಾಧಿಸಿದ್ದಾರೆ. 

ಇದನ್ನು ಓದಿ:

1. ವಿಜ್ಞಾನ ಪಾಠ ಮಾಡಲು ಟೀಚರ್ ಇಲ್ಲದಿದ್ದರೂ ನೋ ವರಿ- ಐಎಎಸ್ ಆಫೀಸರ್ ಪತ್ನಿ ಅಧ್ಯಾಪಕಿಯಾದ ಕಥೆ ಓದಿ..! 

2. 43ನೇ ವಯಸ್ಸಿನ ಮ್ಯಾರಾಥಾನ್ ಸ್ಪೆಷಲಿಸ್ಟ್ “ಅಂಜಲಿ”..!

3. ಕಸ ವಿಲೇವಾರಿಗೆ ಹೊಸ ಟಚ್- ವಿಜಯವಾಡದಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳದ್ದೇ ದರ್ಬಾರ್..!