ತ್ಯಾಜ್ಯಕ್ಕಾಗಿ ಸ್ವೀಡನ್ನಲ್ಲಿ ಭಾರೀ ಬೇಡಿಕೆ- ಕಸಕ್ಕಾಗಿ ಅಂಗಲಾಚುತ್ತಿದೆ ಶ್ರೀಮಂತ ದೇಶ..!

ಟೀಮ್​ ವೈ.ಎಸ್​. ಕನ್ನಡ

1

ಬೆಂಗಳೂರಿನ ಕಸದ ಸಮಸ್ಯೆ ಬಗೆ ಹರಿಸುವುದಕ್ಕೆ ನಮ್ಮ ರಾಜಕಾರಣಿಗಳಿಂದ ಸಾಧ್ಯವಾಗಿಲ್ಲ. ಆದ್ರೆ ಸ್ವೀಡನ್ ದೇಶದಾದ್ಯಂತ ಕಸ ಇಲ್ವೇ ಇಲ್ಲ. ಈ ಸ್ಕ್ಯಾಂಡಿನೇವಿಯನ್ ದೇಶ ಪುನರುತ್ಪಾದಿತ ಕಸಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವಂತಹ ಸ್ಥಿತಿಗೆ ಬಂದು ತಲುಪಿದೆ. ಯಾಕಂದ್ರೆ ಸ್ವೀಡನ್ ತನಗೆ ಬೇಕಾದ ವಿದ್ಯುತ್ ಶಕ್ತಿಯ ಅರ್ಧದಷ್ಟನ್ನು ಕಸದಿಂದಲೇ ಉತ್ಪಾದನೆ ಮಾಡುತ್ತಿತ್ತು. ಆದ್ರೆ ಈಗ ದೇಶದಲ್ಲೇ ಕಸ ಇಲ್ಲದೇ ಇರುವುದರಿಂದ ಬೇರೆ ದೇಶದಿಂದ ಕಸ ತರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಿದ್ದಿದೆ. ಯಾಕಂದ್ರೆ ಸ್ವೀಡನ್ 1991ರಲ್ಲಿ ಫಾಸಿಲ್​ಗಳಿಂದ ಇಂಧನ ತಯಾರಿಸುವುದಕ್ಕೆ ಅತಿ ಹೆಚ್ಚು ತೆರಿಗೆ ವಿಧಿಸಿತ್ತು. ಹೀಗಾಗಿ ಇಂಧನ ಉತ್ಪಾದಕರು ಕಸದಿಂದ ರಸ ಎನ್ನುವಂತೆ, ಅದರಿಂದಲೇ ವಿದ್ಯುತ್ ತಯಾರಿಸುತ್ತಾ ಇದ್ರು. ಅತ್ತ ಕಸದ ಸಮಸ್ಯೆ ನಿವಾರಣೆ ಆಯಿತು. ಇತ್ತ ಕಸವೂ ಮಾಯವಾಯಿತು. ಆದ್ರೆ ಈಗ ವಿದ್ಯುತ್ ಶಕ್ತಿಯನ್ನು ತಯಾರಿಸಲು ಸ್ವೀಡನ್ ಬೇರೆ ದೇಶಕ್ಕೆ ಕಸ ಕೊಡ್ರರಪ್ಪಾ ಅಂತ ಅಂಗಲಾಚಬೇಕಾದ ಸ್ಥಿತಿ ಎದುರಿಸುತ್ತಿದೆ.

ಕಳೆದೆರಡು ದಶಕಗಳಿಂದ ಸ್ವೀಡನ್ ಕಸದಿಂದಲೇ ವಿದ್ಯುತ್ ಉತ್ಪಾದಿಸಿ ವಿಶ್ವದ ಶ್ರೇಷ್ಠ ರಾಷ್ಟ್ರ ಅನ್ನೋ ಖ್ಯಾತಿಯನ್ನು ಪಡೆದುಕೊಂಡಿತ್ತು. ಇಡೀ ದೇಶದಲ್ಲೇ ಕೇವಲ ಶೇಕಡಾ 1ರಷ್ಟು ತ್ಯಾಜ್ಯವನ್ನು ಮಾತ್ರ ಭೂಮಿಯಲ್ಲಿ ಬಿಡಲಾಗುತ್ತಿತ್ತು.

“ ಸ್ವೀಡಿಶ್ ಜನರಿಗೆ ಪರಿಸರ ಮತ್ತು ಅದರ ರಕ್ಷಣೆಯ ಬಗ್ಗೆ ಸಾಕಷ್ಟು ಶಿಕ್ಷಣವಿದೆ. ಪರಿಸರದ ಬಗ್ಗೆ ಅತೀವ ಕಾಳಜಿ ಇದೆ. ನಾವು ಜನರನ್ನು ಕಸ ಎಸೆಯದಂತೆ ಮಾಡಲು ನಾವು ಸಾಕಷ್ಟು ಕಷ್ಟ ಪಟ್ಟೆವು. ತ್ಯಾಜ್ಯವನ್ನು ಮರುಬಳಕೆ ಮಾಡಿ ಅದರಿಂದಲೇ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಹೇಳಿಕೊಟ್ಟೆವು.”
ಅನಾ- ಕೆರಿನ್ ಗ್ರಿಪ್​ವಾಲ್, ಡೈರೆಕ್ಟರ್ ಆಫ್ ಕಮ್ಯುನಿಕೇಶನ್ ಅಲ್​ಫಾಲ್ ಸ್ವೆರಿಜ್

ಸ್ವೀಡನ್ನಲ್ಲಿ ತ್ಯಾಜ್ಯ ಮರುಬಳಕೆ ಬಗ್ಗೆ ಅತೀ ಹೆಚ್ಚು ಜನರು ತಿಳಿದುಕೊಂಡಿದ್ದಾರೆ. ಉದಾಹರಣೆಗೆ ಯಾವುದಾದರು ಒಂದು ವಸ್ತುವನ್ನು ಸುಟ್ಟರೆ, ಅದರಿಂದ ಉತ್ಪತ್ತಿಯಾಗುವ ಗ್ಯಾಸ್ ಅನ್ನು ಚಳಿಗಾಲದಲ್ಲಿ ಮನೆ ಬಿಸಿಯಾಗಿಡಲು ಉಪಯೋಗಿಸುವ ಹೀಟ್ ಗ್ಯಾಸ್ ಅನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ವಿವಿಧ ವಿಭಾಗಗಳಲ್ಲಿ ಹಲವು ಖಾಸಗಿ ಸಂಸ್ಥೆಗಳು ಕೂಡ ಸರ್ಕಾರದ ಜೊತೆಗೆ ಕೈ ಜೋಡಿಸಿ ತ್ಯಾಜ್ಯದ ಮರುಬಳಕೆಯನ್ನು ಮಾಡುವಂತೆ ಜನರಿಗೆ ಹೇಳಿಕೊಡುತ್ತಿವೆ.

ಇದನ್ನು ಓದಿ: ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..!

ಕಸವನ್ನು ಸಂಗ್ರಹಿಸುವ ಬಗ್ಗೆ ಸ್ವೀಡನ್ ಮುನಿಸಿಪಾಲಿಟಿಗಳು ಸಾಕಷ್ಟು ಹೂಡಿಕೆ ಮಾಡಿವೆ. ವೇಸ್ಟ್ ಕಲೆಕ್ಷನ್ ಬಗ್ಗೆ ಹಲವು ವೈಜ್ಞಾನಿಕ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದೆ. ಆಟೋಮೇಟೆಡ್ ವ್ಯಾಕ್ಯೂಮ್ ಸಿಸ್ಟಮ್​ಗಳು ರೆಸಿಡನ್ಸಿಯಲ್ ಬ್ಲಾಕ್​ನಲ್ಲಿ ತ್ಯಾಜ್ಯಗಳನ್ನು ಕ್ಲೀನ್ ಮಾಡುತ್ತದೆ. ಟ್ರಾನ್ಸ್​ಪೋರ್ಟ್ ಮತ್ತು ಅಂಡರ್ ಗ್ರೌಂಡ್ ಕಂಟೈನರ್​ಗಳು ರಸ್ತೆ ಮೇಲಿನ ತ್ಯಾಜ್ಯಗಳನ್ನು ಕ್ಲೀನ್ ಮಾಡಲು ಸಹಾಯ ಮಾಡುತ್ತವೆ.

ಸ್ವೀಡನ್ ದೇಶದ ತ್ಯಾಜ್ಯ ಮರುಬಳಕೆ ಅದ್ಭುತ ಕ್ವಾಲಿಟಿಯನ್ನು ಕೂಡ ಹೊಂದಿದೆ. ಸದ್ಯ ತ್ಯಾಜ್ಯಗಳೆಲ್ಲವೂ ಖಾಲಿ ಆಗಿದ್ದು ಚಳಿಗಾಲದಲ್ಲಿನ ಮನೆಯನ್ನು ಬೆಚ್ಚಗಿಡುವ ಗ್ಯಾಸ್ ಉತ್ಪಾದಿಸಲು ಕೂಡ ಬೇರೆ ದೇಶಗಳಿಂದ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುವ ಸ್ಥಿಗೆ ಬಂದು ತಲುಪಿದೆ. ಸ್ವೀಡನ್ ಮಾದರಿಯನ್ನೇ ಜರ್ಮನಿ, ಡೆನ್ಮಾರ್ಕ್, ನೆದರ್ಲೆಂಡ್ ಮತ್ತು ಬೆಜಲ್ಜಿಯಂ ದೇಶಗಳು ತ್ಯಾಜ್ಯ ಮರುಬಳಕೆಗೆ ಬಳಸಿಕೊಳ್ಳುತ್ತಿವೆ. ಆ ದೇಶಗಳಲ್ಲೂ ನಿಧಾನವಾಗಿ ತ್ಯಾಜ್ಯ ಮಾಯವಾಗುತ್ತಿದೆ. ಒಟ್ಟಿನಲ್ಲಿ ಬೆಂಗಳೂರು ಒಂದು ಮಹಾನಗರ ಪಾಲಿಕೆ ಅಷ್ಟೇ. ಇಲ್ಲಿರುವ ಕಸವನ್ನೇ ವಿಲೇವಾರಿ ಮಾಡೋದಿಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಇಡೀ ದೇಶದಲ್ಲಿ ತ್ಯಾಜ್ಯವನ್ನು ಸಂಪೂರ್ಣವಾಗಿ ಮರುಬಳಕೆ ಮಾಡುತ್ತೇವೆ ಅನ್ನುವುದು ಸದ್ಯಕ್ಕೆ ತಿರುಕನ ಕನಸು.

ಇದನ್ನು ಓದಿ:

1. ಸಕಲ ಕಲಾ ವಲ್ಲಭ - ಆಸಕ್ತಿಯೇ ಈಗ ಫುಲ್‍ ಟೈಂ ಜಾಬ್

2. ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್​ ಫಾರ್​ ಹರ್​ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!

3. ಹಣದ ಹಿಂದೆ ಬೀಳುವ ವೈದ್ಯರಿಗೆಲ್ಲಾ ಇವರೇ ಒಂದು ಪಾಠ…

Related Stories

Stories by YourStory Kannada