ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳದ ಯಶಸ್ಸಿನ ನಂತರ ಹೊಸ ಕನಸು- ಅಂತರಾಷ್ಟ್ರೀಯ ಮಟ್ಟದ ಮೇಳದ ಆಯೋಜನೆಗೆ ಪ್ಲಾನಿಂಗ್

ಟೀಮ್​ ವೈ.ಎಸ್.ಕನ್ನಡ

ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳದ ಯಶಸ್ಸಿನ ನಂತರ ಹೊಸ ಕನಸು- ಅಂತರಾಷ್ಟ್ರೀಯ ಮಟ್ಟದ ಮೇಳದ ಆಯೋಜನೆಗೆ ಪ್ಲಾನಿಂಗ್

Tuesday May 02, 2017,

3 min Read

ದೇಶದ ಮೊತ್ತ ಮೊದಲ ಸಿರಿಧಾನ್ಯ ಮೇಳಕ್ಕೆ ಕರ್ನಾಟಕ ಸರಕಾರ ಆತಿಥ್ಯ ನೀಡಿದ್ದು ಹಳೆಯ ಮಾತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮೇಳದ ಯಶಸ್ಸಿನಿಂದ ಕರ್ನಾಟಕ ಸರಕಾರ ಸಂತಸಗೊಂಡಿದೆ. ಅಷ್ಟೇ ಅಲ್ಲ ಮುಂದಿನ ವರ್ಷ ಸಿರಿಧಾನ್ಯ ಮೇಳ ಹೇಗೆ ನಡೆಯಬೇಕು ಅನ್ನುವ ಬಗ್ಗೆ ಬ್ಲೂ ಪ್ರಿಂಟ್ ಹಾಕಿಕೊಂಡಿದೆ. ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳವನ್ನಾಗಿಸುವ ಗುರಿ ಇಟ್ಟುಕೊಂಡಿದೆ.

image


“ಕೃಷಿಕರನ್ನು ಉದ್ಯಮಿಗಳನ್ನಾಗಿಸುವ ಕೆಲಸವನ್ನು ಸಿರಿಧಾನ್ಯ ಮೇಳ ಮಾಡಿದೆ. ಕೃಷಿ ಸಚಿವ ಕೃಷ್ಣ ಬೈರೇ ಗೌಡರ ಪ್ರಕಾರ 8 ಕಂಪನಿಗಳ ಜೊತೆಗೆ 20 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಬಿಗ್ ಬಾಸ್ಕೆಟ್ ಜೊತೆಗಿನ ಸಂಬಂಧವೂ ಈ ಒಪ್ಪಂದದಲ್ಲಿ ಸೇರಿಕೊಂಡಿದೆ ”
- ಕೃಷ್ಣಬೈರೇ ಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೃಷ್ಣ ಬೈರೇ ಗೌಡ, ನಾವು ನಮ್ಮ ರೈತರನ್ನು ಉದ್ಯಮಿಗಳನ್ನಾಗಿ ಮಾಡಬೇಕು. ಕೃಷಿಕರನ್ನು ಮತ್ತು ಮಾರಾಟಗಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದ್ದು ಸಂತಸ ತಂದಿದೆ ಎಂದರು. ಸ್ಟಾರ್ಟ್ ಅಪ್​ಗಳು ಜೈವಿಕ ಕೃಷಿ ಮತ್ತು ಸಾವಯವ ಸಿರಿಧಾನ್ಯಗಳನ್ನು ಬೆಳೆಯಲು ಸಹಕಾರ ನೀಡುವ ಪ್ರಮುಖ ಅಂಶಗಳಾಗಿವೆ ಎಂದರು.

“ ರಾಷ್ಟ್ರೀಯ ಸಿರಿಧಾನ್ಯ ಮೇಳ ಸುಮಾರು 80 ಲಕ್ಷ ರೂಪಾಯಿಗಳ ವ್ಯಾಪಾರ ನಡೆಸಿದೆ. 45 ಕೋಟಿ ರೂಪಾಯಿಗಳ ವಹಿವಾಟು ನಡೆಸಲು ಸಹಕಾರಿ ಆಗುವಂತೆ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟಿದೆ, ಭವಿಷ್ಯದಲ್ಲಿ ಸುಮಾರು 100 ಕೋಟಿಗೂ ಅಧಿಕ ವಹಿವಾಟು ನಡಸುವ ಉದ್ದೇಶವಿದೆ. ”
- ಕೃಷ್ಣಬೈರೇ ಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದ ಬೆಳವಣಿಗೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಸಿರಿಧಾನ್ಯ ಮೇಳದ ಯಶಸ್ಸಿಗೆ ಕೂಡ ಶ್ರಮಿಸಿದ್ದಾರೆ ಎಂದು ಬೈರೇಗೌಡರು ಹೇಳಿದರು.

image


“ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳನ್ನು ಬೆಳೆಯನ್ನು ಕೇಂದ್ರ ಸಚಿವರು ಪ್ರೋತ್ಸಾಹಿಸುತ್ತಿದ್ದಾರೆ. ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ರಾಷ್ಟ್ರಿಯ ಸಿರಿಧಾನ್ಯಗಳ ಮೇಳವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಭರವಸೆ ಇದೆ. ”
- ಕೃಷ್ಣಬೈರೇ ಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ನಾವು ಮರೆತು ಹೋಗಿರುವ ಕೃಷಿಯನ್ನು ಮತ್ತೆ ಆರಂಭಿಸಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಸೇವಿಸುವ ಅವಶ್ಯಕತೆ ಎದುರಾಗಿದೆ. ಸಿರಿಧಾನ್ಯಗಳು ಕೇವಲ ಆರೋಗ್ಯಕ್ಕಾಗಿ ಮಾತ್ರವಲ್ಲ, ಉದ್ಯಮದ ದೃಷ್ಟಿಯಿಂದಲೂ ಉತ್ತಮ ಅನ್ನುವುದುನ್ನು ಕೃಷ್ಣ ಬೈರೇ ಗೌಡರು ಒತ್ತಿ ಹೇಳಿದ್ರು.

ಇದನ್ನು ಓದಿ: ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ… 

ಕೃಷ್ಣ ಬೈರೇಗೌಡರು ಗ್ರಾಹಕರನ್ನು, ಮಾರಾಟಗಾರರನ್ನು ಮತ್ತು ಕೃಷಿಕರನ್ನು ಒಂದೇ ವೇದಿಕೆಗೆ ತರುವ ಯೋಚನೆ ಮಾಡಿದ್ದರು. ಅದು ಈಗ ಸಿರಿಧಾನ್ಯ ಮೇಳದ ಕನಸು ನನಸು ಮಾಡಿದ್ದಾರೆ. ಸರಕಾರ ಕೂಡ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಿದೆ ಅನ್ನುವ ಭರವಸೆಯನ್ನೂ ನೀಡಿದ್ರು.

ಕರ್ನಾಟಕ ಸರಕಾರದ ಶ್ರಮಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕೇಂದ್ರ ಸರಕಾರ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇಂತಹ ಮೇಳಗಳಿಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಲಿದೆ ಅನ್ನುವುದನ್ನು ಸ್ಪಷ್ಟ ಪಡಿಸಿದ್ರು.

“ ಕೃಷಿ ಮತ್ತು ಕೃಷಿಕರಲ್ಲಿರುವ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೃಷಿಕರು ತಮ್ಮ ಬೆಳೆಗಳನ್ನು ರಫ್ತು ಮಾಡುವ ಯೋಚನೆಯಲ್ಲಿದ್ದಾರೆ. ಆದ್ರೆ ಅವರಿಗೆ ದಾರಿ ತೋರಿಸುವವರು ಯಾರು..? ಈಗ ಸ್ಟಾರ್ಟ್ ಅಪ್​ಗಳಿಗೆ ಅವಕಾಶ ಸಿಕ್ಕಿದೆ. ರೈತರಿಗೆ ನೆರವು ನೀಡಲು ಇದಕ್ಕಿಂತ ದೊಡ್ಡ ವೇದಿಕೆ ಸಿಗಲಾರದು ”
- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರು

ಸಾವಯವ ಮತ್ತು ಸಿರಿಧಾನ್ಯ ಮೇಳಗಳಲ್ಲಿ ಕೃಷಿ ಸಚಿವ ಕೃಷ್ಣ ಬೈರೇ ಗೌಡ ಮತ್ತು ಪ್ರವಾಸೋದ್ಯಮ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಲು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ರೈತರು ಲಾಭದಾಯಕ ಬೆಳೆ ಬೆಳೆಯಲು ಸಹಾಯ ನೀಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಿದ್ದಾರೆ. ಕೃಷಿಧಾನ್ಯ ಮೇಳದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಡಿವಿ ಸದಾನಂದ ಗೌಡರು ಕೂಡ ಕಾಣಿಸಿಕೊಂಡಿದ್ದರು.

image


ಕರ್ನಾಟಕ ದೇಶದಲ್ಲೇ ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ಧನಸಹಾಯ ಮಾಡಲು ನಿಧಿಯನ್ನು ಮೀಸಲಿಟ್ಟಿರುವ ಏಕೈಕ ರಾಜ್ಯವಾಗಿದೆ. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿರುವ ಸ್ಟಾರ್ಟ್ ಅಪ್​ಗಳಿಗೆ ಬೇರೆಯದ್ದೇ ಹಣವನ್ನು ಮೀಸಲಿಟ್ಟಿದೆ.

ಸ್ಟಾರ್ಟ್ ಅಪ್ ಸೆಲ್ ಸ್ಟಾರ್ಟ್ ಅಪ್ ಕಂಪನಿಗಳಿಗೆ ಸರಕಾರದ ನಿಧಿ ನೀಡಲು ಸಾಕಷ್ಟು ಸಹಾಯ ಮಾಡಲಿವೆ. ಕೃಷಿ ಆಧಾರಿತವಾಗಿರುವ ಸುಮಾರು 2400ಕ್ಕೂ ಅಧಿಕ ಸ್ಟಾರ್ಟ್ಅಪ್ ಕಂಪನಿಗಳು ಈಗಾಗಲೇ ಸ್ಟಾರ್ಟ್ ಅಪ್ ಸೆಲ್​ನಲ್ಲಿ ಹೆಸರು ನೊಂದಾಯಿಸಿಕೊಂಡಿವೆ. ಸರಕಾರದ ಯೋಜನೆಗೆ ಬದ್ಧವಾಗಿರುವ ಸ್ಟಾರ್ಟ್ ಅಪ್ ಕಂಪನಿಗಳು ಒಟ್ಟಾರೆ 200 ಕೋಟಿ ರೂಪಾಯಿಗಳನ್ನು ಹಂಚಿಕೊಳ್ಳಬಹುದು. ಸರಕಾರದ ಹಣಕಾಸಿನ ನೆರವು ಪಡೆದ ಸ್ಟಾರ್ಟ್ ಅಪ್​ಗಳು ಸರಕಾರದ ಜೊತೆ ಮತ್ತು ಸರಕಾರದ ಯೋಜನೆಗಳಂತೆ ಕೆಲಸ ಮಾಡಲು ಅರ್ಹತೆಯನ್ನು ಪಡೆಯುತ್ತವೆ. ಇಂತಹ ವ್ಯವಸ್ಥೆ ದೇಶದಲ್ಲೇ ಅಪರೂಪವಾಗಿದೆ. ಹೀಗಾಗಿ ಸ್ಟಾರ್ಟ್ ಅಪ್ ಕಂಪನಿಗಳು ಇದನ್ನು ಬಳಸಿಕೊಳ್ಳಬೇಕಿದೆ.

ಕೃಷಿಕರ ಹಾಗೂ ಗ್ರಾಹಕರ ನಡುವೆ ಸಾಕಷ್ಟು ಮಧ್ಯವರ್ತಿಗಳಿರುತ್ತಾರೆ. ಹೀಗಾಗಿ ಸಹಕವಾಗೇ ಬೆಲೆಗಳು ಹೆಚ್ಚಿರುತ್ತದೆ. ಆದ್ರೆ ಈಗ ಸರಕಾರ ಕೃಷಿಕರಿಂದಲೇ ನೇರವಾಗಿ ಗ್ರಾಹಕರ ಕೈಗೆ ಧಾನ್ಯಗಳು ಸಿಗುವಂತೆ ಮಾಡಲು ಯೋಜನೆ ರೂಪಿಸಿದೆ. 

ಇದನ್ನು ಓದಿ:

1. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...

2. ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

3. ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ