“ಪಂಕ್ಚರ್ ಪ್ಲಾನರ್”ಗಳಿಗೆ ಪಾಠ ಕಲಿಸಿದ ಎಂಜಿನಿಯರ್- ರಸ್ತೆಯಿಂದ ಮೊಳೆ ಹೆಕ್ಕಿದ ಸಾಧಕ..!

ಟೀಮ್​ ವೈ.ಎಸ್​. ಕನ್ನಡ

1

ಬೆನೆಡಿಕ್ಟ್ ಜೇಬಕುಮಾರ್ 42 ವರ್ಷದ ಎಂಜಿನಿಯರ್. ಬೆಂಗಳೂರಿನಲ್ಲಿ ತನ್ನ ವೃತ್ತಿ ಮಾಡುತ್ತಿದ್ದರು. ಎಂಜಿನಿಯರ್ ಆಗಿದ್ದರೂ ಸಮಾಜ ಸೇವೆ ಮಾಡುವ ಹವ್ಯಾಸ ದೊಡ್ಡದಾಗಿತ್ತು. ಆದ್ರೆ ಅದು ಇತರರಂತೆ ಸಾಮಾನ್ಯ ಹವ್ಯಾಸವಾಗಿರಲಿಲ್ಲ. ಬದಲಾಗಿ ಬೆನೆಡಿಕ್ಟ್ ಹವ್ಯಾಸ ಒಮ್ಮೊಮ್ಮೆ ವಿಚಿತ್ರವಾಗಿ ಕಾಣುತ್ತಿತ್ತು. ರಸ್ತೆ ಮೇಲೆ ಇರುವ ಮೊಳೆಗಳನ್ನು ಹೆಕ್ಕುವುದೇ ಬೆನೆಡಿಕ್ಟ್ ಹವ್ಯಾಸವಾಗಿತ್ತು. ಅದೂ ಕೂಡ ಆಫೀಸ್​ಗೆ  ಹೋಗುವಾಗ ಮತ್ತು ವಾಪಾಸ್ ಬರುವಾಗ, ರಸ್ತೆ ಮೇಲೆ ಬಿದ್ದಿರುತ್ತಿದ್ದ ಮೊಳೆಗಳನ್ನು ಹೆಕ್ಕುತ್ತಿದ್ದರು. ಬೆನೆಡಿಕ್ಟ್ ಯಾಕೆ ಈ ಹವ್ಯಾಸ ಬೆಳೆಸಿಕೊಂಡರು ಅನ್ನುವುದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ.

ಬೆನೆಡಿಕ್ಟ್ ಈ ಹವ್ಯಾಸವನ್ನು ಬೆಳೆಸಿಕೊಂಡಿದ್ದು 5 ವರ್ಷಗಳ ಹಿಂದೆ. ತನ್ನ ಮನೆ ಬನಶಂಕರಿಯಿಂದ ಔಟರ್ ರಿಂಗ್ ರೋಡ್​​ನಲ್ಲಿದ್ದ ಕಚೇರಿಗೆ ಪ್ರತಿನಿತ್ಯ ಪ್ರಯಾಣ ಬೆಳೆಸುತ್ತಿದ್ದರು. ಕಳೆದ 5 ವರ್ಷಗಳಲ್ಲಿ ಬೆನೆಡಿಕ್ಟ್ ಈ ರಸ್ತೆಯಲ್ಲೇ ಸಂಗ್ರಹಿಸಿದ ಮೊಳೆಗಳ ತೂಕ ಬರೋಬ್ಬರಿ 75 ಕೆ.ಜಿ. ಆರಂಭದಲ್ಲಿ ಬೆನೆಡಿಕ್ಟ್ ತಾನು ಪ್ರಯಾಣಿಸುತ್ತಿದ್ದ ಬೈಕ್ ಆಗಾಗ ಪಂಚರ್ ಆಗ್ತಾ ಇತ್ತು. ಮೊದ ಮೊದಲು ಇದು ತನ್ನ ದುರಾದೃಷ್ಟ ಅಂತ ಭಾವಿಸಿಕೊಂಡು ಸುಮ್ಮನಾಗುತ್ತಿದ್ದರು. ಆದ್ರೆ ದಿನಕಳೆದಂತೆ ಬೆನೆಡಿಕ್ಟ್​ಗೆ ಸಂದೇಹಗಳು ಹೆಚ್ಚಾಗ ತೊಡಗಿದವು. ಪ್ರತಿ ಬಾರಿಯೂ ಬೆನೆಡಿಕ್ಟ್ ಬೈಕ್ ಒಂದು ನಿಗದಿತ ಪ್ರದೇಶದಲ್ಲಿ, ಒಂದು ಪಂಚರ್ ಅಂಗಡಿಯ ಅಕ್ಕಪಕ್ಕಾದಲ್ಲಿ ಪಂಚರ್ ಆಗುತ್ತಿತ್ತು. ಒಂದು ತಿಂಗಳಲ್ಲಿ ಆರೇಳು ಬಾರಿ ಗಾಡಿ ಪಂಚರ್ ಆಗುವುದು ಸಾಧ್ಯವೇ ಇಲ್ಲ ಅನ್ನುವ ನಿರ್ಧಾರಕ್ಕೆ ಬಂದು ಬಿಟ್ರು.

ಇದನ್ನು ಓದಿ: ಅಜ್ಜಿಯರ ಶಿಕ್ಷಣಕ್ಕೆ ಹುಟ್ಟಿಕೊಂಡಿದೆ ಶಾಲೆ- 90 ವರ್ಷದ ವಿದ್ಯಾರ್ಥಿನಿಯೇ ಇಲ್ಲಿನ ಆಕರ್ಷಣೆ

ಆಫೀಸ್​ಗೆ ಹೋಗುವ ರಸ್ತೆಯಲ್ಲಿ ಗಾಡಿ ಪಂಚರ್ ಆಗುವುದನ್ನು ತಡೆಯಬೇಕು ಅನ್ನುವ ಉದ್ದೇಶದಿಂದ ಆ ರಸ್ತೆಯಲ್ಲಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕಲು ಶುರು ಮಾಡಿದ್ರು. ಆದ್ರೆ ಅದೇ ಸ್ಥಳದಲ್ಲಿ ಮರುದಿನ ಮತ್ತಷ್ಟು ಮೊಳೆಗಳು ಬಿದ್ದಿರುತ್ತಿದ್ದವು. ಅಲ್ಲಿಗೆ ಬೆನೆಡಿಕ್ಟ್, ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಲಾಗುತ್ತಿದೆ ಅನ್ನುವ ನಿರ್ಧಾರಕ್ಕೆ ಬಂದ್ರು. ಅಷ್ಟೇ ಅಲ್ಲ ಮೌನವಾಗಿ ರಸ್ತೆಯಲ್ಲಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕಿ ಪಂಚರ್ ಪ್ಲಾನ್​ಗೆ  ತಿರುಗೇಟು ನೀಡಲು ಆರಂಭಿಸಿದ್ರು. ಒಂದು ನೈಲ್ ರಾಡರ್ ತಯಾರಿಸಿ ಆ ಮೂಲಕ ರಸ್ತೆಯಲ್ಲಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕಲು ಆರಂಭಿಸಿದ್ರು. ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಡಾಕ್ಯುಮೆಂಟ್ ತಯಾರಿಸಿ, ಅದರ ಮೂಲಕ ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡಿದ್ರು.

“ ನಾನು ಸೋಶಿಯಲ್ ಮೀಡಿಯಾದ ಮೂಲಕ ಜನರಿಗೆ ಮತ್ತು ಆಫೀಸರ್​ಗಳಿಗೆ ಎಲ್ಲಾ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದೆ. ಬಿಬಿಎಂಪಿ ಮತ್ತು ಬೆಂಗಳೂರು ಸಿಟಿ ಪೊಲೀಸರಿಗೆ ಟ್ವೀಟ್ ಮಾಡುತ್ತಿದ್ದೆ. ಒಂದೆರಡು ಬಾರಿ ಪೊಲೀಸರು ಮೊಳೆಗಳನ್ನು ರಸ್ತೆಯಲ್ಲಿ ಹಾಕುತ್ತಿದ್ದವರನ್ನು ಬಂಧಿಸಿದ್ದರು. ಆದ್ರೆ ಸಮಸ್ಯೆ ಮಾತ್ರ ಇಂದಿಗೂ ಬಗೆ ಹರಿದಿಲ್ಲ ”
ಬೆನೆಡಿಕ್ಟ್, ಮೊಳೆಸಂಗ್ರಹಿಸುತ್ತಿದ್ದವರು.

ಆರಂಭದಲ್ಲಿ ಬೆನೆಡಿಕ್ಟ್ ಕೈಯಿಂದಲೇ ಮೊಳೆಗಳನ್ನು ಹೆಕ್ಕುತ್ತಿದ್ದರು. ಬಳಿಕ ಬೆನೆಡಿಕ್ಟ್ ಮಗ ಆಯಸ್ಕಾಂತವೊಂದರ ಮೂಲಕ ತಂದೆಯ ಕೆಲಸವನ್ನು ಸುಲಭಗೊಳಿಸಿದ್ದ. ಈಗ ಬೆನೆಡಿಕ್ಟ್ ಆಯಸ್ಕಾಂತದ ಜೊತೆಗೆ ರಾಡ್ ಅನ್ನು ಫಿಕ್ಸ್ ಮಾಡಿ ಆ ಮೂಲಕ ಮೊಳೆ ಹೆಕ್ಕುತ್ತಿದ್ದಾರೆ.

“ ರಸ್ತೆ ಮೇಲೆ ಮೊಳೆಗಳನ್ನು ಕಂಡ ತಕ್ಷಣ ನನ್ನ ಮೆದುಳು ಮತ್ತು ಕಣ್ಣುಗಳು ಚುರುಕಾಗುತ್ತವೆ. ಅದನ್ನು ಅಲ್ಲಿಂದ ಹೆಕ್ಕುತ್ತೇನೆ. ಹಾಗೇ ಸಿಕ್ಕಿದ ಮೊಳೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇನೆ. ”
ಬೆನೆಡಿಕ್ಟ್, ಮೊಳೆಸಂಗ್ರಹಿಸುತ್ತಿದ್ದವರು.

ಬ್ಯುಸಿ ಟ್ರಾಫಿಕ್​​ನಲ್ಲಿ ಮೊಳೆ ಹೆಕ್ಕುತ್ತಿದ್ದಿದ್ದನ್ನು ಹಲವರು ಗಮನಿಸಿದ್ದಾರೆ. ಹಲವರು ಈ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದರು. ಆದ್ರೆ ಸಮಸ್ಯೆ ಕೇಳಿಕೊಂಡು ನನ್ನ ಕೆಲಸಕ್ಕೆ ಬೆನ್ನುತಟ್ಟುತ್ತಿದ್ದರೇ ವಿನಹ ಅವರು ಮೊಳೆ ಹೆಕ್ಕುತ್ತಿರಲಿಲ್ಲ. ಬಹುಷಃ ಇಂತಹ ಮೊಳೆಗಳೇ ಅವರ ಗಾಡಿಗಳ ಟೈರ್​​ಗಳಿಗೆ ಅಪಾಯ ಒಡ್ಡುತ್ತವೆ ಅನ್ನುವ ಕಲ್ಪನೆ ಅವರಿಗಿರುತ್ತಿರಲಿಲ್ಲ.

ಕಳೆದ 5 ವರ್ಷಗಳಿಂದ ರಸ್ತೆಯಲ್ಲಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕುತ್ತಿದ್ದ ಬೆನೆಡಿಕ್ಟ್ ಇಗ ಬೆಂಗಳೂರು ಬಿಟ್ಟು ತಮಿಳುನಾಡಿಗೆ ವಾಪಾಸ್ ಹೋಗುತ್ತಿದ್ದಾರೆ. ಅಲ್ಲೂ ಇದೇ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಬಹುಷಃ ಬೆನೆಡಿಕ್ಟ್​ರಂತೆ ವಿಭಿನ್ನ ಕೆಲಸ ಮಾಡಲು ಸಾಕಷ್ಟು ಶ್ರಮ ಮತ್ತು ಮನಸ್ಸು ಇರಲೇಬೇಕು ಅನ್ನುವುದನ್ನು ಮರೆಯುವ ಹಾಗಿಲ್ಲ.

ಇದನ್ನು ಓದಿ:

1. ಅಣ್ಣಾವ್ರ ‘ಯೋಗಾ’ಯೋಗ..!

2. ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು 

3. ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!

Related Stories